ತಮಿಳು ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಆಗಿ ಮೆರೆಯುತ್ತಿದ್ದ ದಳಪತಿ ವಿಜಯ್ ಈಗ ರಾಜಕಾರಣಿಯಾಗಿ ರೂಪಾಂತರ ಹೊಂದಿದ್ದಾರೆ. ರಾಜಕೀಯ ರಂಗದಲ್ಲಿ ತನ್ನದೇ ಅಸ್ತಿತ್ವ ಸಾಧಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಿಟ್ಟಿರುವ ವಿಜಯ್, ರಾಷ್ಟ್ರ ರಾಜಕಾರಣದ ಗಮನವನ್ನು ತನ್ನತ್ತ ಸೆಳೆದುಕೊಂಡಿದ್ದಾರೆ. ಅದೇನು ಕ್ರಾಂತಿಯಾಗುತ್ತೋ, ಮಾಮೂಲು ಭ್ರಾಂತಿಯೇ ಪುನರಾವರ್ತನೆಯಾಗುತ್ತದೋ ಗೊತ್ತಿಲ್ಲ; ಆದರೆ, ವಿಜಯ್ ರಾಜಕೀಯ ನಡೆ ಸಂಚಲನ ಸೃಷ್ಟಿಸಿರೋದಂತೂ ಸತ್ಯ. ಇದೇ ಹೊತ್ತಿನಲ್ಲಿ ಅವರು ನಟಿಸಿರುವ ಕೊನೇಯ ಸಿನಿಮಾ ಜನನಾಯಗನ್ ಬಿಡುಗಡೆಗೆ ಸಜ್ಜಾಗಿ ನಿಂತಿದೆ. ಈ ಸಂದರ್ಭದಲ್ಲಿ ಜನನಾಯಗನ್ ಚಿತ್ರದ ಟ್ರೈಲರ್ ಬಿಡುಗಡೆ ದಿನಾಂಕ ಅಧಿಕೃತವಾಗಿಯೇ ಜಾಹೀರಾಗಿದೆ!
ಹೊಸ ವರ್ಷದ ಆರಂಭದಲ್ಲಿಯೇ ಅಂದರೆ, ೨ನೇ ತಾರೀಕಿನಂದು ಜನನಾಯಗನ್ ಟ್ರೈಲರ್ ಲಾಂಚ್ ಆಗಲಿದೆ ಅಂತೊಂದು ಸುದ್ದಿ ಕಳೆದ ವರ್ಷದ ಅಂಚಿನಲ್ಲಿ ಹಬ್ಬಿಕೊಂಡಿತ್ತು. ದಳಪತಿಯ ಅಭಿಮಾನಿಗಳಂತೂ ಅದನ್ನೇ ಅಧಿಕೃತ ಎಂಬಂತೆ ಊರು ತುಂಬಾ ಇಟ್ಟಾಡಿಸಿದ್ದರು. ಆದರೆ, ಕಡೇ ಕ್ಷಣಗಳಲ್ಲಿ ಅದು ಅಧಿಕೃತ ಸುದ್ದಿಯಲ್ಲ ಎಂಬ ವಿಚಾರ ಜಾಹೀರಾಗಿತ್ತು. ಇಂಥಾದ್ದೊಂದು ನಿರಾಸೆಯೊಂದಿಗೇ ಹೊಸಾ ವರ್ಷದತ್ತ ಮಗುಚಿಕೊಂಡಿದ್ದ ಅಭಿಮಾನಿಗಳನ್ನು ಚಿತ್ರತಂಡ ಖುಷಿಗೊಳಿಸಿದೆ. ಯಾಕೆಂದರೆ, ಇದೀಗ ಜನನಾಯಗನ್ ಟ್ರೈಲರ್ ಒಂಬತ್ತನೇ ತಾರೀಕಿನಂದು ಬಿಡುಗಡೆಯಾಗೋದು ಪಕ್ಕಾ ಆಗಿದೆ!
latest truth of thalapathy vijay’s last movie: ಜನನಾಯಗನ್ ಬಾಲಯ್ಯನ ಚಿತ್ರದ ರೀಮೇಕಾ?
ಇದು ದಳಪತಿ ವಿಜಯ್ ಅಭಿನಯದ ಕಟ್ಟ ಕಡೆಯ ಸಿನಿಮಾ ಎಂಬ ಕಾರಣಕ್ಕೆ ಭಾರೀ ನಿರೀಕ್ಷೆ ಹುಟ್ಟು ಹಾಕಿದ್ದ ಚಿತ್ರ. ದೊಡ್ಡ ಮಟ್ಟದಲ್ಲಿಯೇ ಸಂಭಾವನೆ ಪಡೆಯುವ ಮೂಲಕವೂ ವಿಜಯ್ ಸದ್ದು ಮಾಡಿದ್ದರು. ತನ್ನ ಇಷ್ಟೂ ವರ್ಷಗಳ ವೃತ್ತಿ ಬದುಕಿಗೆ ಘನತೆ ಬರುವಂತೆ, ತನ್ನ ಮುಂದಿನ ರಾಜಕೀಯ ನಡೆಗೆ ಸಹಕಾರಿಯಾಗುವಂತೆ ಈ ಸಿನಿಮಾ ಇರುವಂತೆ ವಿಜಯ್ ನೋಡಿಕೊಂಡಿದ್ದಾರೆಂಬ ಮಾತಿದೆ. ದುರಂತವೆಂದರೆ, ಇದು ತೆಲುಗಿನ ಕಾಮಿಡಿ ಸ್ಟಾರ್ ಬಾಲಯ್ಯ ನಟಿಸಿದ್ದ ಭಗವಂತ ಕೇಸರಿ ಚಿತ್ರದ ರೀಮೇಕ್. ಇಂಥಾ ಸರಕನ್ನು ಪ್ರತಿಭಾನ್ವಿತ ನಿರ್ದೇಶಕ ವಿನೋದ್ ಹೇಗೆಲ್ಲ ಸಂಭಾಳಿಸಿರಬಹುದು? ದಳಪತಿ ಹೇಗೆ ಮಿಂಚಿದ್ದಾರೆ? ಇಂಥಾ ಪ್ರಶ್ನೆಗಳಿಗೆಲ್ಲ ವಾರದೊಪ್ಪತ್ತಿನಲ್ಲಿಯೇ ನಿಖರ ಉತ್ತರ ಸಿಗಲಿದೆ!
keywords: jananayagan, thalapathy vijay, jananayagan movie, tamil, panindia movie

