Author: Santhosh Bagilagadde

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

ಖ್ಯಾತ ನಿರ್ದೇಶಕ ತ್ರಿವಿಕ್ರಮ್ ರಾಮ್ ಚರಣ್ ಜೊತೆಗಿನ ಸಿನಿಮಾಕ್ಕಾಗಿ ತಯಾರಿ ನಡೆಸುತ್ತಿದ್ದಾರೆ… ಹೀಗೊಂದು ಸುದ್ದಿ ಕಳದ ವರ್ಷದಿಂದಲೇ ತೆಲುಗು ಚಿತ್ರರಂಗದಲ್ಲಿ ಹರಿದಾಡುತ್ತಿತ್ತು. ಆದರೆ, ರಾಮ್ ಚರಣ್ ಆಗಲಿ, ತ್ರಿವಿಕ್ರಮ್ ಆಗಲಿ ಈ ಬಗ್ಗೆ ಯಾವ ಸ್ಪಷ್ಟೀಕರಣವನ್ನೂ ಕೂಡಾ ಕೊಟ್ಟಿರಲಿಲ್ಲ. ಆದರೆ, ರಾಮ್ ಚರಣ್ ಪೆಡ್ಡಿ ಸಿನಿಮಾದಲ್ಲಿ ನಟಿಸುವ ಸುದ್ದಿ ಹೊರಬಿದ್ದಾಗಲೇ ಎಲ್ಲವೂ ಅದಲು ಬದಲಾದ ಸೂಚನೆ ಸಿಕ್ಕಿತ್ತು. ಇದೇ ಹೊತ್ತಿನಲ್ಲಿ ತ್ರಿವಿಕ್ರಮ್ ಕಡೆಯಿಂದಲೂ ಒಂದಷ್ಟು ವಿಚಾರಗಳು ಜಾಹೀರಾಗಿವೆ. ಅಲ್ಲಿಗೆ ಇವರಿಬ್ಬರ ಕಾಂಬಿನೇಷನ್ನಿನ ಸಿನಿಮಾ ಸದ್ಯಕ್ಕಿಲ್ಲ ಅಂತೊಂದು ಸ್ಪಷ್ಟ ಸಂದೇಶ ತಣ್ಣಗೆ ರವಾನೆಯಾದಂತಾಗಿದೆ! ನಿರ್ದೇಶಕ ತ್ರಿವಿಕ್ರಮ್ ಆಪ್ತ ನಿರ್ಮಾಪಕ ನಾಗವಂಶಿ ಇತ್ತೀಚೆಗೆ ಸಾಮಾಜಿಕ ಜಾಲತಾಣದ ಮೂಲಕ ಮಹತ್ವದ ವಿಚಾರವೊಂದನ್ನು ಹರಿಯಬಿಟ್ಟಿದ್ದಾರೆ. ವೆಂಕಟೇಶ್ ಮತ್ತು ಜ್ಯೂನಿಯರ್ ಎನ್ಟಿಆರ್ ಜೊತೆಗಿನ ಸಿನಿಮಾ ಘೋಷಣೆ ಮಾಡಿರುವ ನಾಗವಂಶಿ, ಆ ಎರಡೂ ಸಿನಿಮಾಗಳನ್ನು ತ್ರಿವಿಕ್ರಮ್ ನಿರ್ದೇಶನ ಮಾಡಲಿದ್ದಾರೆಂದು ಹೇಳಿಕೊಂಡಿದ್ದಾರೆ. ಈ ಎರಡೂ ಸಿನಿಮಾಗಳಿಗೆ ಈಗಾಗಲೆ ತಯಾರಿ ನಡೆಯುತ್ತಿರೋ ವಿಚಾರವನ್ನೂ ಕೂಡಾ ಜಾಹೀರು ಮಾಡಿದ್ದಾರೆ. ಇದರಲ್ಲಿ ವೆಂಕಟೇಶ್ ಜೊತೆಗಿನ ಚಿತ್ರ…

