ತ್ತರ ಕರ್ನಾಟಕದ ಪ್ರತಿಭೆ ರೂರಲ್ ಸ್ಟಾರ್ (rural star anjan) ಅಂಜನ್ ನಟಿಸಿರುವ ಚಿತ್ರ `ಚೋಳ’. (chola) ಉತ್ತರ ಕರ್ನಾಟಕ ಸೀಮೆಯ ಸೀಮಿತ ಚೌಕಟ್ಟಿನಲ್ಲಿಯೇ ತನ್ನ ನಟನಾ ಪ್ರತಿಭೆಯನ್ನು ಸಾಣೆ ಹಿಡಿಯುತ್ತಾ, ಪ್ರೇಕ್ಷಕರಿಂದ ಭೇಷ್ ಅನ್ನಿಸಿಕೊಂಡಿದ್ದವರು (anjan)  ಅಂಜನ್. ಇಂಥಾ ನಿರಂತರ ಪ್ರಯತ್ನಗಳ ಫಲವಾಗಿ ಅವರಿಗೆ ರೂರಲ್ ಸ್ಟಾರ್ ಎಂಬ ಬಿರುದೂ ಕೂಡಾ ಸಿಕ್ಕಿದೆ. ಈ ಹುಡುಗನಿಗೆ ಒಂದೊಳ್ಳೆ ಅವಕಾಶ ಸಿಕ್ಕರೆ ಕನ್ನಡ ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳುತ್ತಾನೆ ಅಂತ ಅನೇಕರಿಗೆ ಅನ್ನಿಸಿತ್ತು. ಆದರೆ, ಯಾವ ಸೂಚನೆಯನ್ನೂ ಕೊಡದೆ ನಿರ್ಮಾಪಕ ಕಂ ನಿರ್ದೇಶಕ (director suresh d.m) ಸುರೇಶ್ ಡಿ.ಎಂ ಈ ಗ್ರಾಮೀಣ ಪ್ರತೀಬೆಗೆ ನಾಯಕನಾಗೋ ಅವಕಾಶ ಕಲ್ಪಿಸಿದ್ದಾರೆ. ಇಂದು (anjan) ಅಂಜನ್ ನಾಯಕನಾಗಿ ನಟಿಸಿರುವ, ಸುರೇಶ್ ಡಿ.ಎಂ ನಿರ್ದೇಶನ ಮಾಡಿರುವ ಚೋಳ (chola kannada movie)  ಚಿತ್ರದ ಟೀಸರ್ ಬಿಡುಗಡೆಗೊಂಡಿದೆ.

ಸಾಮಾನ್ಯವಾಗಿ ಟೀಸರ್ ಮೂಲಕವೇ ಒಂದು ಸಿನಿಮಾದ ಗುಣಮಟ್ಟದ ಬಗ್ಗೆ ಒಂದು ಅಂದಾಜು ಸಿಕ್ಕಿ ಬಿಡುತ್ತದೆ. ಈ ನಿಟ್ಟಿನಲ್ಲಿ ಹೇಳೋದಾದರೆ, ಈಗ ಹರಿದು ಬರುತ್ತಿರುವ ಸಕಾರಾತ್ಮಕ ಪ್ರತಿಕ್ರಿಯೆಗಳನ್ನು ಗಮನಿಸಿದರೆ, ಇದೊಂದು ಚೆಂದದ ಟೀಸರ್ ಅನ್ನೋದರಲ್ಲಿ ಎರಡು ಮಾತಿಲ್ಲ. ಇದುವರೆಗೂ ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದವರು ಸುರೇಶ್ ಡಿ.ಎಂ. ನಿರ್ಮಾಪಕರಾಗಿದ್ದ ಕಾಲದಲ್ಲಿಯೂ ಭಿನ್ನ ಬಗೆಯ ಕಥನಗಳು ಬೆಳಕು ಕಾಣಲು ಪ್ರೇರೇಪಿಸಿದ್ದ ಅವರೀಗ ನಿರ್ದೇಶಕರಾಗಿ ರೂಪಾಂತರಗೊಂಡಿದ್ದಾರೆ. ಈ ಮೊದಲ ಹೆಜ್ಜೆಯಲ್ಲಿಯೇ ಅವರು ರಗಡ್ ಕಥೆಯೊಂದನ್ನು ಕೈಗೆತ್ತಿಕೊಂಡು, ಅದಕ್ಕೆ ಪರಿಣಾಮಕಾರಿಯಾಗಿ ದೃಷ್ಯ ರೂಪ ನೀಡಿದ್ದಾರೆಂಬ ನಿಖರ ಸೂಚನೆ ಈ ಟೀಸರ್ ಮೂಲಕ ಸಿಕ್ಕಿಬಿಟ್ಟಿದೆ!

