ಲ್ಲು ಅರ್ಜುನ್ (allu arjun) ಅಭಿನಯದ ಪುಷ್ಪಾ2 (pushpa2) ಬಿಡುಗಡೆಗೆ ದಿನಗಣನೆ ಶುರುವಾಗಿದೆ. ನಿರ್ದೇಸಕ ಸುಕುಮಾರ್ ಮತ್ತು ಅಲ್ಲು ಜೋಡಿ ಈ ಬಾರಿ ಮೊದಲಿಗಿಂತಲೂ ತುಸು ಹೆಚ್ಚಾಗೇ ಮೋಡಿ ಮಾಡುವ ಲಕ್ಷಣಗಳು ಢಾಳಾಗಿಯೇ ಗೋಚರಿಸಲಾರಂಭಿಸಿದೆ. ಈ ಸಿನಿಮಾ ಸಾಗಿ ಬಂದ ಹಾದಿಯನ್ನೊಮ್ಮೆ ದಿಟ್ಟಿಸಿದರೆ, ಈಗೊಂದು ಮೂರ್ನಾಲಕ್ಕು ತಿಂಗಳಲ್ಲಿ ವ್ಯಾಪಕವಾಗಿ ನಕಾರಾತ್ಮಕ ಅಂಶಗಳೇ ಮುತ್ತಿಕೊಂಡಂತಿದ್ದವು. ಒಂದು ಹಂತದಲ್ಲಿ ಖುದ್ದು ಅಲ್ಲು ಅರ್ಜುನ್ ಅಭಿಮಾನಿಗಳೇ ರೊಚ್ಚಿಗೇಳುವಂತಾಗಿತ್ತು. ಅದಕ್ಕೆ ಕಾರಣವಾಗಿದ್ದದ್ದು ನಿರ್ದೇಶಕ ಸುಕುಮಾರನ್ (director sukumaran) ನಿಧಾನಗತಿಯ ನಡವಳಿಕೆ. ಇದರ ದೆಸೆಯಿಂದಲೇ ಅಡಿಗಡಿಗೆ ಪುಷ್ಪಾ೨ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿತ್ತು. ಈ ಹಂತದಲ್ಲಿ ಖುದ್ದು ಅಲ್ಲು ಕೂಡಾ ಸೋಲೆದುರಾಗೋ ಅಳುಕಿನಿಂದ ಕಂಗಾಲಾಗಿದ್ದದ್ದು ಸತ್ಯ!

ಹೀಗೆ ಪದೇ ಪದೆ ಬಿಡುಗಡೆ ದಿನಾಂಕ ಮುಂದೆ ಸಾಗುತ್ತಲೇ ಅಲ್ಲು ನಿರ್ದೇಶಕ ಸುಕುಮಾರನ್ ವಿರುದ್ಧ ಅಸಹನೆ ಹೊಂದಿರೋದಾಗಿ ಸುದ್ದಿಗಳು ಸರಿದಾಡಲಾರಂಭಿಸಿದ್ದವು. ಇನ್ನೇನು ಏರಿಕೊಂಡಿದ್ದ ಕ್ರೇಜ್ ಎಲ್ಲವೂ ಜರ್ರನೆ ಇಳಿಮುಖವಾಗುತ್ತದೆ ಎಂಬಂಥಾ ವಾತಾವರಣ ಸೃಷ್ಟಿಯಾಗಿತ್ತು. ಕಡೆಗೂ ಬಿಡುಗಡೆ ದಿನಾಂಕ ನಿಕ್ಕಿಯಾದರೂ, ಯಾರೊಬ್ಬರಿಗೂ ಅದು ಮುಂದಕ್ಕೆ ಹೋಗೋದಿಲ್ಲ ಎಂಬಂಥ ನಂಬಿಕೆ ಇರಲಿಲ್ಲ. ಆದರೀಗ ಬಿಡುಗಡೆಯ ಹೊಸ್ತಿಲಲ್ಲಿ ಎಲ್ಲವೂ ಅದಲು ಬದಲಾಗಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ವಾತಾವರಣವೆಂಬುದು ಪಟ್ಟಂಪೂರಾ ಬದಲಾಗಿ ಬಿಟ್ಟಿದೆ. ಬಿಡುಗಡೆ ಪೂರ್ವದಲ್ಲಿಯೇ ಪುಷ್ಪಾ೨ ಬ್ಯುಸಿನೆಸ್ಸು ಸಾವಿರ ಕೋಟಿ ದಾಟಿಕೊಂಡಿದೆ. ಇದೀಗ ಹೀಗೆ ಕಾಡಿಸಿ, ಕಂಗೆಡಿಸಿ, ನೆಗೆಟಿವ್ ವಿಚಾರ ಹಬ್ಬಿಕೊಳ್ಳುವಂತೆ ಮಾಡಿ, ಕಡೇ ಕ್ಷಣದಲ್ಲಿ ಅದೆಲ್ಲವನ್ನೂ ಪಾಸಿಟಿವ್ ಆಗಿ ರೂಪಾಂತರಿಸೋದೇ ಸುಕುಮಾರನ್ ಅಸಲೀ ಸ್ಟೈಲು ಎಂಬಂಥಾ ಮೆಚ್ಚುಗೆ ಹಬ್ಬಿಕೊಂಡಿದೆ.

