ನ್ನ ಮಾಂತ್ರಿಕ ಸಂಗೀತ ಹಾಗೂ ಹಾಡುಗಳ ಮೂಲಕ ತಲೆಮಾರುಗಳಾಚೆಗೂ ತಣ್ಣಗೆ ಪ್ರವಹಿಸುತ್ತಾ ಬಂದಿರುವವರು (ilayaraja) ಇಳಯರಾಜ. ಸಂಗೀತವನ್ನು ಬಿಟ್ಟು ಬೇರೇನನ್ನೂ ಧ್ಯಾನಿಸದ ಅಚಲ ಮನಃಸ್ಥಿತಿ ಮತ್ತು ಅದೆಂಥಾದ್ದೇ ಸವಾಲುಗಳು ಎದುರಾದರೂ ಸ್ವರಗಳ ಸಾಂಗತ್ಯದಿಂದಲೇ ಎದುರುಗೊಂಡು, ಜೈಸಿಕೊಳ್ಳುವ ಛಾತಿಗೆ ಸಜೀವ ಉದಾಹರಣೆಯಂತಿರುವವರು ಇಳಯರಾಜ. ಈವತ್ತಿಗೆ ಸಂಗೀತ ಸೇರಿದಂತೆ ಬಹುತೇಕ ಎಲ್ಲ ಕ್ಷೇತ್ರಗಳಲ್ಲಿಯೂ ಎತ್ತುವಳಿ ರಾಜರೇ ಪಿತಗುಡುತ್ತಿದ್ದಾರೆ. ಎರಡು ಬೀಜಗಳ ಹೊರತಾಗಿ ಸ್ವಂತದೆನ್ನುವುದೇನೂ ಇಲ್ಲದ, ನಡುಬಗ್ಗಿಸಿ ಕೂತು ಕೆಲಸ ಮಾಡಲೊಲ್ಲದ, ಯಾರದ್ದೋ ಶ್ರಮ, ಪ್ರತಿಭೆಗೆ ಅಪ್ಪ ಅನ್ನಿಸಿಕೊಳ್ಳೋ ಖಯಾಲಿಯ ನಕಲಿವೀರ ಕುನ್ನಿಗಳೇ ಎಲ್ಲೆಡೆ ಊಳಿಡುತ್ತಿರುವ ಕಾಲಮಾನವಿದು. ಇಂಥಾ ಕಾಲಘಟ್ಟದಲ್ಲೆ ಸ್ವಂತಿಕೆಯನ್ನು ಕಸುವಾಗಿಸಿಕೊಂಡು ಅಕ್ಷರಶಃ ಸಂಗೀತ ಕ್ಷೇತ್ರದ ಸಂತನಂತೆ ಕಾಣಿಸುವವರು ಇಳಯರಾಜ!

ಹಾಗೆ ನೋಡಿದರೆ, ಇಳಯರಾಜ ಅವರಂಥಾ ಮೇರು ಸಂಗೀತ ನಿರ್ದೇಶಕನ ಜೀವನಗಾಥೆ ಅದ್ಯಾವತ್ತೋ ದೃಷ್ಯರೂಪ ಧರಿಸಬೇಕಿತ್ತು. ತಮಿಳುನಾಡಿನಲ್ಲಿ ಹುಟ್ಟಿ ಬೆಳೆದರೂ, ದೇಶಾದ್ಯಂತ ಜನಜನಿತರಾಗಿರುವ ಇಳಯರಾಜಾರ ಖ್ಯಾತಿ ಮತ್ತು ಅವರ ಸಾಧನೆಯ ಮಜಲುಗಳನ್ನು ಏಕಾಏಕಿ ಪದಗಳಲ್ಲಿ ಹಿಡಿದಿಡುವುದು ತ್ರಾಸದಾಯಕ ಸಂಗತಿ. ಹಾಗಿರುವಾಗ, ಅದೆಲ್ಲವನ್ನೂ ಒಂದು ಫ್ರೇಮಿಗೆ ಒಗ್ಗಿಸಿ, ನಿಗಧಿತ ಸಮಯದಲ್ಲಿ ದೃಷ್ಯೀಕರಿಸೋದು ಕೂಡಾ ಸವಾಲಿನ ವಿಚಾರವೇ. ಇದೆಲ್ಲದರಾಚೆಗೆ, ಸಂಗೀತ ಕ್ಷೇತ್ರದ ಈ ಧ್ರುವತಾರೆಯ ಬಯೋಪಿಕ್ ಗಾಗಿ ಅದೆಷ್ಟೋ ಮಂದಿ ಕಾದು ಕೂತಿದ್ದರು. ಅಂಥಾ ಆಕಾಂಕ್ಷೆಗಳೆಲ್ಲವೂ ಸಾಕಾರಗೊಳ್ಳುವ ಕ್ಷಣಗಳೀಗ ಹತ್ತಿರಾಗಿವೆ…