Read More

ತೆಲುಗು ಚಿತ್ರರಂಗದಲ್ಲಿ ಸ್ಟಾರ್ ನಟನಾಗಿ ಗುರುತಿಸಿಕೊಂಡಿರುವ ಪವನ್ ಕಲ್ಯಾಣ್ ಇದೀಗ ರಾಜಕಾರಣಿಯಾಗಿ ಸಕ್ರಿಯರಾಗಿದ್ದಾರೆ. ಯಾರೇ ನಟ ಹೀಗೆ ರಾಜಕಾರಣದತ್ತ ಹೊರಳಿಕೊಂಡನೆಂದರೆ, ನಟನಾಗಿ ಆತನ ವೃತ್ತಿ ಬದುಕಿನ ಕಥೆ ಮುಗಿಯಿತೆಂದೇ ಅರ್ಥ. ತಮಿಳುನಾಡಿನಲ್ಲಿ ರಾಜಕೀಯ ಅಖಾಡಕ್ಕಿಳಿದಿರೋ ವಿಜಯ್ ಥರದವರು ನಿವೃತ್ತಿ ಘೋಶಿಸಿಯೇ ಧುಮುಕೋದಿದೆ. ಹಾಗಿದ್ದ ಮೇಲೆ ಪವನ್ ಕಲ್ಯಾಣ್ ನಟನಾಗಿ ಮುಂದುವರೆಯೋದು ಕಷ್ಟ ಅಂತಲೇ ಹೇಳಲಾಗುತ್ತಿತ್ತು. ಇದರಿಂದಾಗಿ ಆತನ ಅಭಿಮಾನಿ ಬಳಗ ಕೊಂಚ ಆಘಾತಕ್ಕೀಡಾದಂತಿತ್ತು. ಕಡೆಗೂ ಇದೀಗ ಅಭಿಮಾನಿ ಪಾಳೆಯ ನಿರಾಳವಾಗುವಂಥಾ ಸೂಚನೆಯೊಂದು ಪವರ್ ಸ್ಟಾರ್ ಕಡೆಯಿಂದಲೇ ಸಿಕ್ಕಿದೆ. ಪವನ್ ಕಲ್ಯಾಣ್ ನಟಿಸಿರುವ ಹರಿಹರ ವೀರಮಲ್ಲು ಚಿತ್ರವೀಗ ಬಿಡುಗಡೆಗೆ ರೆಡಿಯಾಗಿದೆ. ಇದೇ ಆತನ ವೃತ್ತಿ ಬದುಕಿನ ಕಡೇಯ ಚಿತ್ರ ಅಂತೊಂದು ಸುದ್ದಿ ಬಲವಾಗಿಯೇ ಹರಿದಾಡಿತ್ತು. ಈವತ್ತಿಗೆ ಹರಿಹರ ವೀರಮಲ್ಲು ಸಿನಿಮಾ ಬಗೆಗೇನಾದರೂ ಹೈಪು ಮೂಡಿಕೊಂಡಿದ್ದರೆ ಅದಕ್ಕೆ ಕಾರಣ ಕೊನೇ ಸಿನಿಮಾ ಎಂಬಂಥಾ ಸೆಂಟಿಮೆಂಟು ಮಾತ್ರ. ಆದರೀಗ ಖುದ್ದು ಪವನ್ ಕಲ್ಯಾಣ್ ಕಡೆಯಿಂದಲೇ ನಟನಾಗಿ ಮುಂದುವರೆಯುವ ಸೂಚನೆ ಸಿಕ್ಕಿ ಬಿಟ್ಟಿದೆ. ಯಾಕೆಂದರೆ, ಅವರೀಗ ಉಸ್ತಾದ್…

