ಸಿನಿಮಾ ಮಾತ್ರವಲ್ಲ; ಯಾವುದೇ ಕ್ಷೇತ್ರಗಳಲ್ಲಿಯಾದರೂ ಸೋಲು ಗೆಲುವೆಂಬುದು ಮಾಮೂಲು. ಆದರೆ, ವಿಪರೀತವಾದ ಪ್ರಚಾರದ ಪಟ್ಟುಗಳಿರೋದರಿಂದಾಗಿ ಸಿನಿಮಾ ರಂಗದಲ್ಲಿ (filme industry) ಸೋಲೂ ಕೂಡಾ ಗೆಲುವನ್ನು ಸರಿಗಟ್ಟುವಂತೆ ಸುದ್ದಿಗೆ ಗ್ರಾಸವಾಗುತ್ತೆ. ಹುಚ್ಚಾಪಟ್ಟೆ ಪೋಸುಕೊಟ್ಟು, ಸವಕಲು ಸಿನಿಮಾ ಮಾಡಿದಾಗ ಸೋಲಿನ ತೀವ್ರತೆ ಮತ್ತಷ್ಟು ಅಧಿಕವಾಗಿರುತ್ತದೆ. ಸದ್ಯಕ್ಕೆ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ (puri jagannath) ಅಂಥಾದ್ದೊಂದುಸೋಲಿನ ಕಮರಿಗೆ ಬಿದದು ಒದ್ದಾಡುತ್ತಿದ್ದಾರೆ. ವಿಜಯ್ ದೇವರಕೊಂಡ (vijay devarakonda) ನಟಿಸಿದ್ದ ಲೈಗರ್ (liger) ಚಿತ್ರ ವರ್ಷದ ಹಿಂದೆ ತೆರೆ ಕಂಡಿತ್ತಲ್ಲಾ? ದೊಡ್ಡ ಮಟ್ಟದಲ್ಲಿ ಹೈಪು ಸೃಸ್ಟಿಸಿದ್ದ ಲೈಗರ್ ಅತ್ಯಂತ ಹೀನಾಯವಾಗಿ ನೆಲ ಕಚ್ಚಿತ್ತು. ಯಾವಾಗ ಅಥಾದ್ದೊಂದು ಸೋಲು ಸುತ್ತಿಕೊಂಡಿತೋ, ಆಗ ಪುರಿ ಜಗನ್ನಾಥ್ (puri jagannath) ತನ್ನ ಬ್ಯುಸಿನೆಸ್ ಪಾರ್ಟ್‍ನರ್ ಚಾರ್ಮಿಯ (charmi kaur) ಸಮೇತ ಗಾಯಬ್ ಆಗಿಬಿಟ್ಟಿದ್ದರು!

ಲೈಗರ್ ಗಲ್ಲಾಪೆಟ್ಟಿಗೆಯಲ್ಲಿ ಗೋತಾ ಹೊಡೆದಂದಿನಿಂದಲೂ ಪುರಿ ಜಗನ್ನಾಥ್ ತೆರೆಮರೆಗೆ ಸರಿದಿದ್ದಾರೆ. ಮತ್ತೊಂದೆಡೆಯಲ್ಲಿ, ನಟನೆಯಿಂದ ದೂರವುಳಿದು ನಿರ್ಮಾಪಕಿಯಾಗಿರುವ, ಪುರಿಯ ಬ್ಯುಸಿನೆಸ್ ಪಾರ್ಟ್‍ನರ್ ಕೂಡಾ ಆ ಬಳಿಕ ಮರೆಯಾಗಿ ಬಿಟ್ಟದ್ದಳು. ಸೋಶಿಯಲ್ ಮೀಡಿಯಾಗಳಲ್ಲಿ ಆಕ್ಟೀವ್ ಆಗಿದ್ದ ಚಾರ್ಮಿ ಮೆತ್ತಗೆ ಲಿಂದೂ ಕಾಲ್ಕಿತ್ತಿದ್ದಳು. ಅದಾಗುತ್ತಲೇ ಈ ವಿದ್ಯಮಾನದ ಸುತ್ತ ರಂಗು ರಂಗಾದ ಕಥೆಗಳು ಹುಟ್ಟಿಕೊಳ್ಳಲಾರಂಭಿಸಿದ್ದವು. ಪುರಿ ಜಗನ್ನಾಥ್‍ಗೆ ಸೋಲಿನ ನಂತರ ಮಾರ್ಕೆಟ್ ಬಿದ್ದು ಹೋಗಿದೆ ಎಂಬಲ್ಲಿಂದ ಹಿಡಿದು, ಆತ ಡಿಪ್ರೆಷನ್ನಿಗೊಳಗಾಗಿದ್ದಾರೆ ಎಂಬಲ್ಲಿಯತನಕ ಹುಟ್ಟಿಕೊಂಡ ಅಂತೆ ಕಂತೆಗಳು ಲೆಕ್ಕಕ್ಕೆ ಸಿಗುವಂಥಾದ್ದಲ್ಲ!

