ತ್ತೀಚಿನ ದಿನಗಳಲ್ಲಿ ನಾಯಕ ನಟನಾಗಿಯೂ ಒಂದಷ್ಟು ಬ್ಯುಸಿಯಾಗಿರುವಾತ (rapper chandan shetty) ಚಂದನ್ ಶೆಟ್ಟಿ. ಒಂದು ಕ್ಷೇತ್ರದಲ್ಲಿ ಒಂದಷ್ಟು ಹೆಸರು ಮಾಡುತ್ತಲೇ ಮತ್ತೊಂದರತ್ತ ಕೈ ಚಾಚೋದು ಹೊಸತೇನಲ್ಲ. ರ್ಯಾಪರ್ ಆಗಿ ಜನಪ್ರಿಯತೆ ಪಡೆದುಕೊಂಡಿರುವ (chandan shetty new movie) ಚಂದನ್, ಈಗಾಗಲೇ ಎಲ್ರ ಕಾಲೆಳಿಯುತ್ತೆ ಕಾಲ ಅಂತೊಂದು ಸಿನಿಮಾದಲ್ಲಿ ನಟಿಸಿರೋದು ಗೊತ್ತೇ ಇದೆ. ಅದು ಬಿಡುಗಡೆಯ ಹೊಸ್ತಿಲಿನಲ್ಲಿರುವಾಗಲೇ, ಆತ ಮತ್ತೊಂದು ಸಿನಿಮಾಕ್ಕೆ ಸಹಿ ಹಾಕಿದ ಸುದ್ದಿ ಹೊರಬಿದ್ದಿತ್ತು. ಚಿತ್ರತಂಡ ಟೈಟಲ್ ಪ್ರೋಮೋ ಮೂಲಕವೇ ಶೀರ್ಷಿಕೆಯ ಬಗೆಗೊಂದು ಕುತೂಹಲ ಹುರಿಗೊಳಿಸುವ ನಿಟ್ಟಿನಲ್ಲಿಯೂ ಪ್ರಯತ್ನಿಸಿತ್ತು. ಇದೀಗ ವರಮಹಾಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ `ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ (vidyarthi vidyarthiniyare) ಎಂಬ ಶೀರ್ಷಿಕೆ ಅನಾವರಣಗೊಂಡಿದೆ.

ಈ ಶೀರ್ಷಿಕೆಯೇ ಇದೊಂದು ಟೀನೇಜ್ ಸ್ಟೋರಿ ಎಂಬುದನ್ನು ಸ್ಪಷ್ಟವಾಗಿ ಧ್ವನಿಸುವಂತಿದೆ. ನಿರ್ದೇಶಕ ಅರುಣ್ ಅಮುಕ್ತ ಈ ಮೂಲಕ ಪರಿಣಾಮಕಾರಿಯಾಗಿ ಯುವ ಮನಸುಗಳನ್ನು ಮುಟ್ಟಿ, ಫ್ಯಾಮಿಲ ಪ್ರೇಕ್ಷಕರನ್ನೂ ಸೆಳೆದುಕೊಳ್ಳುವ ನಿಟ್ಟಿನಲ್ಲಿ ಮುಂದಡಿ ಇಟ್ಟಿದ್ದಾರೆ. ಈ ಹಿಂದೆ ಶ್ರೀಮುರುಳಿ ನಟಿಸಿದ್ದ ಲೂಸ್‍ಗಳು ಎಂಬ ಸಿನಿಮಾವನ್ನು ಅರುಣ್ ಅಮುಕ್ತ ನಿರ್ದೇಶನ ಮಾಡಿದ್ದರು. ಅದಾಗಿ ಒಂದಷ್ಟು ಗ್ಯಾಪಿನ ನಂತರ, ಸರಿಕಟಟಾದ ತಯಾರತಿ ಮಾಡಿಕೊಂಡೇ ಈ ಸಿನಿಮಾವನ್ನು ಕೈಗೆತ್ತಿಕೊಂಡಂತಿದೆ. ಈ ಟೈಟಲ್ ಪ್ರೋಮೋ ಮತ್ತು ಅದನ್ನು ಲಾಂಚ್ ಮಾಡುವ ವಿಚಾರದಲಿಯೂ ಕೂಡಾ ಅರುಣ್ ಒಂದಷ್ಟು ಕ್ರಿಯೇಟಿವಿಟಿಯ ಮೂಲಕ ಪ್ರೇಕ್ಷಕರ ಮನಗೆದ್ದಿದ್ದಾರೆ.

