ಹೆಚ್.ಎಸ್ ಶ್ರೀನಿವಾಸ್ ಕುಮಾರ್ (h.s shrinivas kumar) ನಿರ್ದೇಶನದಲ್ಲಿ ಮೂಡಿ ಬಂದಿರುವ (guns and roses movie) `ಗನ್ಸ್ ಅಂಡ್ ರೋಸಸ್’ ಚಿತ್ರ ಜನವರಿ 3ರಂದು ಬಿಡುಗಡೆಗೊಳ್ಳಲಿದೆ. ಕನ್ನಡವೂ ಸೇರಿದಂತೆ ಐದು ಭಾಷೆಗಳಲ್ಲಿ ಈ ಸಿನಿಮಾ ತೆರೆಗಾಣಲಿದೆ. ನವಪ್ರತಿಭೆ (arjun) ಅರ್ಜುನ್ ಇದರೊಂದಿಗೆ ನಾಯಕನಾಗಿ ಎಂಟ್ರಿ ಕೊಡುತ್ತಿದ್ದಾರೆ. ಸದರಿ ಸಿನಿಮಾದಲ್ಲಿ ನುರಿತ ಹಿರಿಯ ಕಲಾವಿದರೂ ಇದ್ದಾರೆ. ನಾನಾ ವಿಭಾಗಗಳಲ್ಲಿ ಹೊಸಬರೂ ಕೂಡಾ ಅವಕಾಶ ಪಡೆದುಕೊಂಡಿದ್ದಾರೆ. ನಿರ್ಮಾಪಕ (producer h.r nataraj) ಹೆಚ್.ಆರ್ ನಟರಾಜ್ ಬಲು ಆಸ್ಥೆಯಿಂದ ಹೊಸಬರನ್ನು ಬೆಳೆಸುವ ಕ್ರಮಕ್ಕೆ ಶ್ರೀಕಾರ ಹಾಕಿದ್ದಾರೆ. ಹಾಗೆ ಗನ್ಸ್ ಅಂಡ ರೋಸಸ್ ಮೂಲಕ ಬೆಳಕು ಕಾಣುತ್ತಿರುವ ಪ್ರತಿಭಾನ್ವಿತರ ಸಾಲಿನಲ್ಲಿ (jahnavi vishvanath) ಜಾಹ್ನವಿ ವಿಶ್ವನಾಥ್ ಸಹ ಸೇರಿಕೊಂಡಿದ್ದಾರೆ.

ಜಾಹ್ನವಿ ರಂಗಭೂಮಿಯ ನಂಟು ಹೊಂದಿರುವ ಕಲಾವಿದೆ. ರಂಗಭೂಮಿಯಲ್ಲಿ ನಟಿಯಾಗಿ ತಾಲೀಮು ನಡೆಸುತ್ತಲೇ, ಎಲ್ಲ ಪಟ್ಟುಗಳನ್ನು ಕರಗತ ಮಾಡಿಕೊಂಡಿದ್ದ ಜಾಹ್ನವಿ ಗನ್ಸ್ ಅಂಡ್ ರೋಸಸ್ ಮೂಲಕ ಹಿರಿತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಇಲ್ಲಿ ಅವರಿಗೆ ಬಹುಮುಖ್ಯವಾದ, ಚಿತ್ರದುದ್ದಕ್ಕೂ ಕಾಣಿಸಿಕೊಳ್ಳುವ ಪಾತ್ರವೇ ಸಿಕ್ಕಿದೆ. ಅವರಿಲ್ಲಿ ನಾಯಕಿಯ ಗೆಳತಿಯಾಗಿ ನಟಿಸಿದ್ದಾರೆ. ನಾಯಕಿಯ ಗೆಳತಿ ಅಂದಾಕ್ಷಣ ಹಾಗೆ ಬಂದು ಹೀಗೆ ಹೋಗೋ ಪಾತ್ರಗಳು ಕಣ್ಮುಂದೆ ಸುಳಿಯೋದು ಸಹಜ. ಆದರೆ, ಇಲ್ಲಿರೋ ಪಾತ್ರ ಗಟ್ಟಿತನ ಹೊಂದಿರುವಂಥಾದ್ದು. ಸದಾ ನಾಯಕಿಯ ಜೊತೆಗಿರುತ್ತಾ, ಆಯಾ ಘಟ್ಟಗಳಲ್ಲಿ ಅನ್ನಿಸಿದ್ದನ್ನು ಹೇಳಿ, ನಾಯಕಿಗೆ ತಿಳಿ ಹೇಳುವ ಚಹರೆ ಹೊಂದಿರುವ ಪಾತ್ರವಾಗಿ ಜಾಹ್ನವಿ ಕಾಣಿಸಿಕೊಂಡಿದ್ದಾರೆ.