ಹಾಗಾದರೆ, ಪುರಿ ಜಗನ್ನಾಥರನ್ನು ಒಂಉ ಸಿನಿಮಾದ ಸೋಲು ಆ ಪರಿಯಾಗಿ ಕಂಗಾಲು ಮಾಡಿ ಹಾಕಿತಾ? ರಾಮ್ ಗೋಪಾಲ್ ವರ್ಮಾನಂಥವರ ಆಪ್ತ ವಲಯದಲ್ಲಿರುವ ಪುರಿ ಅಷ್ಟೊಂದು ಬಲ;ಹೀನ ಆಸಾಮಿಯಾ? ಅಷ್ಟಕ್ಕೂ ಪುರಿಯ ಪ್ರಪಂಚದಲ್ಲಿ ಏನೇನು ಘಟಿಸುತ್ತಿದೆ ಅಂತ ನೋಡ ಹೋದರೆ, ಒಂದಷ್ಟು ಇಂಟರೆಸ್ಟಿಂಗ್ ವಿಚಾರಗಳು ಜಾಹೀರಾಗುತ್ತವೆ. ಲೈಗರ್ ಸೋಲಿನ ನಂತರ ವ್ಯಾವಹಾರಿಕವಾಗಿ ಪುರಿ ಮೇಲೆ ಒತ್ತಡಗಳಿರುವುದು ನಿಜ. ಬಹು ನಿರೀಕ್ಷೆಯಿಂದ ವಿತರಣಾ ಹಕ್ಕು ಖರೀದಿಸಿದ್ದವರೆಲ್ಲ ಕೋಟಿಗಳ ಲೆಕ್ಕದಲ್ಲಿ ಕಳೆದುಕೊಂಡು ಕಂಗಾಲಾಗಿದ್ದರು. ಅದರಲ್ಲೊಂದಷ್ಟು ಮಂದಿ ಕೈಜಾರಿ ಹೋದ ಕಾಸನ್ನು ಮತ್ತೆ ತುಂಬಿಕೊಡುವಂತೆ ಒತ್ತಡ ಹೇರಲಾಂಭಿಸಿದ್ದರು. ಅದರಿಂದ ತಪ್ಪಿಸಿಕೊಳ್ಳುವ ಸಲುವಾಗಿಯೇ ಪ್ರಳಯಾಂತಕ ಪುರಿ ಮತ್ತು ಚಾರ್ಮಿ ಒಂದಷ್ಟು ಕಾಲ ಬೇಕಂತಲೇ ಗಾಯಬ್ ಆಗಿಬಿಟ್ಟಿದ್ದರು.

ಹಾಗೆ ಆ ಕ್ಷಣದ ಕಂಟಕದಿಂದ ಪಾರಾಗುವ ಸಲುವಾಗಿ ಅಜ್ಞಾತವಾಸದಲ್ಲಿರೋ ಪುರಿಯ ಪರಪಂಚದಲ್ಲಿ ಬೇರೆಯದ್ದೇ ತೆರನಾದ ವಿದ್ಯಮಾನಗಳು ಘಟಿಸುತ್ತಿವೆ. ಒಂದಷ್ಟು ಹಿಟ್ ಸಿನಿಮಾಗಳನ್ನು ಕೊಟ್ಟಿರುವ ಪುರಿ ಲೈಗರ್ ವಿಚಾರದಲ್ಲಿ ಸೋತಿದ್ದು ಹೌದು. ಆದರೆ, ಆತನ ಛಾಮ್ ಹೇಳಿಕೊಳ್ಳುವಂತೇನೂ ಇಳಿದಿಲ್ಲ. ಯಾಕೆಂದರೆ, ಪುರಿ ಪುಆತನ ಕಾಲದ ನಂಬಿಕೆಗಳನ್ನು ಬಲು ಆಸ್ಥೆಯಿಂದಲೇ ಕಾಪಾಡಿಕೊಂಡಿದ್ದಾರೆ. ಹಾಗಿಲ್ಲದೇ ಹೋಗಿದರೆ, ಒಂದು ಕಾಲದಲ್ಲಿ ಪುರಿ ನಿರ್ದೇಶನ ಮಾಡಿದ್ದ ಪೋಕಿರಿ, ಟೆಂಪರ್‍ನಂಥಾ ಸಿಇಮಾಗಳ ನಿರ್ಮಾಪಕ ರಾಮ್ ಪೋತಿನೇನಿ ಮತ್ತೆ ಹತ್ತರಾಗಲು ಸಾಧ್ಯವಿರಲಿಲ್ಲ!

