ಕೆಲ ನಟಿಯರು ಒಂದೇ ಒಂದು ಸಿನಿಮಾ ಮೂಲಕ ಸ್ಟಾರುಗಿರಿ ಪಡೆದು ಮೆರೆದುಬಿಡುತ್ತಾರೆ. ನೋಡ ನೋಡುತ್ತಲೇ ಬೇರೆ ಭಾಷೆಗಳಿಗೂ ಹಾರಿ ಮಿರಮಿರ ಮಿಂಚಲಾರಂಭಿಸುತ್ತಾರೆ. ಆದರೆ, ಇನ್ನೂ ಕೆಲ ನಟಿಯರ ಪಾಲಿಗೆ ಅದೇನೇ ಸರ್ಕಸ್ಸು ನಡೆಸಿದರೂ ಯಶಸ್ಸೆಂಬುದು ಸತಾಯಿಸಿ ಬಿಡುತ್ತೆ. ಆ ಸಾಲಿಗೆ ಸೇರ್ಪಡೆಗೊಳ್ಳುವ ನಟಿ (nishvika naidu) ನಿಶ್ವಿಕಾ ನಾಯ್ಡು. ಈಕೆ ವಾಸು ನಾನ್ ಪಕ್ಕಾ ಕಮರ್ಶಿಯಲ್ ಅಂತೊಂದು ಸಿನಿಮಾ ಮೂಲಕ ನಾಯಕಿಯಾಗಿದ್ದಳು. (anishthejeshwar) ಅನೀಶ್ ತೇಜೇಶ್ವರ್ ನಟನೆಯ ಆ ಚಿತ್ರ ತೋಪೆದ್ದು ಹೋಗಿತ್ತು. ತೋಪೆದ್ದದ್ದು ಕೇವಲ ಆ ಚಿತ್ರ ಮಾತ್ರವಲ್ಲ; (nishvika) ನಿಶ್ವಿಕಾಳ ನಸೀಬು ಕೂಡಾ ಅದೇ ಹಾದಿ ಹಿಡಿದಿತ್ತು. ಕರಟಕ ದಮನಕ ಚಿತ್ರವೂ ಅಂದುಕೊಂಡಂಥಾ ಗೆಲುವು ಕಾಣಲಿಲ್ಲ. ಇದೆಲ್ಲದರಿಂದ ಕಂಗಾಲಾದ ನಿಶ್ವಿಕಾ ಖತಾರ್ನಾಕ್ ಜ್ಯೋತಿಷಿ ವೇಣು ಸ್ವಾಮಿಯ ಮೊರೆ ಹೋದಳಾ?

ಸದ್ಯಕ್ಕೆ ತೆಲುಗಿನ ಕೆಲ ಮೀಡಿಯಾಗಳಲ್ಲಿ ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈಕೆ ವೇಣುಸ್ವಾಮಿಯ ಸಾರಥ್ಯದಲ್ಲಿ ಭಯಂಕರ ಹೋಮವೊಂದನ್ನು ಮಾಡಿದ್ದಾಳಂತೆ. ಅಷ್ಟಕ್ಕೂ ನಟ ನಟಿಯರು ಈ ವೇಣುಸ್ವಾಮಿಯ ಮೊರೆ ಹೋಗೋದು, ದುಬಾರಿ ಹೋಮ ಹವನಗಳನ್ನೆಲ್ಲ ಮಾಡಿಸೋದು ತೆಲುಗು ಚಿತ್ರರಂಗದ ಮಟ್ಟಿಗೆ ಹೊಸತೇನಲ್ಲ. ಆದರೆ, ನಿಶ್ವಿಕಾ ಪಾಲಿಗಿದು ಹೊಸತೇ ಇರಬಹುದು. ಹಾಗಾದರೆ, ನಿಶ್ವಿಕಾ ಏಕಾಏಕಿ ಈ ಹೋಮ ನಡೆಸಲು ಕಾರಣವೇನು? ಅದು ವೈಯಕ್ತಿಕ ಸಮಸ್ಯೆಗಾಗಿಯಾ ಅಥವಾ ಸಿನಿಮಾ ಕರಿಯರ್ ಗೆ ಸಂಬಂಧಿಸಿದ ವಿಚಾರವಾ? ಹೀಗೆ ನಾನಾ ಪ್ರಶ್ನೆಗಳೇಳೋದು ಸಹಜ. ಇದಕ್ಕೆ ಕೆಲ ಇಂಟರೆಸ್ಟಿಂಗ್ ಉತ್ತರಗಳು ಜಾಹೀರಾಗುತ್ತವೆ.

