ಈಗೊಂದಷ್ಟು ವರ್ಷಗಳಿಂದೀಚೆಗೆ ಬೇರೆ ಬೇರೆ ಸಿನಿಮಾಗಳಲ್ಲಿ ಥರ ಥರದ ಪಾತ್ರಗಳ ಮೂಲಕ ಮತ್ತೊಂದು ಆಯಾಮಕ್ಕೆ ತೆರೆದುಕೊಂಡಿದ್ದವರು ಕ್ರೇಜಿಸ್ಟಾರ್ ರವಿಚಂದ್ರನ್. ಕಳೆದ ವರ್ಷ ರವಿಮಾಮನ ಈ ನವ ಯಾನದಲ್ಲಿಯೂ ಕೊಂಚ ಅಡೆತಡೆಗಳು ಎದುರಾದಂತೆ ಭಾಸವಾಗಿತ್ತು. ಕಡೆಗೂ ಅವರು ಮತ್ತೆ ಪ್ಯಾರ್ ಅಂತೊಂದು ಸಿನಿಮಾದ ಮೂಲಕ ನಟನೆಗೆ ಮರಳಿದ್ದಾರೆ. ಪ್ಯಾರ್ ಎಂಬುದು ರವಿಚಂದ್ರನ್ ಅವರ ಇಷ್ಟೂ ವರ್ಷಗಳ ಒಟ್ಟಾರೆ ಪಯಣದ ಅಸಲೀ ಕಸುವಿನಂಥಾದ್ದು. ಪ್ರೇಮದ ರಾಯಭಾರಿಯಂತೆ ಚಾಲ್ತಿಯಲ್ಲಿರುವ ರವಿಚಂದ್ರನ್, ಪ್ರಧಾನ ಪಾತ್ರವೊಂದರ ಮೂಲಕ ಹೊಸಬರ ತಾಜಾ ಕನಸಿಗೆ ಜೊತೆಯಾಗಿದ್ದಾರೆ. ಬಿಡುಗಡೆಯ ಹೊಸ್ತಿಲಲ್ಲಿರೋ ಪ್ಯಾರ್ ಚಿತ್ರದ ಹಾಡೊಂದೀಗ ಎಲ್ಲೆಡೆ ಗುನುಗುನಿಸಿಕೊಳ್ಳುವ ಮೂಲಕ ಗೆಲುವು ದಾಖಲಿಸಿದೆ!
ಹಾಡಿಗೆ ಸಿಕ್ಕಿರುವ ಯಶಸ್ಸಿನ ಸಂಭ್ರಮದೊಂದಿಗೆ ಮತ್ತೊಂದಿಷ್ಟು ವಿಚಾರಗಳನ್ನು ಹಂಚಿಕೊಳ್ಳುವ ಸಲುವಾಗಿ ಚಿತ್ರತಂಡ ಪತ್ರಿಕಾಗೋಷ್ಠಿಯೊಂದನ್ನು ಆಯೋಜಿಸಿತ್ತು. ಈ ಸಂದರ್ಭದಲ್ಲಿ ಹಾಡೊಂದರ ಮೂಲಕ ದಕ್ಕಿದ ಗೆಲುವಿನ ಸಂಭ್ರಮ ಮತ್ತು ಅದು ಸಿನಿಮಾ ವಿಚಾರದಲ್ಲಿಯೂ ಪ್ರತಿಫಲಿಸಲಿರುವ ಭರವಸೆಯೊಂದಿಗೆ ಚಿತ್ರತಂಡ ಗಮನ ಸೆಳೆದಿದೆ. ಒಂದೇ ಮಾತಲಿ ಹೇಳೋದಾದರೆ ಎಂಬ ಈ ಸಿನಿಮಾ ಹಾಡೀಗ ಟ್ರೆಂಡಿಂಗಿನಲ್ಲಿದೆ. ಇನ್ಸ್ಟಾ ರೀಲ್ಸ್ ಒಂದರಲ್ಲಿಯೇ ಮಿಲಿಯನ್ನುಗಟ್ಟಕಲೆ ವೀಕ್ಷಣೆ ಪಡೆದುಕೊಂಡಿದೆ. ಇಂಥಾದ್ದೊಂದು ಅಮೋಘ ಪ್ರತಿಕ್ರಿಯೆಯ ಮೂಲಕ ಸದರಿ ಹಾಡನ್ನು ರೂಪಿಸಲು ಪಟ್ಟ ಪ್ರಯತ್ನವೆಲ್ಲ ಸಾರ್ಥಕ್ಯ ಕಂಡಿದೆಯೆಂಬ ಧನ್ಯತಾ ಭಾವ ಚಿತ್ರತಂಡದಲ್ಲಿ ಹೊಮ್ಮುತ್ತಿತ್ತು.