ದಾಬಸ್ ಪೇಟೆ ಬಳಿಯ ಹಳ್ಳಿಯೊಂದರಿಂದ ಬಂದಿರುವ ಜಾಹ್ನವಿ ಪಾಲಿಗೆ ನಟಿಯಾಗಬೇಕೆಂಬುದು ಏಕಮಾತ್ರ ಕನಸಾಗಿತ್ತು. ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಮುಗಿಸಿಕೊಂಡಿದ್ದ ಅವರಿಗೆ ಒಂದೊಳ್ಳೆ ಕೆಲಸ ಹಿಡಿದು ಸೆಟಲ್ ಆಗಿ ಬಿಡುವ ಅವಕಾಶಗಳಿದ್ದವು. ಆದರೆ, ಓದು ಮುಗಿಯುತ್ತಲೇ ಸಿನಿಮಾ ರಂಗಕ್ಕೆ ದುಮುಕುವ ನಿರ್ಧಾರ ಮಾಡಿದ್ದ ಜಾಹ್ನವಿ ಅದಕ್ಕಾಗಿ ಅವಸರ ಮಾಡಲಿಲ್ಲ. ಎಲ್ಲ ರೀತಿಯಿಂದಲೂ ಕಲಿಕೆ ನಡೆಸಿದ ನಂತರವೇ ಅವಕಾಶಕ್ಕಾಗಿ ಅರಸುವ ತೀರ್ಮಾನ ಮಾಡಿ, ರಂಗಭೂಮಿಯನ್ನು ಆರಿಸಿಕೊಂಡಿದ್ದರು. ಅಲ್ಲಿ ವರ್ಷಗಟ್ಟಲೆ ನಾನಾ ಪಾತ್ರಗಳ ಮೂಲಕ ಪಳಗಿಕೊಂಡಿದ್ದರು. ಹಾಗೆ ನಟಿಯಾಗಿ ಹದಗೊಂಡ ನಂತರವಷ್ಟೇ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ತಯಾರಾಗಿದ್ದರು.

ಇದೇ ಹೊತ್ತಿನಲ್ಲಿ ಗನ್ಸ್ ಅಂಡ್ ರೋಸಸ್ ಚಿತ್ರದ ಆಡಿಷನ್ ನಡೆಯುತ್ತಿರುವ ವಿಚಾರ ಜಾಹೀರಾಗಿತ್ತು. ಕೂಡಲೆ ಆ ಆಡಿಷನ್ನಿನಲ್ಲಿ ಪಾಲ್ಗೊಂಡಿದ್ದ ಜಾಹ್ನವಿ ಹಲವು ಪರೀಕ್ಷೆಗಳನ್ನು ದಾಟಿಕೊಂಡಿದ್ದರು. ಆ ಮೂಲಕ ನಿರ್ದೇಶ ಹೆಚ್.ಎಸ್ ಶ್ರೀನಿವಾಸ ಕುಮಾರ್ ನಾಯಕಿಯ ಗೆಳತಿಯ ಪಾತ್ರ ಕೊಟ್ಟಿದ್ದರು. ಇದೀಗ ಈ ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಅದರ ನಡುವಲ್ಲಿಯೇ ಮತ್ತೊಂದು ಚಿತ್ರದಲ್ಲಿಯೂ ಅವರು ನಟಿಸಿದ್ದಾರೆ. ಗನ್ಸ್ ಅಂಡ್ ರೋಸಸ್ ಮೂಲಕ ತನಗೆ ಭರ್ಜರಿ ಓಪನಿಂಗ್ ಸಿಗುವ ನಿರೀಕ್ಷೆ ಜಾಹ್ನವಿಗಿದೆ.

ದ್ರೋಣ ಕ್ರಿಯೇಷನ್ಸ್ ಬ್ಯಾನರಿನಡಿಯಲ್ಲಿ ಹೆಚ್.ಆರ್ ನಟರಾಜ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸಿನಿಮಾ ಕಥೆಗಾರ ಅಜಯ್ ಕುಮಾರ್ ಅವರ ಪುತ್ರ ಅರ್ಜುನ್ ಈ ಮೂಲಕ ನಾಯಕ ನಟನಾಗಿ ಆಗಮಿಸುತ್ತಿದ್ದಾರೆ. ಈಗಾಗಲೇ ಕನ್ನಡ ಮತ್ತು ತೆಲುಗು ಚಿತ್ರಗಳಲ್ಲಿ ನಟಿಸಿರುವ ಯಶ್ವಿಕಾ ನಿಷ್ಕಲಾ ಅರ್ಜುನ್ ಗೆ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ಶಶಿ ಕುಮಾರ್ ಸಂಗೀತ ನಿರ್ದೇಶನ, ಜನಾರ್ದನ ಬಾಬು ಛಾಯಾಗ್ರಹಣವಿರುವ ಈ ಚಿತ್ರದಲ್ಲಿ ಕಿಶೋರ್, ಶೋಭರಾಜ್, ಅವಿನಾಶ್, ಸುಚೇಂದ್ರ ಪ್ರಸಾದ್, ನೀನಾಸಂ ಅಶ್ವಥ್, ಜೀವನ್ ರಿಚ್ಚಿ, ಅರುಣಾ ಬಾಲರಾಜ್ ಮುಂತಾದವರ ತಾರಾಗಣವಿದೆ. ಥ್ರ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ಎಂ. ಸಂಜೀವ್ ರೆಡ್ಡಿ ಸಂಕಲನವಿರುವ ಗನ್ಸ್ ಅಂಡ್ ರೋಸಸ್ ಜನವರಿ ೩ರಂದು ತೆರೆಗಾಣಲಿದೆ.

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!