ಬಾಹುಬಲಿ (bahubali movie) ಚಿತ್ರದ ಮೂಲಕ ಪ್ಯಾನಿಂಡಿಯಾ ಸ್ಟಾರ್ ಆಗಿ ರೂಪುಗೊಂಡವರು (prabhas) ಪ್ರಭಾಸ್. ಅದಕ್ಕೂ ಮುನ್ನವೇ ತೆಲುಗು ಚಿತ್ರರಂಗದಲ್ಲಿ ಗೆಲುವು ಕಂಡಿದ್ದ ಪ್ರಭಾಸ್ ಗೆ ದೊಡ್ಡ ಮಟ್ಟದ ಪ್ಯಾನ್ ಬೇಸಿದೆ. ಅದರಲ್ಲಿ ಹೆಣ್ಣುಮಕ್ಕಳು ಮತ್ತು ಮಹಿಳೆಯರದ್ದೇ ಮೇಲುಗೈ. ಈ ಹೊತ್ತಿಗೂ ಪ್ರಭಾಸ್ ಮದುವೆಯ ಮ್ಯಾಟರ್ ಬಗ್ಗೆ ಗುಲ್ಲೆದ್ದಾಗೆಲ್ಲಾ, ಅಂಥಾ ಮಹಿಳಾ ಅಭಿಮಾನಿಗಳು ಕಂಗಾಲಾಗಿ ಬಿಡುತ್ತಾರೆ. ಪ್ರಭಾಸ್ ಸದ್ಯಕ್ಕೆ ಮದುವೆಯಾಗದೆ ಬ್ಯಾಚುಲರ್ ಆಗಿಯೇ ಉಳಿಯಲೆಂಬಂತೆ ಆಶಿಸುವ ಹುಡುಗಿಯರ ಸಂಖ್ಯೆಯೂ ಬಹಳಷ್ಟಿದೆ. ಅಂಥವರಿಗೆಲ್ಲ ಈ ದಸರೆಯ ಸಂದರ್ಭದಲ್ಲಿ ಎದೆ ಅದುರೋ ಸುದ್ದಿಯೊಂದು ಅಧಿಕೃತವಾಗಿಯೇ ಜಾಹೀರಾಗಿದೆ. ಅದರನ್ವಯ ಹೇಳೋದಾದರೆ, ಇನ್ನು ಒಂದು ವರ್ಷದೊಳಗೆ ಪ್ರಭಾಸ್ ಮದುವೆಯಾಗೋದು ಗ್ಯಾರೆಂಟಿ!

ಪ್ರಭಾಸ್ ಅಭಿಮಾನಿಗಳ ಚಿತ್ತವೆಲ್ಲ ಇದೀಗ ಸಲಾರ್ ಚಿತ್ರದ ಮೇಲಿದೆ. ಯಾಕೆಂದರೆ, ಅದು ಅವರೆಲ್ಲರ ಪಾಲಿಗೆ ಬಹು ಮಹತ್ವಾಕಾಂಕ್ಷೆಯ ಚಿತ್ರ. ಇತ್ತೀಚೆಗೇಕೋ ಪ್ರಭಾಸ್ ನಸೀಬು ಸಂಪೂರ್ಣವಾಗಿ ಕೈ ಕೊಟ್ಟಂತಿದೆ. ಬಾಹುಬಲಿಯ ಗೆಲುವಿನ ಕಿಡಿ ಆರದಂತೆ ಕಾಪಿಟ್ಟುಕೊಳ್ಳುವಲ್ಲಿ ಆತ ಹೆಜ್ಜೆ ಹೆಜ್ಜೆಗೂ ಸೋಲುತ್ತಾ ಬಂದಿದ್ದಾರೆ. ಸಲಾರ್ ಏನಾದರೂ ಮಗುಚಿಕೊಂಡರೆ, ಎಲ್ಲ ಕಿಡಿಯೂ ಆರಿ ಬೂದಿ ಮಾತ್ರವೇ ಉಳಿದು ಬಿಡುವ ಘೋರ ಅಪಾಯವಂತೂ ಇದ್ದೇ ಇದೆ. ಅತ್ತ ಬೇರೆ ನಟರ ಅಭಿಮಾನಿಗಳು ತಣ್ಣಗೆ ತಿವಿಯುತ್ತಿರೋದರಿಂದಾಗಿ ಪ್ರಭಾಸ್ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಹಾಗಿರೋದರಿಂದಲೇ ಪ್ರಭಾಸ್ ಮದುವೆ ಮ್ಯಾಟರ್ ನೇಪಥ್ಯಕ್ಕೆ ಸರಿದಿತ್ತು. ಇದೀಗ ಏಕಾಏಕಿ ಅದನ್ನು ಮತ್ತೆ ಮುನ್ನೆಲೆಗೆ ತಂದಿರುವವರು ಬಾಹಗುಬಲಿಯ ದೊಡ್ಡಮ್ಮ ಶ್ಯಾಮಲಾ ದೇವಿ.