ಈ ಹಿಂದೆ ಕ್ಯಾಪ್ಟನ್ ಮಿಲ್ಲರ್ ಸಿನಿಮಾ ನಿರ್ದೇಶನ ಮಾಡಿದ್ದ ಅರುಣ್ ಮಾದೇಶ್ವರನ್ ಸಾರಥ್ಯದಲ್ಲಿ ಇಳಯರಾಜಾ ಬಯೋಪಿಕ್ ಮೂಡಿ ಬರಲಿದೆ. ಧನುಷ್ ಇಲ್ಲಿ ಇಳಯರಾಜಾ ಪಾತ್ರವನ್ನು ಆವಾಹಿಸಿಕೊಳ್ಳಲಿದ್ದಾರೆ. ಈ ವಿಚಾರ ಈಗಾಗಲೇ ಜಾಹೀರಾಗಿದೆ. ಇದರಲ್ಲಿ ಕಮಲ್ ಹಾಸನ್, ರಜನೀಕಾಂತ್ ಸೇರಿದಂತೆ ಘಟಾನುಘಟಿ ನಟನಟಿಯರು ಭಾಗಿಯಾಗಲಿದ್ದಾರೆಂಬ ವಿಚಾರವೂ ಇತ್ತೀಚೆಗೆ ಹೊರಬಿದ್ದಿದೆ. ಹೊಸಾ ವಿಚಾರವೆಂದರೆ, ಕಮಲ್ ಹಾಸನ್ ಅವರು ಈ ಚಿತ್ರದ ಸ್ಕ್ರೀನ್ ಪ್ಲೇ ಸಿದ್ಧಪಡಿಸಲಿದ್ದಾರೆ. ಅಲ್ಲಿಗೆ, ಇಳಯರಾಜಾ ಬಯೋಪಿಕ್ ಹೊಸಾ ಬಗೆಯಲ್ಲಿ ಮೂಡಿಬರಲಿರೋದು ಖಾತರಿಯಾದಂತಾಗಿದೆ!

ತಮಿಳು, ಕನ್ನಡ, ಹಿಂದಿ, ತೆಲುಗು ಮತ್ತು ಮಲೆಯಾಳಂ ಭಾಷೆಗಳಲ್ಲಿ ತಯಾರಾಗಲಿರುವ ಈ ಚಿತ್ರಕ್ಕಾಗಿ ಇದೀಗ ಭರದಿಂದ ತಯಾರಿಗಳು ನಡೆಯುತ್ತಿವೆ. ಧನುಷ್ ಪಾಲಿಗಂತೂ ಇದೊಂದು ಥ್ರಿಲ್ಲಿಂಗ್ ಪ್ರಾಜೆಕ್ಟ್. ಯಾಕೆಂದರೆ, ಆತ ಇಳಯರಾಜಾ ಮತ್ತು ರಜನೀಕಾಂತ್ ಜೀವನಗಾಥೆಗಳಲ್ಲಿ ನಟಿಸಬೇಕೆಂಬ ಬಹುಕಾಲದ ಬಯಕೆ ಹೊಂದಿದ್ದರಂತೆ. ಹಾಗೆ ಬಯಸಿದ ಪಾತ್ರವೇ ಸಿಕ್ಕಿದ ಖುಷಿಯಲ್ಲಿರುವ ಧನುಷ್, ಇದೀಗ ಇಳಯರಾಜಾ ಪಾತ್ರವಾಗಿಮ ಪರಕಾಯ ಪ್ರವೇಶ ಮಾಡಲು ತಯಾರಿ ನಡೆಸುತ್ತಿದ್ದಾರೆ. ಕಮಲ್ ಹಾಸನ್ ಕೂಡಾ ಸ್ಕ್ರೀನ್ ಪ್ಲೇ ರಚಿಸುವ ಕಾರ್ಯಕ್ಕೆ ಚಾಲನೆ ಕೊಟ್ಟಿದ್ದಾರೆ. ಇಷ್ಟರಲ್ಲಿಯೇ ಈ ಬಯೋಪಿಕ್ ಬಗೆಗಿನ ಮತ್ತೊಂದಷ್ಟು ಇಂಟರೆಸ್ಟಿಂಗ್ ಸುದ್ದಿಗಳು ಪ್ರೇಕ್ಷಕರನ್ನು ಚಕಿತಗೊಳಿಸಲಿವೆ.

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!