ದಳಪತಿ ವಿಜಯ್ ಅಭಿನಯದ ಜನನಾಯಗನ್ ಚಿತ್ರಕ್ಕೆ ಬಿಡುಗಡೆಯ ಹೊಸ್ತಿಲಿನಲ್ಲಿ ಭಾರೀ ಅಡೆತಡೆಗಳು ಎದುರಾಗುತ್ತಿವೆ. ಊರು ತುಂಬೆಲ್ಲ ಹವಾ ಸೃಷ್ಟಿಯಾಗಿರುವ ಈ ಘಳಿಗೆಯಲ್ಲಿ ಜನನಾಯಗನ್ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ವಿಜಯ್ ಕಡೇಯ ಸಿನಿಮಾ ಅಂತ ಹುಯಿಲೆಬ್ಬಿಸಿದ ಕಾರಣದಿಂದಾಗಿ ಸದರಿ ಚಿತ್ರದ ಬಗೆಗಿನ ಕ್ರೇಜ್ ಮತ್ತಷ್ಟು ಹೆಚ್ಚಿಕೊಂಡಿದೆ. ಇಂಥಾ ಸಕಾರಾತ್ಮಕ ವಾತಾವರಣದಲ್ಲಿ ಯಹಾವುದೇ ಚಿತ್ರತಂಡವಾದರೂ ಖುಷಿಗೊಳ್ಳೋದು ಸಹಜ. ಆದರೆ, ಜನನಾಯಗನ್ ಚಿತ್ರತಂಡ ಮಾತ್ರ ಅಕ್ಷರಶಃ ಕಂಗಾಲಾಗಿದೆ. ಅದಕ್ಕೆ ಕಾರಣವಾಗಿರೋದು ಸೆನ್ಸಾರ್ ಕಂಟಕ. ಕಳೆದ ತಿಂಗಳೇ ಸೆನ್ಸಾರ್ ಅಂಗಣಕ್ಕೆ ಜನನಾಯಗನ್ ಎಂಟ್ರಿ ಕೊಟ್ಟಿದ್ದರೂ ಈ ಕ್ಷಣಕ್ಕೂ ಸರ್ಟಿಫಿಕೇಟ್ ಮಾತ್ರ ಮರೀಚಿಕೆಯಾಗಿದೆ!
ಬಿಡುಗಡೆಗೆ ಎರಡ್ಮೂರು ದಿನಗಳು ಬಾಕಿ ಇದ್ದರೂ ಕೂಡಾ ಸರ್ಟಿಫಿಕೇಟ್ ಸಿಗದಿದ್ದರಿಂದ ಕಂಗಾಲಾಗಿದ್ದ ನಿರ್ಮಾಪಕರು ಹೈಕೋರ್ಟ್ ಮೊರೆ ಹೋಗಿದ್ದರು. ಇಂದು ಈ ಬಗ್ಗೆ ವಿಚಾರಣೆ ನಡೆದ ಸಂದರ್ಭದಲ್ಲಿ ಚಿತ್ರದ ಕಡೆಯಿಂದ ಅಸಲೀ ವಿಚಾರವನ್ನು ನ್ಯಾಯಾಧೀಶರ ಮುಂದೆ ಒಪ್ಪಿಸಲಾಗಿದೆ. ಈ ಹಂತದಲ್ಲಿ ಸೆನ್ಸಾರ್ ಮಂಡಳಿ ಚಿತ್ರವನ್ನು ಮತ್ತೊಮ್ಮೆ ಪರಿಶೀಲನೆ ನಡೆಸುವ ಭರವಸೆ ನೀಡಿದೆ. ಈ ಮೂಲಕ ಎಲ್ಲಿ ಮತ್ತೆ ತಡವಾಗಿ ಎಡವಟ್ಟಾಗಬಹುದೋ ಎಂಬಂಥಾ ಆತಂಕವೊಂದು ಖುದ್ದು ದಳಪತಿಯನ್ನೇ ಕಾಡುತ್ತಿದೆ. ಸೆನ್ಸಾರ್ ಮಂಡಳಿಯ ಮಾಹಿತಿಯನ್ವಯ ನಾಳೆ ಮಧ್ಯಾನ್ಹಕ್ಕೆ ವಿಚಾರಣೆಯನ್ನು ಮುಂದೂಡಲಾಗಿದೆ. ಆ ಸಂದರ್ಭದಲ್ಲಿ ಬರಬ ಹುದಾದ ತೀರ್ಪಿನ ಮೇಲೆ ಜನನಾಯಗನ್ ಭವಿಷ್ಯ ನಿಂತಿದೆ.
latest truth of thalapathy vijay’s last movie: ಜನನಾಯಗನ್ ಬಾಲಯ್ಯನ ಚಿತ್ರದ ರೀಮೇಕಾ?
ಈ ವಿಚಾರಣೆಯ ಸಂದರ್ಭದಲ್ಲಿ ಕೇಂದ್ರ ಸೆನ್ಸಾರ್ ಮಂಡಳಿ, ಹೊಸದಾಗಿ ನಿಯೋಜಿಸಿರುವ ಮಂಡಳಿಯ ಕಡೆಯಿಂದ ಮತ್ತೊಮ್ಮೆ ಸಿನಿಮಾವನ್ನು ಪರಿಶೀಲಿಸೋದಾಗಿ ಹೇಳಿದೆ. ಆನನಾಯಗನ್ ಮೂರು ಭಾಷೆಗಳಲ್ಲಿ ಬಿಡುಗಡೆಗೊಳ್ಳುತ್ತಿದೆ. ಈ ಕಾರಣದಿಂದ ತಮಿಳಿನಲ್ಲಿ ಮೊಪದಲುಇ ಪರಿಶೀಲನೆ ನಡೆಯಬೇಕಿರೋದರಿಂದ ಅಂತಿಮ ತೀರ್ಪು ನಾಳೆ ಹೊರ ಬರುವ ನಿರೀಕ್ಷೆಗಳಿದ್ದಾವೆ. ಈ ಚಿತ್ರದ ಟ್ರೈಲರಿನಲ್ಲಿ ಅನೇಕ ವಿವಾದಾತ್ಮಕ ಅಂಶಗಳು ಇದ್ದಂತಿವೆ. ಇದು ಹೇಳಿಕೇಳಿ ದಳಪತಿಯ ರಾಜಕೀಯ ರಂಗಪ್ರವೇಶಕ್ಕೆ ಪೂರಕವಾಗಿ ಸಿದ್ಧಪಡಿಸಲಾದ ಚಿತ್ರ. ಈ ಮೂಲಕ ರಾಜಕೀಯ ಅಜೆಂಡಾಗಳೂ ಇದರಲ್ಲಿರುವಂತಿವೆ. ಈ ಕಾರಣದಿಂದಲೇ ಸೆನ್ಸಾರ್ ಕಂಟಕ ಕಾಡಿದಂತಿದೆ. ಒಂದು ವೇಳೆ ಯಡವಟ್ಟಾದರೆ, ಕಡೇ ಘಳಿಗೆಯಲ್ಲಿ ಬಿಡುಗಡೆ ದಿನಾಂಕ ಮುಂದಕ್ಕೆ ಹೋದರೂ ಅಚ್ಚರಿಯೇನಿಲ್ಲ!
keywords: dalapaty, vijay, jananayagan, relese date postponed,

