ವಿಕ್ರಾಂತ್ ರೋಣ (vikrant rona) ಚಿತ್ರದಲ್ಲಿ ರಾರಾ ರಕ್ಕಮ್ಮ ಸಾಂಗಿಗೆ ಮೈ ಬಳುಕಿಸುತ್ತಾ, ಕರ್ನಾಟಕದಲ್ಲಿಯೂ ಪ್ರಸಿದ್ಧಿ ಪಡೆದುಕೊಂಡಾಕೆ (jacqueline fernandez) ಜಾಕ್ವೆಲಿನ್ ಫರ್ನಾಂಡಿಸ್. ಬಾಲಿವುಡ್ಡಲ್ಲಿ (bollywood) ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದರೂ ಈಕೆಗೆ ಅಂದುಕೊಂಡಂತೆ ನೆಲೆಗಾಣಲು ಸಾಧ್ಯವಾಗಿರಲಿಲ್ಲ. ಆ ಬಳಿಕ ಈಕೆ ಸುದ್ದಿಯಲ್ಲಿದ್ದದ್ದೆಲ್ಲ ನಟ ಸಲ್ಮಾನ್ ಖಾನ್ ಜೊತೆಗಿನ ಅಫೇರಿನ ವಿಚಾರದಲ್ಲಿಯೇ. ಇಂಥಾ ಜಾಕ್ವೆಲಿನ್ ಇದೀಗ ಇನ್ನೂರು ಕೋಟಿ ಕಿಮ್ಮತ್ತಿನ ಮಹಾ ಮೋಸವೊಂದರಲ್ಲಿ ತಗುಲಿಕೊಂಡಿದ್ದಾಳೆ. ಈ ಇನ್ನೂರು ಕೋಟಿ ವಂಟನೆಯ ಇಕ್ಕಳದಿಂದ ಬಿಡಿಸಿಕೊಳ್ಳಲಾರದೆ ಒದ್ದಾಡುತ್ತಿದ್ದಾಳೆ. ಸದ್ಯಕ್ಕೆ ಈ ಕೇಸಿನ ಸುತ್ತ ಇಡಿ ಅಧಿಕಾರಿಗಳು ಗಸ್ತು ಹೊಡೆಯುತ್ತಿರೋದನ್ನು ಗಮನಿಸಿದರೆ ರಾರಾ ರಕ್ಕಮ್ಮ ಅಂದವಳಿಗೆ ಜೈಲುವಾಸ ಫಿಕ್ಸಾದಂತಿತ್ತು. ಆದರೆ, ಆ ಕೇಸೀಗ ಕೋಟಿ ಕಾಸಿನ ಹಬೆಗೆ ಕರಗಿ ಹಳ್ಳ ಹಿಡಿದಂತಿದೆ. ಯಾಕೆಂದರೆ, ಮುನ್ನೂರು ಕೋಟಿಗೆ ನಾಮ ತೀಡಿದ್ದ ವಂಚಕ (sukesh chandrashekar) ಸುಕೇಶ್ ಚಂದ್ರಶೇಖರನ ಸಖಿ ಜಾಕ್ವೆಲಿನ್ ಇದೀಗ ಮತ್ತೆ ಸಿನಿಮಾ ರಂಗಕ್ಕೆ ಮರಳಿದ್ದಾಳೆ!

