ನಸಲ್ಲಿ ಬರೀ ದ್ವೇಷ, ಸಮಯಸಾಧಕತನವನ್ನಷ್ಟೇ ಸಾಕಿಕೊಂಡ ಅವಿವೇಕಿಗಳು ಸುಲಭಕ್ಕೆ ಬದಲಾಗೋದು ಕಷ್ಟವಿದೆ. ತನಗೆ ತಾನೇ ನವರಸ ನಾಯಕ ಅಂದುಕೊಂಡಿರುವ ಜಗ್ಗೇಶಿಯಂತೂ ಈ ಜನ್ಮದಲ್ಲಿ ಬದಲಾಗೋದಿಲ್ಲ. ಬಾಯಿಬೇಧಿ ಎಂಬುದು ಈತನ ಪಾಲಿಗೆ ಎಂದೂ ವಾಸಿಯಾಗದ ಕಾಯಿಲೆ. ಒಂದು ಹಂತದಲ್ಲಿ (jaggesh) ಜಗ್ಗೇಶಿ ಎಂಟರ್‌ಟೈನರ್ ಅನ್ನಿಸಿದ್ದಿದೆ. ಮತ್ತೊಂದು ಹಂತದಲ್ಲಿ ಈತನ ಹಸಿಹಸೀ ವಿಕೃತಿಗಳೂ ಕೂಡಾ ಮನೋರಂಜನೆಯ ಹೆಸರಲ್ಲಿ ಕಲೆಸಿಕೊಂಡು ಹೋಗಿದ್ದೂ ಇದೆ. ಸಾಮಾನ್ಯವಾಗಿ ವಯಸ್ಸಾಗುತ್ತಾ ಹೋದಂತೆಲ್ಲ ಅನುಭವಗಳಿಂದ ಎಂತೆಂಥಾ ವ್ಯಕ್ತಿತ್ವಗಳೂ ಕೂಡಾ ಮಾಗೋದಿದೆ. ಆದರೆ, ಜಗ್ಗೇಶ್ ಗೆ ವಯಸ್ಸಾದಂತೆಲ್ಲ ಹುಳ ಹಿಡಿದಂತಾಗಿದೆ. ಇಂಥಾ ಬರಗೆಟ್ಟ ಆಸಾಮಿಯನ್ನು ಅದ್ಯಾವ ಮಾನದಂಡಲ್ಲಿ ರಾಜ್ಯಸಭಾ ಸದಸ್ಯನನ್ನಾಗಿಸಲಾಗಿದೆಯೋ ಗೊತ್ತಿಲ್ಲ. ಜಗ್ಗೇಶಿ ಇಂಥಾ ಸ್ಥಾನಗಳಿಗೆ ಮಾತ್ರವಲ್ಲ; ಮನುಷ್ಯನೆಂದು ಪರಿಗಣಿಸೋದಕ್ಕೂ ಅರ್ಹನಾದವನಲ್ಲ!

ಗುರುಪ್ರಸಾದ್ ಸಾವಿನ ವಿಚಾರದಲ್ಲಿ ಜಗ್ಗೇಶಿಯ ಕಡೆಯಿಂದ ವಿಕೃತಿಗಳು ಪ್ರದರ್ಶನಗೊಂಡವಲ್ಲಾ? ಅದನ್ನು ಕಂಡು ಬಬಹುತೇಕ ಎಲ್ಲರೂ ಖಂಡಿಸಿದ್ದರು. ಎಲ್ಲ ತಕರಾರುಗಳನ್ನು ಮೀರಿ ಈತನನ್ನು ಕೊಂಚ ಮೆಚ್ಚಿಕೊಂಡಿದ್ದರೂ ಕೂಡಾ ಇದು ಸರಿಯಲ್ಲ ಎಂಬರ್ಥದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದರು. ಜಗ್ಗೇಶಿ ಯಾವುದೋ ಕಾಲದಲ್ಲಿ ಗಂಟಲು ಹರಿದುಕೊಂಡಿದ್ದ ವೀಡಿಯೋಗಳಿಗೂ ಕೂಡಾ ಕಮೆಂಟುಗಳ ರೂಪದಲ್ಲಿ ಮಹಾಮಂಗಳಾರತಿ ನಡೆದಿತ್ತು. ಇದೆಲ್ಲವನ್ನೂ ಕಂಡು ಜಡೇಮಾಯ್ಸಂದ್ರದ ಭಂಡನಿಗೆ ಅಕ್ಷರಶಃ ಆಮಶಂಕೆ ಶುರುವಾಗಿದೆ. ಅಳಿದುಳಿದ ಮಾನ ಮೂರುಉ ಕಾಸಿಗೆ ಹರಾಜಾಗಿದ್ದನ್ನು ಕಂಡು ಕಂಗಾಲಾಗಿರುವ ಜಗ್ಗ ತನ್ನನ್ನು ಟೀಕಿಸಿದವರನ್ನೆಲ್ಲ ನಾಯಿಗೆ ಹೋಲಿಸಿದ್ದಾನೆ. ಆನೆ ನಡೆಯುವಾಗ ನಾಯಿಗಳು ಬೊಗಳುವಂಥಾ ಹಳಸಲು ರೂಪಕವನ್ನಿಟ್ಟುಕೊಂಡು ತಾನೆಂಥಾ ಅವಿವೇಕಿ ಎಂಬುದನ್ನು ಋಜುವಾತು ಪಡಿಸಿದ್ದಾನೆ.

