ವರ್ಷ ಅರವತ್ತರ ಗಡಿ ದಾಟಿದರೂ ಹದಿನೆಂಟರ ಹುಮ್ಮಸ್ಸಿನೊಂದಿಗೆ ಮುಂದುವರೆಯುತ್ತಿರುವವರು ಶಿವರಾಜ್ ಕುಮಾರ್. ಸದಾ ಚಿಒಒತ್ರೀಕರಣದಲ್ಲಿ ಬ್ಯುಸಿಯಾಗಿದ್ದರೂ ಕೂಡಾ, ಚಿತ್ರರಂಗದ ಬೆಳವಣಿಗೆಗಳತ್ತ ಗಂಭೀರವಾಗಿ ಚಿತ್ರ ಹರಿಸೋದು ಅವರ ವಿಶೇಷತೆ. ಹೊಸಬರ ಸಿನಿಮಾಗಳನ್ನು ನೋಡಿ ಪ್ರೋತ್ಸಾಹಿಸುತ್ತಾ, ಒಳ್ಳೆ ಸಿನಿಮಾಗಳ ಬೆನ್ನಿಗೆ ಸದಾ ನಿಲ್ಲುವ ಶಿವಣ್ಣ ಇದೀಗ ಲವ್ ಯೂ ಮುದ್ದು ಚಿತ್ರವನ್ನು ಓಟಿಟಿಯಲ್ಲಿ ನೋಡಿ ಮೆಚ್ಚಿಕೊಂಡಿದ್ದಾರೆ. ಈ ನಿಮಿತ್ತವಾಗಿ ಇತ್ತೀಚೆಗೆ ಕಂಠೀರವ ಸ್ಟುಡಿಯೋದಲ್ಲಿ ಲವ್ ಯೂ ಮುದ್ದು ಚಿತ್ರತಂಡ ಶಿವಣ್ಣನನ್ನು ಭೇಟಿಯಾಗಿತ್ತು. ಈ ಸಂದರ್ಭದಲ್ಲಿ ಒಟ್ಟಾರೆ ಸಿನಿಮಾವನ್ನು ಮನಸಾರೆ ಮೆಚ್ಚಿಕೊಂಡ ಶಿವಣ್ಣ ಚಿತ್ರತಂಡಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಈ ತಂಡದಿಂದ ಮತ್ತಷ್ಟು ಒಳ್ಳೆ ಸಿನಿಮಾಗಳು ಬರಲೆಂದು ಹಾರೈಸಿದ್ದಾರೆ.
ಕಳೆದ ವರ್ಷ ತೆರೆಗಂಡಿದ್ದ ಲವ್ ಯೂ ಮುದ್ದು ಚಿತ್ರದಲ್ಲಿ ಸಿದ್ದು ಮೂಲಿಮನಿ ನಾಯಕನಾಗಿ ನಟಿಸಿದ್ದರು. ಕೆಮಿಸ್ಟ್ರಿ ಆಫ್ ಕರಿಯಪ್ಪ ಖ್ಯಾತಿಯ ಕುಮಾರ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಈ ಸಿನಿಮಾ, ಪ್ರೇಮಿಗಳಿಬ್ಬರ ನೈಜ ಕಥೆಯ ಮೂಲಕ, ಮನಸೂರೆಗೊಳ್ಳುವ ನಿರೂಪಣೆಯೊಂದಿಗೆ ಪ್ರೇಕ್ಷಕರ ಮನಗೆದ್ದಿತ್ತು. ಈ ಮೂಲಕ ಕಳೆದ ವರ್ಷದ ಚೆಂದದ ಚಿತ್ರಗಳ ಸಾಲಿಗೆ ಸೇರ್ಪಡೆಗೊಂಡಿದ್ದ ಲವ್ ಯೂ ಮುದ್ದು ಇದೀಗ ಅಮೇಜಾನ್ ಪ್ರೈಮ್ನಲ್ಲಿ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಅಲ್ಲಿಯೇ ಶಿವಣ್ಣ ಈ ಸಿನಿಮಾವನ್ನು ನೋಡಿ ಫಿದಾ ಆಗಿದ್ದಾರೆ. ಕೂಡಲೆ ನಾಯಕ ನಟ ಸಿದ್ದು ಮೂಲಿಮನಿಗೆ ಫೋನಾಯಿಸಿ ಮೆಚ್ಚುಗೆ ಸೂಚಿಸುವ ಜೊತೆಗೆ, ಚಿತ್ರತಂಡದೊಂದಿಗೆ ಬಂದು ಭೇಟಿಯಾಗುವಂತೆ ಆಹ್ವಾನಿಸಿದ್ದಾರೆ.
