ನಪ್ರಿಯ ಚಿತ್ರಗಳೆಂಬ ಸನ್ನಿಯಂಥಾ ವಾತಾವರಣದಲ್ಲಿಯೇ ಅನೇಕ ಬಗೆಯ ಹೊಸಾ ಪ್ರಯತ್ನ, ಪ್ರಯೋಗಗಳಾಗುತ್ತಿವೆ. ಯಾವುದೋ ನಿರಾಸೆ, ಏಕತಾನತೆಗಳಿಂದಾಗಿ ಸಿನಿಮಾ ಮಂದಿರಕ್ಕೆ ಬೆನ್ನು ತಿರುಗಿಸಿರುತ್ತಾರಲ್ಲ? ಬಹುಶಃ ಅಂಥವರನ್ನೆಲ್ಲ ಮತ್ತೆ ಕರೆತರುತ್ತಿರುವುದು ಇಂಥಾ ಸಿನಿಮಾಗಳೇ. ಇದೀಗ ಅಂಥಾದ್ದೇ ವಿಭಿನ್ನ ಕಂಟೆಂಟು ಹೊಂದಿರುವ (kadda chitra) `ಕದ್ದ ಚಿತ್ರ’ ಎಂಬ ಚಿತ್ರ ಬಿಡುಗಡೆಗೆ ತಯಾರಾಗಿದೆ. ರಂಗಭೂಮಿ ಪ್ರತಿಭೆ (suhas krishna) ಸುಹಾಸ್ ಕೃಷ್ಣ ನಿರ್ದೇಶನದ ಈ ಚಿತ್ರದಲ್ಲಿ ವಿಜಯ್ ರಾಘವೇಂದ್ರ (vijay raghavendra) ನಾಯಕನಾಗಿ ನಟಿಸಿದ್ದಾರೆ. ಚಿತ್ರತಂಡ ತೆರೆದಿಟ್ಟಿರುವ ಒಂದಷ್ಟು ವಿಚಾರಗಳನ್ನಾಧರಿಸಿ ಹೇಳೋದಾದರೆ, ಕದ್ದ ಚಿತ್ರ ಬೇರೆಯದ್ದೇ ಬಗೆಯಲ್ಲಿ ಪ್ರೇಕ್ಷಕರನ್ನು ತಾಕುವ ಲಕ್ಷಣಗಳು ದಟ್ಟವಾಗಿ ಗೋಚರಿಸುತ್ತಿವೆ.

ಚಿನ್ನಾರಿಮುತ್ತ ಎಂಬ ಸಿನಿಮಾದಲ್ಲಿ ಬಾಲ ನಟನಾಗಿ ಅಭಿನಯಿಸಿ, ತನ್ನ ಅಭಿನಯದ ಚಾತುರ್ಯದಿಂದಲೇ ಪ್ರೇಕ್ಷಕರ ಮನಗೆದ್ದವರು ವಿಜಯ್ ರಾಘವೇಂದ್ರ. ಈವತ್ತಿಗೂ ಸೋಲು ಗೆಲುವಿನಾಚೆಗೆ ಅವರೋರ್ವ ಅತ್ಯುತ್ತಮ ಕಲಾವಿದನಾಗಿ ಸ್ಥಾನ ಪಡೆದುಕೊಂಡಿದ್ದಾರೆ. ಅವರಿಗೆ ಸರಿಕಟ್ಟಾದೊಂದು ಬ್ರೇಕ್ ಸಿಗಬೇಕೆಂದು ಖುದ್ದು ಪ್ರೇಕ್ಷಕರೇ ಆಶಿಸುತ್ತಿದ್ದಾರೆ. ಅದು ಕದ್ದ ಚಿತ್ರದ ಮೂಲಕ ಸಾಕಾರಗೊಳ್ಳುವ ಲಕ್ಷಣಗಳೂ ಢಾಳಾಗಿವೆ. ಈಗಾಗಲೇ ಈ ಸಿನಿಮಾ ಬಗ್ಗೆ ಪ್ರೇಕ್ಷಕರಲ್ಲೊಂದು ಗಾಢ ನಿರೀಕ್ಷೆ ಪ್ರತಿಷ್ಟಾಪಿತವಾಗಿದೆ. ಅದಕ್ಕೆ ತಕ್ಕುದಾದ ಕಥಾ ಹಂದರದಿಂದ ಕದ್ದ ಚಿತ್ರ ಮೈಕೈ ತುಂಬಿಕೊಂಡಿದೆಯೆಂಬ ತುಂಬು ನಂಬಿಕೆ ಚಿತ್ರತಂಡಕ್ಕೂ ಇದ್ದಂತಿದೆ.

