ಕನ್ನಡ ಚಿತ್ರರಂಗಕ್ಕೆ ಕೊರೋನಾ ಕಾರ್ಮೋಡ ಕವುಚಿಕೊಂಡಿದ್ದ ಘಳಿಗೆಯಲ್ಲಿ ಗೆಲುವಿನ ಘಮ ಹಬ್ಬುವಂತೆ ಮಾಡಿದ್ದ ಚಿತ್ರ ಲವ್ ಮಾಕ್ಟೇಲ್. ಅದಾಗಲೇ ನಾಯಕ ನಟನಾಗಿ ಹೆಸರಾಗಿದ್ದ ಡಾರ್ಲಿಂಗ್ ಕೃಷ್ಣ ಈ ಸಿನಿಮಾ ಮೂಲಕ ನಿರ್ದೇಶಕರಾಗಿದ್ದರು. ಒಂದು ಸಂದಿಗ್ಧ ಕಾಲಘಟ್ಟದಲ್ಲಿ ತಾವೇ ಹೋಂ ಬ್ಯಾನರ್ ಮೂಲಕ ಆ ಸಿನಿಮಾವನ್ನು ನಿರ್ಮಾಣ ಮಾಡುವ ಸಾಹಸಕ್ಕೂ ಕೈ ಹಾಕಿದ್ದರು. ಈ ಸಿನಿಮಾ ಮೂಲಕವೇ ಡಾರ್ಲಿಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಚೆಂದದ ಕಥೆಯೊಂದರ ಪಾತ್ರಗಳಾಗುವ ಮೂಲಕ ಮೋಡಿ ಮಾಡಿದ್ದರು. ಆ ನಂತರ ತೆರೆಗಂಡಿದ್ದ ಇದರ ಎರಡನೇ ಆವೃತ್ತಿಗೂ ಗೆಲುವು ದಕ್ಕಿತ್ತು. ಇದೀಗ ಅದೇ ಯಶಸ್ಸಿನ ಪ್ರಭೆಯಲ್ಲಿ ಲವ್ ಮಾಕ್ಟೇಲ್೩ ತಯಾರಾಗಿ ನಿಂತಿದೆ. ಹೊಸ ವರ್ಷವೊಂದು ಕಣ್ತೆರೆದಿರುವ ಹೊತ್ತಿನಲ್ಲಿಯೇ ಡಾರ್ಲಿಂಗ್ ಕೃಷ್ಣ ಲವ್ ಮಾಕ್ಟೇಲ್೩ ಬಿಡುಗಡೆ ದಿನಾಂಕವನ್ನು ಘೋಶಿಸಿದ್ದಾರೆ!
ಇದೇ ಏಪ್ರಿಲ್ ೧೦ರಂದು ಲವ್ ಮಾಕ್ಟೇಲ್೩ ಅದ್ದೂರಿಯಾಗಿ ತೆರೆಗಾಣಲಿದೆ. ಈ ಹಿಂದಿನ ಎರಡು ಆವೃತ್ತಿಗಳನ್ನು ನೋಡಿ ಮೆಚ್ಚಿಕೊಂಡಿದ್ದವರೆಲ್ಲ ಬೆರಗಾಗುವಂತೆ ಡಾರ್ಲಿಂಗ್ ಕೃಷ್ಣ ಮೂರನೇ ಆವೃತ್ತಿಯನ್ನು ರೂಪಿಸಿದ್ದಾರಂತೆ. ಸಾಮಾನ್ಯವಾಗಿ ಯಶಸ್ವೀ ಚಿತ್ರವೊಂದರ ಸರಣಿಗಳನ್ನು ರೂಪಿಸುವಾಗ ಸವಾಲುಗಳ ಸಂತೆಯೇ ನೆರೆದಿರುತ್ತದೆ. ಒಂದು ಭಾಗವನ್ನು ಮೀರಿಸುವ ಕಂಟೆಂಟಿನೊಂದಿಗೆ ಬಂದರೆ ಮಾತ್ರವೇ ಗೆಲುವು ದಕ್ಕಬಹುದಷ್ಟೆ. ಲವ್ ಮಾಕ್ಟೇಲ್೨ ಚಿತ್ರದಲ್ಲಿ ಅಂಥಾ ಸವಾಲನ್ನು ದಾಟಿಕೊಂಡಿದ್ದ ಕೃಷ್ಣ, ಮೂರನೇ ಕಂತಿನಲ್ಲಿ ಓರ್ವ ನಿರ್ದೇಶಕರಾಗಿ ತಮ್ಮ ಕೈಚಳಕ ತೋರಿಸಿರುವ ಲಕ್ಷಣಗಳಿವೆ. ಕಥೆ, ಚಿತ್ರಕಥೆ, ಸಂಭಾಷಣೆ, ನಿರೂಪಣೆ ಸೇರಿದಂತೆ ಎಲ್ಲದರಲ್ಲಿಯೂ ಹೊಸತನ ಇರಲಿದೆ ಎಂಬ ಸೂಚನೆಯನ್ನಷ್ಟೇ ಸದ್ಯದ ಮಟ್ಟಿಗೆ ಡಾರ್ಲಿಂಗ್ ಕೃಷ್ಣ ಬಿಟ್ಟು ಕೊಟ್ಟಿದ್ದಾರೆ.
Dangerous Drugs Mafia: ಅಲ್ಲಿ ಸಿಗುವ ಡೇಂಜರಸ್ ಡ್ರಗ್ಸ್ ಯಾವುದು ಗೊತ್ತಾ?
ಇತ್ತೀಚೆಗಷ್ಟೇ ಈ ಚಿತ್ರದ ಮೋಷನ್ ಪೋಸ್ಟರ್ ಒಂದು ಬಿಡುಗಡೆಗೊಂಡಿತ್ತು. ಅದು ಲವ್ ಮಾಕ್ಟೇಲ್೩ ಬಗ್ಗೆ ಗಾಢ ಕೌತುಕ ಹರಳುಗಟ್ಟುವಂತೆ ಮಾಡಿತ್ತು. ಮೊದಲೆರಡು ಕಂತುಗಳಲ್ಲಿ ಪ್ರೇಮದ ಭಾವ ತೀವ್ರತೆ ಇದ್ದರೆ, ಮೂರನೇ ಕಂತಿನಲ್ಲಿ ತಂದೆ ಮಗಳ ಬಾಂಧವ್ಯದ ಚಿತ್ರಣವನ್ನು ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿರುವ ಸೂಚನೆಗಳಿದ್ದಾರೆ. ಕ್ರಿಸ್‌ಮಿ ಬ್ಯಾನರಿನಡಿಯಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ನಕುಲ್ ಅಭಯಂಕರ್ ಸಂಗೀತ ನಿರ್ದೇಶನ, ಶ್ರೀ ಕ್ರೇಜಿ ಮೈಂಡ್ಸ್ ಛಾಯಾಗ್ರಹಣ ಮತ್ತು ಸಂಕಲ ಈ ಚಿತ್ರಕ್ಕಿದೆ. ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಸಂವೃತ, ಅಮೃತಾ ಅಯ್ಯಂಗಾರ್, ರಚೆಲ್ ಡೇವಿಡ್, ಅಭಿಲಾಶ್ ದಳಪತಿ ಮುಂತಾದವರ ತಾರಾಗಣವಿರುವ ಈ ಚಿತ್ರ ಬೇಸಗೆ ರಜೆಯ ಹೊಸ್ತಿಲಲ್ಲಿಯೇ ತೆರೆಗಾಣುತ್ತಿದೆ.
keywords: darling krishna, milana nagaraj, lovemocktaile3, sandalwood, kfi

