ಮೆಘಾ ಸ್ಟಾರ್ ಚಿರಂಜೀವಿ (mega star ciranjeevi) ನಟನೆಯ ಬೋಲಾ ಶಂಕರ್ (bhola shankar)  ಚಿತ್ರ ಅದೇನೇ ಹರಸಾಹಸ ಪಟ್ಟರೂ ನೆಲೆ ಕಂಡುಕೊಳ್ಳಲಾಗದೆ ಒದ್ದಾಡುತ್ತಿದೆ. ಅದೇನೇ ತಿಪ್ಪರಲಾಗಾ ಹಾಕಿದರೂ ಕಟ್ಟರ್ ಚಿರು (chiranjeevi) ಭಕ್ತರೇ ಸಿನಿಮಾ ನೋಡಲು ಬರುವ ಮನಸು ಮಾಡುತ್ತಿಲ್ಲ. ರಾಜಕಾರಣ ಅಂತೆಲ್ಲ ಟೈಂ ವೇಸ್ಟ್ ಮಾಡಿ ಅಭಿಮಾನಿಗಳ ಅಸಹನೆಗೆ ಕಾರಣವಾಗಿದ್ದವರು ಚಿರಂಜೀವಿ. ಸೈರಾ ನರಸಿಂಹ ರೆಡ್ಡಿಯಂಥಾ (seyra narasimha reddy) ಸಿನಿಮಾವೇ ಹೇಳಿಕೊಳ್ಳುವಂಥಾ ಯಶ ಕಾಣದ ನಿರಾಸೆ ಕೂಡಾ ಅಭಿಮಾನಿಗಳಲ್ಲಿತ್ತು. ಇನ್ನೊಂದು ಅದ್ಭುತ ಚಿತ್ರದ ಮೂಲಕ ತಮ್ಮಿಷ್ಟದ ಹೀರೋ ಮೇಲೆದ್ದು ನಿಲ್ಲಲಿ ಅಂತ ಅಭಿಮಾನಿ ಬಳಗ ಅಂದುಕೊಂಡಿತ್ತು. ಅದೇ ಹೊತ್ತಿನಲ್ಲಿ ಚಿರಂಜೀವಿ ಒಪ್ಪಿಕೊಂಡಿದ್ದದ್ದು ಭೋಲಾ ಶಂಕರ (bhola shankar m,ovie) ಎಂಬ ಎರವಲು ಸರಕನ್ನು!

ಚಿರು ರೀಮೇಕ್ ಚಿತ್ರದಲ್ಲಿ ನಟಿಸಲಿದ್ದಾರೆಂಬ ಸುದ್ದಿ ಕೇಳಿದಾಕ್ಷಣವೇ ಅಭಿಮಾನಿ ಬಳಗಕ್ಕೆ ಭ್ರಮನಿರಸನವಾಗಿತ್ತು. ಇದೀಗ ತೆಲುಗಿನಲ್ಲಿಯೂ ಪ್ಯಾನಿಂಡಿಯಾ ಹವಾ ಶುರುವಾಗಿರೋದರಿಂದ ಚಿರು ಕೂಡಾ ಅಂಥಾದ್ದೇ ಸಿನಿಮಾದಲ್ಲಿ ನಟಿಸಿ ಗೆಲ್ಲಬೇಕೆಂಬ ಬಯಕೆ ಅಭಿಮಾನಿ ಪಡೆಯಲ್ಲಿತ್ತು. ಆದರೆ ತಮಿಳು ಚಿತ್ರದ ರೀಮೇಕ್ ಸರಕಾದ ಭೋಲಾ ಶಂಕರ ಚಿತ್ರ ಕೂಡಾ ನೆಟ್ಟಗೆ ರೂಪುಗೊಂಡಿರಲಿಲ್ಲ. ಆದ್ದರಿಂದಲೇ ಮೊದಲ ದಿನವೇ ಮುಗ್ಗರಿಸಿದ್ದ ಭೋಲಾ ಶಂಕರ, ಎರಡನೇ ದಿನ ಮಗುಚಿಕೊಳ್ಳುವ ಹೊತ್ತಿಗೆಲ್ಲ ಬೋರಲು ಬಿದ್ದಿತ್ತು. ಎರಡನೇ ವಾರವಾಗುವ ಹೊತ್ತಿಗೆಲ್ಲ ಭೋಲಾ ಶಂಕರ ಎಲ್ಲ ಚಿತ್ರಮಂದಿರಗಳಿಂದಲೂ ಎಗರಿಕೊಂಡಿರುವ ಸುದ್ದಿ ಬಂದಿದೆ.

ಇದು ಚಿರಂಜೀವಿ ಪಾಲಿಗೆ ನಿಜಕ್ಕೂ ಅವಮಾನಕರ ಸನ್ನಿವೇಶ. ತೆಲುಗು ಚಿತ್ರರಂಗವನ್ನು ಅಕ್ಷರಶಃ ಆಳಿದ್ದ ಚಿರಂಜೀವಿಯ ಚಿತ್ರವೊಂದು ಎರಡು ವಾತವೂ ನಿಲ್ಲಲಾಗದೆ ಎತ್ತಂಗಡಿಯಾಗೋದೆಂದರೆ ಅದೇನು ಕಡಿಮೆ ಅವಮಾನವೇ? ಸದ್ಯ ಅದರಿಂದೆದುರಾದ ಮುಜುಗರವನ್ನೆಲ್ಲ ಚಿರು ಅಭಿಮಾನಿಗಳು ನುಂಗಿಕೊಳ್ಳುತ್ತಿದ್ದಾರೆ. ಸೈರಾ ನರಸಿಂಹ ರೆಡ್ಡಿಗೆ ನಿರೀಕ್ಷಿತ ಗೆಲುವು ಸಿಗದಿದ್ದರೂ ಕೂಡಾ, ಅದೊಂದು ಒಳ್ಳೆ ಸಿನಿಮಾವಾಗಿ ಉಳಿದುಕೊಂಡಿತ್ತು. ಆದರೆ ಅದಾದ ನಂತರ ಯಾಕೋ ಚಿರುಗಾರು ಸವಕಲು ಸರಕಿನ ಮೋಹಕ್ಕೆ ಬಿದ್ದಿದ್ದರು. ಅದ್ಯಾವ ಭರವಸೆಯಿಂದ ಅವರು ರೀಮೇಕಿಗೆ ಒಪ್ಪಿಕೊಂಡರೋ ಗೊತ್ತಿಲ್ಲ; ಆ ನಿರ್ಧಾರವೇ ಅವರನ್ನು ಪಾತಾಳಕ್ಕಿಳಿಸಿ ಬಿಟ್ಟಿದೆ. ಒಟ್ಟಾರೆಯಾಗಿ ಈ ವಾರದಿಂದ ಭೋಲಾ ಶಂಕರ ಇತಿಹಾಸವಾಗಲಿದ್ದಾನೆ!

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!