Read More

ಸೀರಿಯಲ್ ಮೂಲಕ ಒಂದಷ್ಟು ಹೆಸರು ಮಾಡುತ್ತಲೇ ಹಿರಿತೆರೆಯತ್ತ ಹೊರಳಿಕೊಳ್ಳೋದು ಮಾಮೂಲು. ಅಷ್ಟಕ್ಕೂ ಸೀರಿಯಲ್ಲುಗಳಲ್ಲಿ ನಾಯಕ ನಾಯಕಿಯರಾಗಿ ಅಭಿನಯಿಸುವ ಬಹುತೇಕರಿಗೆ ಸಿನಿಮಾ ರಂಗದಲ್ಲಿ ಮಿಂಚುವ ಆಸೆ ಇದ್ದೇ ಇರುತ್ತದೆ. ಇದೇ ಬಯಕೆಯಿಂದ ವರ್ಷಕ್ಕೊಂದಷ್ಟು ಮಂದಿ ಹಿರಿತೆರೆಯಲ್ಲಿ ಅದೃಷ್ಟ ಪರೀಕ್ಷೆಗಿಳಿಯುತ್ತಿರುತ್ತಾರೆ. ಗಿಣಿರಾಮ ಖ್ಯಾತಿಯ ರಿತ್ವಿಕ್ ಮಠದ್ ಕೂಡಾ ಅದೇ ಹಾದಿಯಲ್ಲಿದ್ದಾರೆ. ಅದರ ಭಾಗವಾಗಿ ಅವರೀಗ `ಮಾರ್ನಮಿ’ ಎಂಬ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ಸದ್ದಿಲ್ಲದೆ ಚಿತ್ರೀಕರಣ ಮುಗಿಸಿಕೊಂಡಿರುವ ಚಿತ್ರತಂಡವೀಗ ಬಿಡುಗಡೆಯ ತಯಾರಿಯಲ್ಲಿದೆ. ಇದೇ ಹೊತ್ತಿನಲ್ಲಿ ನಾಯಕ ನಟ ರಿತ್ವಿಕ್ ಮಠದ್ ಹುಟ್ಟುಹಬ್ಬಕ್ಕೆ ಉಡುಗೊರೆ ಎಂಬಂತೆ ಚಿತ್ರತಂಡ ಟೀಸರ್ ಬಿಡುಗಡೆಗೊಳಿಸಿದೆ. ಈಗಾಗಲೇ ಹಲವಾರು ಧಾರಾವಾಹಿಗಳ ನಿರ್ದೇಶನ ವಿಭಾಗದಲ್ಲಿ ಕಾರ್ಯ ನಿರ್ವಹಿಸಿರುವ ರಿಷಿತ್ ಶೆಟ್ಟಿ ಮಾರ್ನಮಿ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ರಿತ್ವಿಕ್ ಮಠದ್ ನಾಯಕನಾಗಿ ನಟಿಸಿದ್ದ ಗಿಣಿರಾಮ ಚಿತ್ರದಲ್ಲಿ ರಿಒಷಿತ್ ಶೆಟ್ಟಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದರಂತೆ. ಈ ಸಂದರ್ಭದಲ್ಲಿಯೇ ಮಾರ್ನಮಿ ಚಿತ್ರದ ಮುಖ್ಯ ಕೊಂಡಿಯೊಂದು ಬೆಸೆದುಕೊಂಡಿತ್ತು. ಈ ಹಂತದಲ್ಲಿಯೇ ಕಥೆ ಸಿದ್ಧಪಡಿಸಿಕೊಂಡಿದ್ದ ರಿಷಿತ್ ಶೆಟ್ಟಿ ಕಡೆಗೂ ಅದಕ್ಕೆ…

Read More

ಪ್ಯಾನಿಂಡಿಯಾ ಮಟ್ಟದಲ್ಲೀಗ ರಾಮಾಯಣ ಚಿತ್ರದ ಸುತ್ತ ಚರ್ಚೆಗಳು ನಡೆಯುತ್ತಿವೆ. ಅತ್ತ ಸದರಿ ಚಿತ್ರದ ಚಿತ್ರೀಕರಣ ಕೂಡಾ ಅತ್ಯಂತ ವೇಗವಾಗಿ ನಡೆಯುತ್ತಿದೆ. ಇದೊಂದು ಮಲ್ಟಿ ಸ್ಟಾರರ್ ಸಿನಿಮಾ. ವಿಶೇಷವೆಂದರೆ, ರಾಕಿಂಗ್ ಸ್ಟಾರ್ ಯಶ್ ಇಲ್ಲಿ ರಾವಣನಾಗಿ ಅಬ್ಬರಿಸಲಣಿಯಾಗಿದ್ದಾರೆ. ಇದು ಕರುನಾಡ ಪಾಲಿಗೆ ನಿಜಕ್ಕೂ ಹೆಮ್ಮೆಯ ಸಂಗತಿ. ಈ ಮೂಲಕ ರಾಕಿಂಗ್ ಸ್ಟಾರ್ ಅಭಿಮಾನಿಗಳ ಪಾಲಿನ ಖುಷಿ ದುಪ್ಪಟ್ಟಾಗಿದೆ. ಅತ್ತ ಟಾಕ್ಸಿಕ್ ಮತ್ತು ಇತ್ತ ರಾಮಾಯಣದ ಅಪ್‌ಡೇಟ್‌ಗಳಿಗಾಗಿ ಎಲ್ಲರೂ ಕಾತರರಾಗಿದ್ದಾರೆ. ರಾಮಾಯಣದ ವಿಚಾರಕ್ಕೆ ಬರೋದಾದರೆ, ಸಹಜವಾಗಿಯೇ ಇಲ್ಲಿ ದೊಡ್ಡ ಕ್ಯಾನ್ವಾಸಿನ ತುಂಬ ಥರ ಥರದ ಪಾತ್ರಗಳು ತುಂಬಿದ್ದಾವೆ. ಅದರಲ್ಲೊಂದು ಮಹತ್ವದ ಪಾತ್ರಕ್ಕೆ ಜೀವ ತುಂಬಿರುವವರು ಶಿಬಾ ಛಡ್ಡಾ! ಬಾಲಿವುಡ್ಡಿನ ಹಿರಿಯ ನಟಿ ಶಿಭಾ ಛಡ್ಡಾ ರಾಮಾಯಣ ಚಿತ್ರದಲ್ಲಿ ನಮಂಥರೆಯ ಪಾತ್ರಕ್ಕೆ ಜೀವ ತುಂಬಿದ್ದಾರೆ. ತಾನು ನಿರ್ವಹಿಸಿದ ಪಾತ್ರದ ಚಹರೆಗಳ ಬಗ್ಗೆ ಶಿಭಾ ಇತ್ತೀಚೆಗೆ ನಡೆದ ಸಂದರ್ಶನವೊಂದರ ಮೂಲಕ ಮಹತ್ವದ ಮಾಹಿತಿಗಳನ್ನು ಬಿಟ್ಟುಕೊಟ್ಟಿದ್ದಾರೆ. ರಾಮಾಯಣದಲ್ಲಿ ಮಂಥರೆಯ ಪಾತ್ರ ಚಿರಪರಿಚಿತ. ಈವರೆಗೂ ಸಿನಿಮಾಗಳಲ್ಲಿ ಮಾತ್ರವಲ್ಲದೇ, ಅನೇಕ ಗ್ರಂಥಗಳಲ್ಲಿ…

