Subscribe to Updates
Get the latest creative news from FooBar about art, design and business.
Author: Santhosh Bagilagadde
Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.
ಸಿನಿಮಾ ಪ್ರಚಾರದ ಪಟ್ಟುಗಳಲ್ಲಿ ಪಾರಂಗತರಾಗವಿರುವ ಜೋಗಿ ಪ್ರೇಮ್ ಶೋಮ್ಯಾನ್ ಅನ್ನೋ ಬಿರುದಾಂಕಿತವನ್ನು ತನ್ನದಾಗಿಸಿಕೊಂಡಿದ್ದಾರೆ. ಒಂದೆರಡು ಹಿಟ್ ಸಿನಿಮಾಗಳ ನಂತರ ನಾನಾ ಏರಿಳಿತ ಕಂಡಿರುವ ಪ್ರೇಮ್ಸ್ ಆಗಾಗ ಫೀನಿಕ್ಸಿನಂತೆ ಪುಟಿದೇಳುವ ವಿಶೇಷ ಗುಣವನ್ನೂ ಹೊಂದಿದ್ದಾರೆ. ದ್ರುವ ಸರ್ಜಾ ನಾಯಕನಾಗಿ ನಟಿಸಿರೋ ಕೇಡಿ ಚಿತ್ರದ ಮೂಲಕ ಪ್ರೇಮ್ ಮತ್ತೆ ಪುಟಿದೇಳ್ತಾರಾ? ಹಾಗೊಂದು ಸಕಾರಾತ್ಮಕ ದಿಕ್ಕಿನ ಆಲೋಚನೆಗೆ ಇತ್ತೀಚೆಗೆ ಬಿಡುಗಡೆಗೊಂಡಿರುವ ಟ್ರೈಲರ್ ಅಂಥಾದ್ದೊಂದು ಸಕಾರಾತ್ಮಕ ದಿಕ್ಕಿನ ಚರ್ಚೆ ಹುಟ್ಟುಹಾಕಿದೆ. ಒಟ್ಟಾರೆ ಟ್ರೈಲರ್ರ ಮೂಡಿ ಬಂದುಇರುವ ರೀತಿ, ಮೇಕಿಂಗ್ ಮತ್ತು ಕಥಾ ಹಂದರದ ಸುಳಿವುಗಳು ಸಿನಿಮಾ ಪ್ರೇಮಿಗಳಲ್ಲಿ ಒಂದಷ್ಟು ಭರವಸೆ ಮೂಡಿಸಿವೆ. ಹೆಚ್ಚೇನಲ್ಲದಿದ್ದರೂ ಕೇಡಿಯ ಬಗ್ಗೆ ಒಂದಷ್ಟು ಕುತೂಹಲ ಇದ್ದದ್ದಂತೂ ನಿಜ. ಈ ಸಿನಿಮಾಕ್ಕೆ ಧ್ರುವ ಸರ್ಜಾಧ ನಾಯಕನೆಂದು ನಿಕ್ಕಿಯಾದಾಗಲೂ ಅಂಥಾದ್ದೇ ವಾತಾವರಣವಿತ್ತು. ಭಾರೀ ನಿರೀಕ್ಷೆ ಮೂಡಿಸಿದ್ದ ಧ್ರುವ ಅಭಿನಯದ ಮಾರ್ಟಿನ್ ಮಗುಚಿಕೊಂಡ ನಂತರವಂತೂ ಕ್ರೇಜ್ ಎಂಬುದು ಸಂಪೂರ್ಣವಾಗಿ ಮಂಕಾಗಿ ಬಿಟ್ಟಿತ್ತು. ಆದರೀಗ ಬಿಡುಗಡೆಗೊಂಡಿರುವ ಕೇಡಿ ಟ್ರೈಲರಿನಲ್ಲಿ ಮಾಸ್ ಶೈಲಿಯ ಕಿಡಿ ಮೂಡಿಕೊಂಡಿದೆ. ಒಂದರೆಕ್ಷಣ ಪ್ರೇಮ್ ಮ್ಯಾಜಿಕ್ಕು…