ಅಷ್ಟಕ್ಕೂ ಗುಳ್ಳೇನರಿಯ ಜಾಯಮಾನದ ಜಗ್ಗೇಶಿ ತನ್ನನ್ನು ತಾನು ಆನೆ ಅಂದುಕೊಂಡಿರೋದೇ ಈ ಶತಮಾನದ ಭೀಕರ ಜೋಕು. ಮಾತೆತ್ತಿದರೆ ನಾನು ಸೀನಿಯರ್ ಅನ್ನೋ ಖಯಾಲಿ ಹೊಂದಿರುವ ಜಗ್ಗೇಶಿಯ ನವರಂಗೀ ನಾಟಕಗಳ ಬಗ್ಗೆ ಸಿನಿಮಾಕ್ಕಾಗುವಷ್ಟು ಸರಕುಗಳಿವೆ. ಮುಖದ ತುಂಬಾ ನಾಮ ಬಳಿದುಕೊಂಡು, ದೇಹಕ್ಕೆ ರಾಘವೇಂದ್ರ ಸ್ವಾಮಿಯ ಹಚ್ಚೆ ಹಾಕಿಸಿಕೊಂಡು ಮಹಾನ್ ದೈವ ಭಕ್ತನಂತೆ ಪೋಸು ಕೊಡುವಾತ ಜಗ್ಗೇಶ್. ಈತನ ಭಕ್ತಿ ಕೂಡಾ ವ್ಯಕ್ತಿತ್ವದಂತೆಯೇ ಖೊಟ್ಟಿ. ಯಾಕಂದ್ರೆ, ನಿಜವಾದ ದೈವ ಭಕ್ತರ್‍ಯಾರೂ ಸಾವನ್ನು ಸಂಭ್ರಮಿಸಲಾರರು. ಈತನ ಬಾಯೆಂಬುದು ಬಚ್ಚಲಿಗಿಂತಾ ಕಡೆಯಾಗಿದೆ. ಅದರಲ್ಲಿಯೇ ಈ ಆಸಾಮಿ ಗುರುರಾಘವೇಂದ್ರ ಸ್ವಾಮಿಗಳ ಸ್ಮರಣೆ ಮಾಡೋದು ಕೂಡಾ ಕೆಡುಕಿನಂತೆಯೇ ಭಾಸವಾಗುತ್ತೆ.

ಈತ ತನ್ನನ್ನು ಟೀಕಿಸಿದವರನ್ನೆಲ್ಲ ಸಾರಾಸಗಟಾಗಿ ನಾಯಿಗಳಿಗೆ ಹೋಲಿಸಿದ್ದಾನೆ. ಅದನ್ನು ಕೇಳಿದ ಮಂದಿಗೆಲ್ಲ ಒಂದು ಹಿರಿಯ ಶ್ವಾನ ಸಂಧ್ಯಾಕಾಲದಲ್ಲಿ ತನ್ನನ್ನು ತಾನು ಆನೆಯೆಂದು ಭ್ರಮಿಸಿ ಊಳಿಡುತ್ತಿರುವಂತೆ ಕಂಡಿದೆ. ಇಂಥಾದ್ದೊಂದು ಭ್ರಾಮಕ ಜಗತ್ತಿನಲ್ಲಿ ತನ್ನನ್ನು ತಾನು ಕನ್ನಡ ಚಿತ್ರರಂಗದ ವಾರಸುದಾರ ಅಂದುಕೊಂಡಿರುವಾತ ಜಗ್ಗೇಶಿ. ಕೊಂಚ ತಲೆ ನೆಟ್ಟಗಿದ್ದಿದ್ದರೆ, ಈತ ತನ್ನ ವಿರುದ್ಧ ಜನ ಯಾಕೆ ಸಿಡಿದೆದ್ದಿದ್ದಾರೆ? ತಾನು ಮಾಡಿದ ತಪ್ಪೇನೆಂಬುದನ್ನು ವಿಮರ್ಶೆ ಮಾಡಿಕೊಳ್ಳುತ್ತಿದ್ದ. ಆದರೆ, ನಾಯಿ ಮತ್ತು ಆನೆಯ ಪ್ರವರದ ಮೂಲಕ ಮತ್ತೆ ಮಾನ ಹರಾಜು ಮಾಡಿಕೊಂಡಿದ್ದಾನೆ. ನಿಜ ಜಗ್ಗೇಶ್ ಗೆ ವಯಸ್ಸಾಗಿದೆ. ಹಾಗೆಂದ ಮಾತ್ರಕ್ಕೆ ಈತನನ್ನು ಹಿರಿಯ ಅನ್ನುವಂತಿಲ್ಲ. ಗೌರವ ಕೊಡಬೇಕೆಂದೂ ಇಲ್ಲ. ಯಾಕೆಂದರೆ, ಹಿರಿತನದ ಘನತೆ ಈತನ ಬಚ್ಚಲು ಬಾಯಿಯಲ್ಲಿ ಯಾವತ್ತೋ ಕೊಚ್ಚಿ ಹೋಗಿದೆ. ಈ ಹಿರಿಯ ಶ್ವಾನ ತನ್ನನ್ನು ತಾನು ಆನೆಯೆಂದುಕೊಂಡು ಊಳಿಡುತ್ತಿರಲಿ. ಕನಿಷ್ಠ ಹಚಾ ಅನ್ನದೆಯೂ ಮುಂದೆ ಸಾಗುವ ನಿರ್ಲಕ್ಷ್ಯವೊಂದೇ ಜಗ್ಗೇಶಿಯ ಕಾಯಿಲೆಗೆ ಪರಿಣಾಮಕಾರಿ ಮದ್ದು!

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!