ಶಾಲಾ ಕಲೇಜು ಕಾಲಘಟ್ಟದ ಸಿನಿಮಾಗಳ ಬಗ್ಗೆ ಪ್ರೇಕ್ಷಕ ವಲಯದಲೊಂದು ವಿಶೇಷವಾ ಪ್ರೀತಿ ಇದೆ. ಅಂಥಾದೊಂದು ದೃಷ್ಯ ಸಿನಿಮಾಗಲ್ಲಿ ಸಣಣಗೆ ಸರಿದು ಹೋದರೂ, ನೆನಪುಗಳ ನೆತ್ತಿ ನೇವರಿಸಿ ಸಂಭ್ರಮಿಸುವವರಿದ್ದಾರೆ. ಆ ಕಾಲ ಕೀಟಲೆ, ಕ್ವಾಟಲೆಗಳನ್ನು ಕಣ್ತುಂಬಿಕೊಂಡು ನಗುವ ಕ್ಷಣಗಳಿಗಾಗಿ ಕಾದು ಕೂತವರಿದ್ದಾರೆ. ಪ್ರೇಕ್ಷಕರಲ್ಲಿ ಅಂಥಾದ್ದೊಂದು ತುಡಿತ ಇರೋದರಿಂದಲೇ ಸರ್ಕಾರಿ ಹಿರಿಯ ಪ್ರಾಮಿಕ ಶಾಲೆ, ಕಿರಿಕ್ ಪಾರ್ಟಿ, ಇತ್ತೀಚೆಗೆ ಬಂದ ಡೇರ್ ಡೆವಿಲ್ ಮುಸ್ತಫಾ, ಹಾಟೆಲ್ ಹುಡುಗರು ಬೇಕಾಗಿದ್ದಾರೆ ಮುಂತಾದ ಸಿನಿಮಾಗಳು ಸಮ್ಮೋಹಕ ಗೆಲುವು ದಾಖಲಿಸಿದ್ದವು. ಇದೀ ಆ ಜಾನರ್‍ನಲ್ಲಿಯೇ ಹಲವು ವಿಶೇಷತೆಗನ್ನು ಹೊಂದಿರುವ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರ ಕುತೂಹಲವನ್ನು ಚಾಲೂ ಮಾಡಿದೆ.

ತಾರಾ ಬಳಗ, ತಾಂತ್ರಿಕತೆ ಸೇರಿದಂತೆ ಎಲ್ಲ ದಿಕ್ಕಿನಲ್ಲಿಯೂ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರವನ್ನು ಭಿನ್ನವಾಗಿ ಕಟ್ಟಿಕೊಡಲು ಚಿತ್ರತಂಡ ತಯಾರಾಗಿದೆ. ಸುಬ್ರಮಣ್ಯ ಕುಕ್ಕೆ ಮತ್ತು ಎ.ಸಿ ಶಿವಲಿಂಗೇಗೌಡ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಕುಮಾರ್ ಗೌಡ ಛಾಯಾಗ್ರಹಣ, ಭರ್ಜರಿ ಚೇತನ್ ಮತ್ತು ವಾಸುಕಿ ವೈಭಣವ್ ಸಾಹಿತ್ಯ, ಪವನ್ ಗೌಡ ಸಂಕಲನ, ಟೈಗರ್ ಶಿವು, ನರಸಿಂಹ ಸಾಹಸ ನಿರ್ದೇಶನ ಈ ಚಿತ್ರಕ್ಕಿರಲಿದೆ. ಅಮರ್, ಭಾವನಾ, ಮಾನಸಿ, ವಿವಾನ್, ಭವ್ಯ, ಸುನೀಲ್ ಪುರಾಣಿಕ್, ಅರವಿಂದ ರಾವ್, ಸಿಂಚನಾ, ರಘು ರಾಮನಕೊಪ್ಪ, ಪ್ರಶಾಂತ್ ಸಂಬರ್ಗಿ, ಕಾಕ್ರೋಚ್ ಸುಧಿ ಮುಂತಾದವರು ನಟಿಸಿದ್ದಾರೆ. ಇನ್ನುಳಿದಂತೆ ವಿಜೇತ್ ಕೃಷ್ಣ, ವಾಸು ದೀಕ್ಷಿತ್ ಮತ್ತು ಶಶಾಂಕ್ ಶೇಷಗಿರಿ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಇನ್ನುಳಿದ ಒಂದಷ್ಟು ಮಹತ್ವದ ಸುದ್ದಿಗಳು ಹಂತ ಹಂತವಾಗಿ ಪ್ರೇಕ್ಷಕರನ್ನು ಮುಖಾಮುಖಿಯಾಗಲಿವೆ. 

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!