ಚಾಲೆಂಜಿಂಗ್ ಸ್ಟಾರ್ ದರ್ಶನ್ ಪಟಾಲಮ್ಮಿಗೆ ರೇಣುಕಾಸ್ವಾಮಿ ಕೊಲೆ ಕೇಸು ಬೆಂಬಿಡದಂತೆ ಕಾಡಲಾರಂಭಿಸಿದೆ. ತಿಂಗಳುಗಟ್ಟಲೆ ಜೈಲುವಾಸ ಅನುಭವಿಸಿದ್ದ ದರ್ಶನ್ ಇದೀಗ ಬೇಲ್ ಮೇಲೆ ಹೊರ ಬಂದು ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಹೇಗಾದರೂ ಮಾಡಿ ಬೇಗ ಬೇಗನೆ ಡೆವಿಲ್ ಚಿತ್ರೀಕರಣ ಮುಗಿಸಿಕೊಳ್ಳುವ ತರಾತುರಿ ದಾಸನದ್ದು. ಒಂದಷ್ಟು ಕಾಲ ಹಳೇ ವರಸೆ ತೋರಿಸದೆ ಸುಮ್ಮನಿದ್ದು ಹೇಗೋ ಈ ಕೊಲೆ ಕೇಸಿನ ಕಂಟಕವನ್ನು ದಾಟಿಕೊಳ್ಳುವ ಹವಣಿಕೆಯಲ್ಲಿದ್ದ ದರ್ಶನ್ ಇದೀಗ ಕಂಗಾಲಾಗಿದ್ದಾರೆ. ಯಾಕೆಂದರೆ, ಸರ್ಕಾರದ ಕಡೆಯಿಂದ ಬೇಲ್ ಕ್ಯಾನ್ಸಲ್ ಮಾಡುವಂತೆ ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಲಾಗಿಗೆ. ಆ ಬಗೆಗಿನ ಅಂತಿಮ ತೀರ್ಪು ಹೊರಬೀಳಲು ಇದೀಗ ಕ್ಷಣಗಣನೆ ಆರಂಭವಾಗಿದೆ.
ಬೇಲ್ ಸಿಗಲೂ ಕೂಡಾ ದರ್ಶನ್‌ಗೆ ಅಡಿಗಡಿಗೆ ಕಂಟಕಗಳು ಎದುರಾಗಿದ್ದವು. ಯಾರೂ ಊಹಿಸಿರದಂತೆ ದರ್ಶನ್ ತಿಂಗಳುಗಟ್ಟಲೆ ಜೈಲಲ್ಲಿ ಕೊಳೆಯುವಂತಾಗಿತ್ತು. ಅಲ್ಲಿ ತೆಪ್ಪಗಿದ್ದಿದ್ದರೆ ಒಂದಷ್ಟು ಬೇಗ ಬಿಡುಗಡೆಯ ಭಾಗ್ಯ ಸಿಗುತ್ತಿತ್ತೇನೋ. ಆದರೀತ ತನ್ನ ಪರಿಚಾರಿಕೆಗೆ ಪರಪ್ಪನ ಅಗ್ರಹಾರ ಸೇರಿಕೊಂಡಿದ್ದ ರೌಡಿ ಎಲಿಮೆಂಟುಗಳು, ಡಾನ್ ಅನ್ನಿಸಿಕೊಂಡಿರುವ ವಿಲ್ಸನ್ ಗಾರ್ಡನ್ ನಾಗನಂಥವರ ಜೊತೆ ಸೇರಿಕೊಂಡು ಯಡವಟ್ಟು ಮಾಡಿಕೊಂಡಿದ್ದ. ಹೇಗೋ ಪಾರಾಗಿ ಬಂದರೂ ಕೂಡಾ ಮತ್ತೆ ಜೈಲು ಪಾಲಾಗುವ, ತಿಂಗಳುಗಟ್ಟಲೆ ಸರಳ ಹಿಂದೆ ಸರಿಯುವ ಭೀತಿಯಿಂದ ದರ್ಶನ್ ಕಂಗಾಲಾದಂತಿದೆ.
ಅಷ್ಟಕ್ಕೂ ದರ್ಶನ್ ಈಗ ಅತ್ಯಂತ ನಾಜೂಕಿನ ನಡೆ ಅನುಸರಿಸುತ್ತಿದ್ದಾರೆ. ಚೂರೇ ಚೂರು ಹಳೇ ವರಸೆ ತೋರಿಸಿದರೂ ಅದು ವಾಪಾಸು ಗುಮ್ಮುವ ಭಯ ದಾಸನನ್ನು ಕಾಡುತ್ತಿದೆ. ಒಟ್ಟಾರೆಯಾಗಿ ಕಟಕಟೆಯಲ್ಲಿ ಹೋಗಿ ನಿಂತಾಗಲೂ ಈತ ಬದಲಾಗಿದ್ದಾನೆಂದು ತೋರಿಸಿಕೊಳ್ಳುವ ಅನಿವಾರ್ಯತೆ ದರ್ಶನ್ ಮುಂದಿದೆ. ಈ ಕಾರಣದಿಂದಲೇ ಎಲ್ಲ ಮುನಿಸು ಮರೆತಂತೆ ಮಡದಿಯೊಂದಿಗೆ ಕಾಣಿಸಿಕೊಳ್ಳುತ್ತಿದ್ದಾರೆಂಬ ಮಾತೂ ಕೇಳಿ ಬರುತ್ತಿದೆ. ಇಷ್ಟೆಲ್ಲ ಸರ್ಕಸ್ಸು ಮಾಡಿದರೂ ಕೂಡಾ ದರ್ಶನ್ ಪಾಲಿಗೆ ಮತ್ತೆ ಕಂಟಕ ಎದುರಾಗಿದೆ. ದರ್ಶನನ ಪ್ರೀತಿಯ ಸುಬ್ಬಿ ಪವಿತ್ರಾ ಗೌಡಳಿಗೂ ಕೂಡಾ ಜೈಲು ಸೇರೋದು ಪಕ್ಕಾ ಎಂಬ ಭೀತಿ ಹಿಂಬಾಲಿಸುತ್ತಿದೆ. ಮತ್ತೆ ಸುಬ್ಬಾಸುಬ್ಬಿ ಜೈಕಲು ಪಾಲಾಗೋ ಸ್ಥಿತಿ ಬರುತ್ತದಾ? ಅಥವಾ ಮತ್ತೆ ನಿರಾಳವಾಗೋ ಅವಕಾಶ ಸಿಗುತ್ತದಾ ಎಂಬ ಪ್ರಶ್ನೆಗೆ ಕೆಲವೇ ಗಂಟೆಗಳಲ್ಲಿ ಉತ್ತರ ಸಿಗಲಿದೆ!