ಗೌರಿಶಂಕರ್ ನಾಯಕನಾಗಿ ನಟಿಸಿರುವ (kerebete movie)  `ಕೆರೆಬೇಟೆ’ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಈಗಾಗಲೇ ಪ್ರೀಮಿಯರ್ ಶೋ ನೋಡಿದ ಚಿತ್ರರಂಗದ ಮಂದಿಯ ಕಡೆಯಿಂದ ಕೆರೆಬೇಟೆಯತ್ತ ಮೆಚ್ಚುಗೆ ಮೂಡಿಕೊಂಡಿದೆ. ಈ ಹೊತ್ತಿನಲ್ಲಿ ಈ ಸಿನಿಮಾದ ಭಾಗವಾಗಿರುವ ಕಲಾವಿದರು ಮತ್ತು ಅವರ ನಟನೆಯ ಬಗ್ಗೆಯೂ ಆ ದಿಕ್ಕಿನಿಂದ ಮೆಚ್ಚುಗೆಗಳು ಮೂಡಿಕೊಳ್ಳುತ್ತಿವೆ. ಕೇವಲ ಪಳಗಿದ ನಟನ, ನಟಿಯರು ಮಾತ್ರವಲ್ಲ; ನಟನೆಗೆ ಹೊಸಬರೂ ಕೂಡಾ ಈ ಸಿನಿಮಾ ಭಾಗವಾಗಿದ್ದಾರೆ. ಅವರೆಲ್ಲರು ಪಾತ್ರವಾಗಿರುವ ಪರಿ ಕಂಡು ಈಗಾಗಲೇ ಸಿನಿಮಾ ನೋಡಿರುವ ಸೆಲೆಬ್ರಿಟಿ ಮಂದಿ ಖುಷಿಗೊಂಡಿದ್ದಾರೆ.

ನಿರ್ದೇಶಕ ರಾಜ್ ಗುರು ಇಲ್ಲಿನ ಕಥೆ ಮತ್ತು ಪಾತ್ರ ಸೃಷ್ಟಿಗೆ ಎಷ್ಟು ಮಹತ್ವ ಕೊಟ್ಟಿದ್ದಾರೋ ಅಷ್ಟೇ ಮಹತ್ವವನ್ನು ಆಯಾ ಪಾತ್ರಗಳಿಗಾಗಿ ಕಲಾವಿದರ ಆಯ್ಕೆಗೂ ಕೊಟ್ಟಿದ್ದಾರೆ. ಹೊಸಬರೇ ಆದರೂ ಕೂಡಾ ಪಳಗಿದ ನಟರಂತೆ ಪಾತ್ರ ನಿರ್ವಹಿಸಬಲ್ಲ ಅವಕಾಶವನ್ನು ಖುದ್ದು ಚಿತ್ರತಂಡವೇ ಕೆಲ ಕಲಾವಿದರಿಗೆ ಒದಗಿಸಿಕೊಟ್ಟಿದೆ. ನಾಯಕಿ ಬಿಂದು ಶಿವರಾಮ್ ಕೂಡಾ ಆ ಪಾತ್ರಕ್ಕಾಗಿ ತಿಂಗಳುಗಟ್ಟಲೆ ತರಬೇತಿ ಪಡೆದು ತಯಾರಾಗಿದ್ದಾರೆ. ಇನ್ನುಳಿದಂತೆ ಈ ಸಿನಿಮಾದ ಒಂದು ಪಾತ್ರವನ್ನು, ಕೋ ಡೈರೆಕ್ಟರ್ (shekar karadimane) ಶೇಖರ್ ಕರಡಿಮನೆ ನಿರ್ವಹಿಸಿದ್ದಾರೆ.