ತೆಲುಗು ಚಿತ್ರರಂಕ್ಕೆ ಕರುನಾಡಿಂದ ಹೋಗಿ ಮಿಂಚಿದ್ದವರಲ್ಲಿ ಪೂಜಾ ಹೆಗ್ಡೆ ಮುಂಚೂಣಿ ಸ್ಥಾನ ಗಿಟ್ಟಿಸಿಕೊಳ್ಳುತ್ತಾರೆ. ರಶ್ಮಿಕಾಗೂ ಮೊದಲೇ ಸ್ಟಾರ್ ನಟಿಯಾಗಿ ಪೂಜಾ ತೆಲುಗಿನಲ್ಲಿ ನೆಲೆ ಕಂಡುಕೊಂಡಿದ್ದಳು. ತೆಲುಗು ನಾಡಲ್ಲಿ ಮಂಗಳೂರಿನ ಮೆರೆದಾಟ ಕಂಡು ಅಲ್ಲಿನ ನಟಿಯರೇ ಅವಾಕ್ಕಾಗಿ ಬಿಟ್ಟಿದ್ದರು. ಇಂಥಾ ಪೂಜಾ ಹೆಗ್ಡೆಯೇ ಅವಕಾಶವಿಲ್ಲದೆ ಪರಿತಪಿಸುವಂತಾಗುತ್ತದೆ, ಒಂದು ಗೆಲುವಿಗಾಗಿ ವರ್ಷಗಟ್ಟಲೆ ಹಪಾಹಪಿಸಬೇಕಾಗುತ್ತದೆಂದು ಬಹುಶಃ ಯಾರೆಂದರೆ ಯಾರೂ ಊಹಿಸಿರಲಿಕ್ಕಿಲ್ಲ. ಇಂಥಾ ಸ್ಥಿತಿಯಿಂದಾಗಿ ವರ್ಷಗಟ್ಟಲೆ ವನವಾಸ ಅನುಭವಿಸಿದ್ದ ಪೂಜಾ ಪಾಲಿಗೀಗ ಬಾಲಿವುಡ್ ಸಿನಿಮಾಗಳಲ್ಲಿ ಅವಕಾಶ ಸಿಗುತ್ತಿದೆ ಎಂಬಂಥಾ ಸುದ್ದಿ ಹಬ್ಬಿಕೊಂಡಿತ್ತು. ಆದರೀಗ ದಕ್ಷಿಣ ಭಾರತೀಯ ಚಿತ್ರರಂಗದ ದೊಡ್ಡ ಸಿನಿಮಾ ಅವಕಾಶವೊಂದು ಪೂಜಾಗೆ ಕೈತಪ್ಪಿದ ಸುದ್ದಿ ಜಾಹೀರಾಗಿದೆ! ಹಾಗೆ ಪೂಜಾಳ ಕೈತಪ್ಪಿ ಹೋಗಿರೋದು ಧನುಷ್ ನಟನೆಯ ತಮಿಳು ಚಿತ್ರ. ಧನುಷ್ ಇದೀಗ ಕುಬೇರ ಚಿತ್ರದ ಯಶಸ್ಸಿನಿಂದ ಖುಷಿಗೊಂಡಿದ್ದಾರೆ. ಅದರ ಬೆನ್ನಲ್ಲಿಯೇ ಆತ ನಟಿಸಿರುವ ಇಡ್ಲಿ ಕಡೈ ಚಿತ್ರದ ಅಂತಿಮ ಘಟ್ಟದ ಕೆಲಸ ಕಾರ್ಯಗಳು ಭರದಿಂದ ಸಾಗುತ್ತಿವೆ. ಇಡ್ಲಿ ಕಡೈ ಬಗ್ಗೆಯೂ ಕೂಡಾ ಭಾರೀ ನಿರೀಕ್ಷೆಗಳಿದ್ದಾವೆ. ಅದು ಅಕ್ಟೋಬರ್‌ನಲ್ಲಿ…
ಕನ್ನಡದಲ್ಲೊಂದು ಸಿನಿಮಾದಲ್ಲಿ ನಟಿಸಿದ ನಂತರ ಸೀದಾ ತೆಲುಗಿಗೆ ಹಾರಿ, ಅಲ್ಲಿಯೇ ಯಶ ಕಂಡಿರುವಾಕೆ ರಶ್ಮಿಕಾ ಮಂದಣ್ಣ. ಒಂದರ ಹಿಂದೊಂದು ಹಿಟ್ ಸಿನಿಮಾಗಳಲ್ಲಿ ನಟಿಸಿದ ನಂತರದಲ್ಲಿ ಏಕಾಏಕಿ ರಶ್ಮಿಕಾಗೆ ಹಿನ್ನಡೆ ಉಂಟಾಗಿತ್ತು. ಇನ್ನೇನು ಆಕೆ ಪೂಜಾ ಹೆಗ್ಡೆ ಮುಂತಾದವರಂತೆ ವರ್ಷಗಟ್ಟಲೆ ವನವಾಸ ಅನುಭವಿಸಬೇಕಾಗುತ್ತೆ ಎಂಬಂಥಾ ವಾತಾವರಣವೂ ಸೃಷ್ಟಿಯಾಗಿ ಬಿಟ್ಟಿತ್ತು. ಒಂದಷ್ಟು ಟ್ರೋಲ್ ಮಂದಿ ರಶ್ಮಿಕಾಳ ಹಿನ್ನಡೆಯನ್ನ ಸಂಭ್ರಮಿಸಿದ್ದೂ ನಡೆದಿತ್ತು. ಆದರೆ, ಆ ಸಂಭ್ರಮ ಹೆಚ್ಚು ದಿನ ಉಳಿಯಲೇ ಇಲ್ಲ. ಯಾಕೆಂದರೆ, ಅತ್ಯಂತ ಕಡಿಮೆ ಕಾಲಾವಧಿಯಲ್ಲಿಯೇ ಆಕೆ ಮತ್ತೆ ಫಾರ್ಮಿಗೆ ಮರಳಿದ್ದಾಳೆ. ಇದೀಗ ಸತತ ಮೂರನೇ ಬಾರಿ ಅಲ್ಲು ಅರ್ಜುನ್‌ಗೆ ನಾಯಕಿಯಾಗೋ ಅವಕಾಶವನ್ನೂ ಗಿಟ್ಟಿಸಿಕೊಂಡಿದ್ದಾಳೆ! ಅಲ್ಲು ಅರ್ಜುನ್ ಪುಷ್ಪ ಸರಣಿ ಸಿನಿಮಾಗಳ ಮೂಲಕ ಪ್ಯಾನಿಂಡಿಯಾ ಸ್ಟಾರ್ ಆಗಿ ಮೆರೆಯುತ್ತಿದ್ದಾರೆ. ಈ ಸರಣಿಯ ನಂತರದಲ್ಲಿ ಅಲ್ಲು ಮುಂದಿನ ನಡೆಯೇನೆಂಬ ಪ್ರಶ್ನೆಗೆ ಉತ್ತರವೂ ಸಿಕ್ಕಾಗಿದೆ. ತಮಿಳು ನಿರ್ದೇಶಕ ಅಟ್ಲಿ ಸಾರಥ್ಯದ ಸಿನಿಮಾಕ್ಕಾಗಿ ಇದೀಗ ಸರ್ವ ತಯಾರಿಯೂ ನಡೆಯುತ್ತಿದೆ. ಇದೇ ಹೊತ್ತಿನಲ್ಲಿ ಈ ಚಿತ್ರದ ನಾಯಕಿಯಾಗಿ ರಶ್ಮಿಕಾ ಮಂದಣ್ಣ…
ಗಣಿ ಧೂಳಿನಿಂದ ಗೆಬರಿಕೊಂಡ ಕಾಸಲ್ಲಿ ಒಂದಿಡೀ ಕರ್ನಾಟಕದ ರಾಜಕೀಯ ವ್ಯವಸ್ಥೆಯನ್ನೇ ಗಬ್ಬೆಬ್ಬಿಸಿದ ಕುಖ್ಯಾತಿ ಗಾಲಿ ಜನಾರ್ಧನ ರೆಡ್ಡಿಗಿದೆ. ಬರ್ಳಳಾರಿ ಸೀಮೆಯಲ್ಲಿ ನೆಲ ಬಗೆಯುತ್ತಾ, ಅಕ್ರಮಗಳ ಮೇಲೆ ಅಕ್ರಮಗಳನ್ನು ನಡೆಸಿ ಕಡೆಗೂ ಜೈಲುವಾಸವನ್ನೂ ಅನುಭವಿಸಿದ್ದ ಕರಾಳ ಹಿಸ್ಟರಿ ರೆಡ್ಡಿಯದ್ದು. ಇತ್ತೀಚೆಗಷ್ಟೇ ಮತ್ತೆ ಜೈಲುಪಾಲಾಗಿದ್ದ ಗಣಿಗಳ್ಳ ಅದು ಹೇಗೋ ತಾತ್ಕಾಲಿಕವಾಗಿ ಬಚಾವಾಗಿದ್ದಾನೆ. ಕೊಳ್ಳೆ ಹೊಡೆದ ಕಾಸಲ್ಲಿ ತಿರುಪತಿ ತಿಮ್ಮಪ್ಪನಿಗೆ ಚಿನ್ನದ ಕಿರೀಟ ಮಾಡಿಸಿದ್ದ ರೆಡ್ಡಿಯದ್ದು ಚಿನ್ನದ ಕಾಚಾ ಹಾಕಿಕೊಂಡು ಓಡಾಡುವಷ್ಟು ಶೋಕಿಯ ಬದುಕು. ಇಂತಿಪ್ಪ ರೆಡ್ಡಿಗೆ ತನ್ನ ಪುತ್ರ ಕಿರೀಟಿ ಎಂಬಾತನನ್ನು ಹೀರೋ ಆಗಿ ಮೆರೆಸಬೇಕೆಂಬ ತಲುಬಿತ್ತು. ಅದರ ಫಲವಾಗಿಯೇ ಶುರುವಾಗಿದ್ದ ಚಿತ್ರ ಜ್ಯೂನಿಯರ್. ಇದರಲ್ಲಿ ಶ್ರೀಲೀಲಾ ರೆಡ್ಡಿಮಗ ಕಿರೀಟಿಯೊಂದಿಗೆ ಕುಣಿದು ಕುಪ್ಪಳಿಸಿದ ಹಾಡೊಂದೀಗ ತಕ್ಕ ಮಟ್ಟಿಗೆ ಸೌಂಡು ಮಾಡುತ್ತಿದೆ! ಜನಾರ್ಧನ ರೆಡ್ಡಿ ತನ್ನ ಮಗ ಕಿರೀಟಿಯನ್ನು ದೊಡ್ಡ ಮಟ್ಟದಲ್ಲಿ ಲಾಂಚ್ ಮಾಡಲು ಸರ್ವ ತಯಾರಿಯನ್ನೂ ಮಾಡಿಕೊಂಡಿದ್ದ. ಅದುವರೆಗೆ ನಡೆದಿದ್ದ ಅಂದಾದುಂ ದಿಗಳನ್ನು ಕಾಸಿನ ಬಲದಿಂದಲೇ ದಕ್ಕಿಸಿಕೊಳ್ಳುವ ಅಹಮ್ಮಿಕೆ ರೆಡ್ಡಿಯದ್ದಾಗಿತ್ತು. ಕಡೆಗೂ ಕೂಡಾ ಅಷ್ಟದಿಕ್ಕುಗಳಿಂದ…