ಈ ಸುಕುಮಾರನ್ ತೀರಾ ಧಾಡಸೀ ಸ್ವಭಾವದ ಆಸಾಮಿ. ಪುಷ್ಪ ಚಿತ್ರ ಗೆಲುವಿನ ನಂತರದಲ್ಲೀತ ಸೋಂಭೇರಿತನವನ್ನೂ ಕ್ರಿಯೇಟಿವಿಟಿ ಅಂದುಕೊಂಡಿದ್ದಾನೆಂಬ ಅಸಹನೆ ತೆಲುಗು ಚಿತ್ರರಂಗದಲ್ಲಿದೆ. ಅಷ್ಟಕ್ಕೂ ರಕ್ತಚಂದನ ಸ್ಮಗ್ಲಿಂಗ್ ಕಥೆಯ ಈ ಚಿತ್ರ ಆರಂಭದಲ್ಲಿ ತೆಲುಗು ನಾಡಿನಲ್ಲಿಯೇ ಮುಗ್ಗರಿಸಿತ್ತು. ಆದರೆ ಹಿಂದಿ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದಲ್ಲಿ ಸಂಚಲನ ಸೃಷ್ಟಿಸಿ ಬಿಗ್ ಹಿಟ್ ಆಗಿ ದಾಖಲಾಗಿತ್ತು. ಒಟ್ಟಾರೆ ಆ ಸಿನಿಮಾ ಗೆಲುವಿನ ಹಿಂದೆ ಅಲ್ಲು ಅರ್ಜುನ್ ಫ್ಯಾಕ್ಟರ್ ದೊಡ್ಡ ಮಟ್ಟದಲ್ಲಿಯೇ ಕೆಲಸ ಮಾಡಿತ್ತು. ಆದರೆ, ಗೆಲುವಿನ ಬಾಬತ್ತನ್ನು ನೆತ್ತಿಗೇರಿಸಿಕೊಂಡಿರುವ ಸುಕುಮಾರನ್, ಈಗಲೂ ನಿಧಾನಗತಿಯನ್ನೇ ನೆಚ್ಚಿಕೊಂಡಿದ್ದಾರೆ. ಒಂದು ಮೂಲದ ಪ್ರಕಾರ, ಬಿಡುಗಡೆಗೆ ತಿಂಗಳ ಕಾಲಾವಕಾಶವೂ ಇಲ್ಲದ ಈ ಹೊತ್ತಿನಲ್ಲಿಯೂ ನಿರ್ಮಾಣ ಕಾರ್ಯ ಚಾಲ್ತಿಯಲ್ಲಿದೆ. ಆದರೆ, ಬ್ಯುಸಿನೆಸ್ ಮಾತ್ರ ದೊಡ್ಡ ಮಟ್ಟದಲ್ಲಿದೆ. ಎರಡ್ಮೂರು ಓಟಿಟಿ ಫ್ಲಾಟ್ ಫಾರ್ಮುಗಳು ಈ ಸಿನಿಮಾ ಹಕ್ಕುಗಳನ್ನು ಖರೀದಿಸಲು ಪೈಪೋಟಿಗಿಳಿದಿವೆಯಂತೆ. ಸುಕುಮಾರನ್ ಇದೇ ಮಂದಗತಿಯನ್ನು ನೆಚ್ಚಿಕೊಂಡರೆ, ಅದು ವಾತಾವರಣವನ್ನು ಏಕಾಏಕಿ ಉಲ್ಟಾ ಹೊಡೆಸಿದರೂ ಅಚ್ಚರಿಯೇನಿಲ್ಲ!

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!