`ಅಲ್ಪನಿಗೆ ಐಶ್ವರ್ಯ ಬಂದರೆ ನಡುರಾತ್ರೀಲಿ ಕೊಡೆ ಹಿಡಿದನಂತೆ…’ ಹೀಗೊಂದು ನಾನ್ಣುಡಿ ನಮ್ಮ ನಡುವೆ ಲಾಗಾಯ್ತಿನಿಂದಲೂ ಚಾಲ್ತಿಯಲ್ಲಿದೆ. ಅದು ಬಹುಕಾಲದಿಂದ ಜನಜನಿತವಾದರೂ ಸಲಕಲು ಗಾದೆ ಮಾತು ಅನ್ನಿಸಿಕೊಂಡಿಲ್ಲ. ಯಾಕೆಂದರೆ ನಡು ರಾತ್ರೀಲಿ ಕೊಡೆ ಹಿಡಿಯೋ ಅಲ್ಪರ ಸಂಖ್ಯೆ ಕಡಿಮೆಯಾಗಿಲ್ಲ. ಆ ಸಾಲಿಗೆ ಹೊಸದಾಗಿ ಸೇರ್ಪಡೆಗೊಂಡಿರುವಾತ ಮಡೇನೂರು ಮನು ಎಂಬ ಕಾಮಿಡಿ ನಟ. ಹಾಸ್ಯ ನಟರಾಗಿ ಖ್ಯಾತರಾಗಿ, ಬಹು ಬೇಡಿಕೆದಬ ಹೊಂದಿದ್ದ ಅನೇಕರಿಗೆ ನಡುದಾರಿಯಲ್ಲಿಯೇ ನಾಯಕ ನಟನಾಗುವ ತಲುಬು ಹತ್ತಿಕೊಳ್ಳೋದೇನೂ ಹೊಸತಗಲ್ಲ. ಆದರೆ, ಕಾಮಿಡಿ ಕಿಲಾಡಿಗಳು ಅಂತೊಂದು ಡಬಲ್ ಮೀನಿಂಗ್ ಶೋನಲ್ಲಿ ಭಾಗಿಯಾಗಿದ್ದ ಮಡೇನೂರು ಮನು ಎಂಬಾತನಿಗೆ ಆರಂಭದಲ್ಲಿಯೇ ಅಂಥಾದ್ದೊಂದು ತಲುಬು ಹತ್ತಿಕೊಂಡಿತ್ತು. ಕಷ್ಟಪಟ್ಟಿದ್ದರೆ ತನಗೊಪ್ಪುವ ಪಾತ್ರಗಳಲ್ಲಿ ಮಿಂಚುವ ಅವಕಾಶಗಳೂ ಈತನೆದುರಿಗಿದ್ದವು. ಆದರೆ ಅದೆಲ್ಲವೂ ಕಾಮದ ಕೊಚ್ಚೆಯಲ್ಲಿ ಲೀನವಾಗಿ ಬಿಟ್ಟಿದೆ!
ಮಡೇನೂರು ಹೋರಿ ಕಾಂಪೌಂಡು ಹಾರಲು ಹೋಗಿ ಯಡವಟ್ಟು ಮಾಡಿಕೊಂಡಿದೆ. ಅದ್ಯಾರೋ ಮಿಂಚು ಎಂಬಾಕೆಯೊಂದಿಗೆ ಅನಧಿಕೃತವಾಗಿ ಎರಡನೇ ಸಂಸಾರ ಹೂಡಲು ಹೋಗಿ ಮನು ಮಾನ ಕಳೆದುಕೊಂಡಿದ್ದಾನೆ. ತಾನು ಸ್ಟಾರ್ ನಟ ಎಂಬ ಭ್ರಮೆಯಲ್ಲಿ ದರ್ಶನ್, ಧ್ರುವ ಸರ್ಜಾ, ಶಿವರಾಜ್ ಕುಮಾರ್ ಮುಂತಾದ ಸೀನಿಯರ್ ನಟರ ಬಗ್ಗೆ ಬಾಯಿಗೆ ಬಂದಂತೆ ಮಾತಾಡಿ ತಗುಲಿಕೊಂಡಿದ್ದಾನೆ. ಇದರಿಂದಾಗಿ ಈತನನ್ನು ಚಲನಚಿತ್ರ ವಾಣಿಜ್ಯ ಮಂಡಳಿ ಬ್ಯಾನ್ದ ಮಾಡಿತ್ತು. ಈ ಮೂಲಕ ವಾಣಿಜ್ಯ ಮಂಡಳಿ ಉಸಿರಾಡುತ್ತಿದೆ ಎಂಬ ಸಂದೇಶವನ ನು ಚಿತ್ರರಂಗಕ್ಕೆ ರವಾನಿಸಿತ್ತು. ಇದೀಗ ಶಿವಣ್ಣನ ಮನೆ ಮುಂದೆ ಸಂಸಾರ ಸಮೇತ ಅಂಡಲೆದ ಮಡೇನೂರಿನವನ ಮೇಲೆ ಹೇರಿದ್ದ ನಿಶೇಧವನ ನು ವಾಣ ಇಜ್ಯ ಮಂಡಳಿ ತೆರವುಗೊಳಿಸಿದೆ. ನಶೆಯೇರಿಸಿಕೊಂಡು ಮೆರೆದಾಡಿದ್ದ ಹೋರಿಯೀಗ ಅಂಬೋ ಅನ್ನುತ್ತಾ ಗಾಂಧಿನಗರದಗುಂಟ ಗಿರಕಿ ಹೊಡೆಯಲಾರಂಭಿಸಿದೆ!