ರಾಷ್ಟ್ರೀಯ ಮಟ್ಟದಲ್ಲಿ ಹೈ ಪ್ರೊಫೈಲ್ ವಂಚಕನಾಗಿ ಕುಖ್ಯಾತಿ ಪಡೆದಿರುವವನು ಸುಕೇಶ್ ಚಂದ್ರಶೇಖರ್. ಹೈಫೈ ಜನರನ್ನು ಪರಿಚಯ ಮಾಡಿಕೊಂಡು, ನಾನಾ ರೂಪದಲ್ಲಿ ಯಾಮಾರಿಸಿ ಕಾಸು ಪೀಕುವುದು ಸುಕೇಶನ ವಂಚನೆಯ ವರಸೆ. ಇಂಥಾ ಸುಕೇಶ ಇತ್ತೀಚೆಗೆ ಇನ್ನೂರು ಕೋಟಿ ವಂಚನೆ ಪ್ರಕರಣದಲ್ಲಿ ಇಡಿ ಕಣ್ಣಿಗೆ ಬಿದ್ದಿದ್ದ. ಈ ಪ್ರಕರಣದ ಸಂಬಂಧವಾಗಿ ವಿಸ್ತೃತವಾದ ತನಿಖೆ ನಡೆಸಿರುವ ಇಡಿ ಅಧಿಕಾರಿಗಳು ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಅದರಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫನಾರ್ಂಡೀಸ್ ಹೆಸರಿದೆ ಎಂಬ ಬಗ್ಗೆ ದೊಡ್ಡ ಮಟ್ಟದಲ್ಲಿಯೇ ಗುಲ್ಲೆದ್ದಿತ್ತು. ಯಾವಾಗ ಈ ಘನಗಂಭೀರ ಪ್ರಕರಣದಲ್ಲಿ ತನ್ನ ಹೆಸರು ಕೇಳಿ ಬಂದು, ಬಂಡವಾಳ ಬಯಲಾಗೋದು ಖಾತರಿಯಾಯಿತೋ, ಜಾಕ್ವೆಲಿನ್ ಆಜ್ಞಾತವಾಸ ಆರಂಭಿಸಿ ಬಿಟ್ಟಿದ್ದಳು. ಇದರಿಂದ ಬಚಾವಾಗುವ ಸಲುವಾಗಿ ದೇವರು ದಿಂಡಿರಿಗೂ ಮೊರೆಯಿಟ್ಟಿದ್ದಳು. ಅದಾದ ಬಳಿಕ ಒಂದಷ್ಟು ಕಾಲ ಸೋಶಿಯಲ್ ಮೀಡಿಯಾಗಳಿಂದಲೂ ಆಕೆ ಮಾಯವಾಗಿದ್ದಳು. ಇದೀಗ ಹರುಕುಪರುಕು ಬಟ್ಟೆ ತೊಟ್ಟು ಫೋಓ ಶೂಟ್ ಮಾಡಿಸುವ ಮೂಲಕ ಮತ್ತೆ ಪ್ರತ್ಯಕ್ಷಳಾಗಿದ್ದಾಳೆ.

ಸುಕೇಶ್ ಚಂದ್ರಶೇಖರ್ ಇನ್ನೂರು ಕೋಟಿ ವಂಚನೆಯಲ್ಲಿ ತಗುಲಿಕೊಳ್ಳುತ್ತಲೇ ಅದರ ಸುತ್ತ ನಾನಾ ವಿಚಾರಗಳು ಹರಿದಾಡಲಾರಂಭಿಸಿದ್ದವು. ಆ ಪ್ರಕರಣದಲ್ಲಿ ಜಾಕ್ವೆಲಿನ್ ಹೆಸರು ಕೇಳಿ ಬರುತ್ತಲೇ ನೆಟ್ಟಿಗರು ಒಂದಷ್ಟು ಫೋಟೋಗಳನ್ನು ಬಗೆಬಗೆದು ತೋರಿಸಲಾರಂಭಿಸಿದ್ದರು. ಆ ಮೂಲಕ ಜಾಕ್ವೆಲಿನ್ ಮತ್ತು ವಂಚಕ ಸುಕೇಶನ ಆತ್ಮೀಯ ಸಾಹಚರ್ಯ ಬಟಾಬಯಲಾಗಿತ್ತು. ಈ ವಂಚಕ ಜಾಕ್ವೆಲಿನ್‌ಳನ್ನು ತಬ್ಬಿಕೊಂಡು ಮುದ್ದಾಡುವಷ್ಟು ಸಲುಗೆ ಹೊಂದಿದ್ದಾನೆಂದರೆ, ಆಕೆಯತ್ತ ಇಡಿ ಅಧಿಕಾರಿಗಳ ಕಣ್ಣು ಬೀಳದಿರಲು ಸಾಧ್ಯವೇ? ಹಾಗಾಗಿಯೇ ಇಡಿ ಅಧಿಕಾರಿಗಳು ಜಾಕ್ವೆಲಿನ್‌ಳನ್ನು ಪ್ರಶ್ನಿಸಿದ್ದರು. ಆರಂಭದಲ್ಲಿ ಸುಕೇಶನಿಗೂ ತನಗೂ ಸಂಬಂಧವೇ ಇಲ್ಲ ಅಂತ ವಾದಿಸಿದ್ದ ಜಾಕ್ವೆಲಿನ್, ಬಳಿಕ ಬೇರೆ ದಾರಿ ಕಾಣದೆ ಸುಕೇಶನೊಂದಿಗೆ ಡೇಟಿಂಗ್ ನಡೆಸುತ್ತಿರುವ ಸತ್ಯವನ್ನು ಕಾರಿಕೊಂಡಿದ್ದಳು.

