ಇದುವರೆಗೂ ಸಾಕಷ್ಟು ಹಣವಂತರ ಮಕ್ಕಳು ಸಿನಿಮಾ ನಟರಾಗಿ ಮೆರೆಯಲು ನೋಡಿದ್ದಾರೆ. ಎಲ್ಲವನ್ನೂ ಕಾಸಿನ ಬಲದಿಂದಲೇ ಖರೀದಿಸಬಲ್ಲ ತಿಮಿರು ಹೊಂದಿರುವವರು ತಮ್ಮ ಕುಡಿಗಳನ್ನು ಸ್ಟಾರ್‌ಗಳನ್ನಾಗಿಸುವ ಕನಸು ಕಾಣೋದು ಹೊಸತೇನಲ್ಲ. ಸಹನೀಯ ಅಂಶವೆಂದರೆ, ಇಂಥವರ ಸಂತಾನ ಕನ್ನಡ ಚಿತ್ರರಂಗದಲ್ಲಿ ನೆಲೆ ಕಂಡುಕೊಂಡಿದ್ದಿಲ್ಲ. ಇದು ಗೊತ್ತಿದ್ದರೂ ಕೂಡಾ ಬಳ್ಳಾರಿಯ ಗಣಿಗಳ್ಳ (gaalijanardhanreddy) ಜನಾರ್ಧನ ರೆಡ್ಡಿ ತನ್ನ ಮಗ ಕಿರೀಟಿಯನ್ನು (kireeti) ನಾಯಕ ನಟನನ್ನಾಗಿ ನೆಲೆಗಾಣಿಸುವ ಕಸರತ್ತು ನಡೆಸಿದ್ದ. ಗಣಿಧೂಳಿನ ಬ್ಲಾಕ್ ಮನಿಯನ್ನು ತಂದು ಸುರಿದರೂ ಕೂಡಾ ರೆಡ್ಡಿಮಗನ (junior movie) ಜ್ಯೂನಿಯರ್ ಚಿತ್ರಕ್ಕೆ ಅಡಿಗಡಿಗೆ ಕಂಟಕ ಎದುರಾಗಿತ್ತು. ಕಡೆಗೂ ಇದೀಗ ಆ ಚಿತ್ರ ಬಿಡುಗಡೆಗೊಂಡಿದೆ. ಗಣಿ ಧೂಳಿಂದೆದ್ದು (mining mafia) ಬಂದ ಕೀಟವೀಗ ಸಿನಿಮಾ ಮಂದಿರದ ಹೆಬ್ಬಾಗಿಲಲ್ಲೇ ಲಗಾಟಿ ಹೊಡೆದಿದೆ.
ಹೇಳಿಕೇಳಿ (janardhan reddy) ಜನಾರ್ಧನ ರೆಡ್ಡಿ ನೆಲ ಬಗೆಯುತ್ತಾ ಏಕಾಏಕಿ ಕೋಟಿ ಕೋಟಿ ಗುಂಜಿಕೊಂಡವನು. ಇಂಥವನಿಗೆ ಓರ್ವ ನಟ ಸಿನಿಮಾ ರಂಗದಲ್ಲಿ ಸರ್ಕಸ್ಸು ನಡೆಸುತ್ತಾ, ಸ್ಟಾರ್ ನಟನಾಗಿ ನೆಲೆ ಕಾಣೋದು ಅದೆಷ್ಟು ಸುದೀರ್ಘವಾದ, ತ್ರಾಸದಾಯಕ ಪ್ರಯಾಣವೆಂಬ ಅರಿವಿರಲು ಸಾಧ್ಯವೇ? ಅಂಥಾದ್ದೊಂದು ಸೈರಣೆಯನ್ನು ಗಾಲಿ ರೆಡ್ಡಿಯಿಂದಾಗಲಿ, ಅವನ ಮಗ (kireeti) ಕಿರೀಟಿಯಿಂದಾಗಲಿ ನಿರೀಕ್ಷೆ ಮಾಡೋದೇ ಮುಠ್ಠಾಳತನ. ಇದನ್ನಿಲ್ಲಿ ಪ್ರಸ್ತಾಪಿಸುತ್ತಿರೋದಕ್ಕೆ ಕಾರಣ ಇಲ್ಲದಿಲ್ಲ. ಜ್ಯೂನಿಯರ್ ಸಿನಿಮಾ ನೋಡಿದ ಯಾರಿಗಾದರೂ ಒಂದೇ ಸಿನಿಮಾದಲ್ಲಿ ಕಿರೀಟಿಯನ್ನು ಸ್ಟಾರ್ ನಟನಾಗಿ ನೆಲೆಗಾಣಿಸುವ ಹಳವಂಡ ಕಣ್ಣಿಗೆ ರಾಚುತ್ತೆ.
