ಸಿನಿಮಾರಂಗದ ತುಂಬೆಲ್ಲ ಇದೀಗ ದಕ್ಷಿಣದ ಪಾರುಪಥ್ಯ ಸಾಂಘವಾಗಿ ಮುಂದುವರೆಯುತ್ತಿದೆ. ಒಂದು ಕಾಲದಲ್ಲಿ ದಕ್ಷಿಣ ಭಾರತೀಯ ಸಿನಿಮಾ ರಂಗದ ನಟ ನಟಿಯರು (bollywood) ಬಾಲಿವುಡ್ಡಿಗೆ ಜಿಗಿಯೋದೇ ಒಂದು ಪ್ರತಿಷ್ಠ ಅಂದುಕೊಂಡಿದ್ದರು. ಆದರೀಗ ಬಾಲಿವುಡ್ ನಟಿಯರೇ ದಕ್ಷಿಣದ ಸಿನಿಮಾಗಳಲ್ಲಿ ಅವಕಾಶ ಸಿಗೋದನ್ನು ಪ್ರತಿಷ್ಠೆ ಎಂಬಂತೆ ಪರಿಗಣಿಸಿದ್ದಾರೆ. ಈ ಕಾರಣದಿಂದಲೇ ಹಲವಾರು ನಟಿಯರು ತೆಲುಗು ಸೇರಿದಂತೆ ಅನೇಕ ಭಾಷೆಗಳ ಸಿನಿಮಾ ಭಾಗವಾಗುತ್ತಿದ್ದಾರೆ. ಅದೇ ಹಾದಿಯಲ್ಲಿ ಸಾಗಿ ಬಂದಿರುವಾಕೆ ಮೃಣಾಲ್ ಠಾಕೂರ್. ಈ ಹಿಂದೆ ಸೂಪರ್ ಹಿಟ್ ಚಿತ್ರ (seetharaman movie) ಸೀತಾ ರಾಮನ್ ಮೂಲಕ ಈಕೆ ತೆಲುಗುನಾಡಿಗೆ ಅಡಿಯಿರಿಸಿದ್ದಳು. ಇದೀಗ (mrunal takur) ಮೃಣಾಲ್ ಪ್ರಭಾಸ್ ಗೆ ಜೋಡಿಯಾಗುತ್ತಿರೋ ಸುದ್ದಿಯೊಂದು ಈ ಹಿಂದೆಯೇ ಹೊರಬಿದ್ದಿತ್ತು. ಇದೀಗ ಮೃಣಾಲ್‍ ಆ ಚಿತ್ರಕ್ಕಾಗಿ ತಯಾರಿ ಮುಗಿಸಿಕೊಂಡಿದ್ದಾಳೆ. ಇದರ ಜೊತೆ ಜೊತೆಗೇ ಮತ್ತೊಂದೆರಡು ಸಿನಿಮಾಗಳನ್ನು ಒಪ್ಪಿಕೊಳ್ಳಲು ಅಣಿಗೊಂಡಿದ್ದಾಳೆ!

ರಾಘವ ಪುಡಿ ನಿರ್ದೇಶನ ಮಾಡಿದ್ದ ಸೀತಾರಾಮನನ್ ಚಿತ್ರ ಬಿಗ್ ಹಿಟ್ ಆಗಿ ದಾಖಲಾಗಿತ್ತು. ಅದರಲ್ಲಿ ನಾಯಕಿಯಾಗಿ ನಟಿಸಿದ್ದ ಮೃಣಾಲ್ ಕಾಣಿಸಿಕೊಂಡಿದ್ದ ರೀತಿಗೆ, ನಟನೆಗೆ ತೆಲುಗು ಪ್ರೇಕ್ಷಕರೆಲ್ಲ ಫಿದಾ ಆಗಿ ಬಿಟ್ಟಿದ್ದರು. ಆ ಸಿನಿಮಾ ನೋಡಿ ಈಕೆ ಮತ್ತೊಂದಷ್ಟು ತೆಲುಗು ಚಿತ್ರಗಳ ಭಾಗವಾಗಬೇಕೆಂದ ಅದೆಷ್ಟೋ ಮಂದಿ ಅಂದುಕೊಂಡಿದ್ದರೆ ಅಚ್ಚರಿಯೇನಿಲ್ಲ. ಈಗ ಅದು ಕೈಗೂಡಿದೆ. ಯಾಕೆಂದರೆ, ಇತ್ತೀಚೆಗಷ್ಟೇ ಪ್ರಭಾಸ್ ಒಪ್ಪಿಕೊಂಡಿದ್ದ ಸಿನಿಮಾವೊಂದಕ್ಕೆ ನಾಯಕಿಯಾಗಲು ಮೃಣಾಲ್ ಠಾಕೂರ್ ಸಹಿ ಹಾಕಿದ್ದಾಳೆ. ಈವತ್ತಿಗೂ ಪ್ರಭಾಸ್ ಜೊತೆ ನಟಿಸಬೇಕೆಂದು ತುದಿಗಾಲಿನಲ್ಲಿ ನಿಂತು ಕಾಯುತ್ತಿರುವ ನಟೀಮಣಿಯರೆಲ್ಲ ಮೃಣಾಲ್ ಅದೃಷ್ಟ ಕಂಡು ಕರುಬುತ್ತಿದ್ದಾರೆ. 

ಪ್ರಭಾಸ್ ಸಾಲು ಸಾಲಾಗಿ ಒಂದಷ್ಟು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಅದರಲ್ಲಿ ರಾಘವ್‍ ನಿದೇ‍್ಶನದ ಸಿನಿಮಾ ಬಗ್ಗೆ ವಿಶೇಷ ಕುತೂಹಲವಿದೆ. ಅಂದಹಾಗೆ ಈ ಹಿಂದೆ ಸೀತಾರಾಮನ್ ಚಿತ್ರವನ್ನು ನಿರ್ದೇಶನ ಮಾಡಿ ಗೆದ್ದಿದ್ದ ರಾಘವ್ ಪುಡಿ ನಿರ್ದೇಶನದಲ್ಲಿಯೇ ಈ ಹೊಸ ಚಿತ್ರ ಕೂಡಾ ಮೂಡಿ ಬರಲಿದೆ. ಈ ಸಿನಿಮಾ ಮಹಾಯುದ್ಧದ ಕಾಲಘಟ್ಟದಲ್ಲಿ ಜರುಗುವ ಪ್ರೇಮಕಥಾನಕವನ್ನು ಒಳಗೊಂಡಿದೆಯಂತೆ. ಇದೀಗ ಮೃಣಾಲ್ ಕೂಡಾ ಒಂದೆರಡು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾಳೆ. ಪ್ರಭಾಸ್ ಅಂತೂ ಬಿಡುವಿರದಂತೆ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದಾನೆ. ಈಗಾಗಲೇ ಶುರು ಮಾಡಿರುವ ಚಿತ್ರೀಕರಣ ಮುಕ್ತಾಯಗೊಂಡೇಟಿಗೆ ರಾಘವಪುಡಿ ನಿರ್ದೇಶನದ ಚಿತ್ರೀಕರಣಕ್ಕೆ ಚಾಲನೆ ಸಿಗಲಿದೆ. ಸದ್ಯ ಇದರ ಪ್ರೀ ಪ್ರೊಡಕ್ಷನ್ ಕೆಲಸ ಕಾರ್ಯ ಭರದಿಂದ ಸಾಗುತ್ತಿದೆ.

About The Author