ಈ ಸುಕೇಶ್ ಪ್ರಖ್ಯಾತ ಪೋರ್ಟಿಸ್ ಹೆಲ್ತ್ ಕೇರ್ ಸಂಸ್ಥೆಯ ಮಾಜೀ ಮುಖ್ಯಸ್ಥರಾದ ಶಿವಿಂದರ್ ಮೋಹನ್ ಸಿಂಗ್ ಪತ್ನಿ ಅದಿತಿ ಸಿಂಗ್ ಮತ್ತಿತರರಿಗೆ ಭಾರೀ ಮೊತ್ತದ ವಂಚನೆ ಮಾಡಿದ್ದ. ಆ ಹೊತ್ತಲ್ಲಿಯೇ ಜಾಕ್ವೆಲಿನ್‌ಳೋಮದಿಗೆ ಡೇಟಿಂಗ್ ಆರಂಭಿಸಿದ್ದ ಸುಕೇಶ್, ಒಂದಷ್ಟು ಉಡುಗೊರೆಗಳನ್ನು ಕೊಟ್ಟಿದ್ದ ಬಗ್ಗೆ ಇಡಿ ಅಧಿಕಾರಿಗಳು ಮಾಹಿತಿ ಕಲೆಹಾಕಿದ್ದರು. ಹಾಗೊಂದು ವೇಳೆ ಕಡಿಮೆ ಮೊತ್ತದ ಉಡುಗೊರೆ ಕೊಟ್ಟಿದ್ದರೆ ಜಾಕ್ವೆಲಿನ್ ಹೇಗೋ ಪಾರಾಗುತ್ತಿದ್ದಳೇನೋ… ಆದರೆ ಆಕೆ ಸುಕೇಶನಿಂದ ಪಡೆದುಕೊಂಡಿದ್ದ ಉಡುಗೊರೆಗಳ ಒಟ್ಟು ಮೊತ್ತ ಐದು ಕೋಟಿ ದಾಟುತ್ತದೆ!

ಹೀಗೆ ಜಾಕ್ವೆಲಿನ್ ಫರ್ನಾಂಡಿಸ್ ಜೊತೆ ಸಖ್ಯ ಹೊಂದಿರುವ ಸುಕೇಶ್ ಚಂದ್ರಶೇಖರ್ ಸಾಮಾನ್ಯ ಆಸಾಮಿಯೇನಲ್ಲ. ಈಗಿನ್ನೂ ಇಪ್ಪತ್ತೇಳು ವರ್ಷ ವಯಸ್ಸಿನ ಸುಕೇಶ್ ಮುಲತಃ ಬೆಂಗಳೂರಿನವನೇ. ಆರಂಭ ಕಾಲದಿಂದಲೂ ಹಡಬೇ ಕಾಸಿನ ಬೆಂಬಿದ್ದಿದ್ದ ಈತ, ತೀರಾ ಚಿಕ್ಕ ವಯಸ್ಸಿನಲ್ಲಿಯೇ ಅಡ್ಡದಾರಿ ಹಿಡಿದಿದ್ದ. ತನ್ನ ಹದಿನೇಳನೇ ವರ್ಷದಲ್ಲಿಯೇ ನಕಲಿ ಸಹಿ ವಿಚಾರದಲ್ಲಿ ಲಫಡಾ ಮಾಡಿಕೊಂಡು ಜೈಲುಪಾಲಾಗಿದ್ದ. ಆತ ಎಂಥಾ ಚಾಲಾಕಿಯೆಂದರೆ, ಜೈಲಿಂದ ವಾಪಾಸಾದ ಬಳಿಕ, ಸೆಲೆಬ್ರಿಟಿಗಳು ಮತ್ತು ರಾಜಕಾರಣಿಗಳ ನಂಟು ಬೆಳೆಸಿಕೊಂಡು ನಾನಾ ಪ್ರಕಾರಗಳಲ್ಲಿ ಕೋಟಿ ಕೋಟಿ ಮುಂಡಾಯಿಸಿದ್ದ. ನಂತರ ಕದ್ದ ಕಾಸಲ್ಲಿ ದೇಶ ಸುತ್ತುತ್ತಾ ತಲೆಮರೆಸಿಕೊಳ್ಳುತ್ತಿದ್ದ ಸುಕೇಶ್ ಇದೀಗ ಸರಿಯಾಗಿಯೇ ಸಿಕ್ಕಿಕೊಂಡಿದ್ದಾನೆ. ಆತ ಜಾಕ್ವೆಲಿನ್ ಫನಾರ್ಂಡೀಸ್ ಜೊತೆ ಡೇಟಿಂಗಿನಲ್ಲಿದ್ದಾನೆಂದರೆ, ಅವನ ಪ್ರಭಾವ ಎಂಥಾದ್ದಿರಬಹುದೆಂದು ಯಾರಾದರೂ ಊಹಿಸಬಹುದು. ಈತನ ಕಾಸಿಗೆ ಮರುಳಾಗಿ ಹಿಂದೆ ಹೋಗಿದ್ದ ಜಾಕ್ವೆಲಿನ್‌ಗೀಗ ಜೈಲೂಟವೇ ಪಕ್ಕಾ ಆದಂತಾಗಿದೆ.

