ಒಂದು ಕಡೆಯಿಂದ ತೆಲುಗು (telugu filme industry) ಚಿತ್ರರಂಗದಲ್ಲಿ ಹೊಸಾ ಪ್ರಯತ್ನಗಳಾಗುತ್ತಿವೆ. ವಿಜಯ್ ದೇವರಕೊಂಡನ (vijay deavarkonda) ತಮ್ಮನಂಥಾ ಹೊಸಾ ಹೀರೋಗಳು, ಈ ತಲೆಮಾರಿಗೆ ಒಗ್ಗುವಂಥಾ ಸಿನಿಮಾಗಳ ಮೂಲಕ ಗೆಲ್ಲುತ್ತಿದ್ದಾರೆ. ಆದರೆ, (megastar chiranjeevi) ಚಿರಂಜೀವಿಯಂಥಾ ಘಟಾನುಘಟಿ ನಾಯಕರೇ ಗೆಲುವಿನ ಬೆಟ್ಟ ಹತ್ತಲಾರದೆ ಏದುಸಿರು ಬಿಡುತ್ತಿದ್ದಾರೆ. ಒಂದಷ್ಟು ವರ್ಷಗಳನ್ನು ರಾಜಕೀಯ ಕಸರತ್ತಿಗೆ ಬಲಿ ಕೊಟ್ಟಿದ್ದ (chiru)  ಚಿರುವಿಗೆ ಅದು ಬರಖತ್ತಾಗೋ ವಿಚಾರವಲ್ಲ ಎಂಬ ವಿಚಾರ ಯಾವತ್ತೋ ಗೊತ್ತಾಗಿ ಹೋಗಿದೆ. ಬಹುಶಃ ಆ ಅವಧಿಯನ್ನು ನೀಟಾಗಿ ಸಿನಿಮಾಕ್ಕಾಗಿ ವಿನಿಯೋಗಿಸಿದ್ದರೆ, ಅವರ ಸ್ಟಾರ್ ಗಿರಿ ಮತ್ತಷ್ಟು ಪ್ರಜ್ವಲಿಸುತ್ತಿತ್ತೇನೋ. ಹೀಗೆ ಕುಸಿದ ಛಾರ್ಮ್, ಗುಣಮಟ್ಟದ ಕೊರತೆ ಮುಂತಾದ ಕಾರಣಗಳಿಂದಾಗಿ ಚಿರು ನಟನೆಯ ಭೋಳಾ ಶಂಕರ್ (bhola shankar movie) ಚಿತ್ರ ಹೀನಾಯವಾಗಿ ಸೋತು ಬೋರಲು ಬಿದ್ದಿದೆ!

ಮೆಹರ್ ರಮೇಶ್ ನಿರ್ದೇಶನ ಮಾಡಿದ್ದ ಭೋಳಾ ಶಂಕರ್ ಚಿತ್ರವನ್ನು ಎಕೆ ಎಂಟರ್‍ಟೈನ್‍ಮೆಂಟ್ ಬ್ಯಾನರಿನಡಿಯಲ್ಲಿ ಅನಿಲ್ ಸುಂಕರ ನಿರ್ಮಾಣ ಮಾಡಿದ್ದರು. ಸೋಲುಗಳ ಕಾರಣದಿಂದಾಗಿ ಒಂದಷ್ಟು ಆರ್ಥಿಕ ಸಂಕಷ್ಟದಿಂದ ನರಳುತ್ತಿದ್ದ ಸುಂಕರ, ಬಹಳಷ್ಟು ನಿರೀಕ್ಷೆ ಇಟ್ಟುಕೊಂಡೇ ಈ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದರು. ಹೇಳಿಕೇಳಿ ಮೇಘಾ ಸ್ಟಾರ್ ಚಿರಂಜೀವಿ ನಾಯಕನಾಗಿರೋದರಿಂದ ಹಾಕಿದ ಹಣಕ್ಕೇನೂ ಮೋಸವಿಲ್ಲ ಎಂಬಂಥಾ ನಂಬಿಕೆ ಸುಂಕರಗಿತ್ತು. ಆದರೆ ಭೋಳಾ ಶಂಕರ ಚಿತ್ರ ಬಿಡುಗಡೆಯಾದ ಮೊದಲ ದಿನದಿಂದಲೇ ಡಲ್ಲು ಹೊಡೆದು, ವಾರ ಕಳೆಯುತ್ತಲೇ ಬೋರಲಾಗಿದೆ!

ಇದರ ಬೆನ್ನಲ್ಲಿಯೇ ನಿರ್ಮಾಪಕ ಸುಂಕರ ಸುತ್ತ ಒಂದಷ್ಟು ರೂಮರುಗಳು ಹಬ್ಬಿಕೊಂಡಿದ್ದವು. ಅವರು ಚಿರುಗೆ ಸಂಭಾವನೆ ಕೊಡುವ ಸಲುವಾಗಿ ಮನೆ ಮಾಡಿಕೊಂಡಿದ್ದಾರೆ ಅಂತೆಲ್ಲ ಸುದ್ದಿ ಹರಡಿತ್ತು. ಆದರೀಗ ಖುದ್ದು ಸುಂಕರರೇ ಅದೆಲ್ಲ ಸುಳ್ಳು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಅಷ್ಟಕ್ಕೂ ಭೋಳಾ ಶಂಕರ ತಮಿಳು ಚಿತ್ರದ ರೀಮೇಕ್. ಅಲ್ಲಿ ಅಜಿತ್ ನಾಯಕನಾಗಿ ನಟಿಸಿದ್ದರೆ, ಇಲ್ಲಿ ಅದೇ ಪಾತ್ರವನ್ನು ಚಿರು ಆವಾಹಿಸಿಕೊಂಡಿದ್ದಾರೆ. ಈ ಕಾಲದಲ್ಲಿಯೂ ತೆಲುಗು ಮಂದಿಗೆ ರೀಮೇಕ್ ಮಾಡುವ ದರ್ದು ಅದೇನಿತ್ತೋ ಗೊತ್ತಿಲ್ಲ. ಆದರೆ, ಪ್ರೇಕ್ಷಕರಂತೂ ಚಿರು ಮೇಲಿನ ಅಭಿಮಾನವನ್ನು ಸೈಡಿಗಿಟ್ಟು ಈ ಚಿತ್ರವನ್ನು ನಿರಾಕರಿಸಿದ್ದಾರೆ. ಅದಾಗಲೇ ಒಂದು ಸೋಲಿನಿಂದ ಕಂಗೆಟ್ಟಿದ್ದ ನಿರ್ಮಾಪಕ ಸುಂಕರ ಕೈ ಖಾಲಿ ಮಾಡಿಕೊಂಡಿರೋದಂತೂ ನಿಜ!

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!