ಸಿನಿಮಾ ಪ್ರಚಾರದ ಪಟ್ಟುಗಳಲ್ಲಿ ಪಾರಂಗತರಾಗವಿರುವ ಜೋಗಿ ಪ್ರೇಮ್ ಶೋಮ್ಯಾನ್ ಅನ್ನೋ ಬಿರುದಾಂಕಿತವನ್ನು ತನ್ನದಾಗಿಸಿಕೊಂಡಿದ್ದಾರೆ. ಒಂದೆರಡು ಹಿಟ್ ಸಿನಿಮಾಗಳ ನಂತರ ನಾನಾ ಏರಿಳಿತ ಕಂಡಿರುವ ಪ್ರೇಮ್ಸ್ ಆಗಾಗ ಫೀನಿಕ್ಸಿನಂತೆ ಪುಟಿದೇಳುವ ವಿಶೇಷ ಗುಣವನ್ನೂ ಹೊಂದಿದ್ದಾರೆ. ದ್ರುವ ಸರ್ಜಾ ನಾಯಕನಾಗಿ ನಟಿಸಿರೋ ಕೇಡಿ ಚಿತ್ರದ ಮೂಲಕ ಪ್ರೇಮ್ ಮತ್ತೆ ಪುಟಿದೇಳ್ತಾರಾ? ಹಾಗೊಂದು ಸಕಾರಾತ್ಮಕ ದಿಕ್ಕಿನ ಆಲೋಚನೆಗೆ ಇತ್ತೀಚೆಗೆ ಬಿಡುಗಡೆಗೊಂಡಿರುವ ಟ್ರೈಲರ್ ಅಂಥಾದ್ದೊಂದು ಸಕಾರಾತ್ಮಕ ದಿಕ್ಕಿನ ಚರ್ಚೆ ಹುಟ್ಟುಹಾಕಿದೆ. ಒಟ್ಟಾರೆ ಟ್ರೈಲರ್ರ ಮೂಡಿ ಬಂದುಇರುವ ರೀತಿ, ಮೇಕಿಂಗ್ ಮತ್ತು ಕಥಾ ಹಂದರದ ಸುಳಿವುಗಳು ಸಿನಿಮಾ ಪ್ರೇಮಿಗಳಲ್ಲಿ ಒಂದಷ್ಟು ಭರವಸೆ ಮೂಡಿಸಿವೆ.
ಹೆಚ್ಚೇನಲ್ಲದಿದ್ದರೂ ಕೇಡಿಯ ಬಗ್ಗೆ ಒಂದಷ್ಟು ಕುತೂಹಲ ಇದ್ದದ್ದಂತೂ ನಿಜ. ಈ ಸಿನಿಮಾಕ್ಕೆ ಧ್ರುವ ಸರ್ಜಾಧ ನಾಯಕನೆಂದು ನಿಕ್ಕಿಯಾದಾಗಲೂ ಅಂಥಾದ್ದೇ ವಾತಾವರಣವಿತ್ತು. ಭಾರೀ ನಿರೀಕ್ಷೆ ಮೂಡಿಸಿದ್ದ ಧ್ರುವ ಅಭಿನಯದ ಮಾರ್ಟಿನ್ ಮಗುಚಿಕೊಂಡ ನಂತರವಂತೂ ಕ್ರೇಜ್ ಎಂಬುದು ಸಂಪೂರ್ಣವಾಗಿ ಮಂಕಾಗಿ ಬಿಟ್ಟಿತ್ತು. ಆದರೀಗ ಬಿಡುಗಡೆಗೊಂಡಿರುವ ಕೇಡಿ ಟ್ರೈಲರಿನಲ್ಲಿ ಮಾಸ್ ಶೈಲಿಯ ಕಿಡಿ ಮೂಡಿಕೊಂಡಿದೆ. ಒಂದರೆಕ್ಷಣ ಪ್ರೇಮ್ ಮ್ಯಾಜಿಕ್ಕು ಬೆರಗು ಹುಟ್ಟಿಸೋದು ಸುಳ್ಳಲ್ಲ. ಒಂದು ವೇಳೆ ಟ್ರೈಲರಿಗೆ ತಕ್ಕುದಾಗಿ ಒಂದಿಡೀ ಸಿನಿಮಾ ಮೂಡಿ ಬಂದಿದ್ದರೆ, ಖಂಡಿತವಾಗಿಯೂ ಕೇಡಿ ದೊಡ್ಡ ಮಟ್ಟದ ಗೆಲುವಿನ ರೂವಾರಿಯಾಗುತ್ತೆ. ಹಾಗಂತ ಸಿನಿಮಾಸಕ್ತರೇ ಅಭಿಪ್ರಾಯ ಪಡುತ್ತಿದ್ದಾರೆ.