ಒಂದು ಮೂಲದ ಪ್ರಕಾರ, ಪುರಿ ನಿರ್ದೇಶನದ ಸಿನಿಮಾ ನಿರ್ಮಾಣ ಮಾಡಲು ಪೋತಿನೇನಿ ತುದಿಗಾಲಿನಲ್ಲಿ ನಿಂತಿದ್ದಾರೆ. ಇದಲ್ಲದೇ ಒಂದಷ್ಟು ದೊಡ್ಡ ಆಫರ್‍ಗಳೂ ಪುರಿಯನ್ನು ಅರಸಿ ಬರುತ್ತಿವೆ. ಮೆಘಾ ಸ್ಟಾರ್ ಚಿರಂಜೀವಿಯ ಕೊನಿಡೇಲಾ ಪ್ರೊಡಕ್ಷನ್ ಕೂಡಾ ಪುರಿಗೆ ಸಿನಿಮಾ ನಿರ್ದೇಶನ ಮಾಡುವ ಆಫರ್ ಕೊಟ್ಟಿದೆ. ಇದಕ್ಕಾಗಿ ಭಾರೀ ಮೊತ್ತದ ಸಂಭಾವನೆ ಕೊಡುವ ಸೂಚನೆಯೂ ಆ ಕಡೆಯಿಂದ ರವಾನೆಯಾಗಿದೆ. ಆದರೆ, ಅದ್ಯಾವುದರತ್ತಲೂ ಪುರಿ ನಸು ಮಾಡುತ್ತಿಲ್ಲ. ಯಾಕೆಂದರೆ, ಸಿನಿಮಾ ವ್ಯವಹಾರದಲ್ಲಿ ಪಳಗಿಕೊಂಡಿರುವ ಪುರಿ ಮತ್ತು ಚಾರ್ಮಿಯ ಲೆಕ್ಕಾಚಾರವೇ ಬೇರೆಯದ್ದಿದೆ. ಒಂದಷ್ಟು ಮೊತ್ತಕ್ಕೆ ಬೇರೆಯವರ ಸಿನಿಮಾ ನಿರ್ದೇಶನ ಮಾಡೋದಕ್ಕಿಂತ, ತಾವೇ ನಿರ್ಮಾಣವನ್ನೂ ಮಾಡಿದರೆ ಮಾತ್ರವೇ ಹೆಚ್ಚು ಲಾಭ ಕಾಣಬಹುದು, ಒಂದೊಳ್ಳೆ ಪ್ರಾಜೆಕ್ಟಿನ ಮೂಲಕ ಲೈಗರ್‍ನಿಂದ ಕಳೆದುಕೊಂಡಿದ್ದನ್ನು ಬಾಚಿಕೊಳ್ಳಬಹುದೆಂಬ ಲೆಕ್ಕಾಚಾರ ಅವರದ್ದು. ಇದೆಲ್ಲದರ ಭಾಗವಾಗಿ ಇನ್ನು ಕೆಲವೇ ದಿನಗಳಲ್ಲಿ ಪುರಿ ಮತ್ತು ಚಾರ್ಮಿ ಜೋಡಿ ಪ್ರೇಕ್ಷಕರ ಮುಂದೆ ಪ್ರತ್ಯಕ್ಷವಾಗಲಿದೆ; ಒಂದು ಸಿಹಿ ಸುದ್ದಿಯ ಸಮೇತ!

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!