ನಿಶ್ವಿಕಾಗೀಗ ಕನ್ನಡ ಚಿತ್ರರಂಗದಲ್ಲಿ ಬರಖತ್ತಾಗೋದು ಕಷ್ಟವೆಂಬಂತೆ ಕಂಡಿದೆ. ಈಕೆ ಯೋಗರಾಜ ಭಟ್ಟರ ಕರಟಕ ಧಮನಕ ಚಿತ್ರದಲ್ಲಿ ನಟಿಸುವ ಸುದ್ದಿ ಬಂದಿತ್ತಲ್ಲಾ? ಆ ಹೊತ್ತಿನಲ್ಲಿ ಸದರಿ ಸಿನಿಮಾ ಮೂಲಕವಾದರೂ ಈಕೆಯ ಅದೃಷ್ಟ ಖುಲಾಯಿಸಬಹುದೆಂಬ ನಿರೀಕ್ಷೆಯಿತ್ತು. ಪ್ರಭುದೇವನೊಂದಿಗೆ ಸೊಂಟ ಬಳುಕಿಸಿ, ಭಟ್ಟರ ಜೊತೆ ಸೇರಿ ನಾನಾ ಕಿತಾಪತಿ ನಡೆಸಿದ್ದಳು. ಆದರೂ ಬಿಡುಗಡೆಗೊಂಡ ಕರಟಕ ದಮನಕರಿಗೆ ಮೊದಲ ವಾರವೇ ಧಮ್ಮು ಕಟ್ಟಲಾರಂಭಿಸಿತ್ತು. ಯಾವಾಗ ಈ ಚಿತ್ರವೂ ತೋಪಾಯ್ತೋ, ಆಗಲೇ ನಿಶ್ವಿಕಾ ತೆಲುಗು ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗಿಳಿಯುವ ನಿರ್ಧಾರ ಕೈಗೊಂಡಿದ್ದಳಂತೆ. ಹೀಗಂತ ಆಕೆಯ ಆಪ್ತ ವಲಯದಲ್ಲಿಯೇ ಗುಲ್ಲೆದ್ದಿದೆ.

ಸೀದಾ ತೆಲುಉಗು ಚಿತ್ರರಂಗಕ್ಕೆ ಎಂಟರಿ ಕೊಟ್ಟರೆ, ಇಲ್ಲಿನ ಲತ್ತೆ ಪುರಾಣ ಅಲ್ಲೀವರೆಗೂ ಹಿಂಬಾಲಿಸುತ್ತದೆಂಬ ಭಯ ನಿಶ್ವಿಕಾಳನ್ನು ಕಾಡಿರಬಹುದು. ಈ ಕಾರಣದಿಂದಲೇ ಪ್ರಳಯಾಂತಕ ಜ್ಯೋತಿಶಿ ವೇಣು ಸ್ವಾಮಿಯ ಮೊರೆ ಹೋಗಿ, ಆತನ ಮನೆಯಲ್ಲಿಯೇ ಮಹಾ ಯಾಗವೊಂದನ್ನ ಮಾಡಿಸಿದ್ದಾಳಂತೆ. ಅಷ್ಟಕ್ಕೂ ಈ ಹಿಂದೆ ರಶ್ಮಿಕಾ ಮಂದಣ್ಣ ಕೂಡಾ ವೇಣು ಸ್ವಾಮಿಯ ಮೊರೆ ಹೋಗಿದ್ದಳು. ಹೋಮ ಹವನ ನಡೆಸಿದ್ದಳು. ನಿಶ್ವಿಕಾ ಅದನ್ನು ಮುಗಿಸಿಕೊಂಡೇ ತೆಲುಉಗಿಗೆ ಎಂಟ್ರಿ ಕೊಡಲು ತೀರ್ಮಾನಿಸಿದಂತಿದೆ. ಈ ವೇಣು ಸ್ವಾಮಿ ಸೆಲೆಬ್ರಿಟಿಗಳ ಮೌಢ್ಯವನ್ನೇ ಕಾಸೆಣಿಸುವ ಮೂಲವಾಗಿಸಿಕೊಂಡಿರೋ ಹೈಟೆಕ್ ವಂಚಕ. ಸಿನಿಮಾ, ರಾಜಕೀಯ ಸೇರಿದಂತೆ ಎಲ್ಲದರ ಭವಿಷ್ಯಕ್ಕೂ ಬಾಯಿ ಹಾಕೋ ವೇಣುಗೆ ಅನೇಕ ಸಾರಿ ಮುಜುಗರ ಎದುರಾಗಿದೆ. ಆದರೂ ಆತನ ಮಾರ್ಕೆಟ್ಟು ಕುಗ್ಗಿಲ್ಲ. ಯಾಕಂದ್ರೆ, ನಿಶ್ವಿಕಾಳಂಥಾ ಸೆಲೆಬ್ರಿಟಿಗಳ ಸಂಖ್ಯೆಯಿನ್ನೂ ತಗ್ಗಿಲ್ಲ!

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!