ದೇ ತಿಂಗಳ ಹದಿನೆಂಟರಂದು ಮಧ್ಯ ರಾತ್ರಿಯಿಂದಲೇ ಘೋಸ್ಟ್ (ghost movie) ಚಿತ್ರದ ಅಬ್ಬರ ಶುರುವಾಗಲಿದೆ. ಸಾಮಾನ್ಯವಾಗಿ, ಅದೆಂಥಾ ಕನ್ನಡ ಚಿತ್ರವಾದರೂ ಭಾರೀ ಪೈಪೋಟಿಯ ಒಡ್ಡೋಲಗದಲ್ಲಿ ತೆರೆಗಾಣಲು ಹಿಂದೇಟು ಹಾಕೋದು ಸಹಜ. ಅದರಲ್ಲಿಯೂ ದಸರಾದಂಥಾ ಸಂದರ್ಭದಲ್ಲಿ ಪರಭಾಷಾ ಚಿತ್ರಗಳ ಹಾವಳಿಗೆ ಎದೆ ಕೊಡಲು ನಿಜಕ್ಕೂ ಗುಂಡಿಗೆ ಇರಬೇಕಾಗುತ್ತೆ. ಭಾರೀ ಹೈಪು ಸೃಷ್ಟಿ ಮಾಡಿದ ಪರಭಾಷಾ ಚಿತ್ರವೊಂದು ತೆರೆಗಾಣುತ್ತದೆಯೆಂದರೆ, ನಮ್ಮಲ್ಲಿ ಅಘೋಶಿತ ಕಫ್ರ್ಯೂ ಘೋಷಣೆಯಾದಂತಾಗುತ್ತದೆ. ಆದರೆ, (talapaty vijay) ದಳಪತಿ ವಿಜಯ್ ನಟಿಸಿರೋ ಲಿಯೋ (leo movie) ಬಿಡುಗಡೆಗೊಳ್ಳುತ್ತಿದ್ದರೂ ಕೂಡಾ ಕನ್ನಡದ ಘೋಸ್ಟ್ (ghost movie) ಅದುರೋದಿರಲಿ, ಒಂದಿನಿತೂ ಮಿಸುಕಾಡುತ್ತಿಲ್ಲ!

ಅದು ಕನ್ನಡ ಚಿತ್ರರಂಗ ಇತ್ತೀಚಿನ ದಿನಗಳಲ್ಲಿ ಪಡೆದುಕೊಂಡಿರುವ ನಿಜವಾದ ಖದರ್ ಅನ್ನೋದರಲ್ಲಿ ಎರಡು ಮಾತಿಲ್ಲ. ಈಗಾಗಲೇ ತಾನೋರ್ವ ಕ್ರಿಯೇಟಿವ್ ನಿರ್ದೇಶಕ, ನಟ ಅನ್ನೋದನ್ನು ಸಾಬೀತುಪಡಿಸಿರುವವರು ಶ್ರೀನಿ. ಇದೆಲ್ಲದರಾಚೆ ಶ್ರೀನಿ ಶಿವಣ್ಣನ ಸಿನಿಮಾ ನಿರ್ದೇಶನ ಮಾಡುತ್ತಾರೆಂದಾಕ್ಷಣ ಹೇಳಿಕೊಳ್ಳುವಂಥಾ ನಿರೀಕ್ಷೆಗಳಿರಲಿಲ್ಲ. ಆದರೆ, ಆ ನಂತರದಲ್ಲಿ ಘೋಸ್ಟ್ ಸಾಗಿ ಬಂದ ದಾರಿಯೇ ಆ ಸಿನಿಮಾದ ಬಗ್ಗೆ ಪ್ಯಾನಿಂಡಿಯಾ ಮಟ್ಟದಲ್ಲಿ ಕ್ರೇಜ್ ಹಬ್ಬಿಕೊಳ್ಳುವಂತೆ ಮಾಡಿ ಬಿಟ್ಟಿದೆ. ಹಾಗೆ ನೋಡಿದರೆ, ಅಷ್ಟ ದಿಕ್ಕುಗಳಲ್ಲಿಯೂ ಘೋಸ್ಟ್ ಪವಾದ ವಾತಾವರಣ ಸ್ಷ್ಟವಾಗಿಯೇ ಗೋಚರಿಸುತ್ತಿದೆ.