ಅಷ್ಟಕ್ಕೂ ಹೈಫೈ ಬದುಕಿನ ಮತ್ತೇರಿಸಿಕೊಂಡಿರೋ ನಟಿಯರು ಅಡ್ಡದಾರಿ ಹಿಡಿಯೋದು ಹೊಸತೇನಲ್ಲ. ತಮ್ಮ ಖಯಾಲಿಗಳತ್ತ ವಾಲಿಕೊಳ್ಳುವ ಇಂಥವರು ದಿನವೊಂದಕ್ಕೆ ಲಕ್ಷದ ವರೆಗೂ ಖರ್ಚು ಮಾಡುತ್ತಾರೆ. ಕೆಲ ಸಂದರ್ಭಗಳಲ್ಲಿ ಸಿನಿಮಾ ಅವಕಾಶಗಳೂ ಗೋತಾ ಹೊಡೆದು ಬಿಟ್ಟರೆ, ಕಾಸಿಗೆ ಮತ್ಯಾವ ದಿಕ್ಕೂ ಇರುವುದಿಲ್ಲ. ಹಾಗೆ ಕಂಗೆಟ್ಟು ನಿಂತವರನ್ನು ಬುಟ್ಟಿಗೆ ಹಾಕಿಕೊಳ್ಳಲು ಸುಕೇಶನಂಥಾ ವಂಚಕರು, ಕಾಮುಕರು ಕಾದು ಕೂತಿರುತ್ತಾರೆ. ಕೋಟಿಗಟ್ಟಲೆ ಹಡಬೇ ಕಾಸನ್ನು ನಟಿಯರಿಗೆ ಸುರಿದು ಮಜಾ ಉಡಾಯಿಸೋದು ಸುಕೇಶನಂಥವರ ವಿಕೃತಿ. ಇಂಥವರ ಜಾಲಕ್ಕೆ ಜಾಕ್ವೆಲಿನ್‌ಳಂಥಾ ನಟೀಮಣಿಯರು ಸಲೀಸಾಗಿ ಸಿಲುಕಿಕೊಳ್ಳುತ್ತಾರೆ. ಕೋಟಿ ಕೋಟಿ ಬಾಚಿಕೊಳ್ಳುತ್ತಾರೆ. ವಂಚಕರೊಂದಿಗೆ ಸಿಕ್ಕಿಬೀಳುವ ಭಯ ಶುರುವಾದಾಗ ತಾವೇ ಸಂತ್ರಸ್ತೆಯರಂತೆ ನಟಿಸಲಾರಂಭಿಸುತ್ತಾರೆ. ಅದೆಲ್ಲವನ್ನೂ ಯಶಸ್ವಿಯಾಗಿ ಮುಗಿಸಿಕೊಂಡಿರುವ ಜಾಕ್ವೆಲಿನ್, ಇದೀಗ ಮತ್ತೆ ಮಳ್ಳಾಟ ಶುರುವಿಟ್ಟುಕೊಂಡಿದ್ದಾಳೆ. ಆ ಕೋಟಿ ಕೇಸಿನ ಕಥೆ ಏನಾಯ್ತೆಂಬ ಪ್ರಶ್ನೆಯೊಂದು ಹಾಗೆಯೇ ಉಳಿದುಕೊಂಡಿದೆ.

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!