Veera Kambala Movie: ಕಥೆ ಹುಟ್ಟಿದ ಬಗೆಯ ಬಗ್ಗೆ ರಾಜೇಂದ್ರ ಸಿಂಗ್ ಬಾಬು ಹೇಳಿದ್ದೇನು?
ಇದರಿಂದ ಖುಷಿಗೊಂಡಿರುವ ಚಿತ್ರತಂಡ ಇದರಿಂದ ಖುಷಿಗೊಂಡ ಸಿದ್ದು ಮೂಲಿಮನಿ, ರೇಷ್ಮಾ, ಕುಮಾರ್, ನಿರ್ಮಾಪಕ ನರಸಿಂಹ ಮೂರ್ತಿ, ವಿತರಕ ಜಗದೀಶ್ ಗೌಡ ಸೇರಿದಂತೆ ತಮ್ಮ ತಂಡದೊಂದಿಗೆ ಕಂಠೀರವ ಸ್ಟುಡಿಯೋದಲ್ಲಿ ಶಿವಣ್ಣನನ್ನು ಭೇಟಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಶಿವಣ್ಣ ಒಟ್ಟಾರೆ ಸಿನಿಮಾವನ್ನು ಮೆಚ್ಚಿ ಕೊಂಡಾಡಿದ್ದಾರೆ. ಈ ಅನಿರೀಕ್ಷಿತ ಮೆಚ್ಚುಗೆಯಿಂದ ಚಿತ್ರತಂಡ ಖುಷಿಗೊಂಡಿದೆ. ಒಂದು ನೈಜ ಪ್ರೇಮ ಕಥಾನಕವನ್ನು ಕಮರ್ಶಿಯಲ್ ಚೌಕಟ್ಟಿಗೆ ಒಗ್ಗಿಸುತ್ತಲೇ, ಅಸಲೀ ಭಾವಗಳನ್ನು ತಾಜಾತನದಿಂದ ದೃಷ್ಯಕ್ಕೆ ಒಗ್ಗಿಸುವಲ್ಲಿ ನಿರ್ದೇಶಕ ಕುಮಾರ್ ಗೆದ್ದಿದ್ದರು. ಆ ಪ್ರಯತ್ನವೀಗ ಶಿವಣ್ಣನ ಗಮನವನ್ನೂ ಸೆಳೆದುಕೊಂಡಿದೆ. ಕಿಶನ್ ಎಂಟರ್ಟೈನ್ಮೆಂಟ್ ಬ್ಯಾನರಿನಡಿಯಲ್ಲಿ ಕಿಶನ್ ಟಿ.ಎನ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಲಕ್ಷ್ಮಿಕಾಂತ್ ಟಿ.ಎಸ್ ಕಾರ್ಯಕಾರಿ ನಿರ್ಮಾಪಕರಾಗಿ ಜೊತೆಯಾಗಿದ್ದಾರೆ. ಕೃಷ್ಣ ದೀಪಕ್ ಛಾಯಾಗ್ರಹಣ, ಅನಿರುದ್ಧ್ ಶಾಸ್ತ್ರಿ ಸಂಗೀತ ನಿರ್ದೇಶನ, ಸಿಎಸ್ ದೀಪು ಸಂಕಲನ ಈ ಚಿತ್ರಕ್ಕಿದೆ.
keywords: loveyoumuddu, shivarajkumar, shivanna, kumar, siddumulimani

