ಗೊಂದು ದಶಕದ ಹಿಂದೆ ಮೋಹಕ ತಾರೆ ರಮ್ಯಾ ಜೂಲಿ ಅಂತೊಂದು ಸಿನಿಮಾದಲ್ಲಿ ನಟಿದ್ದರಲ್ಲಾ? ಅದರಲ್ಲಿ ನಾಯಕನಾಗಿ ಮಿಂಚಿದ್ದಾತ ಡಿನೋ ಮೋರೆಯಾ. ಆ ಕಾಲಕ್ಕೆ ಮೋಹಕವಾಗಿಯೇ ಕಾಣಿಸುತ್ತಿದ್ದ ಡಿನೋ ಮತ್ತು ರಮ್ಯಾ ಜೋಡಿ ಒಂದಷ್ಟು ಗಮನ ಸೆಳೆದಿತ್ತು. ಆ ಸಿನಿಮಾ ಸಾಧಾರಣ ಗೆಲುವು ಕಂಡಾದ ಬಳಿಕ ಮತ್ತೆಂದೂ ಡಿನೋ ಕನ್ನಡದತ್ತ ಮುಖ ಹಾಕಿರಲಿಲ್ಲ. ಹಾಗಂತ ಆತ ಬೇರೆ ಭಾಷೆಗಳ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದ ಅಂದುಕೊಳ್ಳುವಂತಿಲ್ಲ. ಯಾಕೆಂದರೆ, ಆ ಬಳಿಕ ಡಿನೋ ಹೇಳಿಕೊಳ್ಳುವಂಥಾ ಸಿನಿಮಾಗಳಲ್ಲಿ ನಟಿಸಿರಲಿಲ್ಲ. ಹೀಗೆ ಒಂದಷ್ಟು ಮಿಂಚಿ ಮರೆಯಾದ ಬಳಿಕ ಡಿನೋನಂಥಾ ನಟರು ಮತ್ಯಾವುದೋ ವ್ಯವಹಾರಗಳಲ್ಲಿ ಬ್ಯುಸಿಯಾಗೋದಿದೆ. ಡಿನೋ ಕೂಡಾ ಅಂಥಾದ್ದೇ ಬ್ಯುಸಿನೆಸ್ಸುಗಳಲ್ಲಿ ತೊಡಗಿಸಿಕೊಂಡಿದ್ದ. ಇದೀಗ ಆ ಹಾದಿಯಲ್ಲಿ ಡಿನೋ ಮುಗ್ಗರಿಸಿದ್ದಾನೆ!

ಸಿನಿಮಾ ರಂಗದಲ್ಲಿ ಮಿಂಚಿ, ಅವಕಾಶ ವಂಚಿತರಾದ ನಟರನೇಕರು ನಾನಾ ದಂಧೆಗಳಲ್ಲಿ ತೊಡಗಿಸಿಕೊಂಡ ಉದಾಹರಣೆಗಳಿದ್ದಾವೆ. ಇದೀಗ ತನ್ನ ಪಾಡಿಗೆ ತಾನು ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದ ಡಿನೋನ ಹೆಸರು ಬಹುಕೋಟಿ ಅವ್ಯವಹಾರವೊಂದರಲ್ಲಿ ತಳುಕು ಹಾಕಿಕೊಂಡಿದೆ. ಈ ಸಂಬಂಧವಾಗಿ ಆತ ಪೊಲೀಸ್ ತನಿಖೆಯನ್ನೂ ಕೂಡ ಎದುರಿಸುವಂತಾಗಿದೆ. ಹೀಗೆ ಡಿನೋ ತಗುಲಿಕೊಂಡಿರೋದು ಮಿಥಿ ನದಿಯ ಹೂಳೆತ್ತುವ ಕಾಮಗಾರಿಯಲ್ಲಿ ನಡೆದಿರುವ ಅವ್ಯವಹಾರದಲ್ಲಿ. ಈ ಸಂಬಂಧವಾಗಿ ಮುಂಬೈ ಪೊಲೀಸರು ಡಿನೋನನ್ನು ಬಂಧಿಸಿ ಗಂಟೆಗಟ್ಟಲೆ ನಾನಾ ದಿಕ್ಕುಗಳಲ್ಲಿ ವಿಚಾರಣೆ ನಡೆಸಿದ್ದಾರೆ.