ಸತೀಶ್ ಕರಡಿಮನೆ ಮೂಲರ್ತ ತೀರ್ಥಹಳ್ಳಿ ಸೀಮೆಯವರೇ. ಆದ್ದರಿಂದ ಈ ಭಾಗದ ಭಾಷಾ ಸೊಗಡು, ನುಡಿಗಟ್ಟುಗಳು, ಜನಜೀವನವೆಲ್ಲ ಅವರ ಬದುಕಿನ ಭಾಗ. ಕೆರೆಬೇಟೆ ಚಿತ್ರದ ಕೋ ಡೈರೆಕ್ಟರ್ ಆಗಿದ್ದುಕೊಂಡು, ಕೆರೆಬೇಟೆಯ ಒಟ್ಟಂದವನ್ನು ಹೆಚ್ಚಿಸುವಲ್ಲಿ ಶೇಖರ್ ಪಾತ್ರವೂ ಇದೆ. ಇದರಲ್ಲಿನ ನಾಯಕಿಯ ಮಾವನ ಪಾತ್ರಕ್ಕಾಗಿ ಒಂದಷ್ಟು ಹುಡುಕಾಟ ನಡೆದಾಗ ಅದಕ್ಕೆ ಶೇಖರ್ಅವರ ಹೆಸರೇ ನಿಕ್ಕಿಯಾಗಿತ್ತು. ಎರಡು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ನಿರ್ದೇಶನ ವಿಭಾಗದಲ್ಲಿರುವವರು ಶೇಖರ್ ಕರಡಿಮನೆ. ಅವರ ಪಾಲಿಗೆ ನಟನೆ ಎಂಬುದು ಅಸಾಧ್ಯವೇನಲ್ಲ.ಕಡೆಗೂ ಅವರು ಆ ಪಾತ್ರವನ್ನು ಒಪ್ಪಿಕೊಂಡು ನಿರ್ದೇಶನ ವಿಭಾಗದ ಜೊತೆ ಜೊತೆಗೇ ನಟನೆಯನ್ನೂ ನಿಭಾಯಿಸಿದ್ದಾರೆ. ಮಲೆನಾಡ ಒಡಲಲ್ಲಿ ದಿನಸಿ ಅಂಗಡಿ ಇಟ್ಟುಕೊಂಡು ಬದುಕು ನಡೆಸುವ ಪಾತ್ರವದು. ಸಿನಿಮಾದ ಪ್ರಮುಖ ತಿರುವುಗಳಲ್ಲಿ ಜೊತೆ ನಿಲ್ಲುವ ಆ ಪಾತ್ರ ಶೇಖರ್ ಪಾಲಿಗೆ ಸಿನಿಮಾ ಯಾನದ ಮತ್ತೊಂದು ಮಗ್ಗುಲನ್ನು ಪರಿಚಯಿಸಿದೆ. ಜೊತೆಗೆ ಗೋಪಾಲ ದೇಶಪಾಂಡೆಯಂಥಾ ಪ್ರತಿಭಾನ್ವಿತ ಕಲಾವಿದನೊಂದಿಗೆ ನಟಿಸುವ ಅವಕಾಶವೂ ಸಿಕ್ಕಿದೆ. ಷ್ಟು ವರ್ಷಗಳ ಕಾಲ ನಿರ್ದೇಶನ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದ ಅವರಿಗಿದು ಭಿನ್ನ ಅನುಭವ. ತನ್ನ ಹುಟ್ಟೂರ ವಾತಾವರಣದಲ್ಲಿ ಘಟಿಸುವ ಕಥೆಯೊಂದರ ಪಾತ್ರವಾದ ಖುಷಿ ಶೇಖರ್ ಅವರಲ್ಲಿದೆ.

ಜೈಶಂಕರ್ ಜನಮನ ಸಿನಿಮಾಸ್ ಬ್ಯಾನರಿನಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಗಗನ್ ಬದೇರಿಯಾ ಸಂಗೀತ, ಕೀರ್ತನ್ ಪೂಜಾರಿ ಛಾಯಾಗ್ರಹಣ, ಜ್ಞಾನೇಶ್-ಯುವರತ್ನ ಸಂಕಲನ, ಕಂಬಿ ರಾಜು ನೃತ್ಯ ನಿರ್ದೇಶನ ಮತ್ತು ಗೋಪಾಲ್ ದೇಶಪಾಂಡೆ, ಹರಿಣಿ, ಸಂಪತ್ ಕುಮಾರ್, ರಘು ರಾಜಾನಂದ, ರಾಮ್ ದಾಸ್, ರಾಕೇಶ್ ಪೂಜಾರಿ, ಚಿಲ್ಲರ್ ಮಂಜು, ಗೌತಮ್ ರಾಜ್, ವರ್ಧನ್ ತೀರ್ಥಹಳ್ಳಿ, ರಣಧೀರ್ ಗೌಡ, ಶೇಖರ್ ಕೆ, ದೇವಿಪ್ರಕಾಶ್, ಆಶಾ ಸುಜಯ್, ವಿದ್ಯಾ, ಕಿರಣ್ ರಾವ್, ಗೀತಾ ಮೈಸೂರು ಮುಂತಾದವರ ತಾರಾಗಣವಿದೆ. ಅಂದಹಾಗೆ, ಕೆರೆಬೇಟೆ ಚಿತ್ರ ಇದೇ ಮಾರ್ಚ್ 15ರಂದು ರಾಜ್ಯಾದ್ಯಂತ ತೆರೆಗಾಣಲಿದೆ.

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!