ದಳತಿ ವಿಜಯ್ ನಟಿಸಿರುವ ಲಿಯೋ ಚಿತ್ರ ಘೋಸ್ಟ್ ಬೆನ್ನಲ್ಲಿಯೇ ಇಡುಗಡೆಗೊಳ್ಳತ್ತಿದೆ. ಅದರ ಸಾರಥಿ ಲೋಕೇಶ್ ಕನಗರಾಜನ್. ಅತ್ಯಂತ ಚಿಕ್ಕ ವಯಸ್ಸಿನಲ್ಲಿ ದೊಡ್ಡ ಮಟ್ಟದ ಗೆಲುವಿನ ರೂವಾರಿಯಾಗಿರುವವರು ಲೋಕೇಶ್. ಈತನ ಮೇಲೆ ಹಣ ಹೂಡಿದರೆ, ಹತ್ತು ಪಟ್ಟು ವಾಪಾಸು ಎತ್ತಬಹುದೆಂಬ ಗಾಢ ನಂಬಿಕೆ ತಮಿಳು ಚಿತ್ರರಂಗದಲ್ಲಿದೆ. ಅಂಥಾದ್ದೊಂದು ಭರವಸೆ ಹುಟ್ಟು ಹಾಕಿರುವಾತ ಲೋಕೇಶ್ ಕನಗರಾಜನ್. ಆದರೆ, ವಿಜಯ್ ಅಭಿನಯಿಸಿರುವ ಲಿಯೋ ವಿಚಾರದಲ್ಲಿ ಅದೇಕೋ ತಮಿಳು ನಾಡಿನಲ್ಲಿಯೇ ಹೇಳಿಕೊಳ್ಳುವಂಥಾ ಭರವಸೆ ಕಾಣಿಸುತ್ತಿಲ್ಲ. ನಿಜ, ವಿಜಯ್ ಅಭಿಮಾನಿಗು ಕೆನೆದು ಕುಣಿಯುತತಾ ಒಂದಷ್ಟು ಹೈಪ್ ಕ್ರಿಯೇಟ್ ಮಾಡುತ್ತಿದ್ದಾರೆ. ಆದರೆ, ಆಂತರಿಕ ವಾತಾವರಣ ಅದಕ್ಕೆ ಪೂರಕವಾಗಿಲ್ಲ.

ಇನ್ನು ತೆಲುಗಿನಲ್ಲಿ ಬಾಲಯ್ಯನದ್ದೊಂದು ಸಿನಿಮಾ ಲಿಯೋ ಜೊತೆಗೇ ತೆರೆಗಾಣುತ್ತಿದೆ. ಆದರೂ ತೆಲುಗುನಾಡಲ್ಲಿಯೂ ಕೂಡಾ ಘೋಸ್ಟ್ ಅಬ್ಬರಕ್ಕೆ ಬ್ರೇಕ್ ಬೀಳಲಿಕ್ಕಿಲ್ಲ. ಕರ್ನಾಟಕದಲ್ಲಿ ಬಿಡಿ; ಘೋಸ್ಟ್ ವೇಗಕ್ಕೆ ಎದುರಾಗೋ ಯಾವ ಶಕ್ತಿಯೂ ಇಲ್ಲ. ತಮಿಳುನಾಡಿನ ತುಂಬೆಲ್ಲ ಜೈಲರ್ ಮೂಲಕ ಶಿವಣ್ಣನ ಕ್ರೇಜ್ ಹಬ್ಬಿಕೊಂಡಿದೆ. ಒಂದು ವೇಳೆ ಲಿಯೋ ಏನದರೂ ನಿರಾಸೆ ಮೂಡಿಸಿದರೆ, ಘೋಸ್ಟ್ ತಂತಾನೇ ಆ ಸ್ಥಾನವನ್ನು ಆವರಿಸಿಕೊಳ್ಳಲಿದೆ. ಹಾಗೇನಾದರೂ, ಲಿಯೋ ಒಂದಷ್ಟು ಚೆಂದಗಿದ್ದರೂ ಘೋಸ್ಟ್ ಗೆ ಹೇಳಿಕೊಳ್ಳುವಂಥಾ ಹಿನ್ನಡೆಯಾಗಲಾರದು. ಇದೆಲ್ಲದರಿಂದಾಗಿ ಘೋಸ್ಟ್ ಈ ಬಾರಿ ಕರ್ನಾಟಕದಲ್ಲಿ ಮಾತ್ರವಲ್ಲದೆ, ಬೇರೆ ರಾಜ್ಯಗಳ್ಲಿಯೂ ಬಿಗ್ ಬಜೆಟ್ ಚಿತ್ರಗಳಿಗೆ ಗುಮ್ಮೋದು ಖರೇ!

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!