ಹೊಸಾ ವರ್ಷ ಆರಂಭವಾಗಿ ಅದರ ಎರಡನೇ ತಿಂಗಳ ಅಂತಿಮ ಘಟ್ಟ ತಲುಪಿಕೊಂಡಿದ್ದೇವೆ. ಈ ಘಳಿಗೆಯಲ್ಲಿ ಕೊಂಚ ತಿರುಗಿ ನೋಡಿದರೆ, ಸೋಲು ಗೆಲುವಿನಾಚೆಗೆ ಹೊಸತನದ ಪ್ರಭೆಯೊಂದು ತಂತಾನೇ ಹಬ್ಬಿಕೊಂಡಿರುವ ಅಚ್ಚರಿ ಗೋಚರಿಸುತ್ತೆ. ನಿಖರವಾಗಿ ಹೇಳಬೇಕೆಂದರೆ, ಇದು ಕನ್ನಡ ಚಿತ್ರರಂಗದ ಪಾಲಿಗೆ ನಿಜಕ್ಕೂ ಸುಗ್ಗಿ ಸಂಭ್ರಮ. ವಿಶೇಷವಾದ ಕಥೆ, ಪ್ರಯೋಗಾತ್ಮಕ ಗುಣಗಳ ಜೊತೆ ಜೊತೆಗೇ, ಯುವ ಸಮುದಾಯವನ್ನು ಇಡಿಯಾಗಿ ಆವರಿಸಿಕೊಳ್ಳುವಂಥಾ ಸಿನಿಮಾಗಳೂ ಸದ್ದು ಮಾಡುತ್ತಿವೆ. ಆ ಸಾಲಿನಲ್ಲಿ ಮುಂಚೂಣಿಯಲ್ಲಿರುವ ಚಿತ್ರ (kailasa kasidre trailer review) `ಕೈಲಾಸ ಕಾಸಿದ್ರೆ’. ಇತ್ತೀಚೆಗಷ್ಟೇ ಟ್ರಾನ್ಸ್ ಮಾದರಿಯ ಹಾಡೊಂದರ ಮೂಲಕ ನಶೆಯೇರಿಸಿದ್ದ ಈ ಚಿತ್ರದ ಟ್ರೈಲರ್ ಇದೀಗ ಬಿಡುಗಡೆಗೊಂಡಿದೆ.

ಇದು (director nag venkat) ನಾಗ್ ವೆಂಕಟ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಚೊಚ್ಚಲ ಸಿನಿಮಾ. ಈ ಹಿಂದೆ ತಾರಕಾಸುರನಾಗಿ, ನಾನಾ ಶೇಡುಗಳ ರಗಡ್ ಪಾತ್ರದಲ್ಲಿ ಮಿಂಚಿದ್ದ (tharakasura fame ravi) ರವಿಯ ರೂಪಾಂತರವೂ ಈ ಟ್ರೈಲರ್ ನ ಹೈಲೈಟ್ ಗಳಲ್ಲೊಂದಾಗಿ ದಾಖಲಾಗುತ್ತದೆ. ಓರ್ವ ನಟನಾಗಿ ಸಿನಿಮಾದಿಂದ ಸಿನಿಮಾಕ್ಕೆ ವಿಭಿನ್ನ ಪಾತ್ರ ಸಿಗಬೇಕೆಂಬ ರವಿಯ ಧ್ಯಾನವಿಲ್ಲಿ ಸಾಕಾರಗೊಂಡಿದೆ. ಅವರು ಈ ಚಿತ್ರದಲ್ಲಿ ಈ ಜನರೇಷನ್ನಿನ ಯುವ ಸಮುದಾಯದ ಪ್ರತಿನಿಧಿಯಾಗಬಲ್ಲ ಪಾತ್ರದಲ್ಲಿ ಮಿಂಚಿದ್ದಾರೆ. ಯೂಥ್ ಫುಲ್ ಕಥಾನಕದ ಸುಳಿವಿನೊಂದಿಗೆ, ನಶೆ, ಪ್ರೀತಿ, ನಗುವಿನ ನಾಕಾಬಂಧಿಯಂಥಾ ಛಾಯೆಯೊಂದು ಈ ಟ್ರೈಲರ್ ನಲ್ಲಿ ಸ್ಪಷ್ಟವಾಗಿಯೇ ಕಾಣಿಸಿದೆ.

ಕ್ರೈಂ ಕಥನ ಅಂದಾಕ್ಷಣವೇ ಥ್ರಿಲ್ಲರ್ ಅಂಶಗಳ ನಿರೀಕ್ಷೆ ಮೂಡಿಕೊಳ್ಳುತ್ತೆ. ಅದರ ಜೊತೆಗೆ ಚಿತ್ರದುದ್ದಕ್ಕೂ ಹಬ್ಬಿಕೊಳ್ಳುವ ನಗುವಿನ ಕಚಗುಳಿ ಇದ್ದರಂತೂ ಆ ಥ್ರಿಲ್ ಮತ್ತಷ್ಟು ಹೆಚ್ಚಾಗುತ್ತೆ. ಕೈಲಾಸದ ಟ್ರೈಲರಿನಲ್ಲಿ ಅಂಥಾ ಭರಪೂರ ನಗುವಿನ ಸೂಚನೆಯೂ ಸ್ಪಷ್ಟವಾಗಿ ಕಾಣಿಸಿದೆ. ಯಾಕೆಂದರೆ, ಕಾಮಿಡಿ ಕಿಲಾಡಿ ಖ್ಯಾತಿಯ ಸೂರಜ್ ವಿಶೇಷ ಪಾತ್ರವೊಂದನ್ನು ನಿರ್ವಹಿಸಿದ್ದಾರೆ. ಚಿತ್ರದ ತುಂಬೆಲ್ಲ ನಾಯಕನ ಪಾತ್ರಕ್ಕೆ ಸರಿಸಮನಾಗಿ ಈ ಪಾತ್ರ ಇರಲಿದೆಯಂತೆ. ಆ ಕಾಮಿಡಿ ಝಲಕ್ಕುಗಳು ಕೂಡಾ ಈ ಟ್ರೈಲರ್ ನಲ್ಲಿ ಜಾಹೀರಾಗಿದೆ. ಒಟ್ಟಾರೆಯಾಗಿ, ಒಂದಿಡೀ ಸಿನಿಮಾದ ಆಂತರ್ಯವನ್ನು ಟ್ರೈಲರ್ ಮೂಲಕ ಪರಿಣಾಮಕಾರಿಯಾಗಿ ಪ್ರೇಕ್ಷಕರ ಮುಂದಿಡುವುದು ತ್ರಾಸದಾಯಕ ಸಂಗತಿ. ಅದನ್ನು ನಾಗ್ ವೆಂಕಟ್ ಲೀಲಾಜಾಲವಾಗಿ ನಿಭಾಯಿಸಿದ್ದಾರೆ. ಅದರ ಫಲವಾಗಿಯೇ ಕೈಲಾಸದ ಟ್ರೈಲರ್ ಎಲ್ಲರನ್ನೂ ಸೆಳೆಯುವಂತೆ ಮೂಡಿ ಬಂದಿದೆ.

ರವಿ ಗೆ ಜೋಡಿಯಾಗಿ ಸುಕನ್ಯಾ ನಟಿಸಿದ್ದಾರೆ. ಶಿವಾಜಿ ಸುರತ್ಕಲ್ ಚಿತ್ರದ ಸಣ್ಣ ಪಾತ್ರದಲ್ಲಿ ನಟಿಸಿದ್ದ ಸುಕನ್ಯಾ ಈ ಮೂಲಕ ನಾಯಕಿಯಾಗಿದ್ದಾರೆ. ವಾಸಿಕ್ ಅಲ್ಸಾದ್ ನಿರ್ಮಾಣ ಮಾಡಿರುವ ಕೈಲಾಸ ಚಿತ್ರಕ್ಕೆ ಆಶಿಕ್ ಅರುಣ್ ಸಂಗೀತ, ತ್ಯಾಗರಾಜನ್ ಸಂಕಲನ, ಲೇಖಕ್ ಎಂ ಸಾಹಿತ್ಯ, ವಿನೋದ್ ರಾಜೇಂದ್ರನ್ ಛಾಯಾಗ್ರಹಣ, ಧನಂಜಯ ಬಿ ನೃತ್ಯ ನಿರ್ದೇಶನವಿದೆ. ವಾಸಿಕ್ ಅಲ್ಸಾದ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸಾಫ್ಟ್‍ವೇರ್ ಜಗತ್ತಿನಿಂದ ಆಗಮಿಸಿರುವ ನಾಗ್ ವೆಂಕಟ್ ಚೊಚ್ಚಲ ನಿರ್ದೇಶನದ ಚಿತ್ರವಿದು. ಅವರು ಮೊದಲ ಹೆಜ್ಜೆಯಲ್ಲಿಯೇ ಗಟ್ಟಿ ಕಥೆಯೊಂದಿಗೆ ಪ್ರೇಕ್ಷಕರನ್ನು ಮುಖಾಮುಖಿ ಆಗಲಿದ್ದಾರೆಂಬುದಕ್ಕೂ ಈ ಟ್ರೈಲರ್ ಸಾಕ್ಷಿಯಂತಿದೆ. ಈಗಾಗಲೇ ಕೈಲಾಸ ಕಾಸಿದ್ರೆ ಚಿತ್ರ ನಾನಾ ಬಗೆಯಲ್ಲಿ ಪ್ರೇಕ್ಷಕರನ್ನು ತಲುಪಿಕೊಂಡಿದೆ. ಇದೇ ಮಾರ್ಚ್ 8ನೇ ತಾರೀಕಿನಂದು ಈ ಸಿನಿಮಾ ಬಿಡುಗಡೆಗೊಳ್ಳಲಿದೆ.

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!