ಪಂಜಾಬಿ (punjabi) ಹುಡುಗಿಯಾದರೂ ತೆಲುಗು ಚಿತ್ರರಂಗದ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದಾಕೆ (kriti sanon) ಕೃತಿ ಸನೋನ್. ಉತ್ತರ ಭಾರತದಿಂದ ಬಂದರೂ ತೆಡಲುಗಿನಿಂದಲೇಕಣ್ಣರಳಿಸಿದ, ನಟಿಯರಾಗಿ ನೆಲೆ ಕಂಡುಕೊಂಡ ಅನೇಕರಿದ್ದಾರೆ. ಆ ಸಾಲಿನಲ್ಲಿ ಕೃತಿ (kriti) ಕೂಡಾ ಸೇರ್ಪಡೆಗೊಳ್ಳುತ್ತಾಳೆ. ಕೇವಲ ಒನಪು, ವಯ್ಯಾರ ಮಾತ್ರವಲ್ಲ; ನಟನೆಯ ವಿಚಾರದಲ್ಲಿಯೂ ಈಕೆ ಸೈ ಅನ್ನಿಸಿಕೊಂಡಿದ್ದಾಳೆ. ಈ ಬಲದಿಂದಲೇ ಬಾಲಿವುಡ್ಡಿಗೂ ಹಾರಿ, ಅಲ್ಲಿಯೂ ಪ್ರಸಿದ್ಧಿ ಪಡೆದುಕೊಂಡಿರುವ ಕೃತಿಯ ಪಾಲಿಗೀಗ ವೃತ್ತಿ ಬದುಕಿನಲ್ಲಿ ಹೊಸಾ ಆಯಾಮವೊಂದು ಕಣ್ತೆರೆದುಕೊಂಡಿದೆ. ಭಾರತೀಯ ಚಿತ್ರರಂಗ ಎಂದೂ ಮರೆಯದ ನಕ್ಷತ್ರದಂತಿರುವ ಮಹಾನಟಿ (meena kumari) ಮೀನಾಕುಮಾರಿಯ ಬಯೋಪಿಕ್‌ನಲ್ಲಿ (biopic)  ನಟಿಸವ ಸುರ್ಣಾವಕಾಶವೊಂದೀಗ ಕೃತಿಯನ್ನು ಅರಸಿ ಬಂದಿದೆ.

ಹಾಗೆ ನೋಡಿದರೆ, ಇಂಥಾ ಪಾತ್ರಗಳು ಸಿಗಬೇಕೆಂಬುದು ಅದೆಷ್ಟೋ ಯಶಸ್ವೀ ನಟಿಯರ ಮಹಾ ಕನಸು. ತೆರೆ ಮೇಲೆ ಮಿಂಚಿ, ಮರೆಯಾದರೂ ಎಲ್ಲ ಮನಸಲ್ಲುಳಿದಿರುವ ಮೀನಾ ಕುಮಾರಿಯಂಥಾ ನಟಿಯರ ಪಾತ್ರ ನಿರ್ವಹಿಸೋದೇನೂ ಸುಲಭದ ವಿಚಾರವಲ್ಲ. ಅಂಥಾ ಅವಕಾಶ ನಟನೆಯಲ್ಲಿ ಮಹಾನ್ ಪ್ರತಿಭೆ ಹೊಂದಿರುವವರಿಗೆ ಮಾತ್ರವೇ ಸಿಗಲು ಸಾಧ್ಯ. ಸದ್ಯಕ್ಕೆ ಅಂಥಾದ್ದೊಂದು ಅವಕಾಶ ಕೃತಿ ಸನೋನ್‌ಗೆ ತಾನೇ ತಾನಾಗಿ ಒಲಿದು ಬಂದಿದೆ. ಇತ್ತೀಚಿನ ದಿನಮಾನಗಳಲ್ಲಿ ಹೊಸತನದ ಪಾತ್ರಗಳಿಗೆ ಹಂಬಲಿಸುತ್ತಿರುವ ಕೃತಿ ಕೂಡಾ ಈ ಆಫರ್ ಅನ್ನು ಥ್ರಿಲ್ ಆಗಿ ಒಪ್ಪಿಕೊಂಡಿದ್ದಾಳಂತೆ.

ಎಂಭತ್ತು ತೊಂಬತ್ತರ ದಶಕಗಳಲ್ಲಿ ಬಾಲಿವುಡ್‌ನ ಟಾಪ್ ನಟಿಯಾಗಿದ್ದವರು ಮೀನಾ ಕುಮಾರಿ. ತಮ್ಮ ವಿಶಿಷ್ಟವಾ ನಟನ ಪ್ರತಿಭೆಯಿಂದ ಮನೆ ಮಾತಾಗಿದ್ದ ಅವರು, ಅತ್ಯಂತ ಕಡಿಮೆ ಅವಧಿಯಲ್ಲಿಯೇ ನೂರಾ ಮೂವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು. ನಟಿಯಾಗಿ ಉತ್ತುಂಗದಲ್ಲಿರುವಾಗಲೇ ಅನಾರೋಗ್ಯ ಸಮಸ್ಯೆಯಿಂದ ಇನ್ನಿಲ್ಲವಾಗಿದ್ದ ಮೀನಾ ಕುಮಾರಿ ಭಾರತೀಯ ಚಿತ್ರರಂಗದ ಮೇರು ನಟಿ. ಮೂವತ್ತೆಂಟನೇ ವಯಸ್ಸಿಗೆಲ್ಲ ಇನ್ನಿಲ್ಲವಾದ ಈ ನಟಿಯ ಬದುಕಿಗೆ ಸಿನಿಮಾ ಫ್ರೇಮು ತೊಡಿಸಲು ಪ್ರಸಿದ್ಧ ಪ್ಯಾಶನ್ ಡಿಸೈನರ್ ಮನೀಶ್ ಮಲ್ಹೋತ್ರ ಅಣಿಗೊಂಡಿದ್ದಾರೆ. ಅವರ ನಿರ್ದೇಶನದಲ್ಲಿ ಮೂಡಿ ಬರಲಿರೋ ಈ ಸಿನಿಮಾಗಾಇ ಸದ್ಯ ತಯಾರಿಗಳು ನಡೆಯುತ್ತಿವೆ.

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!