ಒಂದು ದರೋಡೆಕೋರ ಗ್ಯಾಂಗ್ ಲೀಡರ್ ಓರ್ವ ಹೇಗೆ ದೇಶಭಕ್ತಿಯ ಮುಖವಾಡ ತೊಟ್ಟು ಹೀರೋ ಆಗಬಹುದು ಅನ್ನೋದಕ್ಕೆ ತಾಜಾ ಉದಾಹರಣೆಯಂತಿರುವಾತ ಲಾರೆನ್ಸ್ ಬಿಷ್ಣೋಯ್. ವಿದ್ಯೆಯ ಮೂಲಕ ಬದುಕು ಕಟ್ಟಿಕೊಳ್ಳುವ ಅಗಾಧ ಅವಕಾಶಗಳನ್ನು ಎಡಗಾಲಲ್ಲಿ ಒದ್ದು ಅಡ್ಡ ದಾರಿ ಹಿಡಿದಿದ್ದವನು ಲಾರೆನ್ಸ್. ಇಂಥವನು ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ನನ್ನು ಕೊಲ್ಲಲು ಟಾರ್ಗೆಟ್ ಮಾಡುವ ಮೂಲಕ ದೇಶಾದ್ಯಂತಬ ಸದ್ದು ಮಾಡಿದ್ದ. ಒಂದು ವರ್ಗದ ಮಂದಿ ಹಂತ ಹಂತವಾಗಿ ಈತನನ್ನು ಹೀರೋ ಎಂಬಂತೆ ಬಿಂಬಿಸಿಕೊಂಡು ಬಂದಿದ್ದರು. ಸಲ್ಮಾನ್ ವಿರುದ್ಧದ ನಿಲುವಿನೊಂದಿಗೇ ಈ ಚಾಲಾಕಿ ಹುಡುಗ ದೇಶ ಭಕ್ತಿಯ ಪೋಶಾಕು ತೊಟ್ಟಿದ್ದ. ಇಂಥಾ ಗ್ಯಾಂಗಿನ ಅಸಲೀಯತ್ತೀಗ ಮತ್ತೊಮ್ಮೆ ಜಾಹೀರಾಗಿದೆ; ಬಾಲಿವುಡ್ಡಿನ ಖ್ಯಾತ ಗಾಯಕನಿಗೆ ಬೆದರಿಕೆ ಹಾಕುವ ಮೂಲಕ!
ಪಂಜಾಬಿ ಗಾಯಕ ದಿಲ್ನೂರ್ಗೆ ಬಿಷ್ಣೋಯ್ ಗ್ಯಾಂಗ್ ಸದಸ್ಯರಿಂದ ಬೆದರಿಕೆ ಬಂದ ಬಗ್ಗೆ ಸುದ್ದಿಯಾಗುತ್ತಿದೆ. ಹತ್ತು ಕೋಟಿ ಕೊಡದೇ ಹೋದರೆ ನೆಲದಲ್ಲಿ ಹೂತು ಹಾಕೋದಾಗಿ ಆವಾಜು ಬಿಡಲಾಗಿದೆ. ಪಂಜಾಬ್ ಮೂಲದ ದಿಲ್ನೋರ್ ಬಾಲಿವುಡ್ಡಿನಲ್ಲಿಯೂ ಪ್ರಸಿದ್ಧಿ ಪ೦ಡೆದುಕೊಂಡಿರುವ ಗಾಯಕ. ಅಂತಾರಾಷ್ಟ್ರೀಯ ಮಟ್ಟದ ಮ್ಯೂಸಿಕ್ ಇವೆಂಟುಗಳ ಮೂಲಕ ಕೋಟ್ಯಂತರ ರೂಪಾಯಿಗಳ ವ್ಯವಹಾರವನ್ನೂ ಈತ ನಡೆಸುತ್ತಿದ್ದಾನೆ. ಹಾಗಂತ ಅದರಲ್ಲೇನೂ ಅಕ್ರಮವಿಲ್ಲ. ತನ್ನ ಪ್ರತಿಭೆಯ ಬಲದಿಂದಲೇ ತಂಡ ಕಟ್ಟಿಕೊಂಡು, ಸಂಗೀತ ಕಾರ್ಯಕ್ರಮಗಳನ್ನು ನಡೆರಸುವ ಮೂಲಕ ಈತ ಮನೆಮಾತಾಗಿದ್ದಾನೆ. ಇಂಥಾ ಗಾಯಕನಿಗೆ ಕಾಸುಇಗಾಗಿ ಬೆದರಿಕೆ ಹಾಕೋ ಮೂಲಕ ಬಿಷ್ಣೋಯ್ ಗ್ಯಾಂಗು ಬೆತ್ತಲಾಗಿದೆ.