ಇನ್ನು ಧ್ರುವ ಸರ್ಜಾನ ವಿಚಾರಕ್ಕೆ ಬಂದರೆ, ಆತನ ಅಭಿನಯದ ಶೈಲಿ, ಹಾವಭಾವಗಳು ಈ ಶತಮಾನದಲ್ಲಿ ಬದಲಾಗೋದು ಡೌಟು. ಬಾಡಿ ಬೆಳೆಸಿಕೊಂಡು ಕ್ಯಾಮೆರಾ ಮುಂದೆ ನಿಂತರೆ ಪ್ರೇಕ್ಷಕರೆಲ್ಲ ಅಹುದಹುದೆಂದು ತಲೆಯಾಡಿಸುತ್ತಾರೆ, ಥ್ರಿಲ್ ಆಗುತ್ತಾರೆಂಬ ಭ್ರಮೆ ಧ್ರುವನಿಗಿದ್ದಂತಿದೆ. ಈ ಕಾರಣದಿಂದಲೇ ಸಿನಿಮಾಗಳು ಬದಲಾದರೂ, ಪಾತ್ರಗಳು ಬೇರೆಯಾದರೂ ಅದೇ ಛಾಯೆ ಕ್ಯಾರಿಯಾದಂಥಾ ಏಕತಾನತೆ ಯಾರಿಗಾದರೂ ಕಾಡುತ್ತೆ. ಇಂಥಾ ಧ್ರುವನನ್ನು ಪ್ರೇಮ್ ತಾವು ಸೃಷ್ಟಿಸಿದ ಪಾತ್ರಕ್ಕೆ ಹೇಗೆ ಒಲಗ್ಗಿಸಿಕೊಂಡಿರಬಹುದು? ಧ್ರುವ ಬೇರೆಯದ್ದೇ ಬೆರಗಿನೊಂದಿಗೆ ಪ್ರೇಕ್ಷಕರನ್ನು ಮುಖಾಮುಖಿಯಾಗಲಿದ್ದಾರಾ? ಇಂಥಾ ಒಂದಷ್ಟು ಪ್ರಶ್ನೆಗಳಿದ್ದಾವೆ. ಅದಕ್ಕುತ್ತರ ಸಿನಿಮಾ ಮಂದಿರಗಳಲ್ಲಿ ಮಾತ್ರವೇ ಸಿಗಲು ಸಾಧ್ಯ. ಅಂತೂ ಕೇಡಿ ಟ್ರೈಲರಿನಲ್ಲಿ ಧ್ರುವ ಮತ್ತು ಪ್ರೇಮ್ ಪಾಲಿಗೆ ಗೆಲುವಿನ ಯಾತ್ರೆ ಸೂರುವಾಗೋ ಲಕ್ಷಣಗಳಿವೆ. ಆ ಸಾಧ್ಯತೆ ಹಳೇ ಶೈಲಿಯ ಜಾತ್ರೆಯಲ್ಲಿ ಕಳೆದು ಹೋಗದಿರಲೆಂಬುದು ಹಾರೈಕೆ!