ಏಕಾಏಕಿ ರಾಜಕಾರಣಿಯಾಗಿ ಗೆಟಪ್ಪು ಬದಲಿಸಿರುವ ದಳಪತಿ ವಿಜಯ್ ನಸೀಬು ಅದ್ಯಾಕೋ ಖರಾಬಾದಂತಿದೆ. ರಾಜಕೀಯ ರ್‍ಯಾಲಿಗಳ ಮೂಲಕ ಶಕ್ತಿಪ್ರದರ್ಶನಕ್ಕಿಳಿದಿದ್ದ ವಿಜಯ್‌ಗೆ ಅಭಿಮಾನಿಗಳ ಸಾವಿನ ಸೂತಕ ಸುತ್ತಿಕೊಂಡಿತ್ತು. ಇದೆಲ್ಲದರಿಂದ ಬಚಾವಾಗಿ ಜನನನಾಯಗನ್ ಬಿಡುಗಡೆಯ ಬಗ್ಗೆ ತಲೆ ಕೆಡಿಸಿಕೊಂಡಿರೋ ವಿಜಯ್‌ಗೆ ಹೆಜ್ಜೆ ಹೆಜ್ಜೆಗೂ ಆಘಾತಗಳೇ ಎದುರಾಗಲಾರಂಭಿಸಿವೆ. ಅತ್ತ ಸಿಬಿಐ ಪ್ರಹಾರ, ಇತ್ತ ಜನನಾಯಗನ್ ಬಿಡುಗಡೆಗೆ ಎದುರಾಗಿರುವ ಸೆನ್ಸಾರ್ ಕಂಟಕ… ಇದೆಲ್ಲದರಿಂದ ದಳಪತಿಯ ತಳದಲ್ಲಿ ಹೇಳಲಾರದ ತಳಮಳ ಶುರುವಾಗಿದೆ. ಇದೇ ಹೊತ್ತಿನಲ್ಲಿ ಸಾಗರದಾಚೆಯೂ ಸದರಿ ಚಿತ್ರಕ್ಕೆ ಒಂದರ ಹಿಂದೊಂದರಂತೆ ಅಡೆತಡೆಗಳು ಎದುರಾಗುತ್ತಿವೆ.
ವಿಜಯ್‌ಗೆ ಭಾರತದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲಿಯೂ ದೊಡ್ಡ ಮಟ್ಟದಲ್ಲಿ ಫ್ಯಾನ್ ಬೇಸ್ ಇದೆ. ಭಾಷೆಯ ಹಂಗಿಲ್ಲದೆ ವಿಜಯ್ ನಟನೆಯನ್ನು ಆಸ್ವಾದಿಸುವ ವಿದೇಸಿಗರ ಸಂಖ್ಯೆ ದೊಡ್ಡದಿದೆ. ಹಾಗೆ ಅಭಿಮಾನಿ ಬಳಗ ಹೆಚ್ಚಿರುವ, ಒಂದಷ್ಟು ಕಲೆಕ್ಷನ್ ಆಗುವ ದೇಶಗಳಲ್ಲಿ ಸೌದಿ ಅರೇಬಿಯಾ ಕೂಡಾ ಮುಂಚೂಣಿಯಲ್ಲಿದೆ. ಸೌದಿಯಲ್ಲಿ ತಮಿಳು ನಾಡು ಸೇರಿದಂತೆ ಭಾರತದ ಬಹುತೇಕ ರಾಜ್ಯ ಮಂದಿ ಬದುಕು ಕಟ್ಟಿಕೊಂಡಿದ್ದಾರೆ. ಈ ಕಾರಣದಿಂದಲೇ ಭಾರತೀಯ ಸಿನಿಮಾಗಳಿಗೆ ಅಲ್ಲಿ ಬಹುದೊಡ್ಡ ಮಾರುಕಟ್ಟೆ ಇದೆ. ಆದರೀಗ ಜನನಾಯಗನ್ ಚಿತ್ರವನ್ನು ಸೌದಿ ಅರೇಬಿಯಾದಲ್ಲಿ ಬ್ಯಾನ್ ಮಾಡಲಾಗಿದೆ.
Jana Nayagan Release Date Postponed: ಜನನಾಯಗನ್ ಬಿಡುಗಡೆಯಾಗೋದು ಡೌಟು!
ಜನನಾಯಗನ್ ವಿರುದ್ಧ ಸೌದಿಯಲ್ಲಿ ಉರಿ ಕಿತ್ತುಕೊಂಡಿರೋದರ ಹಿಂದೆ ಪಾಕ್ ಪ್ರೇಮವಿದೆ. ಈ ಸಿನಿಮಾದಲ್ಲಿ ವಿಲನ್ ಪಾಕಿಸ್ತಾನದಾತ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಮತ್ತು ಅಲ್ಲಿನ ಸೇನೆಯನ್ನು ಲೇವಡಿ ಮಾಡುವ ಅನೇಕ ಸಂಭಾಷಣೆಗಳಿದ್ದಾವೆ. ಇದು ಟ್ರೈಲರಿನಲ್ಲಿಯೂ ಕಾಣಿಸಿಕೊಂಡಿದ್ದರಿಂದಾಗಿ ಸೌದಿಯಲ್ಲಿ ನಿಷೇಧ ಹೇರಲಾಗಿದೆ. ಇದು ಈ ಕ್ಷಣದ ಹಿನ್ನಡೆಯಾದರೆ, ಖುದ್ದು ವಿಜಯ್‌ಗೆ ಒಟ್ಟಾರೆ ಸಿನಿಮಾ ಬಗ್ಗೆ ಭರವಸೆ ಇದ್ದಂತಿಲ್ಲ. ಇದು ಭಗವಂತ ಕೇಸರಿಯ ರೀಮೇಕ್ ಎಂಬ ವಿಚಾರವೇ ಎಲ್ಲ ಕುತೂಹಲವನ್ನು ಮಣ್ಣುಪಾಲಾಗಿಸಿದೆ. ಸದ್ಯದ ಮಟ್ಟಿಗೆ ದೊಡ್ಡ ಮಟ್ಟದಲ್ಲಿ ಟಿಕೇಟ್ ದರದ ಮೂಲಕ ಲೂಟಿ ಮಾಡಲಾಗುತ್ತಿದೆ. ಈ ಮೂಲಕ ಬಿಡುಗಡೆ ಪೂರ್ವ ಕಲೆಕ್ಷನ್ನು ಜೋರಾಗಿದ್ದರೂ, ಬಿಡುಗಡೆಯಾದ ಬಳಿಕ ಅದು ಇಳಿಮುಖವಾದೀತೆಂಬ ಆತಂಕ ಚಿತ್ರತಂಡವನ್ನು ಬಾಧಿಸುತ್ತಿರುವಂತಿದೆ!
keywords: jananayagan, vijay, thalapathy

