ಸ್ಟಾರ್ ಆಗೋದು ಎಷ್ಟು ಕಷ್ಟವೋ, ಸಿಕ್ಕ ಸ್ಟಾರ್‌ಡಂ ಅನ್ನು ಜತನದಿಂದ ಕಾಪಾಡಿಕೊಳ್ಳೋದೂ ಕೂಡಾ ಅಷ್ಟೇ ಕಷ್ಟದ ಕೆಲಸ. ಭಾರತೀಯ ಚಿತ್ರರಂಗದಲ್ಲಿನ ಬಹುತೇಕ ನಾಯಕ ನಟರು ಮುತುವರ್ಜಿಯಿಂದ ಸ್ಟಾರ್‌ಗಿರಿಯನ್ನು ಕಾಪಾಡಿಕೊಂಡಿದ್ದಾರೆ. ಅದೇ ಹೊತ್ತಿನಲ್ಲಿ ಸ್ವೇಚ್ಚಾಚಾರಕ್ಕೆ ಬಲಿಯಾಗಿ ವೃತ್ತಿ ಬದುಕನ್ನು ಅಸ್ತವ್ಯಸ್ತವಾಗಿಸಿಕೊಂಡ ನಟರ ಸಂಖ್ಯೆಯೂ ಸಾಕಷ್ಟಿದೆ. ಅದಕ್ಕೆ ಈ ತಲೆಮಾರಿನಲ್ಲಿ ಉದಾಹರಣೆಯಾಗಿ ನಿಲ್ಲುವಾತ ಡಾರ್ಲಿಂಗ್ ಪ್ರಭಾಸ್. ಸ್ಥಿತಿವಂತ ಕುಟುಂಬದಿಂದ ಬಂದರೂಝ ಕೂಡಾ ಸೋಲು ಗೆಲುವುಗಳ ಏರಿಳಿತದ ಹಾದಿಯಲ್ಲಿ ಸಾಗಿ ಬಂದಿರೋ ನಟನೀತ. ಹೀನಾಯ ಸೋಲಿನ ಕಹಿಯ ಜೊತೆ ಜೊತೆಗೇ ಬಾಹುಬಲಿಯಂಥಾ ವಿಶ್ವಮಟ್ಟದ ಗೆಲುವನ್ನೂ ಕಂಡ ಅದೃಷ್ಟವಂತ ನಟ ಪ್ರಭಾಸ್. ದುರಂತವೆಂದರೆ, ಹಾಗೆ ಸಿಕ್ಕ ಗೆಲುವನ್ನು ಸಂಭಾಳಿಸೋದರಲ್ಲಿ ಈತ ಸಂಪೂರ್ಣವಾಗಿ ಸೋತಿದ್ದಾನೆ!

ಪ್ರಭಾಸ್ ಬಾಹುಬಲಿಯಂಥಾ ಬಿಗ್ ಹಿಟ್ ಸರಣಿಯ ನಂತರ ಹೀನಾಯವಾಗಿ ಸೋಲು ಕಂಡಿದ್ದ. ಆತ ಒಪ್ಪಿಕೊಳ್ಳುತ್ತಿರೋ ಸಿನಿಮಾಗಳನ್ನು ಕಂಡು ಇವನಿಗೆಂಥಾ ಮಳ್ಳು ಹಿಡಿದಿದೆ ಅಂತ ಖುದ್ದು ಆತನನ್ನು ಆರಾಧಿಸುವ ಅಭಿಮಾನಿಗಳೇ ತಲೆ ಕೆಡಿಸಿಕೊಂಡಿದ್ದಿದೆ. ಬಹುಶಃ ಕಲ್ಕಿ ಚಿತ್ರದ ಮೂಲಕ ಒಂದು ಮಟ್ಟದ ಗೆಲುವು ದಕ್ಕದೇ ಇದ್ದಿದ್ದರೆ ಪ್ರಭಾಸನ ವೃತ್ತಿ ಬದುಕು ಪ್ರಪಾತಕ್ಕೆ ಉದುರಿಕೊಳ್ಳುತ್ತಿತ್ತು. ಆದರೆ, ಈ ಮೊಲದಲೇ ಮಾಡಿಕೊಂಡಿದ್ದ ಒಂದಷ್ಟು ಯಡವಟ್ಟುಗಳು ಇನ್ನೊಂದಷ್ಟು ವರ್ಷಗಳ ಕಾಲ ಆತನನ್ನು ಕಾಡುವಷ್ಟು ಶಕ್ತಿಶಾಲಿಯಾಗಿವೆ. ಈನಗುವೆ ಹನು ರಾಘವಪುಡಿ ನಿರ್ದೇಶನದ ಫೌಜಿ ಚಿತ್ರ ಒಂದಷ್ಟು ಸದ್ದು ಮಾಡುತ್ತಿದೆ. ಹಾಗಂತ ಆ ಮಟ್ಟಿಗೆ ಕ್ರೇಜ್ ಮೂಡಿಸಿದೆ ಅಂದುಕೊಳ್ಳಬೇಕಿಲ್ಲ. ಅದಕ್ಕೆ ಕಾರಣವಾಗಿರೋದು ಫೌಜಿ ಭೂಮಿಕೆಯಿಂದ ಜಾಹೀರಾಗಿರುವ ಒಂದಷ್ಟು ವಿಚಾರಗಳು ಮಾತ್ರ!

