ಳೆದ ಒಂದಷ್ಟು ಸಮಯಗಳಿಂದ (actress shilpa shetty) ಶಿಲ್ಪಾ ಶೆಟ್ಟಿಯ ಗಂಡ (raj kundra) ರಾಜ್ ಕುಂದ್ರಾ ಮಂಕು ಬಡಿದಂತಾಗಿದ್ದ. ತಾನು ಒಳಗಿಂದೊಳಗೇ ನಡೆಸುತ್ತಾ ಬಂದಿದ್ದ ದುಷ್ಟ ದಂಧೆಯಲ್ಲಿ ತಗುಲಿಕೊಂಡ ನಂತರ, (raj kundra arrested) ರಾಜ್ ಕುಂದ್ರಾನ ಮಾನ ದೇಶವ್ಯಾಪಿ ಹರಾಜಾಗಿತ್ತು. ಬೆತ್ತಲೆ ವೀಡಿಯೋ ಚಿತ್ರೀಕರಿಸಿ, ಆ ಮೂಲಕ ಕಾಸೆಣಿಸುತ್ತಿದ್ದ ಈತ ಕುಖ್ಯಾತ ತೊಗಲೋದ್ಯಮಿ (porn video mafia) ಎಂಬ ಸತ್ಯವೂ ಜಾಹೀರಾಗಿ ಬಿಟ್ಟಿತ್ತು. ಬಹು ಕಾಲ ಈ ಕೇಸಿನಲ್ಲಿ ಕಂಬಿ ಎಣಿಸಿ ಹೊರ ಬಂದಿದ್ದ ಕುಂದ್ರಾಗೆ ಹೊರಗೆ ಕಾಲಿಟ್ಟರೆ ಸಾಕು; ಪಾಪರಾಜಿಗಳ ಕಾಟ ಮೇರೆ ಮೀರಿಕೊಂಡಿತ್ತು. ಆ ನಂತರ ಚಿತ್ರವಿಚಿತ್ರ ಅವತಾರಗಳಲ್ಲಿ ಮುಖ ಮುಚ್ಚಿಕೊಂಡು ಓಡಾಡಲಾರಂಭಿಸಿದ್ದ ಕುಂದ್ರಾ, ಇದೀಗ (urfi javed) ಉರ್ಫಿ ಜಾವೇದ್ ಳೊಂದಿಗೆ ಮುಖಾಮುಖಿಯಾಗೋ ಮೂಲಕ ಮತ್ತೆ ಸುದ್ದಿಯಲ್ಲಿದ್ದಾನೆ!

ಅರೇ, ಉರ್ಫಿ ಮತ್ತು ರಾಜ್ ಕುಂದ್ರಾ ಇಬ್ಬರೂ ಮೂಲತಃ ಮಳ್ಳು ಗಿರಾಕಿಗಳೇ. ಅವರಿಬ್ಬರೂ ಮುಖಾಮುಖಿಯಾದದ್ದರಲ್ಲಿ ಏನು ವಿಶೇಷವಿದೆ ಅಂತೊಂದು ಪ್ರಶ್ನೆ ನಿಮ್ಮನ್ನೂ ಕಾಡಬಹುದು. ಬಹುಶಃ ಈ ಹಿಂದೆ ಉರ್ಫಿ ಮತ್ತು ರಾಜ್ ಕುಂದ್ರಾ ನಡುವೆ ಹೊತ್ತಿಕೊಂಡಿದ್ದ ತಣ್ಣಗಿನ ತಿಕ್ಕಾಟದ ಅರಿವಿರುವವರಿಗೆ ಈ ಮುಖಾಮುಖಿ ಕೊಂಚ ವಿಶೇಷ ಅನ್ನಿಸುತ್ತೆ. ಸದ್ಯಕ್ಕೆ ಈ ಮುಖಾಮುಖಿಯ ಘಳಿಗೆಯಲ್ಲಿ ಉರ್ಫಿ ಮತ್ತು ರಾಜ್ ಕುಂದ್ರಾರ ಅವತಾರಗಳಂತೂ ಸಾಮಾಜಿಕ ಜಾಲತಾಣದ ತುಂಬಾ ಸುದ್ದಿಯಾಗುತ್ತಿದೆ. ಒಮ್ಮೊಮ್ಮೆ ಬರೀ ಪುಟಗೋಸಿಯಲ್ಲಿಯೂ, ಮತ್ತೆ ಕೆಲವೊಮ್ಮೆ ಚಿತ್ರವಿಚಿತ್ರ ಬಟ್ಟೆ ಹಾಕುತ್ತಲೂ ಸುದ್ದಿಯಾಗುವಾಕೆ ಉರ್ಫಿ. ವಿಶೇಷವೆಂದರೆ, ಈ ಸಂದರ್ಭದಲ್ಲಿ ಆಕೆಯೂ ರಾಜ್ ಕುಂದ್ರಾನಂತೆಯೇ ಮುಖವನ್ನೆಲ್ಲ ಪ್ಯಾಕ್ ಮಾಡಿಕೊಂಡಿದ್ದಳು!