ಕಾಮಿಡಿ ಕಿಲಾಡಿಗಳು ಶೋ ವಿನ್ನರ್ ಆಗಿದ್ದ ಮಡೇನೂರು ಮನು ಕಷ್ಟದಿಂದಲೇ ಮೇಲೆದ್ದು ಬಂದಿದ್ದ. ಒಂದಷ್ಟು ಪ್ರಯತ್ನ ಪಟ್ಟು ಕುಲದಲ್ಲಿ ಕೀಳ್ಯಾವುದೋ ಅಂತೊಂದು ಸಿನಿಮಾದಲ್ಲಿ ನಾಯಕನಾಗಿದ್ದ. ಈ ವಾರ ಬಿಡುಗಡೆಗೊಂಡಿರೋ ಆ ಸಿನಿಮಾ ಪ್ರೇಕ್ಷಕರಿಲ್ಲದೆ ಭಣಗುಡುತ್ತಿದೆ. ಬಹುಶಃ ಮದೇನೂರನ ಕಾಮಪುರಾಣ ಬಯಲಾಗದಿದ್ದಿದ್ದರೂ ಇದಕ್ಕಿಂತ ಭಿನ್ನವಾದ ವಾತಾವರಣ ಇರುತ್ತಿರಲಿಲ್ಲ. ಆದರೆ, ಮುಂದೊಂದಷ್ಟು ಪ್ರಯತ್ನ ಪಟ್ಟಿದ್ದರೆ, ನಾಯಕನಾಗಿಯಲ್ಲದಿದ್ದರೂ ಬೇರೆ ಪಾತ್ರಗಳಲ್ಲಿಯಾದರೂ ಮಿಂಚೋ ಅವಕಾಶ ವಿಪುಲವಾಗಿತ್ತು. ಅದೆಲ್ಲವನ್ನೂ ಮಡೇನೂರು ಮನು ಕೈಯಾರೆ ಹಾಳುಗೆಡವಿಕೊಂಡಿದ್ದಾನೆ. ಇಷ್ಟೂ ವರ್ಷಗಳ ಪ್ರಯತ್ನದ ಫಲವನ್ನು ಹರುಕುಬಾಯಿ ಮತ್ತು ಲೂಸು ಲಂಗೋಟಿಯ ದೆಸೆಯಿಂದ ಕಳೆದುಕೊಂಡಿದ್ದಾನೆ.
ಮನು ಅದ್ಯಾರೋ ಮಿಂಚು ಎಂಬಾಕೆಯೊಂದಿನ ಅಫೇರಿನ ಮೂಲಕವೇ ಜೈಲುವಾಸ ಅನುಭವಿಸುತ್ತಿದ್ದಾನೆ. ಅಷ್ಟೇ ಆಗಿದ್ದರೆ ಒಂದಷ್ಟು ದಿನದ ಜೈಲುವಾಸದ ನಂತರ ಮರಳಿ ಹೇಗೋ ಬಣ್ಣ ಹಚ್ಚಬಹುದಿತ್ತು. ಹಾಗಂತ ಈ ಮಡೇನೂರಿನ ಮನುವನ್ನು ಕ್ಷಮಿಸುವಂತಿಲ್ಲ. ಹಾಗೆ ನೋಡಿದರೆ, ಈತ ಪ್ರಸಿದ್ಧಿ ಪಡೆದಿದ್ದೇ ಹಾಸ್ಯದ ಮೂಲಕ. ಆತನನ್ನು ನಾಯಕ ನಟನನ್ನಾಗಿ ನೋಡುವ ಇರಾದೆ ಯಾರೊಬ್ಬರಿಗೂ ಇಲ್ಲ. ಅಷ್ಟಕ್ಕೂ ನಾಯತಕನಾಗಿ ಮೆರೆಯಬೇಕೆಂದುಕೊಂಡಿದ್ದು ಆತನ ಭ್ರಮೆಯ ಕಾರಣದಿಂದಷ್ಟೆ. ಹಾಗಿರುವಾಗ, ಈ ಆಸಾಮಿ ದರ್ಶನ್, ಶಿವಣ್, ಧ್ರುವನಿಗೆ ತನ್ನನ್ನು ತಾನು ಹೋಲಿಸಿಕೊಂಡು ಮಾತಾಡೋದೇ ಕಾಮಿಡಿಯ ಪರಾಕಾಷ್ಠೆ. ಇಂಥಾ ತಿಮಿರಿನ ಹುಳುಗಳು ಕಿರುತೆರೆ, ಹಿರಿತೆರೆಗಳ ಸಂದಿಗೊಂದಿಗಳಲ್ಲಿ ಮಿಜಿಗುಡುತ್ತಿದ್ದಾವೆ. ಇವುಗಳಿಗೆ ಬಾಯಿಯ ಮೇಲಾಗಲಿ, ಕಚ್ಚೆಯ ಮೇಲಾಗಲಿ ಹಿಡಿತವಿಲ್ಲ. ಸಿಕ್ಕ ಪ್ರಸಿದ್ಧಿಯಯಲ್ಲಿ ಶಕ್ತಿ ಮೀರಿ ಮಜಾ ಉಡಾಯಿಸಿ, ಸಿಕ್ಕಷ್ಟು ಕಾಸು ಗೋರಿಕೊಂಡು ಹೋಗೋದಷ್ಟೇ ಇಂಥವುಗಳ ಇದ್ದೇಶ. ಇದೆಲ್ಲದರಾಚೆಗೆ, ಹಳ್ಳಿಯಿಂದ ಬಂದು ಒಂದಷ್ಟು ಭರವಸೆ ಮೂಡಿಸಿದ್ದ ಮಡೇನೂರು ಮನು ಕಾಮ, ವಿವಾದಗಳ ಕೊಚ್ಚೆಯಲ್ಲಿ ಕಳೆದು ಹೋಗಿರೋದು ನಿಜಕ್ಕೂ ವಿಷಾಧದ ವಿಚಾರ!
ಇನ್ನು ಸಂತ್ರಸ್ಥೆಯ ಪೋಸು ಕೊಡುತ್ತಿರುವ ಮಿಂಚು ಎಂಬ ನಟಿಯ ವಿಚಾರ. ಈಕೆಯೀಗ ಮತ್ತೊಂದು ರೌಡು ನೌಟಂಕಿಯಾಟ ಶುರುವಿಟ್ಟುಕೊಂಡಿದ್ದಾಳೆ. ಹೀನಾಮಾನ ಮೆರೆಯುತ್ತಿದ್ದ ಮಡೇನೂರು ಮನು ಎಣ್ಣೆ ಏಟ,ಲ್ಲಿ ಆಡಿದ್ದ ಮಾತನ್ನು ರೆಕಾರ್ಡ್ ಮಾಡಿಕೊಂಡು ಆಟ ಕಟ್ಟಿತ್ತಲ್ಲಾ? ಆ ಪಡೆಯೇ ಇದೀಗ ಮತ್ತೆ ಮಿಂಚುವನ್ನು ಮಡೇನೂರನ ವಿರುದ್ಧ ಛೂ ಬಿಟ್ಟಿದೆ. ಆ ಕಾರಣದಿಂದಲೇ ಸದರಿ ನಟಿಯೀಗ ಮತ್ತೊಂದು ರೌಡು ಮಾಧ್ಯಮದ ಮುಂದೆ ಬಂದು ತನಗಾದ ಅನ್ಯಾಯವನ್ನು ಕಣ್ಣೀರ ಹಿಮ ಮೇಳದಲ್ಲಿ ಒದರುತ್ತಿದ್ದಾಳೆ. ಹೇಳಿಕೇಳಿ ಮಡೇನೂರು ಮನುಗೆ ಮದುವೆಯಾಗಿದೆ. ತನ್ನಿಂದ ಓರ್ವ ಹೆಣ್ಣಿನ ನೆಮ್ಮದಿ ಹಾಳಾಗುತ್ತದೆಂದು ಗೊತ್ತಿದ್ದರೂ ಮನುವಿನೊಂದಿಗೆ ಸಂಬಂಧ ಕುದುರಿಸುವಾಗ ಈಕೆಯ ಬುದ್ಧಿಗೇನು ಮಂಕು ಕವಿದಿತ್ತಾ? ಸಂತೃಪ್ತ ಅನೈತಿಕ ಸಂಬಂಧ ತಾಳ ತಪ್ಪಿದಾಗ ಸಂತ್ರಸ್ತೆಯ ಪೋಸು ಕೊಡುವ ಇಂಥವರ ಬಗ್ಗೆ ಕನಿಷ್ಠ ಮರುಕ ಮೂಡಲೂ ಸಾಧ್ಯವಿಲ್ಲ!