ಶ್ಯಾಮಲಾ ದೇವಿ ವಿಜಯವಾಡದ ಇಂದ್ರಕೀಲಾಡಿ ಕ್ಷೇತ್ರದಲ್ಲಿ ನವರಾತ್ರಿ ಪೂಜಾ ಕಾರ್ಯದಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಮಾಧ್ಯಮದ ಮಂದಿ ಮುತ್ತಿಕೊಂಡು ಮಾತಾಡಿಸಿದ್ದಾರೆ. ಇದೇ ಹೊತ್ತಿನಲ್ಲಿ ಪ್ರಭಾಸ್ ಮದುವೆ ವಿಚಾರವೂ ಹಾದು ಹೋಗಿದೆ. ಅದಕ್ಕೆ ಉತ್ತರಿಸಿದ ಶ್ಯಾಮಲಾ ದೇವಿ, ಇನ್ನು ಒಂದು ವರ್ಷದೊಳಗೆ ಪ್ರಭಾಸ್ ಮದುವೆಯಾಗೋದು ಗ್ಯಾರೆಂಟಿ ಅಂತ ನಿಖರವಾಗಿಯೇ ಹೇಳಿದ್ದಾರೆ. ಆಕೆಯ ಮಾತಲ್ಲಿದ್ದ ನಿಖರ ಧ್ವನಿ ಗಮನಿಸಿದ ಅನೇಕರೀಗ ನಾನಾ ಥರದಲ್ಲಿ ಗುಲ್ಲೆಬ್ಬಿಸುತ್ತಿದ್ದಾರೆ. ಈ ಬಗ್ಗೆ ಒಂದಷ್ಟು ಗಾಸಿಪ್ಪುಗಳೂ ಹಬ್ಬಿಕೊಂಡಿವೆ. ಹಾಗಾದರೆ, ಬಾಹುಬಲಿಯೊಂದಿಗೆ ಹಸೆಮಣೆ ಏರಲಿರುವ ಹುಡುಗಿ ಯಾರೆಂಬ ಪ್ರಶ್ನೆ ಎದ್ದು ನಿಂತಿದೆ. ಅದರ ಸುತ್ತ ದಂಡಿ ದಂಡಿ ಗಾಸಿಪ್ಪುಗಳೂ ಕೂಡಾ ಹರಡಿಕೊಳ್ಳಲಾರಂಭಿಸಿವೆ.

ಅಷ್ಟಕ್ಕೂ, ಪ್ರಭಾಸ್ ಅಂದರೆ ಕೇವಲ ಪ್ರೇಕ್ಷಕರಿಗೆ ಮಾತ್ರವಲ್ಲ; ಪ್ರಸಿದ್ಧಿ ಪಡೆದುಕೊಂಡ ನಟಿಯರಿಗೂ ಕ್ರೇಜ್ ಇದ್ದೇ ಇದೆ. ಒಂದಷ್ಟು ಚೆಲುವೆಯರು ಅದಾಗಲೇ ಪ್ರಭಾಸ್ ಗೆ ಕಾಳು ಹಾಕಲೆತ್ನಿಸಿ ಸೋತದ್ದೂ ಇದೆ. ಇದೆಲ್ಲದರ ನಡುವೆ ಆಗಾಗ ಒಂದಷ್ಟು ನಟಿಯರೊಂದಿಗೆ ಪ್ರಭಾಸ್ ಹೆಸರು ಥಳುಕು ಹಾಕಿಕೊಳ್ಳುತ್ತಾ ಬಂದಿತ್ತು. ಅದು ದೊಡ್ಡ ಮಟ್ಟದಲ್ಲಿ ಮೇಳೈಸಿಕೊಂಡಿದ್ದದ್ದು ಬಾಹುಬಲಿ ಚಿತ್ರದ ಸಂದರ್ಭದಲ್ಲಿ. ಜೊತೆ ಜೊತೆಗೆ ನಟಿಸಿದ್ದ ಅನುಷ್ಕಾ ಶೆಟ್ಟಿಯೊಂದಿಗೆ ಪ್ರಭಾಸ್ ಮದುವೆ ಪಕ್ಕಾ ಎಂಬಂಥಾ ವಾತಾವರಣ ಸೃಷ್ಟಿಯಾಗಿತ್ತು. ಅದಕ್ಕೆ ಸರಿಯಾಗಿ ಒಂದಷ್ಟು ಕಾರ್ಯಕ್ರಮಗಳಲ್ಲಿ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿತ್ತು. ಆದರೇಕೋ ಆ ಅಫೇರು ಬರಖತ್ತಾಗಲಿಲ್ಲ. ಆ ನಂತರ ಪ್ರಭಾಸ್ ಜೊತೆ ಕೃತಿ ಸನೋನ್ ಹೆಸರೂ ಕೇಳಿ ಬಂದಿತ್ತು. ಇಬ ಬರೂ ಡೇಟಿಂಗಿನಲ್ಲಿದ್ಚದಾರೆಂಬರ್ಥದಲ್ಲಿ ಕಲ್ಪಿತ ಸುದ್ದಿಗಳು ಹರಿದಾಡಿದ್ದವು. ಅದೂ ಕೂಡಾ ಹಳ್ಳ ಹಿಡಿದಿದೆ. ಇದೀಗ ಬಾಹುಬಲಿಗೆ ಕಂಟಕಣ ಕೂಡಿ ಬರಲು ಮುಹೂರ್ತ ಫಿಕ್ಸಾದಂತಿದೆ. ಆ ಹುಡುಗಿ ಯಾರೆಂಬುದು ಇಷ್ಟರಲ್ಲಿಯೇ ಜಾಹೀರಾಗಬಹುದೇನೋ…

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!