ರಣ್‌ವೀರ್ ಸಿಂಗ್ ನಾಯಕನಾಗಿ ನಟಿಸಿರುವ ದುರಂಧರ್ ಚಿತ್ರದ ನಾಗಾಲೋಟ ಅನೂಚಾನವಾಗಿ ಮುಂದುವರೆದಿದೆ. ಆರಂಭದಲ್ಲಿ ರಾಜಕೀಯ ಸಂಬಂಧಿತ ವಿಚಾರಗಳಿಗಾಗಿ ಈ ಸಿನಿಮಾ ಒಂದಷ್ಟು ವಿರೋಧಾಭಾಸಗಳನ್ನು ಎದುರಿಸಿತ್ತು. ಆದರೆ, ಬರ ಬರುತ್ತಾ ಹಾಗೊಂದು ಅಸಹನೆ ಹೊಂದಿರುವವರೂ ಕೂಡಾ ದುರಂಧರ್ ಮೂಡಿ ಬಂದಿರುವ ರೀತಿಯನ್ನು ಮನಸಾರೆ ಕೊಂಡಾಡುತ್ತಿದ್ದಾರೆ. ಅಸದು ಸಿನಿಮಾವೊಂದರ ನಿಜವಾದ ಗೆಲುವು. ಸದಾ ರಿಯಲಿಸ್ಟಿಕ್ ಕಥೆಗಳನ್ನೇ ಮುಟ್ಟುವ ನಿರ್ದೇಶಕ ಆದಿತ್ಯ ಧಾರ್ ಈ ಚಿತ್ರದ ಮೂಲಕ ಅಕ್ಷರಶಃ ಮೋಡಿ ಮಾಡಿದ್ದಾರೆ. ಬಾಲಿವುಡ್ಡಿನ ಮಾನ ಉಳಿಸಿರುವ ಧುರಂಧರ್ ಬಾಲಿವುಡ್ಡಿನ ಅತಿ ಹೆಚ್ಚು ಗಳಿಕೆಯ ಚಿತ್ರವಾಗಿ ದಾಖಲೆ ಬರೆದಿದೆ.
ದುರಂಧರ್ ಬಿಡುಗಡೆಯಾಗಿ ತಿಂಗಳು ಕಳೆದಿದೆ. ಈ ಕ್ಷಣಕ್ಕೆಲ್ಲ ಸದರಿ ಸಿನಿಮಾ ಎಂಟುನೂರು ಚಿಲ್ಲರೆ ಕೋಟಿಯಷ್ಟು ನಿವ್ವಳ ಗಳಿಕೆ ಮಾಡುವ ಮೂಲಕ ಅಚ್ಚರಿ ಮೂಡಿಸಿದೆ. ಈ ಮೂಲಕ ಬಾಲಿವುಡ್ಡಿನಲ;ಲಿ ದಾಖಲಾಗಿರುವ ಗಳಿಕೆಯ ಗರಿಮೆಯನ್ನೆಲ್ಲ ಮೀರಿಕೊಂಡು ನಿಂತಿದೆ. ಇತ್ತೀಚಿನ ವರ್ಷಗಳಲ್ಲಿ ಮೂವತ್ತು ದಿನದ ಅವಧಿಯಲ್ಲಿ ಚಾವಾ ಚಿತ್ರ ಆರುನೂರು ಕೋಟಿ ಗಳಿಕೆ ಕಂಡಿತ್ತು. ಆವಾನ್ ಚಿತ್ರ ಆರುನೂರಾ ನಲವತ್ತು ಕೋಟಿಯಷ್ಟು ಸಂಪಾದಿಸಿತ್ತು. ಅಷ್ಟೇ ದಿನಗಳಲ್ಲಿ ದುರಂಧರ್ ಚಿತ್ರ ಗಳಿಸಿಕೊಂಡಿರೋದು ೮೦೬ ಕೋಟಿ. ಈ ದಾಖಲೆಯನ್ನು ಬಾಲಿವುಡ್ಡಿಗೆ ಬಾಲಿವುಡ್ಡೇ ಸಂಭ್ರಮಿಸುತ್ತಿದೆ.
ಇತ್ತೀಚಿನ ದಿನಗಳಲ್ಲಿ ಚವ್ವಾ, ಜವಾನ್ ಥರದ ಸಿನಿಮಾಗಳ ಗಳಿಕೆಗೂ ಕೂಡಾ ಥ್ರಿಲ್ ಆಗದಂಥಾ ಹಂತ್ಕ್ಕೆ ಬಾಲಿವುಡ್ ಕಳಾಹೀನಗೊಂಡಿತ್ತು. ಇದೇ ಹೊತ್ತಿನಲ್ಲಿ ಬಾಲಿವುಡ್ಡಿಗೆ ಲಗ್ಗೆಯಿಟ್ಟಿದ್ದ ಪುಷ್ಪಾ ಸರಣಿಗಳಂತೂ ಬಾಲಿವುಡ್ ಅನ್ನು ಮತ್ತಷ್ಟು ಪಾತಾಳಕ್ಕಿಳಿಸಿ ಬಿಟ್ಟಿತ್ತು. ಬಾಲಿವುಡ್ ನಿರ್ದೇಶಕರಂತೂ ಅಸಹಾಯಕ ಸ್ಥಿತಿ ತಲುಪಿಕೊಂಡಿದ್ದರು. ಖಾನ್‌ಗಳಂಥಾ ಸ್ಟಾರ್ ನಟರೇ ದಕ್ಷಿಣ ಭಾರತೀಯ ಸಿನಿಮಾ ನಿರ್ದೇಶಕರನ್ನು ನೆಚ್ಚಿಕೊಳ್ಳುವ ಮೂಲಕ ಬಾಲಿವುಡ್ ನಿರ್ದೇಶಕರ ಮಾನ ಹರಾಜಾಗಿತ್ತು. ಇಂಥಾ ಹೊತ್ತಿನಲ್ಲಿ ಆದಿತ್ಯ ಧಾರ್ ಬಾಲಿವುಡ್ಡನ್ನು ಮತ್ತೆ ಮಿಂಚುವಂತೆ ಮಾಡಿ ಬಿಟ್ಟಿದ್ದಾರೆ. ದೀಪಿಕಾ ಗಂಡನ ಯಶ ಕಂಡು ವೃತ್ತಿ ವೈಶಮ್ಯದಾಚೆಗೂ ಸ್ಟಾರ್ ನಟರು ಸಂಭ್ರಮಿಸುವಂತಾಗಿದೆ!
keywords: dhurandhar, movie, ranweer sing, bollywood