Read More

ತೆಲುಗು ಚಿತ್ರರಂಗದಲ್ಲಿ ಬಹುಬೇಡಿಕೆಯ ಗಾಯಕಿಯಾಗಿರುವ ಮಂಗ್ಲಿ ಇದೀಗ ಮತ್ತೊಂದು ವಿವಾದದ ಕೇಂದ್ರಬಿಂದುವಾಗಿದ್ದಾಳೆ. ತೆಲುಗುನಾಡಿನ ಜಾನಪದ ಗೀತೆಗಳನ್ನೇ ಉಸಿರಾಗಿಸಿಕೊಂಡು, ಅದನ್ನೇ ಶಕ್ತಿಯಾಗಿಸಿಕೊಂಡು ಗಾಯಕಿಯಾಗಿ ಬೆಳೆದು ನಿಂತಿದ್ದಾಕೆ ಮಂಗ್ಲಿ ಅಲಿಯಾಸ್ ಸತ್ಯವತಿ ರಾಥೋಡ್. ಬಡತನವನ್ನೇ ಹಾಸಿ ಹೊದ್ದಂತಿದ್ದ ಬಂಜಾರಾ ಸಮುದಾಯದ ತಾಂಡಾದಿಂದ ಬಂದ ಹುಡುಗಿಯೊಬ್ಬಳು ಸಿನಿಮಾ ರಂಗದಲ್ಲಿ ಸ್ಟಾರ್ ಸಿಂಗರ್ ಆಗಿ ಮಿಂಚುತ್ತಾಳೆಂದರೆ, ಅದಕ್ಕಿಂತ ಹೆಮ್ಮೆಯ ವಿಚಾರ ಬೇರೇನಿರಲು ಸಾಧ್ಯ? ಈ ಕಾರಣದಿಂದಲೇ ಈಕೆಯನ್ನು ಕೋಟ್ಯಂತರ ಮಂದಿ ಬೇಷರತ್ತಾಗಿ ಮೆಚ್ಚಿಕೊಂಡಿದ್ದರು. ಇಂಥಾ ಯಶದ ಪ್ರಭೆಯಲ್ಲಿ ಮಂಗ್ಲಿ ಮೈಮರೆತಳಾ? ಬಣ್ಣದ ಲೋಕದ ಮಾಮೂಲಿ ಪಟ್ಟುಗಳಿಗೆ ತನ್ನನ್ನು ತಾನು ವಶವಾಗಿಸಿಕೊಂಡಳಾ? ಈಗ ಆಕೆಯ ಮೇಲೆ ಕೇಳಿ ಬಂದಿರುವ ಆರೋಪದ ಹಿನ್ನೆಲೆಯಯಲ್ಲಿ ಇಂಥಾ ಹತ್ತಾರು ಪ್ರಶ್ನೆಗಳು ಸಹಜವಾಗಿಯೇ ಕಾಡಲಾರಂಭಿಸಿವೆ! ಸಾಮಾನ್ಯವಾಗಿ, ಸೆಲೆಬ್ರಟಿಗಳ ಬರ್ತ್‌ಡೇ ಪಾರ್ಟಿಗಳಲ್ಲಿ ಡ್ರಗ್ಸ್ ನಶೆ ಏರಿಕೊಳ್ಳೋದು ಮಾಮೂಲು. ಅಂಥಾ ಪಾರ್ಟಿಗಳಲ್ಲಿ ಆಯಕಟ್ಟಿನ ಅಧಿಕಾರಿಗಳ ಮಕ್ಕಳು, ರಾಜಕಾರಣಿಗಳ ದುಷ್ಟ ಕುಡಿಗಳು ತೊನೆಯುತ್ತವಾದ್ದರಿಂದ ಅದೆಷ್ಟೋ ಪ್ರಕರಣಗಳು ನಾಲಕ್ಕು ಗೋಡೆಗಳ ನಡುವೆಯೇ ಮುಚ್ಚಿ ಹೋಗುತ್ತವೆ. ಮಂಗ್ಲಿ ಕೂಡಾ ಅಂಥಾದ್ದೇ ರಾಜಕೀಯ…