`ಅಲ್ಪನಿಗೆ ಐಶ್ವರ್ಯ ಬಂದರೆ ನಡುರಾತ್ರೀಲಿ ಕೊಡೆ ಹಿಡಿದನಂತೆ…’ ಹೀಗೊಂದು ನಾನ್ಣುಡಿ ನಮ್ಮ ನಡುವೆ ಲಾಗಾಯ್ತಿನಿಂದಲೂ ಚಾಲ್ತಿಯಲ್ಲಿದೆ. ಅದು ಬಹುಕಾಲದಿಂದ ಜನಜನಿತವಾದರೂ ಸಲಕಲು ಗಾದೆ ಮಾತು ಅನ್ನಿಸಿಕೊಂಡಿಲ್ಲ. ಯಾಕೆಂದರೆ ನಡು ರಾತ್ರೀಲಿ ಕೊಡೆ ಹಿಡಿಯೋ ಅಲ್ಪರ ಸಂಖ್ಯೆ ಕಡಿಮೆಯಾಗಿಲ್ಲ. ಆ ಸಾಲಿಗೆ ಹೊಸದಾಗಿ ಸೇರ್ಪಡೆಗೊಂಡಿರುವಾತ ಮಡೇನೂರು ಮನು ಎಂಬ ಕಾಮಿಡಿ ನಟ. ಹಾಸ್ಯ ನಟರಾಗಿ ಖ್ಯಾತರಾಗಿ, ಬಹು ಬೇಡಿಕೆದಬ ಹೊಂದಿದ್ದ ಅನೇಕರಿಗೆ ನಡುದಾರಿಯಲ್ಲಿಯೇ ನಾಯಕ ನಟನಾಗುವ ತಲುಬು ಹತ್ತಿಕೊಳ್ಳೋದೇನೂ ಹೊಸತಗಲ್ಲ. ಆದರೆ, ಕಾಮಿಡಿ ಕಿಲಾಡಿಗಳು ಅಂತೊಂದು ಡಬಲ್ ಮೀನಿಂಗ್ ಶೋನಲ್ಲಿ ಭಾಗಿಯಾಗಿದ್ದ ಮಡೇನೂರು ಮನು ಎಂಬಾತನಿಗೆ ಆರಂಭದಲ್ಲಿಯೇ ಅಂಥಾದ್ದೊಂದು ತಲುಬು ಹತ್ತಿಕೊಂಡಿತ್ತು. ಕಷ್ಟಪಟ್ಟಿದ್ದರೆ ತನಗೊಪ್ಪುವ ಪಾತ್ರಗಳಲ್ಲಿ ಮಿಂಚುವ ಅವಕಾಶಗಳೂ ಈತನೆದುರಿಗಿದ್ದವು. ಆದರೆ ಅದೆಲ್ಲವೂ ಕಾಮದ ಕೊಚ್ಚೆಯಲ್ಲಿ ಲೀನವಾಗಿ ಬಿಟ್ಟಿದೆ! ಮಡೇನೂರು ಹೋರಿ ಕಾಂಪೌಂಡು ಹಾರಲು ಹೋಗಿ ಯಡವಟ್ಟು ಮಾಡಿಕೊಂಡಿದೆ. ಅದ್ಯಾರೋ ಮಿಂಚು ಎಂಬಾಕೆಯೊಂದಿಗೆ ಅನಧಿಕೃತವಾಗಿ ಎರಡನೇ ಸಂಸಾರ ಹೂಡಲು ಹೋಗಿ ಮನು ಮಾನ ಕಳೆದುಕೊಂಡಿದ್ದಾನೆ. ತಾನು ಸ್ಟಾರ್ ನಟ ಎಂಬ ಭ್ರಮೆಯಲ್ಲಿ ದರ್ಶನ್,…
ರಾಕಿಂಗ್ ಸ್ಟಾರ್ ಯಶ್ ಈಗ ಪ್ಯಾನಿಂಡಿಯಾ ಸ್ಟಾರ್ ಆಗಿದ್ದಾರೆ. ತೀರಾ ಕಡುಗಷ್ಟದಿಂದ ಈ ಹಂತ ತಲುಪಿರುವ ಯಶ್ ಒಂದೊಂದು ಘಳಿಗೆಯಲ್ಲಿ ಬಿಡುಬೀಸಾಗಿ ಮಾತಾಡಿದರೂ ದುರಹಂಕಾರ ಪ್ರದರ್ಶಿಸಿದವರಲ್ಲ. ಆದರೆ, ಅಂಥಾ ಯಶ್ ಅಮ್ಮ ಪುಷ್ಪ ಅರುಣ್ ಕುಮಾರ್ ಅವರ ಇತ್ತಿತ್ತಲಾಗಿನ ಅವತಾರ ಕಂಡು ಖುದ್ದು ಯಶ್ ಅಭಿಮಾನಿಗಳೇ ಕಂಗಾಲಾಗಿದ್ದಾರೆ. ಏಕಾಏಕಿ ನಿರ್ಮಾಪಕಿಯಾಗಿ ಅವತಾರವೆತ್ತಿರುವ ಪುಷ್ಪಾ ಪಿಎ ಪ್ರೊಡಕ್ಷನ್ಸ್ ಅಂತೊಂದು ಬ್ಯಾನರಿನಡಿಯಲ್ಲಿ ಕೊತ್ತಲವಾಡಿಯೆಂಬ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಆ ಚಿತ್ರ ಆಗಸ್ಟ್ ಒಂದರಂದು ತೆರೆಗಾಣಲಿದೆ ಎಂಬ ವಿಚಾರವನ್ನು ಚಿತ್ರ ತಂಡವೇ ಅಧಿಕೃತವಾಗಿ ಘೋಶಿಸಿದೆ. ಆದರೆ, ಸಿನಿಮಾ ಬಗ್ಗೆ ಹುಟ್ಟಿಕೊಳ್ಳಬೇಕಿದ್ದ ಚರ್ಚೆಗಳೆಲ್ಲವನ್ನೂ ಹಠಾತ್ ನಿರ್ಮಾಪಕಿ ಪುಷ್ಪಾ ಮೇಡಮ್ಮು ಲಂಗು ಲಗಾಮಿಲ್ಲದ ಮಾತುಗಳ ಮೂಲಕ ಮತ್ತೊಂದು ದಿಕ್ಕಿನತ್ತ ಹೊರಳಿಸಿ ಬಿಟ್ಟಿದ್ದಾರೆ! ರಾಕಿಂಗ್ ಸ್ಟಾರ್ ಯಶ್ ತಾಯಿ ನಿರ್ಮಾಪಕಿಯಾಗಿದ್ದಾರೆಂಬ ವಿಚಾರ ಹೊರ ಬಿದ್ದಾಕ್ಷಣದಿಂದಲೂ ಸಹಜವಾಗಿಯೇ ಒಂದಷ್ಟು ಕುತೂಹಲ ಮೂಡಿಕೊಂಡಿತ್ತು. ಆ ನಂತರ ಪುಷ್ಪಾ ಅರುಣ್ ಕುಮಾರ್ ಪತ್ರಿಕಾ ಗೋಷ್ಠಿ ನಡೆಸಿದಾಗ ಆಕೆ ಮಾತಾಡಿದ ರೀತಿ ಕಂಡು ಪಾರ್ವತಮ್ಮ ರಾಜ್…
ಕಾಂತಾರ ಚಿತ್ರದ ಪ್ರಭೆಯಲ್ಲಿ ಮೊದಲ ಹೆಜ್ಜೆಯಲ್ಲಿಯೇ ಗೆಲುವು ದಕ್ಕಿಸಿಕೊಂಡಿದ್ದಾಕೆ ಸಪ್ತಮಿ ಗೌಡ. ಕನ್ನಡಕ್ಕೆ ಮಾತ್ರವೇ ಸೀಮಿತವಾಗಿ ತಯಾರಾಗಿದ್ದ ಕಾಂತಾರಾ ತಂತಾನೇ ಪ್ಯಾನಿಂಡಿಯಾ ಮಟ್ಟದಲ್ಲಿ ಗೆಲುವು ಕಂಡಿದ್ದೀಗ ಇತಿಹಾಸ. ಆರಂಭದಲ್ಲಿ ಕಾಂತಾರದ ಬಗ್ಗೆ ಹೇಳಿಕೊಳ್ಳುವಂಥಾ ನಿರೀಕ್ಷೆಗಳಿರಲಿಲ್ಲ. ಹಾಗಿದ್ದ ಮೇಲೆ ಸಪ್ತಮಿ ಗೌಡ ಆ ಚಿತ್ರದ ನಾಯಕಿಯಾದ ವಿಚಾರ ಸಂಚಲನ ಸೃಷ್ಟಿಸಲುಯ ಸಾಧ್ಯವೇ? ಆದರೆ, ಈ ಹುಡುಗಿಯ ಪಾಲಿಗೆ ಮೊದಲ ಚಿತ್ರವೇ ಯಾರೂ ಊಹಿಸಿರದಂಥಾ ನೇಮು ಫೇಮು ತಂದು ಕೊಟ್ಟಿದ್ದು ಸತ್ಯ. ಅದಾದ ಬಳಿಕ ಕಾಂತಾರದ ಸಮೀಪ ಸುಳಿಯಬಹುದಾದ ಮತ್ತೊಂದು ಗೆಲುವು ಸಪ್ತಮಿಗೆ ಸಿಕ್ಕಿಲ್ಲ. ಈ ನಡುವೆ ತೆಲುಗಿಗೆ ಹಾರಿ ನಾಯಕಿಯಾಗಿದ್ದ ಸಪ್ತಮಿ ಆರಂಭಿಕ ಹೆಜ್ಜೆಯಲ್ಲಿಯೇ ಅಕ್ಷರಶಃ ಮುಗ್ಗರಿಸಿದ್ದಾರೆ! ತೆಲುಗಿನಲ್ಲಿ ನಿತಿನ್ ಜೊತೆ ತಮ್ಮುಡು ಅಂತೊಂದು ಚಿತ್ರದಲ್ಲಿ ನಾಯಕಿಯಾಗಿ ನಟಿಸೋ ಅವಕಾಶ ಸಪ್ತಮಿಗೆ ಒಲಿದು ಬಂದಿತ್ತು. ಇಂಥಾದ್ದೊಂದು ಸುದ್ದಿ ಹೊರ ಬಿದ್ದೇಟಿಗೆ, ರಶ್ಮಿಕಾ ಮಂದಣ್ಣಳಂತೆ ಕಾಂತಾರಾ ಹುಡುಗಿ ಕೂಡಾ ತೆಲುಗು ಚಿತ್ರರಂಗದಲ್ಲಿ ಮಿಂಚಬಹುದೆಂಬ ನಿರೀಕ್ಷೆಗಳಿದ್ದವು. ಖುದ್ದು ಸಪ್ತಮಿಗೂ ಕೂಡಾ ಅಂಥಾದ್ದೊಂದು ನಿರೀಕ್ಷೆ ಇದ್ದೇ ಇತ್ತು.…
ತೆಲುಗು ಚಿತ್ರರಂಗಕ್ಕೆ ಹಾರಿ, ಅಲ್ಲಿ ಭರಪೂರ ಗೆಲುವು ದಕ್ಕುತ್ತಲೇ ನಿಂತಲ್ಲಿ ಕುಂತಲ್ಲಿ ಕಿರಿಕ್ಕು ಸೃಷ್ಟಿಸಿಕೊಂಡಿದ್ದಾಕೆ ರಶ್ಮಿಕಾ ಮಂದಣ್ಣ. ತನ್ನದೊಂದು ಮಾತು ಎಂತೆಂಥಾ ಕೋನದಲ್ಲಿ ವಿವಾದಕ್ಕೆ ಕಾರಣವಾಗುತ್ತೆ ಅನ್ನೋದು ಖಾತರಿಉಯಿದ್ದರೂ ಕೂಡಾ ಕಿರಿಕ್ ಹುಡುಗಿಗೆ ಅದರ ಬಗೆಗೊಂದು ನಿರ್ಲಕ್ಷ್ಯವಿದ್ದಂತಿತ್ತು. ಅದರಲ್ಲಿಯೂ ವಿಶೇಷವಾಗಿ, ಹಲವಾರು ಬಾರಿ ತನ್ನ ತಾಯಿನುಡಿಯಾದ ಕನ್ನಡದ ಬಗ್ಗೆ ತಾತ್ಸಾರ ತೋರುವ ಮೂಲಕ ಈಕೆ ಹೀನಾಮಾನ ಟ್ರೋಲಿಗೀಡಾಗವಿದ್ದಳು. ಇದೆಲ್ಲದರಿಂದ ಇದೀಗ ರಶ್ಮಿಕಾ ಪಾಠ ಕಲಿತಂತಿದೆ. ಈ ಕಾರಣದಿಂದಲೇ ಆಕೆಯ ಮಾತಿಗೊಂದು ಘನತೆಯ, ಸೂಕ್ಷ್ಮವಂತಿಕೆಯ ಕಳೆ ಬಂದ ಹಾಗಿದೆ! ಇತ್ತೀಚೆಗೆ ಲಂಡನ್ನಿನಲ್ಲಿ ನಡೆದ ಕಾರ್ಯ ಕ್ರಮವೊಂದರಲ್ಲಿ ಧೂಮಪಾನದ ಬಗ್ಗೆ ರಶ್ಮಿಕಾ ತಳೆದಿರೋ ನಿಲುವು ಭಾರೀ ಸುದ್ದಿಯಾಗಿತ್ತು. ಖಾಸಗಿ ಬದುಕಲ್ಲಿ ಧೂಮಪಾನವನ್ನು ವಿರೋಧಿಸುತ್ತಾ ಬಂದಿರೋದಾಗಿ ತಿಳಿಸಿದ್ದ ರಶ್ಮಿಕಾ, ಸಿನಿಮಾದಲ್ಲಿ ಕೂಡಾ ಧೂಮಪಾನ ಮಾಡೋದಿಲ್ಲ ಅಂದಿದ್ದಾಳೆ. ಒಂದುವೇಳೆ ಧೂಮಪಾನದ ಸನ್ನಿವೇಶದಲ್ಲಿ ಪಾಲ್ಗೊಳ್ಳಲೇ ಬೇಕೆಂಬ ಒತ್ತಾಯ ಬಂದರೆ, ಆ ಪ್ರಾಜೆಕ್ಟನ್ನೇ ಕೈ ಬಿಡೋದಾಗಿಯೂ ಹೇಳಿದ್ದಾಳೆ. ರಶ್ಮಿಕಾಳ ಮಾತಿನ ಹಿಂದಿರುವ ಸಾಮಾಜಿಕ ಕಾಳಜಿಯ ಬಗೆಗೀಗ ಸಾಮಾಜಿಕ ಜಾಲತಾಣಗಳಲ್ಲಿಯೂ ಮೆಚ್ಚುಗೆಯ…
