ಸೂಪರ್ ಸ್ಟಾರ್ ರಜನೀಕಾಂತ್ (rajanikanth) ದೊಡ್ಡ ಗೆಲುವಿನ ಸಂಭ್ರಮದಲ್ಲಿದ್ದಾರೆ. ಅಷ್ಟಕ್ಕೂ ಅವರ ಪಾಲಿಗೆ ಗೆಲುವೆಂಬುದು ಹೊಸತೇನಲ್ಲ. ಸೋಲು, ಗೆಲುವೆರಡನ್ನೂ ಸಮವಾಗಿ ಸ್ವೀಕರಿಸುತ್ತಾ, ಸಾವರಿಸಿಕೊಂಡು ಮುನ್ನಡೆಯುವ ಪರಿಪಕ್ವ ಮನಃಸ್ಥಿತಿ ರಜನಿಗೆ (super star rajini) ಯಾವತ್ತೋ ಸಿದ್ಧಿಸಿದೆ. ಆದರೆ, ವೃತ್ತಿ ಬದುಕಿನ ಏರುಹಾದಿಯಲ್ಲೆದುರಾದ ಇತ್ತೀಚಿನ ವರ್ಷಗಳ ಸೋಲಿನಿಂದ ನಿಜಕ್ಕೂ ರಜಿನಿ ಕಂಗಾಲಾಗಿದ್ದರು. ಅದಕ್ಕೆ ಸರಿಯಾಗಿ ಮಗಳ ದಾಂಪತ್ಯ ಮುರಿದು ಬಿದ್ದು, ಮನಃಶಾಂತಿಯೂ ಹಾಳಾಗಿ ಹೋಗಿತ್ತು. ತಲೈವನ ಒಡಲೊಳಗೆ ಎಂಥಾ ಉರಿ ಇತ್ತೆಂದರೆ, ಅವರಿಷ್ಟದ ಹಿಮಾಲಯವೂ ಅದನ್ನು ತಂಪಾಗಿಸಲು ಸಾಧ್ಯವಾಗಿರಲಿಲ್ಲ. ಆದರೀಗ, ಜೈಲರ್ ಗೆ (jailer movie) ಸಿಕ್ಕ ದೊಡ್ಡ ಮಟ್ಟದ ಗೆಲುವು ರಜಿನಿಯನ್ನು ನಿರಾಳವಾಗಿಸಿದೆ!

ಇದೀಗ ವಿಶ್ವಾದ್ಯಂತ ರಜಿನಿ ಅಭಿಮಾನಿಗಳು ಖುಷಿಗೊಂಡಿದ್ದಾರೆ. ಕಬಾಲಿಯಂಥಾ ಕಬಾಲಿಯೇ ಮಗುಚಿಕೊಂಡ ಹಿಂಚುಮುಂಚಲ್ಲಿ ರಜನಿಯ ನೆಮ್ಮದಿ ಕೆಡಿಸುವ ವಿದ್ಯಮಾನಗಳೇ ಸಾಲು ಸಾಲಾಗಿ ಸಂಭವಿಸಿದ್ದವು. ಅಭಿಮಾನಿಗಳ ವಾರ್ ಗಳ ನಡುವೆ ರಜನೀ ಸಿನಿಮಾಗಳ ಸೋಲಿನ ಬಗ್ಗೆ ಪ್ಸ್ತಾಪವಾಗುತ್ತಿತ್ತು. ಮೂದಲಿಕೆಗಳು ತೂರಿ ಬರುತ್ತಿದ್ದವು. ಅದೆಲ್ಲದಕ್ಕೂ ಪುಷ್ಕಳ ಗೆಲುವಿನ ಮೂಲಕ ಉತ್ತರ ಕೊಡಲು ಕಾದಿದ್ದ ಅಭಿಮಾನಿಗಳಿಗೆ ಜೈಲರ್ ಗೆಲುವು ವರವಾಗಿದೆ. ಲೇಟೆಸ್ಟ್ ವಿಚಾರವೆಂದರೆ, ಎಲ್ಲೆಡೆ ಭರ್ಜರಿ ಕಲೆಕ್ಷನ್ನು ಮಾಡುತ್ತಾ ಮುನ್ನುಗ್ಗುತ್ತಿರುವ ಜೈಲರ್ ಶೀಘ್ರದಲ್ಲಿಯೇ ಓಟಿಟಿಗೆ ಎಂಟ್ರಿ ಕೊಡಲಿದೆ.

ಸೆಪ್ಟೆಂಬರ್ ಏಳನೇ ತಾರೀಕಿನಿಂದ ಜೈಲರ್ ನೆಟ್ ಪ್ಲಿಕ್ಸ್‍ನಲ್ಲಿ ರಾರಾಜಿಸಲಿದೆ. ಅಲ್ಲಿಯೂ ಕೂಡಾ ದೊಡ್ಡ ಪ್ರಮಾಣದಲ್ಲಿ ಜೈಲರ್ ಹಿಟ್ ಆಗೋ ಸಾಧ್ಯತೆಗಳೇ ಹೆಚ್ಚಾಗಿವೆ. ಜೈಲರ್ ಗೆ ಸಿಕ್ಕಿರೋದು ಮಹಾ ಗೆಲುವೆಂಬುದರಲ್ಲಿ ಎರಡು ಮಾತಿಲ್ಲ. ತಮಿಳು ಚಿತ್ರರಂಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ದಾಖಲಾಗಿದ್ದ ಎಲ್ಲಾ ದಾಖಲೆಗಳನ್ನು ಜೈಲರ್ ಮುರಿದಿದೆ. ಅದರ ಕಲೆಕ್ಷನ್ನಿನ ಓಘ ಕಂಡು ವಿತರಕರು ಸೇರಿದಂತೆ ಎಲ್ಲರೂ ಖುಷಿಗೊಂಡಿದ್ದಾರೆ. ಒಟ್ಟಾರೆಯಾಗಿ ರಜನಿ ಅಭಿಮಾನಿಗಳಿಗೆಲ್ಲ ಜೈಲರ್ ನಿಂದಾಗಿ ಅಕ್ಷರಶಃ ಹಬ್ಬವಾಗಿದೆ. ಮುಂದಿನ ತಿಂಗಳಿಂದ ಆನ್ ಲೈನಿಗೂ ಹಬ್ಬದ ಸಡಗರ ದಾಟಿಕೊಳ್ಳಲಿದೆ!

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!