Read More

ನಟನಾಗಲು ಬೇಕಾದ ಎಲ್ಲ ಗುಣಗಳಿದ್ದರೂ ಕೂಡಾ ನಸೀಬೆಂಬುದು ಕೆಲ ನಟರನ್ನು ಬಿಡದೇ ಸತಾಯಿಸೋದಿದೆ. ಕನ್ನಡ ಚಿತ್ರರಂಗದಲ್ಲಿಯೂ ಕೂಡಾ ಇಂಥಾದ್ದಕ್ಕೆ ದಂಡಿ ದಂಡಿ ಉದಾಹರಣೆಗಳಿದ್‌ದಾವೆ. ಒಂದು ಹಂತದವರೆಗೂ ಆ ಸಾಲಿನಲ್ಲಿಯೇ ಮಿಸುಕಾಡಲೂ ಆಗದಂತೆ ಕಂಗಾಲೆದ್ದು ನಿಂತಿದ್ದಾತ ಧರ್ಮ ಕೀರ್ತಿರಾಜ್. ಹೆಚ್ಚೇನಲ್ಲ; ಈಗೊಂದು ವರ್ಷದ ಹಿಂದೆ ಆತ ಬಿಗ್ ಬಾಸ್ ಮನೆ ಸೇರಿಕೊಳ್ಳುವವರೆಗೂ ಅದೇ ಸಂಕಟ ಸುತ್ತಿಕೊಂಡಿತ್ತು. ಬಿಗ್ ಬಾಸ್ ಮನೆಯೊಳಗೂ ಕೂಡಾ ಅಂಥಾ ಮ್ಲಾನ ಮನಃಸ್ಥಿತಿ ಧರ್ಮನ ವ್ಯಕ್ತಿತ್ವದಲ್ಲಿ ಎದ್ದು ಕಾಣಿಸುತ್ತಿತ್ತು. ಆದರೆ, ಆ ಶೋನಿಂದ ಎಲಿಮಿನೇಟ್ ಆಗಿ ಹೊರ ಬಂದ ನಂತರದಲ್ಲಿ ಧರ್ಮನ ಮುಂದೆ ಅವಕಾಶಗಳ ಒಡ್ಡೋಲಗ ನೆರೆದು ಬಿಟ್ಟಿದೆ. ಕನ್ನಡ ಚಿತ್ರರಂಗ ಕಂಡ ಖ್ಯಾತ ಖಳ ನಟ ಕೀರ್ತಿ ರಾಜ್ ಅವರ ಪುತ್ರ ಧರ್ಮ. ದರ್ಶನ್ ಅಭಿನಯದ ನವಗ್ರಹ ಎಂಬ ಸಿನಿಮಾ ಮೂಲಕ ಬಣ್ಣ ಹಚ್ಚಿದ್ದ ಈ ಹುಡುಗನನ್ನು ಕಂಡು ಪ್ರೇಕ್ಷಕರೆಲ್ಲರೂ ಖುಷಿಗೊಂಡಿದ್ದರು. ಕನ್ನಡ ಚಿತ್ರರಂಗಕ್ಕೋರ್ವ ಸ್ಫುರದ್ರೂಪಿ ನಟ ಸಿಕ್ಕ ಅಂತಲೇ ಎಲ್ಲರೂ ಮಾತಾಡಿಕೊಂಡಿದ್ದರು. ಒಂದಷ್ಟು ತಾಲೀಮು ನಡೆಸಿದರೆ ಓರ್ವ…