Chaithra Achar New Movie : ಭಿನ್ನ ಬಗೆಯ ಪಾತ್ರದಲ್ಲಿ ಮಿಂಚಲಣಿಯಾದ ಚೈತ್ರಾ!
ಪಳನಿ ಸೇನಾಪತಿ ಸಂಗೀತದ ಈ ಹಾಡು ಕೆ.ಎಸ್ ಚಂದ್ರಶೇಖರ್ ಅವರ ಛಾಯಾಗ್ರಹಣದಲ್ಲಿ ದೈಷ್ಯರೂಪ ಪಡೆದುಕೊಂಡಿದೆ. ಲಡಾಕ್ ಮುಂತಾದ ಸುಂದರ ಪರಿಸರದಲ್ಲಿ ವಾರಗಟ್ಟಲೆ ಶ್ರಮ ವಹಿಸಿ ಈ ಹಾಡನ್ನು ರೂಪಿಸಲಾಗಿದೆ. ಅಂದಹಾಗೆ ಈ ಸಿನಿಮಾವನ್ನು ಸುಪ್ರೀತ್ ನಿರ್ದೇಶನ ಮಾಡಿದ್ದಾರೆ. ಹೆಚ್.ಎಸ್ ನಾಗಶ್ರೀ ನಿರ್ಮಾಣ ಮಾಡಿದ್ದಾರೆ. ಎಶ್ವಿನ್ ಹಾಗೂ ಈಗ ಬಿಗ್ ಬಾಸ್ ಸ್ಪರ್ಧಿಯಾಗಿರುವ ರಾಶಿಕಾ ಶೆಟ್ಟಿ ನಾಯಕ ನಾಯಕಿಯರಾಗಿ ನಟಿಸಿದ್ದಾರೆ. ಪ್ರೇಮದ ಜೊತೆಗೆ ಮತ್ತೊಂದಷ್ಟು ಅಂಶಗಳನ್ನು ಅಡಕವಾಗಿಸಿಕೊಂಡಿರೋ ಕಥೆಯನ್ನು ಮೆಚ್ಚಿಕೊಂಡೇ ರವಿಚಂದ್ರನ್ ಈ ಸಿನಿಮಾ ಭಾಗವಾಗಲು ಒಲಪ್ಪಿಕೊಂಡಿದ್ದರಂತೆ. ಅವರಿಲ್ಲಿ ನಾಯಕಿಯ ತಂದೆಯ ಪಾತ್ರದಲ್ಲಿ ನಟಿಸಿದ್ದಾರೆ. ಇದೀಗ ಹಾಡಿನ ಯಶದ ಬಗ್ಗೆ ಖುಷಿ ಹಂಚಿಕೊಂಡಿರೋ ಚಿತ್ರತಂಡ ಇಷ್ಟರಲ್ಲಿಯೇ ಬಿಡುಗಡೆ ದಿನಾಂಕ ಘೋಶಿಸಲಿದೆ.
keywords: pyaar movie, onde mathali helodadare, song, ravichandran, crazy star, sndalwood, kfi