ಫೌಜಿ ಚಿತ್ರದ ಬಗ್ಗೆ ನಿರ್ದೇಶಕ ಹನು ರಾಘವಪುಡಿ ಅಡಿಗಡಿಗೆ ಬಿಲ್ಡಪ್ಪು ಕೊಡುತ್ತಿದ್ದಾನೆ. ಇದು ವಿಶ್ವಮಟ್ಟದಲ್ಲಿ ಸಂಚಲನ ಸೃಷ್ಟಿಸೋ ಚಿತ್ರ ಎಂಬರ್ಥದಲ್ಲಿ ಮಾತಾಡುತ್ತಿದ್ದಾನೆ. ಆದರೆ, ಮೊನ್ನೆಯಷ್ಟೇ ಈ ಆಸಾಮಿ ಬಿಡುಗಡೆಗೊಳಿಸಿದ್ದ ಫೌಜಿ ಚಿತ್ರದ ಪೋಸ್ಟರ್ ಕಂಡು ಬಾಹುಬಲಿಯ ಅಭಿಮಾನಿಗಳಿಗೇ ಬವಳಿ ಬಂದಂತಾಗಿದೆ. ಅದರಲ್ಲಿದ್ದ ಪ್ರಭಾಸನ ಲುಕ್ಕು ಅದಕ್ಕೆ ಕಾರಣ. ಪ್ರಭಾಸ್ ಬಾಹ್ಯ ಸೌಂದರ್ಯ ಇತ್ತೀಚಿನ ದಿನಗಳಲ್ಲಿ ತೀರಾ ಖರಾಬಾಗಿತ್ತು. ಆದರೆ ಫೌಜಿ ಪೋಸ್ಟರಿನಲ್ಲಿ ಆತ ಒಂದಷ್ಟು ವರ್ಷ ಹಿಂದೆ ಹೋದಂತೆ ಸ್ಲಿಮ್ ಆಗಿದ್ದ. ಇದನ್ನು ಕಂಡ ಸಿನಿಮಾಸಕ್ತರು ಅರೇ ಪ್ರಭಾಸ್ ಈ ಮಟ್ಟಿಗೆ ಬದಲಾಗಿ ಬಿಟ್ಟನಾ ಅಂತ ಆಶ್ಚರ್ಯಚಕಿತರಾಗಿದ್ದರು. ಕಡೆಗೂ ನೆಟ್ಟಿಗರು ಫೌಜಿ ಫೋಟೋದಲ್ಲಿಕರೋದು ದಶಕದ ಹಿಂದೆ ಪ್ಗರಭಾಸ್ ನಟಿಸಿದ್ದ ಪೌರ್ಣಮಿ ಸಿನಿಮಾದ ಚಿತ್ರ ಅನ್ನೋದನ್ನು ಪತ್ತೆಹಚ್ಚಿದ್ದರು.

ಇಂಥಾ ಪೋಸ್ಟರ್‌ಗಳಲ್ಲಿ ಆ ಚಿತ್ರದಲ್ಲಿನ ನಾಯಕನ ಪಾತ್ರದ ಚಹರೆಯನ್ನು ಅನಾವರಣಗೊಳಿಸೋದು ಮಾಮೂಲು. ಹನು ರಾಘವಪುಡಿ ಯಾಕೆ ಪೌರ್ಣಮಿಯ ಫೋಟೋ ಎತ್ತಿಕೊಂಡಿದ್ದಾನೆ? ಇಂಥಾ ಪ್ರಶ್ನೆಗೆ ತೆಲುಗು ಸಿನಿಮಾ ರಂಗದಲ್ಲಿ ಹಬ್ಬಿಕೊಂಡಿರೋ ಗುಸುಗುಸು ಉತ್ತರವಾಗಿ ನಿಲ್ಲುತ್ತದೆ. ಫೌಜಿ ಚಿತ್ರೀಕರಣದ ಈ ಘಟ್ಟದಲ್ಲಿ ಪ್ರಭಾಸನ ಮುಖ ತೀರಾ ವಿಕಾರಗೊಂಡಿದೆ. ಆತ ಡ್ರಗ್ಸ್ ಚಟಕ್ಕೆ ಪಕ್ಕಾಗಿರೋದೇ ಮುಖದ ಈ ಸ್ಥಿತಿಗೆ ಕಾರಣ ಅನ್ನುವವರೂ ಇದ್ದಾರೆ. ಇಂಥಾ ಪ್ರಭಾಸನನ್ನಿಟ್ಟುಕೊಂಡು ಫೌಜಿಯನ್ನು ಅದು ಹೇಗೆ ಚಿತ್ರೀಕರಿಸಲು ಸಾಧ್ಯವೋ ಗೊತ್ತಿಲ್ಲ. ಇದೆಲ್ಲದರಾಚೆಗೆ ಫೌಜಿ ಮುಂದಿನ ವರ್ಷ ತೆರೆಗಾಣೋದು ಪಕ್ಕಾ ಅನ್ನಲಾಗುತ್ತಿದೆ. ಇಂಥಾ ಹೊತ್ತಿನಲ್ಲಿ ಫೌಜಿ ಸೀಕ್ವೆಲ್ ಬರೋದೂ ಕೂಡಾ ಪಕ್ಕಾ ಅಂತ ಹನು ಹೇಳಿಕೊಂಡಿದ್ದಾನೆ. ಸಿನಿಮಾಗಳಲ್ಲಿ ಪ್ರಾಣಿ ಪಕ್ಷಿಗಳನ್ನು ತಂತ್ರಜ್ಞಾನದ ಮೂಲಕ ಸೃಷ್ಟಿಸಲಾಗುತ್ತದಲ್ಲಾ? ಹಾಗೆಯೇ ಪ್ರಭಾಸನ ತದ್ರೂಪವನ್ನು ಸೃಷ್ಟಿಸಿದರೆ ಮಾತ್ರವೇ ಫೌಜಿಯನ್ನು ನೋಡಲು ಸಾಧ್ಯವೇನೋ…