Read More

ತಮ್ಮ ವಿಶಿಷ್ಟವಾದ ಕಂಠಸಿರಿ ಮತ್ತು ಸ್ಫುಟವಾದ ಕನ್ನಡ ಭಾಷಾ ಪಾಂಡಿತ್ಯದಿಂದ ಹೆಸರಾಗಿರುವವರು ಸುಚೇಂದ್ರ ಪ್ರಸಾದ್. ಅವರು ಇತ್ತೀಚಿನ ವರ್ಷಗಳಲ್ಲಿ ನಿರ್ದೇಸಕರಾಗಿಯೂ ಗಮನ ಸೆಳೆದಿದ್ದಾರೆ. ಅದೇ ಹಾದಿಯಲ್ಲೀಗ ಪದ್ಮಗಂಧಿ ಎಂಬ ಚಿತ್ರವೊಂದನ್ನು ನಿರ್ದೇಶನ ಮಾಡಿದ್ದಾರೆ. ಅದರ ಕೆಲಸ ಕಾರ್ಯಗಳೆಲ್ಲವೂ ಪೂರ್ಣಗೊಂಡು ಇದೀಗ ಬಿಡುಗಡೆಯ ಹೊಸ್ಲಿಲಿನಲ್ಲಿದೆ. ಈ ಹಂತದಲ್ಲಿ ಚಿತ್ರತಂಡ ಹಾಡುಗಳ ಗುಯಚ್ಛದ ಝಲಕ್ಕಿನೊಂದಿಗೆ ಮಾಧ್ಯಮದವರನ್ನು ಮುಖಾಮುಖಿಯಾಗಿದೆ. ನಿರ್ದೇಶಕ ಸುಚೇಂದ್ರ ಪ್ರಸಾದ್ ಮತ್ತು ಈ ಚಿತ್ರಕ್ಕೆ ಕಥೆ ಬರೆದು ನಿರ್ಮಾಣ ಮಾಡಿರುವ ಎಸ್.ಆರ್ ಲೀಲಾ ಅವರು ಒಂದಷ್ಟು ಮಹತ್ವದ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಪದ್ಮಗಂಧಿ ಚಿತ್ರದಲ್ಲಿ ಹಾಡುಗಳಿಗೂ ಕೂಡಾ ಪ್ರಾಧಾನ್ಯತೆಯಿದೆ. ಅವುಗಳನ್ನು ಈಗಾಗಲೇ ಸಂಪೂರ್ಣವಾಗಿ ತಯಾರು ಮಾಡಲಾಗಿದೆ. ಅದರ ಒಂದಷ್ಟು ತುಣುಕುಗಳನ್ನು ಈ ಪತ್ರಿಕಾಗೋಷ್ಠಿಯಲ್ಲಿ ಪ್ರದರ್ಶಿಸಲಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಹಾಡುಗಳೆಲ್ಲವೂ ಬಿಡುಗಡೆಗೊಳ್ಳುವ ಸೂಚನೆ ಈ ಮೂಲಕ ರವಾನೆಯಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಸುಚೇಂದ್ರ ಪ್ರಸಾದ್, ನಿರ್ದೇಶಕರಾಗಿ ಪದ್ಮಗಂಧಿಗೆ ದೃಶ್ಯರೂಪ ಕೊಟ್ಟ ಬಗೆಯ ಬಗ್ಗೆ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಕಥೆಯೂ ಸೇರಿದಂತೆ ಎಲ್ಲದರಲ್ಲಿ ಅಡಕವಾಗಿರುವ ವಿಶೇಷತೆಗಳನ್ನು…