ಹಾಗೆ ನೋಡಿದರೆ, ಇಲ್ಲಿ ಕೈಗೆತ್ತಿಕೊಂಡಿರುವ ಕಥೆ ಚೆನ್ನಾಗಿದೆ ಅಂತನ್ನಿಸಿದರೂ ಅದರಲ್ಲಿ ಹೊಸತನವೇನಿಲ್ಲ. ಯಾವ ಘಟ್ಟದಲ್ಲಿಯೂ ಕಥೆಯ ಭಾಗ ವಾಹ್ ಅನ್ನಿಸೋದಿಲ್ಲ. ಪಾತ್ರ ವರ್ಗ ಮತ್ತು ಕಲಾವಿದರು ಅದಕ್ಕೆ ಜೀವ ತುಂಬಿರುವ ರೀತಿಯನ್ನೂ ಮೆಚ್ಚಿಕೊಳ್ಳಬಹುದು. ಆದರೆ, ಕಿರೀಟಿಗೆ ಹಾಡು ಮಾತ್ರವಲ್ಲದೇ ಪ್ರತಿಯೊಂದಕ್ಕೂ ಬಿಲ್ಡಪ್ಪಿ ಕೊಡುವ ದರ್ದಿಗೆ ಬಿದ್ದಿರುವ ನಿರ್ದೇಶಕರು, ಕಥೆಯ ಮೂಲ ಸತ್ವದ ಕತ್ತು ಹಿಸುಕಿದ್ದಾರೆ. ಹಾಡುಗಳಲ್ಲಿ ಎನರ್ಜಿಟಿಕ್ ಆಗಿ ಕಾಣಿಸಿಕೊಂಡಿರುವ ಕಿರೀಟಿ, ನಟನೆ ಅಂತ ಬಂದಾಗ ಬಸವಳಿದಂತೆ ಕಾಣಿಸುತ್ತಾನೆ. ಗಣಿಗಳ್ಳ ರೆಡ್ಡಿ ಇದುವರೆಗೆ ಗೋರಿಕೊಂಡಿರುವ ಕಾಸನ್ನೆಲ್ಲ ಗುಡ್ಡೆ ಹಾಕಿದರೂ ಕೂಡಾ, ಕಿರೀಟಿ ನಟನಾಗಿ ಪಳಗೋದಕ್ಕೆ ಇನ್ನೂ ಸಾಕಷ್ಟು ಸಮಯ ಬೇಕಾಗುತ್ತದೆ.
ಅಷ್ಟಕ್ಕೂ ಜನಾ ರೆಡ್ಡಿಯಂಥಾ ಬೇನಾಮಿ ಆಸ್ತಿ ಹೊಂದಿರೋ ಖದೀಮರ ಮಕ್ಕಳು ಹೇಗೆ ಬೇಕಾದರೂ ತಯಾರಿ ನಡೆಸಬಹುದು. ಕಿರೀಟಿ ಕೂಡಾ ನೃತ್ಯ ಸೇರಿದಂತೆ ಒಂದಷ್ಟು ಬಗೆಯಲ್ಲಿ ಶ್ರಮ ಹಾಕಿದ್ದಾನೆ. ಆ ಕಾರಣದಿಂದಲೇಬ ಜ್ಯೂನಿಯರ್ ಇದ್ದುದರಲ್ಲಿಯೇ ಒಂದಷ್ಟು ಸಹ್ಯವೆನಿಸುತ್ತೆ. ಅಷ್ಟರ ಮಟ್ಟಿಗೆ ರೆಡ್ಡಿಮಗ ಕಿರೀಟಿಯನ್ನು ಮೆಚ್ಚಿಕೊಳ್ಳಬಹುದು. ಇದೆಲ್ಲದರಾಚೆಗೆ ಗಣಿಗಳ್ಳನ ಪುತ್ರನ ಸಿನಿಮಾದ ಬಗ್ಗೆ ಬೇರೇನೂ ಹೇಳಲಾಗೋದಿಲ್ಲ. ಒಂದು ಕಾಲದಲ್ಲಿ ಹಡಬೆ ಕಾಸಿಂದ ಒಂದಿಡೀ ರಾಜಕೀಯವನ್ನು ಹಡಾಲೆಬ್ಬಿಸಿದ್ದವನು, ಅಳಿದುಳಿದಿದ್ದ ಮೌಲ್ಯಗಳನ್ನು ಗಣಿಧೂಳಿನಲ್ಲಿ ಉಸಿರುಗಟ್ಟಿಸಿದ್ದವನು ಗಾಲಿ ಜನಾರ್ಧನ ರೆಡ್ಡಿ. ಇಂಥವನ ಮಗ ಹೀರೋ ಆದರೆ ಅದು ಕೆಡುಕಾಗಿಯಷ್ಟೇ ಕಾಣಿಸಲು ಸಾಧ್ಯ!