ಮಿಳು ಚಿತ್ರರಂಗದಲ್ಲಿ ಸದ್ಯ ಸ್ಟಾರ್ ನಿರ್ದೇಶಕ ಎಂಬ ಪಟ್ಟವನ್ನು ಕಾಯ್ದಿಟ್ಟುಕೊಂಡಿರುವವರು (director shankar) ಶಂಕರ್. ಇದುವರೆಗೂ ಸಾಕಷ್ಟು ಹಿಟ್ ಸಿನಿಮಾಗಳನ್ನು ಕೊಟ್ಟಿರುವ ಶಂಕರ್ ನಿಜಕ್ಕೂ ದೈತ್ಯ ಪ್ರತಿಭೆ. ಸಿನಿಮಾ ಅಂದ ಮೇಲೆ ಸೋಲು ಗೆಲುವು ಇದ್ದದ್ದೇ. ಆದರೆ, ಸೋಲನ್ನೇ ಮಂಕಾಗಿಸುವಂತೆ ಗೆದ್ದು ತೋರಿಸುವ ಛಾತಿ, ಪ್ರತಿಭೆಗಳಿವೆಯಲ್ಲಾ? ಅವುಗಳನ್ನು ಮೈಗೂಡಿಸಿಕೊಂಡವರು ಮಾತ್ರವೇ ಇಲ್ಲಿ ಗಟ್ಟಿಯಾಗಿ ನೆಲೆ ಕಂಡುಕೊಳ್ಳಲು ಸಾಧ್ಯ. ಆ ಸಾಲಿನಲ್ಲಿ ಶಂಕರ್ ಕೂಡಾ ನಿಸ್ಸಂದೇಹವಾಗಿ ಸೇರಿಕೊಳ್ಳುತ್ತಾರೆ. ಒಂದು ಸಿನಿಮಾವನ್ನ ಕೈಗೆತ್ತಿಕೊಂಡರೆಂದರೆ, ರಾತ್ರಿ ಹಗಲೆಂಬ ವ್ಯತ್ಯಾಸವಿಲ್ಲದೆ ಕೆಲಸ ಮಾಡುವ ಶಂಕರ್ ಹಾರ್ಡ್‍ವರ್ಕರ್ ಆಗಿಯೂ ಹೆಸರುವಾಸಿಯಾಗಿದ್ದಾರೆ. ಇಷ್ಟಿದ್ದರೂ ಕೂಡಾ ಘನಗಂಭೀರವಾದ ಆರೋಪವೊಂದು ಅವರ ಹೆಗಲೇರಿಕೊಂಡಿದೆ!

ಸದ್ಯಕ್ಕೆ ಶಂಕರ್ ಎರಡು ದೊಡ್ಡ ಪ್ರಾಜೆಕ್ಟುಗಳನ್ನು ಏಕಕಾಲದಲ್ಲಿಯೇ ಕೈಗೆತ್ತಿಕೊಂಡಿದ್ದಾರೆ. `ಗೇಮ್ ಚೇಂಜರ್’ (game changer) ಮತ್ತು `ಇಂಡಿಯನ್2’ ಎಂಬೆರಡು ಚಿತ್ರಗಳನ್ನು ಅವರು ನಿರ್ದೇಶನ ಮಾಡುತ್ತಿದ್ದಾರೆ. ಅವೆರಡೂ ಬಿಗ್ ಬಜೆಟ್ಟಿನ ಪ್ಯಾನಿಂಡಿಯಾ ಸಿನಿಮಾಗಳು. ಸಾಮಾನ್ಯವಾಗಿ ಒಂದು ಪ್ಯಾನಿಂಡಿಯಾ ಸಿನಿಮಾವನ್ನು ರೂಪುಗೊಳಿಸೋದೇ ಸಾಹಸ. ಅಂಥಾದ್ದರಲ್ಲಿ ಎರಡೆರಡು ಪ್ಯಾನಿಂಡಿಯಾ ಸಿನಿಮಾಗಳನ್ನು ಕೈಗೆತ್ತಿಕೊಳ್ಳುವ ಮೂಲಕ ಶಂಕರ್ ಅಚ್ಚರಿ ಮೂಡಿಸಿದ್ದಾರೆ. ಇವೆರಡು ಸಿನಿಮಾಗಳ ಭೂಮಿಕೆಯಲ್ಲಿಯೇ ಶಂಕರ್ ಮೇಲೆ ಆರೋಪ ಕೇಳಿ ಬಂದಿದೆ. ವಿಶೇಷವೆಂದರೆ, ಈ ಆರೋಪ ಬಂದಿರೋದು ನಿರ್ಮಾಪಕರುಗಳ ಕಡೆಯಿಂದ!