Read More

ಇತ್ತೀಚಿನ ವರ್ಷಗಳಲ್ಲಿ ಕನ್ನಡ ಚಿತ್ರರಂಗ ನಾನಾ ಪ್ರಯೋಗಾತ್ಮಕ ಪ್ರಯತ್ನಗಳಿಂದ, ಭಿನ್ನ ಧಾಟಿಯ ಸಿನಿಮಾಗಳಿಂದ ಶೃಂಗಾರಗೊಂಡಂತಿದೆ. ಇಂಥಾ ಬಗೆಬಗೆಯ ಸಿನಿಮಾಗಳ ಭರಾಟೆಯ ನಡುವಲ್ಲಿಯೂ ನಮ್ಮ ನಡುವೆ ಕಂಟೆಂಟ್ ಓರಿಯಂಟೆಡ್ ಸಿನಿಮಾಗಳ ಧ್ಯಾನವೊಂದು ಸದಾ ಚಾಲ್ತಿಯಲ್ಲಿರುತ್ತೆ. ಕಥೆಯನ್ನೇ ಆತ್ಮವಾಗಿಸಿಕೊಂಡಿರುವ, ಆ ಮೂಲಕವೇ ಹೊಸಾ ಲೀಕವೊಂದನ್ನು ತಮ್ಮೆದುರು ತೆರೆದಿಡುವ ಸಿನಿಮಾಗಳಿಗಾಗಿ ಹಾತೊರೆಯುವ ಪ್ರೇಕ್ಷಕರ ಸಂಖ್ಯೆ ನಮ್ಮಲ್ಲಿ ಗಣನೀಯವಾಗಿದೆ. ಅಂಥಾ ಪ್ರೇಕ್ಷಕ ವರ್ಗದ ಮನಸೆಳೆಯಬಲ್ಲ ಕಂಟೆಂಟು ಹೊಂದಿರುವ ಸೀಸ್ ಕಡ್ಡಿ ಚಿತ್ರ ಈ ವಾರ ಬಿಡುಗಡೆಗೊಂಡಿದೆ. ಇದು ರತನ್ ಗಂಗಾಧರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ. ಸೀಸ್ ಕಡ್ಡಿಯ ಗುಣಲಕ್ಷಣಗಳನ್ನೇ ಐದು ಪಾತ್ರವಾಗಿಸಿಕೊಂಡು, ಆ ಮೂಲಕ ಐದು ಕಥನಗಳು ಗರಿಬಿಚ್ಚಿಕೊಳ್ಳುವ ಹೊಸತನದೊಂದಿಗೆ ಈ ಸಿನಿಮಾವನ್ನವರು ದೃಶ್ಯೀಕರಿಸಿದ್ದಾರೆ. ಈ ಹಿಂದೆಯೂ ಕೂಡಾ ಈ ಬಗೆಯ ಪ್ರಯೋಗಗಳು ನಡೆದಿರೋದು ನಿಜ. ಆದರೆ, ಅದೆಲ್ಲದರಾಚೆಗೆ ಹೊಸಾ ಗುಂಗಿಗೊಡ್ಡಿಕೊಳ್ಳುವಂತೆ ಈ ಕಥನವನ್ನು ನಿರೂಪಣೆ ಮಾಡಿರೋದು ಸೀಸ್ ಕಡ್ಡಿಯ ಹೆಚ್ಚುಗಾರಿಕೆ. ನಮಗೆಲ್ಲ ವಿಕ್ರಮ ಬೇತಾಳನ ಕಥೆಗಳು ಬಾಲ್ಯದ ಸಾಥಿಗಳಾಗಿವೆ. ನಮ್ಮೆಲ್ಲರ ಕಲ್ಪನಾ ಶಕ್ತಿಗೆ ಹೊಸಾ…

Read More

ಒಂದು ಹಂತದಲ್ಲಿ ಬಾಲಿವುಡ್ಡಿನ ಸೂಪರ್ ಸ್ಟಾರ್ ಆಗಿ ಮೆರೆದಿದ್ದವರು ಆಮೀರ್ ಖಾನ್. ಅದೆಂಥಾದ್ದೇ ಪಾತ್ರವಾದರೂ ಅದಕ್ಕೊಗ್ಗಿಕೊಂಡು ನಟಿಸುವ ಛಾತಿ ಹೊಂದಿರೋ ಆಮಿರ್ ಅಪ್ರತಿಮ ನಟ ಅನ್ನೋದರಲ್ಲಿ ಯಾವ ಸಂದೇಹವೂ ಇಲ್ಲ. ಅವರು ಇದುವರೆಗೂ ನಿರ್ವಹಿಸಿರುವ ಪಾತ್ರಗಳೇ ಆಮೀರ್ ನಟನೆಯ ಛಾತಿಗೆ ಸಾಕ್ಷಿಯೆಂಬಂತಿವೆ. ಅದೆಂಥಾ ಮೇರು ನಟನೇ ಆದರೂ ಒಂದು ಹಂತದಲ್ಲಿ ಸೋಲಿನ ಭಯ ಆವರಿಸಿಕೊಳ್ಳುತ್ತೆ. ಕೆಲ ಮಂದಿ ಮತ್ತೆ ಮತ್ತೆ ಪ್ರಯತ್ನಿಸುತ್ತಾರೆ. ತಲೆಮಾರುಗಳಾಚೆಗೆ ಹೊಸಾ ಅಲೆಯೆದ್ದಾಗ, ದಡ ಸೇರಲಾಗದ ವಾತಾವರಣ ಕಂಡರೆ ಘನತೆಯಿಂದ ನಿರ್ಗಮಿಸುವವರೂ ಇದ್ದಾರೆ. ಸದ್ಯಕ್ಕೆ ಆಮೀರ್ ಖಾನ್ ಕೂಡಾ ಅಂಥಾದ್ದೊಂದು ನಿರ್ಧಾರ ಮಾಡಿದಂತಿದೆ. ಸದ್ಯಕ್ಕೆ ಆಮೀರ್ ಖಾನ್ ಮಹಾಭಾರತ ಎಂಬ ಬಿಗ್ ಬಜೆಟ್ ಚಿತ್ರದ ಭಾಗವಾಗಿದ್ದಾರೆ. ಅದಕ್ಕೂ ಮುನ್ನ ಅವರ ಗಮನವೀಗ ಸಿತಾರೆ ಜಮೀನ್ ಪರ್ ಚಿತ್ರದತ್ತ ಕೇಂದ್ರೀಕರಿಸಿಕೊಂಡಿದೆ. ತಾರೇ ಜಮೀನ್ ಪರ್ ದಶಕದ ಹಿಂದೆ ತೆರೆಗಂಡು ಸೂಪರ್ ಹಿಟ್ ಆಗಿದ್ದ ಸಿನಿಮಾ. ಒಂದು ಸುದೀರ್ಘ ಗ್ಯಾಪಿನ ನಂತರದಲ್ಲಿ ಆಮೀರ್ ಖಾನ್ ಬಲು ಆಸ್ಥೆಯಿಂದ ಅದರ ಸೀಕ್ವೆಲ್ ಅನ್ನು…