ಸುರೇಶ್ ಡಿ.ಎಂ ಸೃಷ್ಟಿ ಎಂಟರ್ ಪ್ರೈಸಸ್ ಲಾಂಛನದಲ್ಲಿ ಈ ಚಿತ್ರವನ್ನು ಸ್ವತಃ ನಿರ್ಮಾಣ ಮಾಡಿದ್ದಾರೆ. ದಿಶಾ ಪಾಂಡೆ ಮತ್ತು ಪ್ರತಿಭ ನಾಯಕಿಯರಾಗಿ ಸಾಥ್ ಕೊಟ್ಟಿದ್ದಾರೆ. ದಿನೇಶ್ ಮಂಗಳೂರು ಮತ್ತು ಬಲ ರಾಜವಾಡಿ ವಿಲನ್ನುಗಳಾಗಿ ನಟಿಸಿದ್ದಾರೆ. ಅವರೆಲ್ಲರ ಪಾತ್ರಗಳ ಝಲಕ್ಕುಗಳು ಟೀಸರ್ ನಲ್ಲಿ ಕಾಣಿಸಿವೆ. ಅದು ಪ್ರೇಕ್ಷಕರು ಥ್ರಿಲ್ ಆಗುವಂತೆಯೂ ಮಾಡಿದೆ. ಇನ್ನುಳಿದಂತೆ ತುಳುವಿನಲ್ಲಿ ಸೂಪರ್ ಹಿಟ್ ಆಗಿರುವ, ರೂಪೇಶ್ ಶೆಟ್ಟಿ ನಿರ್ದೇಶನದ ಸರ್ಕಸ್ ಎಂಬ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದ ಲಾಯ್ ವ್ಯಾಲೆಂಟೈನ್ ಸಲ್ಡಾನ ಈ ಚಿತ್ರಕ್ಕೆ ಸಂಗೀತ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಮನಮೋಹನ್ ರಾಯ್ ರಂಥಾ ಹಿರಿಯ ನಟರಿರುವ ಈ ತಾರಾಗಣದಲ್ಲಿ ಪ್ರತಿಭಾನ್ವಿತ ನಟ ವರ್ಧನ್, ಮಜಾ ಭಾರತ ಖ್ಯಾತಿಯ ಜಗಪ್ಪ, ಮಿಂಚು ಮುಂತಾದವರಿದ್ದಾರೆ. ಸಂದೀಪ್ ಹೊನ್ನಾಳ್ಳಿ ಛಾಯಾಗ್ರಹಣ, ಶಿವಕುಮಾರ್ ಎ. ಸಂಕಲನ ಈ ಚಿತ್ರಕ್ಕಿದೆ.

ಸದರಿ ಟೀಸರ್ ನೋಡುತ್ತಿದ್ದರೆ ಕನ್ನಡಕ್ಕೊಬ್ಬ ಪ್ರತಿಭಾನ್ವಿತ ನಾಯಕ ನಟನ ಆಗಮನವಾಗುತ್ತಿರೋ ಸೂಚನೆಗಳಿದ್ದಾವೆ. ಕಡುಗಷ್ಟದಿಂದ ಬೆಳೆದು ಬಂದು ಸಿನಿಮಾ ನಾಯಕನಾಗೋದನ್ನೇ ಗುರಿಯಾಗಿಸಿಕೊಂಡಿದ್ದವರು ಅಂಜನ್. ಕಷ್ಟಗಳ ನಡುವೆಯೂ ಸಿನಿಮಾ ಪ್ರಯೋಗಗಳನ್ನು ಮಾಡುತ್ತಾ, ತನ್ನ ನಟನೆಯ ತಾಖತ್ತನ್ನು ಪ್ರಚುರಪಡಿಸಿದ್ದ ಆತನಿಗೀಗ, ಚೋಳ ಚಿತ್ರದ ಮೂಲಕ ಉತ್ತಮ ಅವಕಾಶ ಸಿಕ್ಕಿದೆ. ಆತ ಸುರೇಶ್ ಡಿ.ಎಂ ಸಾರಥ್ಯದಲ್ಲಿ ನಾಯಕನಾಗಿ ನೆಲೆ ಕಂಡುಕೊಳ್ಳುವ ಲಕ್ಷಣಗಳೂ ದಟ್ಟವಾಗಿ ಗೋಚರಿಸುತ್ತಿದೆ. ಈಗಾಗಲೇ ಸುರೇಶ್ ಅವರು ಒಂದಷ್ಟು ಭಾಗದ ಚಿತ್ರೀಕರಣ ಮುಗಿಸಿಕೊಂಡಿದ್ದಾರೆ. ಟೀಸರ್‍ಗೆ ಸಿಗುತ್ತಿರುವ ಬೆಂಬಲ ಕಂಡು ಖುಷಿಗೊಂಡಿದ್ದಾರೆ. ಇನ್ನು ಮುಂದೆ ಹಂತ ಹಂತವಾಗಿ ಚೋಳನ ಒಡಲಿನಲ್ಲಿರೋ ಮತ್ತೊಂದಷ್ಟು ಅಚ್ಚರಿಗಳು ಪ್ರೇಕ್ಷಕರ ಮುಂದೆ ತೆರೆದುಕೊಳ್ಳಲಿದ್ದಾವೆ.

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!