ಚಾಲೆಂಜಿಂಗ್ ಸ್ಟಾರ್ ದರ್ಶನ್ (challenging star darshan) ಮೀಡಿಯಾ ಮಂದಿಯ ಮುಂದೆ ಛಾಲೆಂಜು ಮಾಡಲು ಹೋಗಿ ಸೋತಿದ್ದಾರೆ. ಒಂದು ಕಾಲದಲ್ಲಿ ಮೀಡಿಯಾ ಅನ್ನೋದು ತನ್ನ ಅಧೋರೋಮಕ್ಕೆ ಸಮ ಎನ್ನುತ್ತಾ ಅಬ್ಬರಿಸಿದ್ದವರು ದರ್ಶನ್. ಆ ವರೆಗೆ ಈತ ಅದೇನೇ ವಿವಾದಗಳನ್ನು ಮೈ ಮೇಲೆಳೆದುಕೊಂಡರೂ, ನಾಲಗೆಯ ಮೇಲೆ ಹಿಡಿತವಿಲ್ಲದಂತೆ ಮಾತಾಡಿದರೂ, ಮೂಲತಃ (darshan new updates) ದರ್ಶನ್ ಓರ್ವ ಅಂತಃಕರಣ ಇರುವ ಮನುಷ್ಯ ಎಂಬ ನಂಬಿಕೆ ಎಲ್ಲರಲ್ಲಿತ್ತು. ಮೀಡಿಯಾ ಮಂದಿಯಂತೂ ಅದನ್ನು ಹತ್ತಿರದ ವಾತಾರವಣ ಕಂಡ ಪರಿಣಾಮವಾಗಿ ನಂಬಿದ್ದರು. ಆದರೆ, ಇತ್ತೀಚಿನ ವರ್ಷಗಳಲ್ಲಿ ದರ್ಶನ್ ಮೆರೆದ ರೀತಿ, ತನ್ನನ್ನು ಯಾರೂ ಹಿಡಿಯೋರಿಲ್ಲ ಎಂಬಂತೆ ಎದೆ ಸೆಟೆಸಿದ ಪರಿ ಇದೆಯಲ್ಲಾ? ಅದನ್ನು ಸೂಕ್ಷ್ಮವಂತರ್ಯಾರೂ ಒಪ್ಪಿಕೊಳಲು ಸಾಧ್ಯವಿಲ್ಲ!

ನಿಜ, ಒಂದು ಕಾಲಘಟ್ಟ ಎಂಥವರನ್ನು ಎಂತೆಂಥಾ ಅವತಾರವೆತ್ತುವಂತೆ ಮಾಡಿ ಬಿಡುತ್ತದೆ. ಅದರ ಸೆಳವಿಗೆ ಸಿಕ್ಕ ದರ್ಶನ್ ಹಾಗೆಲ್ಲ ಆಡಿದ್ದರೂ ಇರಬಹುದು. ಹೆಚ್ಚೇನು ಅಲ್ಲ; ಕಾಲ ಚಕ್ರ ಒಂದೇ ಒಂದು ವರ್ಷದ ಪರಿಧಿಯಲ್ಲಿ ಸುತ್ತುತ್ತಲೇ ಎಲ್ಲವೂ ಅದಲುಬದಲಾಗಿದೆ. ಖುದ್ದು ದರ್ಶನ್ ಕೊಂಚ ಬದಲಾದಂತೆ ಕಾಣುತ್ತಿದ್ದಾರೆ. ಅದರ ಫಲವಾಗಿಯೇ ಇಪ್ಪತ್ತು ವರ್ಷಗಳಷ್ಟು ಹಳೇಯ ಸ್ನೇಹವೊಂದಕ್ಕೆ ಮತ್ತೆ ಕೈಚಾಚಿದ್ದಾರೆ. ಅದರ ಫಲವಾಗಿಯೇ ಕೆವಿಎನ್ ಬ್ಯಾನರಿನಡಿಯಲ್ಲಿ ನಿರ್ದೇಶಕ ಪ್ರೇಮ್ ಗೆ ಜೊತೆಯಾಗಿದ್ದಾರೆ. ರಕ್ಷಿತಾ ಮತ್ತಾಕೆಯ ಪತಿ ಪ್ರೇಮ್ ಜೊತೆ ಆತ್ಮೀಯವಾಗಿ ಬೆರೆತಿದ್ದಾರೆ. ಒಂದು ಕಾಲದ ಉರಿನಾಲಗೆಯ ಮೇಲೀಗ ಪ್ರೀತಿಯ ಬುರುಗು ಮೂಡಿಕೊಂಡಿದೆ. ಇವರಿಬ್ಬರ ಕಾಂಬಿನೇಷನ್ನಿನ ಸಿನಿಮಾ ಅದ್ಯಾವ ದಾಖಲೆ ಬರೆಯುತ್ತೋ, ಗೆಲುವು ದಕ್ಕಿಸಿಕೊಳ್ಳುತ್ತದೋ ಗೊತ್ತಿಲ್ಲ; ಮುನಿಸು ಮರೆತು ಹಳೆಯ ಸ್ನೇಹವೊಂದು ಜೊತೆಗೂಡಿರೋದಂತೂ ಸತ್ಯ.

