ಪ್ರಶಾಂತ್ ನೀಲ್ ಇದೀಗ ಜ್ಯೂನಿಯರ್ ಎನ್ಟಿಆರ್ ಜೊತೆಗಿನ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸಲಾರ್ ಬಳಿಕ ನೀಲ್ ಕೆಜಿಎಫ್ ಛಾಪ್ಟರ್ ತ್ರೀ ನಿರ್ದೇಶನ ಮಾಡುತ್ತಾರೆಂದುಕೊಂಡಿದ್ದ ಯಶ್ ಅಭಿಮಾನಿಗಳಿಗೆ ಆರಂಭದಲ್ಲಿ ನಿರಾಸೆಯಾಗಿದ್ದದ್ದು ನಿಜ. ಆದರೆ, ಇದೀಗ ಅದೆಲ್ಲವನ್ನೂ ನೀಗಿಸುವಂತೆ ಸದರಿ ಸಿನಿಮಾ ಸದ್ದು ಮಾಡುತ್ತಿದೆ. ಸದ್ಯದ ಮಟ್ಟಿಗೆ ಈ ಸಿನಿಮಾದ್ದೊಂದು ಐಟಂ ಸಾಂಗ್ ಸುತ್ತ ಒಂದಷ್ಟು ಸುದ್ದಿಗಳು ಮತ್ತು ಚರ್ಚೆಗಳು ಹುಟ್ಟಿಕೊಂಡಿವೆ. ಅದರನ್ವಯ ಹೇಳೋದಾದರೆ, ರಶ್ಮಿಕಾ ಮಂದಣ್ಣ ಐಟಂ ಸಾಂಗ್ ಒಂದರಲ್ಲಿ ಕಾಣಿಸಿಕೊಳ್ಳೋದು ಖಚಿತ. ಈಗಾಗಲೇ ಮಾತುಕತೆಗಳೆಲ್ಲವೂ ಮುಗಿದಿವೆ. ರಶ್ಮಿಕಾ ಕೂಡಾ ಐಟಂ ಸಾಂಗ್ ನಲ್ಲಿ ಸೊಂಟ ಬಳುಕಿಸಲು ಅಣಿಯಾಗಿದ್ದಾಳೆ!

ಪ್ರಶಾಂತ್ ನೀಲ್ ಆರಂಭದಲ್ಲಿಯೇ ಎಲ್ಲವನ್ನೂ ನಿಕ್ಕಿಯಾಗಿಸಿಕೊಳ್ಳುತ್ತಾರೆ. ಈ ಸಂಬಂಧವಾಗಿ ಒಟ್ಟಾರೆ ಸಿನಿಮಾದ ಪ್ರಧಾನ ಆಕರ್ಷಣೆಗ್ಳಲ್ಲೊಂದಾದ ಐಟಂ ಸಾಂಗ್ ಗಾಗಿ ನಟಿಯರ ಹುಡುಕಾಟ ಬಹು ಕಾಲದಿಂದ ನಡೆದಿತ್ತು. ಈ ಸಾಲಿನಲ್ಲಿ ತೃಪ್ತಿ ದಿಮ್ರಿ, ಶ್ರೀಲೀಲಾಳಂತ ನಟಿಯಯರತ್ತಲೂ ನೀಲ್ ಚಿತ್ತ ಹರಿದಿತ್ತು. ಆದರೆ ಅದಕ್ಕೆ ಪಕ್ಕಾ ಸರಿ ಹೊಂದುವಂತೆ ಕಂಡಾಕೆ ರಶ್ಮಿಕಾ ಮಂದಣ್ಣ. ಹೇಳಿಕೇಳಿ ರಶ್ಮಿಕಾ ಇದೀಗ ಯಶಸ್ಸಿನ ಉತ್ತುಂಗದಲ್ಲಿದ್ದಾಳೆ. ಆಕೆ ಈ ಸಾಂಗಿನಲ್ಲಿ ನಟಿಸಲ;ಉ ಒಪ್ಪಿಕೊಳ್ಳಬಹುದಾ? ಹೀಗೊಂದು ಅನುಮಾನ ಸಹಜವಾಗಿಯೇ ನೀಲ್ ಸೇರಿದಂತಗೆ ಒಂದಿಡೀ ಚಿತ್ರ ತಂಡವನ್ನು ಕಾಡಿತ್ತಂತೆ. ಕಡೆಗೂ ಎಲ್ಲವೂ ಸುಖಾಂತ್ಯವಾಗಿದೆ.

ರಶ್ಮಿಕಾ ಜ್ಯೂನಿಯರ್ ಎನ್ಟಿಆರ್ ಜೊತೆ ಹೆಜ್ಜೆ ಹಾಕೋ ಖುಷಿ ಮತ್ತು ಯಶಸ್ವೀ ನಿರ್ದೇಶಕ ಪ್ರಶಾಂತ್ ನೀಲ್ ಮೇಲಿನ ಅಭಿಮಾನದಿಂದ ಈ ಅವಕಾಶವನ್ನು ಒಪ್ಪಿಕೊಂಡಿದ್ದಾಳಂತೆ. ಆದರೆ ರಶ್ಮಿಕಾ ತೀರ್ಮಾನದ ಬಗ್ಗೆ ನಾನಾ ದಿಕ್ಕುಗಳಲ್ಲಿ ಚರ್ಚೆಗಳು ಮೂಡಿಕೊಂಡಿವೆ. ನಾಯಕಿಯಾಗಿ ಮಿಂಚಿದ್ದವರು ಐಟಂ ಸಾಂಗುಗಳಲ್ಲಿ ನಟಿಸೋದು ಹೊಸತೇನಲ್ಲ. ಆದರೆ ಅದರ ಹಿಂದೆಯೂ ನಾನಾ ಲೆಕ್ಕಾಚಾರಗಳಿದ್ದಾವೆ. ಕೆಲ ನಟಿಯರು ಅವಕಾಶ ಸಿಗದೆ ಕಂಗಾಲಾಗಿ ಈ ಥರದ ಅವಕಾಶಗಳನ್ನು ಒಪ್ಪಿಕೊಳ್ಳೋದೂ ಇದೆ. ಆದರೆ ಸದ್ಯದ ಮಟ್ಟಿಗೆ ರಶ್ಮಿಕಾ ಪಾಲಿಗೆ ಅವಕಾಶಗಳಿಗೆ ತತ್ವಾರವೇನಿಲ್ಲ. ಪುಷ್ಪಾ೨ ನಂತರವಂತೂ ಅದು ಮತ್ತಷ್ಟು ಹೆಚ್ಚಿಕೊಂಡಂತಿದೆ. ತಮಿಳು ಸೇರಿದಂತೆ ನಾನಾ ಭಾಷೆಗಳಲ್ಲಿ ಆಕೆಯ ಬೇಡಿಕೆ ಹೆಚ್ಚಿಕೊಂಡಿದೆ. ಇದೆಲ್ಲದರ ನಡುವೆ ರಶ್ಮಿಕಾ ಜ್ಯೂನಿಯರ್ ಎನ್ಟಿಆರ್ ಜೊತೆ ಹೆಜ್ಜೆ ಹಾಕಲು ತೀರ್ಮಾನಿಸಿದ್ದಾಳೆ!

About The Author