salman khan-ishwarya rai: ಐಶ್ವರ್ಯಾ ರೈಗೆ ಅದೆಷ್ಟು ಕಾಟ ಕೊಟ್ಟಿದ್ದ ಗೊತ್ತಾ ಸಲ್ಮಾನ್ ಖಾನ್?
ಅಷ್ಟಕ್ಕೂ ಈಗ ಹೀರೋನಂತೆ ಬಿಂಬಿಸಿಕೊಳ್ಳುತ್ತಿರುವ ಬಿಷ್ಣೋಯ್ನ ಆರಂಭಿಕ ಕಸುಬೇ ದರೋಡೆ. ಬುದ್ಧಿವಂತನೂ, ವಿದ್ಯಾವಂತನೂ ಆಗಿರುವ ಬಿಷ್ಣೋಯ್ ಕಾನೂನಿನ ಉರುಳು ಬಲವಾಗುವ ಸೂಚನೆ ಸಿಗುವ ಹೊತ್ತಿಗೆಲ್ಲ ದೇಶ ಭಕ್ತ ಎಂಬಂತೆ ಬಿಂಬಿಸಿಕೊಂಡಿದ್ದ. ಸಲ್ಮಾನ್ ಖಾನ್ ಬೇಟೆಯಾಡಿದ್ದ ಕೃಷ್ಣಮೃಗ ಬಿಷ್ಣೋಯ್ ಸಮುದಾಯದಲ್ಲಿ ದೈವೀಕ ನಂಬಿಕೆ ಹಿಒಂದಿರುವ ಪ್ರಾಣಿ. ಅಂಥಾದ್ದನ್ನು ಕೊಂದು ತಿಂದ ಸಲ್ಮಾನ್ ವಿರುದ್ಧ ಸಿಡಿದೇಳುವ ಮೂಲಕ ಬಿಷ್ಣೋಯ್ ಧರ್ಮ ರಕ್ಷಕನಂತೆಯೂ ಪೋಸು ಕೊಟ್ಟಿದ್ದ. ಆದರೆ, ಅದರ ಮರೆಯಲ್ಲಿ ಈ ಗ್ಯಾಂಗಿನ ದಂಧೆಗಳೇ ಬೇರೆಯದ್ದಿದೆ. ಪ್ರಸಿದ್ಧರಿಗೆ ಬೆದರಿಕೆ ಹಾಕೋ ಮೂಲಕ ಸಲೀಸಾಗಿ ಕೋಟಿ ಕೋಟಿ ಕಮಾಯಿಸುತ್ತಿದೆ ಎಂಬ ಆರೋಪವಿದೆ. ಕೆಲವೇ ಕೆಲವರು ಇದರ ವಿರುದ್ಧ ಸಿಡಿದೇಳುತ್ತಾರೆ. ಆದರೆ, ಬಿಷ್ಣೋಯ್ ಗ್ಯಾಂಗಿನಿಂದ ಬೆದರಿಕೆ ಬಂದಾಗ ಸುಮ್ಮನೆ ಕಾಸು ಕೊಟ್ಟು ಕೈತೊಳೆದುಕೊಳ್ಳುವವರ ಸಂಖ್ಯೆಯೇ ದೊಡ್ಡದಿದೆ!
keywords: salman, khan, lowrens, bishnoi, gangstar