ಅತ್ತ ಪ್ರೇಮ್ ಜೊತೆ ರಾಜಿಯಾಗಿರುವ ದರ್ಶನ್ ಇತ್ತ ಮೀಡಿಯಾಗಳೊಂದಿಗಿನ ಕದನಕ್ಕೂ ಕೂಡಾ ಫುಲ್ ಸ್ಟಾಪ್ ಇಟ್ಟಿದ್ದಾರೆ. ಪತ್ರವೊಂದರ ಮೂಲಕ ಮಾಧ್ಯಮಗಳ ಜೊತೆ ಸ್ನೇಹಕ್ಕೆ ಕೈ ಚಾಚಿದ್ದಾರೆ. ವಿಶೇಷವಾಗಿ ದೃಷ್ಯ ಮಾಧ್ಯಮಗಳಿಗೂ ದರ್ಶನ್ ಗೂ ತಿಕ್ಕಾಟ ಆರಂಭವಾಗಿತ್ತು. ಹಲವಾರು ಪಲ್ಲಟಗಳ ನಡುವೆಯೂ ಮಾಧ್ಯಮ ಘನತೆಯನ್ನು ಕಾಪಿಟ್ಟುಕೊಂಡಿರುವ ಪ್ರಿಂಟ್ ಮೀಡಿಯಾ ಇದರಿಂದ ಆಚೆ ಉಳಿದಿತ್ತು. ಈ ವಿವಾದದ ಆಸುಪಾಸಲ್ಲಿಯೇ ದರ್ಶನ್ ನಿರ್ದೇಶಕ ಪ್ರೇಮ್ ಬಗ್ಗ ಕೇವಲವಾಗಿ ಮಾತಾಡಿ ಬಿಟ್ಟಿದ್ದರು. ಯಾವುದ ಪ್ರಶ್ನೆ ಎದುರಾದಾಗ ಅದಾಗ ತಾನೇ ಗಡಂಗಿನಿಂದ ಎದ್ದು ಬಂದವರಂತೆ `ಅವ್ನೇನು ಪುಡಾಂಗಾ’ ಎಂಬರ್ಥದಲ್ಲಿ ಬಡಬಡಿಸಿದ್ದರು. ಏನೇ ಇದ್ದರೂ ಇಪ್ಪತ್ತು ವರ್ಷಗಳ ಹಿಂದೆ ದರ್ಶನ್‍ಗಾಗಿ ಸಿನಿಮಾ ನಿರ್ದೇಶನ ಮಾಡಿದ್ದವರು ಪ್ರೇಮ್. ದರ್ಶನ್ ಯಶಸ್ಸಿನ ಹಾದಿಯಲ್ಲಿ ಪ್ರೇಮ್ ಪಾತ್ರವನ್ನು ಅಲ್ಲಗಳೆಯಲಾಗೋದಿಲ್ಲ.

ಆದರೂ ನಡೆದು ಬಂದ ಹಾದಿಯನ್ನು ಮರೆತವರಂತೆ ದರ್ಶನ್ ಮೆರೆದಿದ್ದರು. ಇದೀಗ ಪ್ರೇಮ್ ಜೊತೆ ಮತ್ತೆ ಜೊತೆಯಾದ ದರ್ಶನ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಮೂದಲಿಕೆ ಶುರುವಾಗಿದೆ. ಅದು ಸಹಜ. ಅದರ ಫಲವಾಗಿಯೇ ಪುಡಾಂಗ್ ಪ್ರೇಮ್ ಜೊತೆ ದಾಸನ ಚಿತ್ರ ಎಂಬಂಥಾ ಅಭಿಪ್ರಾಯವೂ ಮೂಡಿಕೊಂಡಿದೆ. ಅದರ ಹಿಂದೆ ದರ್ಶನ್ ಅಹಮ್ಮಿಕೆಯ ಪಾಲಿದೆ. ದರ್ಶನ್ ಪ್ರೇಮ್ ಜೊತೆ ಮತ್ತೆ ಒಂದುಗೂಡುವಲ್ಲಿ ರಕ್ಷಿತಾ ಪಾತ್ರವೂ ಇದೆ. ರತನ್ನ ಗಂಡನ ಬಗ್ಗೆ ಆತ್ಮೀಯ ಸ್ನೇಹಿತನೇ ಬಾಯಿಗೆ ಬಂದಂತೆ ಮಾತಾಡಿದ್ದನ್ನು ಕಂಡು ರಕ್ಷಿತಾ ನೊಂದುಕೊಂಡಿದ್ದರು. ಆ ಬಳಿಕ ಒದಷ್ಟು ಮಾತುಕಥೆಗಳಾಗಿ ಇಬ್ಬರೂ ಮುನಿಸು ಮರೆತು ಒಂದಾಗಿದ್ದಾರಷ್ಟೆ. ಇದು ನಿಜಕೂ ಸಕಾರಾತ್ಮಕ ಬೆಳವಣಿಗೆ. ಸನೇಹದಲ್ಲಿ ಬಿರುಕು ಮೂಡಿದಾಗ ದೂರಾಓದು ಮತ್ತೆ ಕಚಾಚೋದು ಸಹಜ. ಆದರೆ ಸ್ನೇಹದ ಹೆಸರಲ್ಲಿ ಬಗನೀ ಗೂಟ ಹೆಟ್ಟುವ, ಹೆಜ್ಜೆ ಹೆಜ್ಜೆಗೂ ಮಿಣ್ಣಗೆ ವಂಚನೆ ಮಾಡುತ್ತಾ ಸಾಗುವ, ಯಾರದ್ದೋ ಬೆವರಲ್ಲಿ ತಮ್ಮ ಸಾಮ್ರಾಜ್ಯ ಕಟ್ಟಲು ನೋಡುವ ನಸುಗುನ್ನಿಗಳನ್ನು ಎಂದಿಗೂ ಕ್ಷಮಿಸಬಾರದು. ದರ್ಶನ್ಗೆ ಪ್ರೇಮ್ ಕಡೆಯಂದ ಅಂಥಾ ಯಾವುದೇ ದ್ರೋಹವಾದಂತಿಲ್ಲ. ಆದ್ದರಿಂದಲೇ ಈ ಸ್ನೇಹ ಮತ್ತೆ ಕೂಡಿಕೊಂಡಿದೆ.

