ಮಾಡೋ ಕ್ಯಾಮೆ ಬಿಟ್ಟು ಮತ್ತೇನೋ ಮಾಡಲು ಹೋದರೆ ಮತ್ಯಾವುದೂ ಬಗನೆಗೂಟ ಜಡಿದುಕೊಳ್ಳುವುದು ಖಾಯಂ. ಆದರೆ, ಕೆಲ ಆಸಾಮಿಗಳಿಗೆ ಹಾಗೆ ಜಡಿಸಿಕೊಳ್ಳೋದರಲ್ಲೇ ಏನೋ ಆನಂದ. ಅಂಥಾ ವಿಶೇಷ ವ್ಯಕ್ತಿಗಳ ಸಾಲಿನಲ್ಲಿ ತಮಿಳು ಚಿತ್ರರಂಗದ ಖ್ಯಾತ (stunt master)  ಸ್ಟಂಟ್ ಮಾಸ್ಟರ್ ಕಂ ಬಲಪಂಥೀಯ ವಿಚಾರಧಾರೆಯ ಮೇಧಾವಿ ಹಾಗೂ ನಟ ಕನಲ್ ಕಣ್ಣನ್ (kanal kannan) ಮುಖ್ಯವಾಗ ಸೇರಿಕೊಳ್ಳುತ್ತಾನೆ. ಆಗಾಗ ತನ್ನ ಪಂಥದ ಪರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟು ಮಾಡುವ ಈತ ರೋಸ್ಟಿಗೀಡಾಗುತ್ತಾನೆ. ಇಂಥಾ ಕನಲ್ ಕಣ್ಣನ್ ಇದೀಗ ಫಟಿಂಗ ಪಾದ್ರಿಯೊಬ್ಬನ ನಂಗಾನಾಚ್ ವೀಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಜೈಲು ಪಾಲಾಗಿದ್ದಾನೆ!

ಬೇರೆ ಧರ್ಮಗಳ ಮೇಲೆ ಅಸಹನೆ ಹೊಂದಿರುವ ಈತ, ಅದೇ ಭರದಲ್ಲಿ ಪಾದ್ರಿಯ ನಂಗಾನಾಚ್ ವೀಡಿಯೋವನ್ನು ಅಪ್‍ಲೋಡ್ ಮಾಡಿದ್ದಿರಲೂ ಬಹುದು. ಆದರೆ, ಅದರಲ್ಲಿ ತಪ್ಪೇನೂ ಕಾಣಿಸುವುದಿಲ್ಲ. ಹಾಗಂತ ಆ ವಲಯದ ಮತೀಯ ಮನಸುಗಳು ಸುಮ್ಮನಿರಬೇಕಲ್ಲಾ? ಪಾದ್ರಿಯ ಮಾನ ಹರಾಜಾದ ಉರಿ ಡಿಎಂಕೆ ಮುಖಂಡನೊಬ್ಬನ ಮೂಲಕ ಕಿಇಯಾಗಿ ಹೊತ್ತಿಕೊಂಡಿದೆ. ಆತ ಈ ವೀಡಿಯೋ ಪ್ರಕರಣದಿಂದ ಒಂದು ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಆರೋಪಿಸಿ ದೂರು ನೀಡಿದ್ದಾನೆ. ಅದರ ಆಧಾರದಲ್ಲಿ ನಾಗರ್ ಕೋಯಿಲ್ ಸೈಬರ್ ಬ್ರ್ಯಾಂಚಿನ ಪೊಲೀಸರು ಕಣ್ಣನ್‍ನನ್ನು ಬಂಧಿಸಿದ್ದಾರೆ.

ಕನಲ್ ಕಣ್ಣನ್ ಜೂನ್ 18ರಂದು ಈ ವೀಡಿಯೋವನ್ನು ತನ್ ಖಾತೆಯಲ್ಲಿ ಹಂಚಿಕೊಂಡಿದ್ದ. ಅತ್ಯಂತ ಕಡಿಮೆ ಅವಧಿಯಲ್ಲಿಯೇ ಆ ವಿಡಿಯೋ ತಮಿಳುನಾಡಿನ ತುಂಬೆಲ್ಲ ವೈರಲ್ ಆಗಿ ಬಿಟ್ಟಿತ್ತು. ಅಷ್ಟಕ್ಕೂ ಆ ವಿಡಿಯೋದಲ್ಲಿ ಪಾದ್ರಿಯೊಬ್ಬ ಚೆಡ್ಡಿ ಹುಡುಗಿಯೊಬ್ಬಳ ಸೊಂಟಬ ತಬ್ಬಿಕೊಂಉ ಮೈ ಮರೆತು ಕುಣಿದಿದ್ದ. ಧರ್ಮ ಬೋಧನೆ ಮಾಡೋ ಈ ಆಸಾಮಿಯ ಉನ್ಮತ್ತ ನೃತ್ಯ ಸಹಜವಾಗಿಯೇ ವೈರಲ್ ಆಗಿತ್ತು. ಬಾಯಲ್ಲಿ ಧರ್ಮಗ್ರಂಥಗಳನ್ನು ಒದರುತ್ತಾ, ಮರ್ಮಾಂಗದ ಮೇಲೆ ಕಂಟ್ರೋಲು ಕಳೆದುಕೊಂಡವನು ಪಾದ್ರಿಯಾಗಿರಲಿ, ಸ್ವಾಮೀಜಿಯಾಗಿರಲಿ, ಮುಲ್ಲಾ ಆಗಿದ್ದರೂ ಅದು ನಾಚಿಕೆಗೇಡಿನ ವಿಚಾರ. ಅಂಥಾದ್ದು ಯಾವ ಧರ್ಮದಲ್ಲಿಯೇ ನಡೆದರೂ ಆ ಸಮುದಾಯದ ಮಂದಿ ತಮ್ಮ ಗುರುಗಳ ಲಂಗೋಟಿ ಭದ್ರವಾಗಿರುವಂತೆ ನೋಡಿಕೊಳ್ಳಬೇಕಷ್ಟೇ. ಅದು ಬಿಟ್ಟು ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವಂಥಾ ಸವಕಲು ಅಸ್ತ್ರ ಬಳಸಿ, ಚೂಲು ಆಸಾಮಿಗಳನ್ನು ರಕ್ಷಿಸುವುದು ಯಾವ ಧರ್ಮಕ್ಕಾದರೂ ಶೋಭೆ ತರುವ ವಿಚಾರವಲ್ಲ!

About The Author