ದರ್ಶನ್ ಪಟಾಮ್ಮು ಪವಿತ್ರಾ ಗೌಡಾಳ ಸಮೇತ ಜೈಲುಪಾಲಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣವೆಂಬುದು ಈ ಗ್ಯಾಂಗನ್ನು ಬಿಟ್ಟೂ ಬಿಡದಂತೆ ಕಾಡಿಸಿ, ಜೀವಾವಧಿ ಶಿಕ್ಷೆಯಾದೀತೇನೋ ಎಂಬಂಥಾ ಭಯವನ್ನೂ ತುಂಬಿದಂತಿದೆ. ಹೀಗೆ ದರ್ಶನ್ ಮತ್ತೆ ಕಂಬಿ ಹಿಂದೆ ಸರಿಯುತ್ತಲೇ ಆತನ ಅಭಿಮಾನಿಗಳು ಮಾತ್ರವಲ್ಲದೇ, ಓರ್ವ ನಟನಾಗಿ ಆತನನ್ನು ಮೆಚ್ಚಿಕೊಳ್ಳುವವರ ಸಿಟ್ಟೆಲ್ಲವೂ ಪವಿತ್ರಾಳತ್ತ ಹೊರಳಿಕೊಂಡಿದೆ. ಅಭಿಮಾನಿಗಳ ಮಾತು ಒತ್ತಟ್ಟಿಗಿರಲಿ; ಖುದ್ದು ಸುಪ್ರೀಂ ಕೋರ್ಟಿನ ನ್ಯಾಯಾಧೀಶರೇ ಒಟ್ಟಾರೆ ಅನಾಹುತಕ್ಕೆ ಮೂಲ ಕಾರಣ ಪವಿತ್ರಾ ಎಂಬ ಮಾತನ್ನಾಡಿದ್ದರು. ಅತ್ತ ರೇಣುಕಾಸ್ವಾಮಿಯ ಜೀವ ಹೋಗಿದೆ. ಇತ್ತ ಸೂಪರ್ ಸ್ಟಾರ್ ಆಗಿ ಮಿಂಚುತ್ತಿದ್ದ ದರ್ಶನ್ ವೃತ್ತಿಬದುಕೇ ಅಡಕತ್ತರಿಗೆ ಸಿಲುಕಿದೆ. ಇನ್ನೊಂದಷ್ಟು ಹುಡುಗರ ಬದುಕೂ ಹಾಳಾಗಿದೆ. ಆದರೆ, ಅದಕ್ಕೆಲ್ಲ ಕಾರಣನಾದೆನಲ್ಲಾ ಎಂಬಂಥಾ ಪಶ್ಚಾತ್ತಾಪದ ಚೂರು ಪಸೆಯೂ ಪವಿತ್ರಾಳ ಮುಖದಲ್ಲಿ ಕಾಣಿಸಿಲ್ಲ!
ಅದೆಂಥಾ ದುಷ್ಟರೇ ಆಗಿದ್ದರೂ ಇಂಥಾ ಅನಾಹುತದ ಪರಿಣಾಮವೊಂದರ ಅಂಚಿನಲ್ಲಿ ನಿಂತಾದ ಪಶ್ಚಾತ್ತಾಪದಿಂದ ಮನಸು ಮುರುಟುತ್ತೆ. ಆದರೆ, ಈ ಪವಿತ್ರಾ ಗೌಡಳ ಮನಸಲ್ಲಿ ಅಂಥಾ ಮನುಷ್ಯತ್ವಕ್ಕೆ ಒಂದಿನಿತೂ ಜಾಗವಿದ್ದಂತಿಲ್ಲ. ಆರಂಭದಲ್ಲಿ ಜೈಲಿಗೆ ಹೋದಲ್ಲಿಂದ ಹಿಡಿದು, ಇದೀಗ ಮತ್ತೆ ಜೈಲುಪಾಲಾಗುವವರೆಗೂ ಈಕೆಯ ದುರಹಂಕಾರ ತುಸುವೂ ತಗ್ಗಿದಂತಿಲ್ಲ. ಅದೇನೋ ಸಾಧಿಸಿದವಳಂತೆ ಮೆರೆಯುತ್ತಾ ಬಂದಿರುವ ಈಕೆಗೆ ಬೇಲ್ ಮೇಲೆ ಹೊರ ಬಂದ ನಂತರದ ಶೋಕಿಗಳೇ ಮುಳುವಾಗಿವೆ. ಅದಕ್ಕೆ ಸರಿಯಾಗಿ ದರ್ಶನ್ ಕೂಡಾ ಒಳಗಿಂದೊಳಗೇ ಅಂಥಾ ಒಂದಷ್ಟು ಯಡವಟ್ಟು ಮಾಡಿಕೊಂಡಿದ್ದನಲ್ಲಾ? ಎಲ್ಲವೂ ಸೇರಿ ಇಡೀ ಪಟಾಲಮ್ಮೇ ಜೈಲುಪಾಲಾಗಿದೆ.
ಪವಿತ್ರಾ ಗೌಡ ಅದೆಂಥಾ ಅವಿವೇಕಿ ಎಂದರೆ, ಬೇಲ್ ಮೂಲಕ ಹೊರ ಬಂದವಳೇ ಮಾವನ ಮನೆಯಿಂದ ವಾಪಾಸಾದಷ್ಟೇ ನಿರಾಳವಾಗಿ ಬದುಕಲಾರಂಭಿಸಿದ್ದಳು. ಆಕೆಗೆ ಇನ್ನು ಜೈಲಿಗೆ ಹೋಗೋದಿಲ್ಲ ಎಂಬಂಥಾ ನಂಬಿಕೆಯಿತ್ತಾ? ಅದು ಇಷ್ಟು ವರ್ಷಗಳ ಕಾಲ ಬದುಕಿದ ಭಂಡ ಬಾಳು ಕರುಣಿಸಿದ ಸ್ವಭಾವವಾ ಗೊತ್ತಿಲ್ಲ. ಪವಿತ್ರಾ ಮತ್ತೆ ತನ್ನ ಉದ್ಯಮಕ್ಕೆ ಮರಳಿದಂತೆ ಪೋಸು ಕೊಡಲಾರಂಭಿಸಿದ್ದಳು. ಲಕಲಕಿಸುತ್ತಾ ಫೋಟೋ ಶೂಟ್ ಮಾಡಿಸಿಕೊಳ್ಳುವ ಮೂಲಕ ಅಹಮ್ಮಿಕೆ ಪ್ರದರ್ಶಿಸಿದ್ದಳು. ತಪ್ಪೆಸಗಿದವರಿಗೆ ಇಷ್ಟರ ಮಟ್ಟಿಗೆ ತಿಮಿರಿರೋದನ್ನು ನ್ಯಾಯ ವ್ಯವಸ್ಥೆ ಗಮನಿಸದಿರಲು ಸಾಧ್ಯವೇ? ಈವತ್ತಿಗೆ ದರ್ಶನ್ ಮತ್ತೆ ಜೈಲು ಸೇರಿರೋದರ ಹಿಂದೆ ಇಂಥಾ ಅನೇಕ ಸೂಕ್ಷ್ಮಗಳಿದ್ದಾವೆ. ಸರ್ಕಾರದ ಪರ ವಕೀಲರಿಗೆ ವಾದಿಸಲು ಬೇಕಾದ ಅಷ್ಟೂ ಸರಕುಗಳನ್ನು ಪವಿತ್ರಾಳೇ ಖುದ್ದಾಗಿ ಸೃಷ್ಟಿಸಿ ಕೊಟ್ಟಂತಾಗಿದೆ!
ಯಾರು ಏನಾದರೂ ಅಂದುಕೊಳ್ಳಲಿ, ಯಾರ ಬದುಕಾದರೂ ಹಡಾಲೇದ್ದು ಹೋಗಲಿ; ತಾನು ಮಾತ್ರ ಹೈಫೈ ಬದುಕು ನಡೆಸಬೇಕೆಂಬ ಮನಃಸ್ಥಿತಿ ಪವಿತ್ರಾಳದ್ದು. ಆಕೆ ಜೀವದಂತೆ ಹಚ್ಚಿಕೊಂಡು ಪ್ರೀತಿಸಿ ಮದುವೆಯಾಗಿದ್ದ ಪತಿಯೇ ಕೈಯೆತ್ತಿದ್ದರ ಹಿಂದೆಯೂ ಅಂಥಾ ಮನಃಸ್ಥಿತಿಯ ಕಿಸುರಿದೆ. ದರ್ಶನ್ ಥರದ ಆನೆಯನ್ನು ನಾಜೂಕಾಗಿ ಪಳಗಿಸಿಕೊಂಡು, ಆತನ ಮನದನ್ನೆಯಾಗಿದ್ದರ ಹಿಂದೆಯೂ ಹೈಫೈ ಬದುಕಿನ ಆಕಾಂಕ್ಷೆಯೇ ಪ್ರಧಾನವಾಗಿರುವಂತೆ ಕಾಣಿಸುತ್ತದೆ. ದುರಂತವೆಂದರೆ ಮದವೇರಿ ತೊನೆಯುತ್ತಿದ್ದ ದಾಸನಿಗೆ ಇಂಥಾ ಸೂಕ್ಷ್ಮಗಳನ್ನು ಅರ್ಥ ಮಾಡಿಕೊಳ್ಳುವ ಮನಃಸ್ಥಿತಿ ಇರಲಿಲ್ಲ. ಬಹುಶಃ ತನಗೆ ಆಶ್ಲೀಲವಾಗಿ ಮೆಸೇಜು ಬಿಟ್ಟವನ ಹನನ ಮಾಡಿದ ಶಕ್ತಿ ತಾನೆಂಬ ಭ್ರಮೆ ಪವಿತ್ರಾಗಿದ್ದರೂ ಇದ್ದೀತು. ಹಾಗೊಂದು ವೇಳೆ ಸೋಶಿಯಲ್ ಮೀಡಿಯಾದಲ್ಲಿ ಅಶ್ಲೀಲ ಮ ಎಸೇಜು ಬಿಡುವವರನ್ನೆಲ್ಲ ಕೊಂದು ಕೆಡವಿದರೆ, ಬೀಳೋ ಹೆಣಗಳ ರಾಶಿಯಲ್ಲಿ ದರ್ಶನ್ ವೀರಾಭಿಮಾನಿಗಳದ್ದೇ ಮೆಜಾರಿಟಿ ಇರುತ್ತೆ. ಒಟ್ಟಾರೆಯಾಗಿ ಪವಿತ್ರಾಳ ಮೋಹದ ಬಲೆಗೆ ಸಿಕ್ಕ ದರ್ಶನ್ ಬಂಧಿಯಾಗಿದ್ದಾನೆ. ಓರ್ವ ಸ್ಟಾರ್ ನಟನಾಗಿ ಆತನ ಘನತೆ, ಗೌರವಗಳು ಅಕ್ಷರಶಃ ಮಣ್ಣುಪಾಲಾಗಿ ಬಿಟ್ಟಿವೆ!