Read More

ರಶ್ಮಿಕಾ ಮಂದಣ್ಣ ತೆಲುಗು ಚಿತ್ರರಂಗದಲ್ಲಿ ಮಿಂಚಿದ ಪರಿ ಕಂಡು ಪ್ರೇಕ್ಷಕರಿಗಾಗಿದ್ದ ಬೆರಗಿನ್ನೂ ಹಸಿ ಹಸಿಯಾಗಿದೆ. ಕನ್ನಡದಲ್ಲಿ ಕಿರಿಕ್ ಪಾರ್ಟಿ ಅಂತೊಂದು ಸಿನಿಮಾದಲ್ಲಿ ನಟಿಸಿದ್ದ ಈಕೆ, ಆ ನಂತರ ಏಕಾಏಕಿ ತೆಲುಗಿಗೆ ಹಾರಿದಾಗ ಮೂದಲಿಕೆ ಕೇಳಿ ಬಂದಿದ್ದೇ ಹೆಚ್ಚು. ಆದರೆ, ರಶ್ಮಿಕಾ ಸಾಲು ಸಾಲು ದೊಡ್ಡ ಸಿನಿಮಾಗಳಲ್ಲಿ ಅವಕಾಶ ಗಿಟ್ಟಿಸಿಕೊಳ್ಳುತ್ತಲೇ ಸಾಗಿದ್ದಳು. ಹಾಗೆ ಆಕೆ ನಟಿಸಿದ್ದ ಚಿತ್ರಗಳೆಲ್ಲವೂ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದ್ದವು. ಆ ಬಳಿಕ ಒಂದಷ್ಟು ಹಿನ್ನಡೆಯನ್ನೂ ಕಂಡಿದ್ದ ರಶ್ಮಿಕಾ ಇದೀಗ ಬಾಲಿವುಡ್ಡಿಗೆ ಹಾರಿದ್ದಾಳೆ. ಅಲ್ಲಂತೂ ಆರಂಭದಲ್ಲೇ ಸತತವಾಗಿ ಎರಡು ಸೋಲೆದುರಾಗಿದೆ. ಅಚ್ಚರಿಯೆಂದರೆ, ಹೀಗಿದ್ದರೂ ಕೂಢಾ ಕಿರಿಕ್ ಹುಡುಗಿಗೆ ಬೇಡಿಕೆ ತಗ್ಗಿಲ್ಲ! ಅನಿಮಲ್ ಅಂತೊಂದು ಚಿತ್ರದಲ್ಲಿ ರಶ್ಮಿಕಾ ನಟಿಸಿದ್ದಳು. ಅದನ್ನು ನಿಕರ್ದೇಶನ ಮಾಡಿದ್ದಾತ ತೆಲುಗುವಾಳ್ಳು ಸಂದೀಪ್ ರೆಡ್ಡಿ ವಂಗಾ. ತೀರಾ ಹಿಂಸೆ, ಕಾಮದ ವಿಜೃಂಭಣೆಯಿಂದ ಕೂಡಿದ್ದ ಆ ಚಿತ್ರಕ್ಕೆ ಛೀಮಾರಿ ಎದುರಾಗಿತ್ತು. ಅದರಲ್ಲೊಂದು ಪಾತ್ರವಾಗಿದ್ದ ರಶ್ಮಿಕಾಗೆ ಹೇಳಿಕೊಳ್ಳುವಂಥಾ ಯಶವೇನು ಸಿಕ್ಕಿಲ್ಲ. ಆದರೆ, ಯಾವಾಗ ರಶ್ಮಿಕಾ ಸಿಕಂದರ್ ಚಿತ್ರದಲ್ಲಿ ಅವಕಾಶ ಗಿಟ್ಟಿಸಿಕೊಂಡಳೋ, ಅದನ್ನು…

Read More