ರಾಜ್ ಕುಂದ್ರಾ ಪೋರ್ನ್ ಚಿತ್ರಗಳ ಕೇಸಿನಲ್ಲಿ ಜೈಲಿಗೆ ಹೋಗಿ ಬಂದ ನಂತರ ಸ್ಟಾಡಪ್ ಕಾಮಿಡಿಯನ್ನೂ ಮಾಡಲಾರಂಭಿಸಿದ್ದ. ಆ ಸಂದರ್ಭದಲ್ಲಿ ಆಗಾಗ ಉರ್ಫಿಯನ್ನೂ ಕಾಮಿಡಿ ಮಾಡಿ ಉರಿಸಲು ಶುರುವಿಟ್ಟುಕೊಂಡಿದ್ದ. ಇದೇ ಹೊತ್ತಿನಲ್ಲಿ `ರಾಜ್ ಕುಂದ್ರಾ ಯಾವ ಮುಖವಾಡ ಧರಿಸುತ್ತಾರೆ ಮತ್ತು ಉರ್ಫಿ ಜಾವೇದ್ ಯಾವ ಬಟ್ಟೆ ಧರಿಸೋದಿಲ್ಲ’ ಎಂಬುದರತ್ತ ಜನ ತಲೆ ಕೆಡಿಸಿಕೊಳ್ಳುತ್ತಿದ್ದಾರೆ ಎಂಬರ್ಥದಲ್ಲಿ ಮಾತಾಡಿದ್ದ. ಹೀಗೆ ತನ್ನನ್ನು ಪದೇ ಪದೆ ಆಡಿಕೊಳ್ಳುವ ರಾಜ್ ಕುಂದ್ರಾನನ್ನು ಉರ್ಫಿ ಪೋರ್ನ್ ಕಿಂಗ್ ಅಂತ ಕರೆದಿದ್ದಾಳೆ, ಆ ಮೂಲಕ ಟಾಂಗ್ ಕೊಟ್ಟಿದ್ದಾಳೆಂದು ಸುದ್ದಿಯಾಗಿತ್ತು.

ಇದೆಲ್ಲ ಆದ ನಂತರ ಮೊದಲ ಬಾರಿ ಸಾರ್ವಜನಿಕವಾಗಿ ಕುಂದ್ರಾ ಮತ್ತು ಉರ್ಫಿ ಮುಖಾಮುಖಿಯಾಗಿದ್ದಾರೆ. ಆ ಘಳಿಗೆಯಲ್ಲಿ ರಾಜ್ ಮುಖದ ತುಂಬಾ ಕವಚ ಧರಿಸಿದ್ದರೆ, ಉರ್ಫಿ ಮುಖವನ್ನು ಲೆದರ್ ಬಟ್ಟೆಯಿಂದ ಮುಚ್ಚಿಕೊಂಡ ಅವತಾರದಲ್ಲಿ ಕಾಣಿಸಿಕೊಂಡಿದ್ದಳು. ಕತ್ತಿನ ಕೆಳ ಭಾಗ ಮಾತ್ರ ಕಾಣುವಂತೆ, ಮಿಕ್ಕೆಲ್ಲವೂ ಮರೆಯಾಗುವಂಥಾ ಡಿಸೈನಿನ ಬಟ್ಟೆ ತೊಟ್ಟಿದ್ದಳು. ಒಂದು ಮೂಲದ ಪ್ರಕಾರ ಮೇಲು ನೋಟಕ್ಕೆ ಮುನಿಸಿಕೊಂಡಂತಾಡುವ ಉರ್ಫಿ ಮತ್ತು ಕುಂದ್ರಾ ಸದಾ ಸಂಪರ್ಕದಲ್ಲಿದ್ದಾರೆ. ಅವರಿಬ್ಬರೂ ಮಾತಾಡಿಕೊಂಡೇ ಮುಖಗವುಸು ಹಾಕಿಕೊಂಡ ಲುಕ್ಕಿನಲ್ಲಿ ಕಾಣಿಸಿಕೊಂಡಿದ್ದಾರೆ. ಇದೂ ಕೂಡಾ ಪ್ರಚಾರದ ಗಿಮಿಕ್ ಎಂಬ ಆರೋಪಗಳು ಕೇಳಿ ಬರುತ್ತಿವೆ.

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!