ಮಿಥಿ ನದಿಯ ಹೂಳೆತ್ತುವ ಕಾಮಗಾರಿಯನ್ನು ಮುಂಬೈ ಮಹಾ ನಗರ ಪಾಲಿಕೆ ಆರಂಭಿಸಿತ್ತು. ಇದರ ಟೆಂಡರ್ ಅನ್ನು ಕೇರಳದ ಕೊಚ್ಚಿ ಮೂಲದ ಕಂಪೆನಿಯೊಂದರಿಂದ ಯಂತ್ರೋಪಕರಣಗಳನ್ನು ಖರೀದಿಸಿತ್ತು. ಆ ಸಂಸ್ಥೆಯ ಮುಖ್ಯಸ್ಥನಾಗಿರುವಾತ ಕೇತನ್ ಕದಮ್. ಈ ಬೃಹತ್ ಮೊತ್ತದ ಕಾಮಗಾರಿಯಲ್ಲಿ ಕೇತನ್ ಹೆಚ್ಚು ಬಿಲ್ ಮಾಡುವ ಮೂಲಕ ಕಾಸು ಗುಂಜಿಕೊಂಡಿದ್ದಾನೆಂಬ ಆರೋಪ ಕೇಳಿ ಬಂದಿದೆ. ಅದೇನು ಸಣ್ಣ ಮೊತ್ತದ ಅವ್ಯವಹಾರವಲ್ಲ. ಅದರ ಬಾಬತ್ತು ಭರ್ತಿ ಅರವತೈದು ಕೋಟಿ. ಇಷ್ಟು ಮೊತ್ತದ ಕಾಸನ್ನು ದುರ್ಬಳಕೆ ಮಾಡಿಕೊಂಡ ಆರೋಪ ಕೇತನ್ ಮೇಲಿದೆ.

ಇಂಥಾ ಕೇತನ್ ಕದಮ್ ನ ಸಂಪೂರ್ಣ ಸಂಪರ್ಕಗಳ ಮೇಲೆ ಮುಂಬೈ ಪೊಲೀಸರು ಕಣ್ಣಿಟ್ಟಿದ್ದಾರೆ. ಈ ಹೊತ್ತಿನಲ್ಲಿ ಕೇತನ್ ಅತೀ ಹೆಚ್ಚು ಬಾರಿ ಡಿನೋ ಜೊತೆ ಫೋನ್ ಸಂಭಾಷಣೆ ನಡೆಸಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಅದೇನೇ ಸ್ನೇಹವಿದ್ದರೂ ಅಷ್ಟೊಂದು ಸಲ ಕದಮ್ ಡಿನೋ ಜೊಲತೆ ಏಕೆ ಮಾತಾಡಿದ್ದ? ಮಿಥಿ ನದಿಯ ಹೂಳೆತ್ತುವ ವಿಚಾರದಲ್ಲಿ ಡಿನೋ ಜೊತೆ ಕದಮ್ ಪಾಲುದಾರಿಕೆ ವ್ಯವಹಾರ ನಡೆಸಿದ್ದನಾ? ಆ ಕುರಿತಾದ ಕೊಡು ಕೊಳ್ಳುವಿಕೆಯ ವಿಕಚಾರವಾಗಿ ಸಂಭಾಷಣೆ ನಡೆದಿತ್ತಾ? ಇಂಥಾ ಪ್ರಶ್ನೆಗಳನ್ನಿಟ್ಟುಕೊಂಡು ಪೊಲೀಸರು ಡಿನೋನನ್ನು ವಿಚಾರಣೆಗೊಳಪಡಿಸಿದ್ದಾರೆ. ಒಂದು ವೇಳೆ ಈ ಹಗರಣದಲ್ಲಿ ಭಾಗಿಯಾಗಿದ್ದರೆ ಡಿನೋ ಜೈಲುವಾಸಿಯಾಗೋದು ಖಚಿತ!

About The Author