ಶಂಕರ್ ಹಾರ್ಡ್ ವರ್ಕರ್ ನಿಜ. ಆದರೆ ಬಜೆಟ್ಟಿನ ವಿಚಾರದಲ್ಲಿ ಅವರಿಗೆ ಕಂಟ್ರೋಲಿಲ್ಲ. ನಿಗಧಿತ ಸಮಯಕ್ಕೆ ಚಿತ್ರೀಕರಣ ಮುಗಿಸದೆ, ಮೊದಲ ಆದ ಕಮಿಟ್ ಮೆಂಟಿಗೆ ಬದ್ಧರಾಗಿರದೆ ನಿರ್ಮಾಪಕರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಾರೆಂಬುದು ಆರೋಪದ ಸಾರ. ಹಾಗಂತ ಇದೊಂದು ಸಕಾರಣವಿಲ್ಲದ ಆರೋಪ ಎಂದು ತಳ್ಳಿ ಹಾಕುವಂತಿಲ್ಲ. ಅದಕ್ಕೊಂದಷ್ಟು ಸಾಕ್ಷಿಗಳೂ ಇದ್ದಾವೆ. ಈ ಹಿಂದೆ ಶಂಕರ್ ರಜನೀಕಾಂತ್ ನಟಿಸಿದ್ದ 2.0 ಎಂಬೊಂದು ಸನಿಮಾ ನಿರ್ದೇಶನ ಮಾಡಿದ್ದರಲ್ಲಾ? ಆ ಸಂದರ್ಭದಲ್ಲಿಯೂ ನಿರ್ಮಾಪಕರು ಬಜೆಟ್ ಹೆಚ್ಚಳದಿಂದ ಲುಕ್ಸಾನು ಅನುಭವಿಸಿದ್ದರಂತೆ. ಚಿತ್ರತಂಡದ ವಲಯದಲ್ಲಿಯೇ ಈ ಸಲುವಾಗಿ ಒಂದಷ್ಟು ಹಕ್ಯಾಟಗಳೂ ಕೂಡಾ ನಡೆದಿದ್ದವಂತೆ. ಆದರೆ, ವ್ಯಕ್ತಿಗತವಾಗಿ ಘನತೆ ಉಳಿಸಿಕೊಂಡು ಬಂದಿರುವ ಶಂಕರ್ ಮೇಲಿನ ಅಭಿಮಾನದಿಂದಾಗಿ ಅದೊಂದು ವಿವಾದವಾಗೋದು ಸ್ವಲ್ಪದರಲ್ಲಿಯೇ ತಪ್ಪಿ ಹೋಗಿತ್ತು.

ಇದೀಗ ಕಮಲ್ ನಾಯಕರಾಗಿರುವ ಇಂಡಿಯನ್ 2 ಚಿತ್ರವನ್ನು ಶಂಕರ್ ಕೈಗೆತ್ತಿಕೊಂಡಿದ್ದರು. ಅದು ದೊಡ್ಡ ಮಟ್ಟದಲ್ಲಿ ಸುದ್ದಿಯೂ ಆಗಿತ್ತು. ಆದರೆ, ಕೆಲ ಸಮಯದ ನಂತರ ಅದರ ಚಿತ್ರೀಕರಣ ನಿಂತು ಹೋಗಿದೆ. ಅದಕ್ಕೆ ಕಾರಣವಾಗಿರೋದು ಬಜೆಟ್ಟಿನ ಮ್ಯಾಟರ್ರೇ ಎಂಬಂಥಾ ಸುದ್ದಿಯೊಂದು ಹರಿದಾಡಲಾರಂಭಿಸಿದೆ. ಆರಂಭದಲ್ಲಿ ಶಂಕರ್ ಒಂದು ಬಜೆಟ್ಟಿನ ಚೌಕಟ್ಟು ಹಾಕಿಕೊಂಡರೆ, ಅದನ್ನು ಕಾಪಾಡಿಕೊಳ್ಳುವುದಿಲ್ಲ. ನಿರ್ಮಾಪಕರಿಗಾಗಬಹುದಾದ ನಷ್ಟದ ಬಗ್ಗೆಯೂ ತಲೆ ಕೆಡಿಸಿಕೊಳ್ಳೋದಿಲ್ಲ. ಈ ಕಾರಣದಿಂದಲೇ ಇಂಡಿಯನ್ 2 ನಿರ್ಮಾಪಕರ ಜೊರೆ ಒಂದಷ್ಟು ಕಿರಿಕ್ಕುಗಳೂ ಆಗಿವೆ. ಇದೇ ಹೊತ್ತಿನಲ್ಲಿ ಶಂಕರ್ ರಾಮ್ ಚರಣ್ ನಾಯಕನಾಗಿರೋ ಗೇಮ್ ಚೇಂಜರ್ ಚಿತ್ರಕ್ಕೆ ಸಹಿ ಹಾಕಿದ್ದರು. ಶಂಕರ್ ದುಂದುವೆಚ್ಚ ಕಂಡು ಆ ಚಿತ್ರದ ನಿರ್ಮಾಪಕ ದಿಲ್ ರಾಜು ದುಘ್ಬ್ರಮೆಗೀಡಾಗಿದ್ದಾರಂತೆ!

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!