ದರ್ಶನ್ ಪಾಲಿಗೆ ಇಷ್ಟು ಕಾಲ ಇದ್ದದ್ದು ಅಗ್ನಿ ಪರೀಕ್ಷೆ. ಆ ಹಾದಿಯಲ್ಲಿ ಹಲವಾರು ಕಟು ಸತ್ಯಗಳನ್ನವರು ಮನದಟ್ಟು ಮಾಡಿಕೊಂಡಂತಿದೆ. ಈ ಕ್ಷಣಕ್ಕೆ ಸಿಕ್ಕ ಗೆಲುವ, ಸ್ಟಾರ್ ಗಿರಿಗಳೆಲ್ಲವೂ ಕ್ಷಣಿಕ. ಜನರ ಮನಸಲ್ಲುಳಿಯುವುದು ವ್ಯಕ್ತಿತ್ವ ಮಾತ್ರ. ನಿಜ ದೃಷ್ಯ ಮಾಧ್ಯಮದ ಕೆಲ ಮಂದಿ ಘನತೆ ಮರೆತು ಸ್ಟಾರುಗಳ ಬೆಂಬೀಳುತ್ತಾರೆ. ಈಗ ದರ್ಶನ್ ಹೇಳಿಕೊಂಡಿರುವಂತೆ, ಒಬ್ಬನ್ಯಾವನೋ ಅವರಿಗೆ ನೋವಾಗುವಂತೆ ಮಾಡಿದ್ದಾನೆ. ಅದೊಂದು ವಿಚಾರಕ್ಕಾಗಿ ಒಂದಿಡೀ ಮಾಧ್ಯಮವನ್ನೇ ಶಾಟಕ್ಕೆ ಸಮ ಅಂದುಬಿಟ್ಟರೆ ಹೇಗೆ? ಮಾನವಂತರಾಗುಳಿದ ಕೆಲ ಮಾಧ್ಯಮದ ಮಂದಿ ದರ್ಶನ್ ರನ್ನೂ ಕೂಡಾ ಅವರ ಮಾತಿನಂತೆಯೇ ಕೊಡವಿಕೊಂಡು ಮುಂದುವರೆದರು. ಹಾಗೆ ನೋಡಿದರೆ, ಮಾಧ್ಯಮ ಜಗತ್ತು ಕೂಡಾ ದರ್ಶನ್ ರಂಥಾ ಅದೆಷ್ಟೋ ಸ್ಟಾರ್‍ಗಳನ್ನು ಕಂಡಿದೆ. ಅಲ್ಲಿ  ಸಕಾರಣವಾಗಿ ವಿಮರ್ಶಿಸುವ ನಿಷ್ಠುರವಾದಿಗಳೂ ಇದ್ದಾರೆ. ಇಂಥಾ ವಿಮರ್ಶೆಗಳು ಕೇಳಿ ಬಂದಾಗ ಮೈಮೇಲೇರಿ ಹೋಗೋ ಸೆಲೆಬ್ರಿಟಿಗಳನ್ನೂ ದರ್ಶನ್ ಇನ್ನು ಮುಂದೆ ಹದ್ದುಬಸ್ತಿನಲ್ಲಿಟ್ಟುಕೊಳ್ಳಬೇಕಿದೆ. ಇನ್ನಾದರೂ ದರ್ಶನ್ ವಿವಾದಗಳಿಂದ ಮುಕ್ತರಾಗಲೆಂಬುದು ಹಾರೈಕೆ!

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!