ಜನೀಕಾಂತ್ (rajanikanth) ನಟಿಸಿರುವ ಜೈಲರ್ (jailer) ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಕಾವಾಲಯ್ಯ ಹಾಡೂ ಸೇರಿದಂತೆ ಈ ಸಿನಿಮಾ ಬಗ್ಗೆ ಕುತೂಹಲ ಕಾವೇರಿಕೊಳ್ಳುವುದಕ್ಕೆ ನಾನಾ ಕಾರಣಗಳಿದ್ದಾವೆ. ಅಷ್ಟಕ್ಕೂ ಅಡಿಗಡಿಗೆ ಸೋಲೆದುರಾದರೂ, (rajani) ರಜನಿಯದ್ದೊಂದು ಸಿನಿಮಾ ತೆರೆಗಾಣುವಾಗ ಇಂಥಾ ನಿರೀಕ್ಷೆ ಹೈಪುಗಳು ಮಾಮೂಲಿ. ಒಂದಷ್ಟು ವರ್ಷಗಳ ಹಿಂದೆ ಸರಿದು ನೋಡಿದರೆ, ಕಬಾಲಿಯ (kabaali) ಸಂದರ್ಭದಲ್ಲಿಯೂ ಇದನ್ನು ಮೀರಿಸುವಂಥಾ ಹೈಪು ಸೃಷ್ಟಿಯಾಗಿತ್ತು. ಅದೆಲ್ಲದರಾಚೆಗೆ ಜೈಲರ್ ಬಗೆಗೊಂದು ಪಾಸಿಟಿವ್ ಟಾಕ್ ಇರೋದಂತೂ ನಿಜ. ಬೇರೆಲ್ಲರ ಕಥೆ ಹಾಗಿರಲಿ, ರಜನೀಕಾಂತ್ ಮಾಜಿ ಅಳೀಮಯ್ಯ (dhanush)  ಧನುಷ್ ಕೂಡಾ ಜೈಲರ್‍ಗಾಗಿ ಜಾತಕ ಪಕ್ಷಿಯಂತೆ ಕಾದು ಕೂತಿದ್ದಾರೆ.

ಈ ವಿಚಾರ ಕೇಳಿದಾಕ್ಷಣ ಅರೆಕ್ಷಣ ಗೊಂದಲಕ್ಕೀಡಾಗಬಹುದೇನೋ. ಇತ್ತೀಚೆಗಷ್ಟೇ ರಜನಿ ಮಗಳಿಂದ ಧನುಷ್ ದೂರಾಗಿದ್ದರು. ಹೀಗೆ ಸಂಬಂಧವೊಂದು ಕಡಿದು ಹೋದಾಕ್ಷಣ, ಎಲ್ಲವೂ ಮುಕ್ತಾಯಗೊಳ್ಳುತ್ತೆ. ಪ್ರೀತಿ ನಂಬಿಕೆಗಳ ಜಾಗವನ್ನು ದ್ವೇಷ, ಅಸಹನೆ, ತಕರಾರುಗಳು ಆಕ್ರಮಿಸಿಕೊಳ್ಳುತ್ತವೆ. ಆದರೆ, ಧನುಷ್ ವಿಚಾರದಲಿ ಹಾಗಾಗಿಲ್ಲ. ಅವರೇ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿರುವ ಒಂದು ಪೋಸ್ಟ್ ಎಲ್ಲವನ್ನೂ ಸ್ಪಷ್ಟವಾಗಿಸಿದೆ. ಧನುಷ್ ಇದು ಜೈಲರ್ ವಾರ ಎಂಬ ಒಕ್ಕಣೆಯೊಂದಿಗೆ ಆ ಸಿನಿಮಾ ಪೋಸ್ಟರ್ ಶೇರ್ ಮಾಡುವ ಮೂಲಕ ತಾವೀಗಲೂ ರಜನೀಕಾಂತ್ ಅಭಿಮಾನಿ ಎಂಬುದ್ನು ಸಾಬೀತುಗೊಳಿಸಿದ್ದಾರೆ.

ಓರ್ವ ನಟನಾಗಿ ಹಂತ ಹಂತವಾಗಿ ಮೇಲೇರಿ ಬಂದಿರುವ ಧನುಷ್, ಆರಂಭದಿಂದಲೂ ಕೂಡಾ ರಜನೀಕಾಂತ್ ಅವರ ಅಪ್ಪಟ ಅಭಿಮಾನಿ. ಮುಂದೆ ಸಾಕ್ಷಾತ್ತು ರಜನೀಕಾಂತ್ ಮಗಳನ್ನೇ ಧನುಷ್ ಮದುವೆಯಾಗಿದ್ದರು. ಒಂದಷ್ಟು ವರ್ಷಗಳ ಕಾಲ ಸೌಂದರ್ಯ ಜೊತೆಗೆ ಸಂಸಾರ ನಡೆಸಿದ್ದ ಧನುಷ್ ಇತ್ತೀಚೆಗಷ್ಟೇ ವಿಚ್ಛೇದನ ಪಡೆದುಕೊಂಡಿದ್ದರು. ರಜನೀ ಮಾವನಾಗಿದ್ದರೂ ಕೂಡಾ ಧನುಷ್ ಅವರ ಮಗ್ಗುಲಲ್ಲಿ ಸದಾ ಅಭಿಮಾನಿಯಂತೆಯೇ ಮುದುರಿ ನಿಲ್ಲುತ್ತಿದ್ದರು. ಅವರ ಮಗಳೊಂದಿಗಿನ ಸಂಬಂಧ ಕಡಿದು ಹೋದ ಮೇಲೂ ಆತ ಮಾಜೀ ಮಾವನ ಮೇಲೆ ಅದೇ ಪ್ರೀತಿಯನ್ನು ಕಾಪಿಟ್ಟುಕೊಂಡಿದ್ದಾರೆ. ಅದರ ಭಾಗವಾಗಿ ತಮ್ಮದೇ ಶೈಲಿಯಲ್ಲಿ ಜೈಲರ್ ಆಗಮನವನ್ನು ಸಂಭ್ರಮಿಸಿದ್ದಾರೆ!

About The Author