ಹಾಗಾದರೆ, ಇದು ಯಾವ ಬಗೆಯ ಚಿತ್ರ ಅಂತೊದು ಪ್ರಶ್ನೆ ಹುಟ್ಟಿಕೊಳ್ಳುವುದು ಸಹಜ. ಈ ನಿಟ್ಟಿನಲ್ಲಿ ನೋಡಹೋದರೆ, ಇದೊಂದು ಸೈಕಾಲಾಜಿಕಲ್ ಥ್ರಿಲ್ಲರ್ ಚಿತ್ರವೆಂಬ ವಿಚಾರ ಜಾಹೀರಾಗುತ್ತದೆ. ಹಾಗಂತ ಈ ಜಾನರಿನ ಸಿದ್ಧಸೂತ್ರಗಳಿಗೆ ಈ ಸಿನಿಮಾ ಬದ್ಧವಾಗಿ ಮೂಡಿ ಬಂದಿದೆ ಅಂದುಕೊಳ್ಳಬೇಕಿಲ್ಲ. ಸ್ಕ್ರೀನ್ ಪ್ಲೇ, ತಾಂತ್ರಿಕವಾಗಿ ಹಲವಾರು ಹೊಸತನಗಳನ್ನು ಒಳಗೊಂಡಿದೆಯಂತೆ. ಇಲ್ಲಿ ವಿಜಯ ರಾಘವೇಂದ್ರ ಪ್ರಸಿದ್ಧ ಬರಹಗಾರರಾಗಿಯೂ ನಟಿಸಿದ್ದಾರೆ. ಅವರು ಇದುವರೆಗೆ ಕಾಣಿಸದಿದ್ದ ಲುಕ್ಕುಗಳಲ್ಲಿ ಕಂಗೊಳಿಸಿದ್ದಾರಂತೆ. ಖುದ್ದು ವಿಜಯ್ ರಾಘವೇಂದ್ರ ಅವರೇ ಕದ್ದ ಚಿತ್ರದ ಬಗ್ಗೆ ಅತೀವ ಪ್ರಮಾಣದಲ್ಲಿ ನಿರೀಕ್ಷೆಯಿಟ್ಟುಕೊಂಡಿದ್ದಾರೆ.

ಇನ್ನುಳಿದಂತೆ ಈ ಸಿನಿಮಾದಲ್ಲಿನ ಪಾತ್ರಗಳು ಹೇಗೆ ಭಿನ್ನವಾಗಿದ್ದಾವೋ, ತಾರಾಗಣ ಕೂಡಾ ಅದಕ್ಕೆ ತಕ್ಕುದಾಗಿದೆ. ಈಗಾಗಲೇ ನಿರ್ದೇಶಕರಾಗಿ ಹೆಸರು ಮಾಡಿ, ಇತ್ತೀಚಿನ ದಿನಗಳಲ್ಲಿ ನಟನಾಗಿಯೂ ಸದ್ದು ಮಾಡುತ್ತಿರುವವರು ರಾಘ ಶಿವಮೊಗ್ಗ. ಅವರು ಈ ಚಿತ್ರದಲ್ಲಿ ಪಬ್ಲಿಶರ್ ಪಾತ್ರಕ್ಕೆ ಜೀವ ತುಂಬಿದ್ದಾರೆ. ಬೇಬಿ ಆರಾಧ್ಯ ವಿಜಯ್ ರಾಘವೇಂದ್ರರ ಮಗಳಾಗಿ ನಟಿಸಿದ್ದಾಳೆ. ಸುಜಿತ್ ಸುಪ್ರಭ, ಸ್ಟೀಫನ್ ಮತ್ತು ವಿನಯ್ ಕುಮಾರ್ ನೆಗೆಟೀವ್ ಶೇಡಿನ ಪಾತ್ರಗಳಲ್ಲಿ ಅಬ್ಬರಿಸಿದಾರಂತೆ. ಶ್ರೀ ಕ್ರೇಜಿ ಮೈಂಡ್ಸ್ ಛಾಯಾಗ್ರಹಣ, ಗೌತಮ್ ಮನು ಸಂಕಲನ, ಸ್ಟೀಫನ್ ಕೊರಿಯೋಗ್ರಫಿ ಹಾಗೂ ದುಷ್ಯಂತ್ ಕಲ ನಿರ್ದೇಶನ ಈ ಚಿತ್ರಕ್ಕಿದೆ.

ಒಂದಷ್ಟು ಮಹರತ್ತರವಾದ ಪ್ರಯೋಗಗಳೊಂದಿಗೆ ನಿರ್ದೇಶಕ ಸುಹಾಸ್ ಕೃಷ್ಣ ಈ ಚಿತ್ರವನ್ನು ರೂಪಿಸಿದ್ದಾರಂತೆ. ಕನ್ನಡದ ಮಟ್ಟಿಗೆ ಕೊಂಚ ಅಪರೂಪವಾಗಿರುವ ಪ್ಯಾರಲಲ್ ಮೆಥೆಡ್ಡಿನಲ್ಲಿ ಸ್ಕ್ರೀನ್‍ಪ್ಲೇ ಮಾಡಲಾಗಿದೆಯಂತೆ. ಹೀಗೆ ಕದ್ದಚಿತ್ರದ ಮೂಲಕ ಟಾಕ್ ಕ್ರಿಯೇಟ್ ಮಾಡಿರುವ ಸುಹಾಸ್ ಕೃಷ್ಣ ಈ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಎ ಎಸ್ ಮೂರ್ತಿ ಅವರ ರಂತರಂಗದಲ್ಲಿ ನಟನೆ, ನಿರ್ದೇಶನ ಸೇರಿದಂತೆ ಒಂದಷ್ಟು ಪಟ್ಟುಗಳನ್ನು ಕಲಿತುಕೊಂಡಿದ್ದವರು ಸುಹಾಸ್ ಕೃಷ್ಣ. ಹಾಗೆ ಮೂರ್ನಾಲಕ್ಕು ವರ್ಷಗಳ ಕಾಲ ರಂಗಭೂಮಿಯಲ್ಲಿ ಪಳಗಿಕೊಂಡು, ರವಿ ಶ್ರೀವತ್ಸ, ಸಾಯಿಕೃಷ್ಣ, ಅರವಿಂದ್ ಕೌಶಿಕ್, ರಾಘು ಶಿವಮೊಗ್ಗ ಮುಂತಾದವರ ಬಳಿ ಕೆಲಸ ಮಾಡುತ್ತಲೇ ಅನುಭವ ಗಿಟ್ಟಿಸಿಕೊಂಡಿದ್ದರು. ಆ ನಂತರ ಒಂದಷ್ಟು ಕಿರುಚಿತ್ರಗಳ್ನು ನಿರ್ದೇಶನ ಮಾಡಿ, ಕದ್ದ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ.

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!