ಪ್ರಕೃತಿ ಸೂತ್ರಗಳಿಗೆ ವಿರುದ್ಧವಾಗಿ ಚಲಿಸಿ ಬಚಾವಾಗುವ ಯಾವ ಶಕ್ತಿಯೂ ಕೂಡಾ ಮನುಷ್ಯಮಾತ್ರರಿಗಿಲ್ಲ. ಇದು ಗೊತ್ತಿದ್ದೂ ಕೂಡಾ ಯೌವನವನ್ನು ಕಾಪಿಟ್ಟುಕೊಳ್ಳುವ, ಸಾವನ್ನು ಮುಂದೂಡುವ ಪ್ರಯತ್ನಗಳು ಸದಾ ಚಾಲ್ತಿಯಲ್ಲಿದ್ದಾವೆ. ಇಲ್ಲಿ ಎಲ್ಲವೂ ಗೌಣ, ಈವತ್ತು ಫಳ ಫಳ ಹೊಳೆಯುವ ಚರ್ಮ ಮುಂದೊಂದು ದಿನ ಕಳಾಹೀನವಾಗಿ ಸುಕ್ಕುಗಟ್ಟುತ್ತೆ. ನಿಗಿನಿಗಿ ಯೌವನದ ಹುಮ್ಮಸ್ಸನ್ನು ಕಳಾಹೀನ ಘಟ್ಟವೊಂದು ಆವರಿಸಿಕೊಂಡೇ ತೀರುತ್ತೆ. ಈ ವಾಸ್ತವವನ್ನು ಸೆಲೆಬ್ರಿಟಿ ಅನ್ನಿಸಿಕೊಂಡ ಮಂದಿ ಅರಗಿಸಿಕೊಳ್ಳಲು ತಯಾರಿಲ್ಲ. ಅಂಥಾ ಮನಃಸ್ಥಿತಿಯಿಂದಲೇ ಅನೇಕ ನಟ ನಟಿಯರು ಸರ್ಜರಿ, ಚಿಕಿತ್ಸೆಗಳ ಮೊರೆ ಹೋಗುತ್ತಾರೆ. ಅದರ ಫಲವಾಗಿ ಅರ್ಧ ದಾರಿಯಿಂದಲೇ ವಎದ್ದು ನಡೆಯುವಂಥಾ ಸ್ಥಿತಿಕ ಎದುರಾಗುತ್ತೆ. ಇಂಥಾದ್ದಕ್ಕೆ ತಾಜಾ ಉದಾಹರಣೆಯಂತಿರೋದು ನಟಿ ಶೆಫಾಲಿ ಜರೀವಾಲಾಳ ದುರಂತಗಾಥೆ! ಕನ್ನಡವೂ ಸೇರಿದಂತೆ ನಾನಾ ಭಾಷೆಗಳ ಸಿನಿಮಾ ರಂಗದಲ್ಲಿ ಪ್ರಸಿದ್ಧಿ ಪಡೆದಿದ್ದಾಕೆ ಶೆಪಾಲಿ. ಹಾಡೊಂದರ ಮೂಲಕ ಕರುನಾಡ ಸಿನಿಮಾ ಪ್ರೇಮಿಗಳಿಗೂ ಹಿಡಿಸಿದ್ದ ನಟಿಯೀಕೆ. ಶೆಫಾಲಿಗೆ ಸಹಜವಾಗಿಯೇ ಭಾರತೀಯ ಚಿತ್ರರಂಗದಲ್ಲಿ ತಾರೆಯಾಗಿ ಮೆರೆಯಬೇಕೆಂಬ ಆಸೆಯಿತ್ತು. ಅದಕ್ಕಾಗಿ ಪ್ರಯತ್ನಿಸಿದ್ದ ಆಕೆಗೆ ಹೇಳಿಕೊಳ್ಳುವಂಥಾ ಗೆಲುವು ದಕ್ಕಿರಲಿಲ್ಲ. ಅನಿವಾರ್ಯವಾಗಿ ಮದುವೆಯ…
777 ಚಾರ್ಲಿ ಚಿತ್ರದಲ್ಲಿ (simple star rakshith shetty) ರಕ್ಷಿತ್ ಶೆಟ್ಟಿ ಜೊತೆ ನಾಯಕಿಯಾಗಿ ನಟಿಸಿದ್ದವರು (actress sangeetha sringeri) ಸಂಗೀತಾ ಶೃಂಗೇರಿ. ಸಾಮಾನ್ಯವಾಗಿ, ಒಂದು ಹಿಟ್ ಸಿನಿಮಾದ ನಂತರದಲ್ಲಿ ಅದರ ಭಾಗವಾಗಿದ್ದ ನಟ ನಟಿಯರ ಮುಂದೆ ಅವಕಾಶದ ಹೆಬ್ಬಾಗಿಲೇ ತೆರೆದುಕೊಳ್ಳುತ್ತೆ. (777 charlie movie) ಚಾರ್ಲಿ ಕೂಡಾ ದೇಶಾದ್ಯಂತ ದೊಡ್ಡ ಮಟ್ಟದಲ್ಲಿಯೇ ಸದ್ದು ಮಾಡಿತ್ತು. ಸಂಗೀತಾ ಕೂಡಾ ಒಂದು ಮಟ್ಟಿಗೆ ಗಮನ ಸೆಳೆದಿದ್ದರು. ಆ ನಂತರ ಈಕೆ ಪಕ್ಕಾ ಬ್ಯುಸಿಯಾಗುತ್ತಾರೆ ಅಂದುಕೊಳ್ಳಲಾಗಿತ್ತು. ಆದರೇಕೋ ಅದು ಹುಸಿಯಾಗಿದೆ; ಅದರ ಹಿಂದಿರೋ ಒಂದಷ್ಟು ಅಸಲೀ ಸತ್ಯಗಳ ಬಗ್ಗೆ ಟಾಕ್ ಶುರುವಾಗಿದೆ. ಯಾವಾಗ ಆಕೆ ಬಿಗ್ ಬಾಸ್ (bigboss season 10) ಸ್ಪರ್ಧಿಯಾದರೋ, ಅದರ ಹಿಂದೆಯೇ ಒಂದಷ್ಟು ರೂಮರುಗಳೂ ಹಬ್ಬಿಕೊಂಡಿವೆ! ಹಾಗಿಲ್ಲದೇ ಹೋಗಿದ್ದರೆ ಖಂಡಿತವಾಗಿಯೂ ಸಂಗೀತಾ ಶೃಂಗೇರಿ ಬಿಗ್ ಬಾಸ್ ಮನೆ ಸೇರಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಹಾಗಾದ್ರೆ, ಸಂಗೀತ ಶೃಂಗೇರಿಗೆ ಅವಕಾಶಗಳ ಕೊರತೆಯಿತ್ತಾ? ಚಾರ್ಲಿಯ ನಂತರ ಆಕೆ ಖಾಲಿ ಕೂರುವ ಸ್ಥಿತಿ ನಿರ್ಮಾಣಗೊಂಡಿತ್ತಾ ಎಂಬಿತ್ಯಾದಿ ಪ್ರಶ್ನೆಗಳು…

ನಮ್ಮ ಬಗ್ಗೆ
ಈ ನಾಡಿನಲ್ಲಿ ಹೆಸರಾಗಿರುವ ಹಾಯ್ ಬೆಂಗಳೂರ್, ಅಗ್ನಿ, ಲಂಕೇಶ್ ಪತ್ರಿಕೆ, ಹಿಮಾಗ್ನಿ ಮಂತಾದ ಅನೇಕ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿ, ತಮ್ಮದೇ ಆದ ಛಾಪು ಮೂಡಿಸಿರುವವರು ಪತ್ರಕರ್ತ ಸಂತೋಷ್ ಬಾಗಿಲಗದ್ದೆ. ರಾಜಕೀಯ, ಅಪರಾಧ, ಸಿನಿಮಾ ಸೇರಿದಂತೆ ತನಿಖಾ ಪತ್ರಿಕೋದ್ಯಮದಲ್ಲಿ ದಶಕಗಳಿಗೂ ಹೆಚ್ಚು ಕಾಲ ಪಳಗಿಕೊಂಡು, ಅನೇಕ ಭ್ರಷ್ಟರನ್ನು ಬಯಲಾಗಿಸಿರುವ ಬಾಗಿಲಗದ್ದೆ ಆರಂಭಿಸಿರುವ ವಿಭಿನ್ನ ಡಿಜಿಟಲ್ ಹೆಜ್ಜೆ ಶೋಧ ಮತ್ತು ಸಿನಿ ಶೋಧ. ಇದು ಹೊಸಾ ಆಯಾಮದ ಪತ್ರಿಕೋದ್ಯಮ. ಸತ್ಯದ ಭೂಮಿಕೆಯ ನೇರ-ನಿಷ್ಠುರ ವರದಿಗಳ ಸಂಕಲ್ಪದೊಂದಿಗೆ, ಭಿನ್ನ ಶೈಲಿಯ ಬರವಣಿಗೆಯ ಮೂಲಕ ಹೊಸತೊಂದು ಜಗತ್ತು ನಿಮ್ಮೆದುರು ನಿರಂತವಾಗಿ ತೆರೆದುಕೊಳ್ಳಲಿದೆ; ಅಚ್ಚರಿಗೀಡುಮಾಡಲಿದೆ!