Subscribe to Updates
Get the latest creative news from FooBar about art, design and business.
Author: Santhosh Bagilagadde
Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.
ಅರ್ಜುನ್ ರೆಡ್ಡಿ ಅಂತೊಂದು ಸಿನಿಮಾ ಮೂಲಕ ದೇಶಾದ್ಯಂತ ಪ್ರಸಿದ್ಧಿ ಪಡೆದಿದ್ದಾತ ವಿಜಯ್ ದೇವರಕೊಂಡ. ವಿಕ್ಷಿಪ್ತವಾದ, ಈ ತಲೆಮಾರನ್ನು ಆವರಿಸಿಕೊಳ್ಳುವಂಥಾ ಪಾತ್ರದ ಮೂಲಕ ಈತ ಮಿಂಚಿದ ಪರಿ ಕಂಡು ಬಾಲಿವುಡ್ ನಟರೇ ಅವಾಕ್ಕಾಗಿಕದ್ದರು. ಆ ಸಿನಿಮಾ ಬಾಲಿವುಡ್ಡಿಗೂ ರೀಮೇಕಾಗಿತ್ತು. ಹಾಗಂತ ವಿಜಯ್ ದೇವರಕೊಂಡನಿಗೆ ಅರ್ಜುನ್ ರೆಡ್ಡಿಯ ಮೂಲಕ ಏಕಾಏಕಿ ಗೆಲುವು ಒಲಿದಿರಲಿಲ್ಲ. ಅದಕ್ಕೂ ಮುನ್ನ ವರ್ಷಗಟ್ಟಲೆ ವಿಜಯ್ ಸೈಕಲ್ಲು ಹೊಡೆದಿದ್ದ. ಒಂದಷ್ಟು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದರೂ ಕೂಡಾ ಗೆಲುವೆಂಬುದು ಒಲಿಯದೆ ಸತಾಯಿಸಿತ್ತು. ದುರಂತವೆಂದರೆ, ಅರ್ಜುನ್ ರೆಡ್ಡಿ ಮೂಲಕ ಲಭಿಸಿದ್ದ ಅಗಾಧ ಯಶಸ್ಸಿನ ಬೆನ್ನಲ್ಲಿಯೇ ಮತ್ತೆ ದೇವರಕೊಂಡನ ವೃತ್ತಿ ಬದುಕಿಗೆ ಹಿನ್ನಡೆಯ ಕಾರ್ಮೋಡ ಕವಿದುಕೊಂಡಿದೆ. ಇದೀಗ ಬಿಡುಗಡೆಗೊಂಡಿರೋ ಕಿಂಗ್ಡಮ್ ಚಿತ್ರದ ಮೂಲಕ ಅದು ಮತ್ತೆ ಮುಂದುವರೆದಿದೆ! ಜೆರ್ಸಿ ಖ್ಯಾತಿಯ ಗೌತಮ್ ತಿನ್ನನೂರಿ ಕಿಂಗ್ಡಮ್ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಆರಂಭದಿಂದಲೂ ಸಹ ಈ ಸಿನಿಮಾ ಸಾಕಷ್ಟು ಸುದ್ದುಇ ಮಾಡುತ್ತಲೇ ಬಂದಿತ್ತು. ವಿಜಯ್ ದೇವರಕೊಂಡ ಕೂಡಾ ಬಲು ಆಸ್ಥೆಯಿಂದಲೇ ಈ ಸಿನಿಮಾದ ಭಾಗವಾಗಿದ್ದ. ಕಿಂಗ್ಡಮ್ ಈ ಪರಿಯ…
ಸಿನಿಮಾ ನಟ ನಟಿಯರು ರಾಜಕಾರಣಿಗಳಾಗಿ ರೂಪಾಂತರ ಹೊಂದೋದೇನೂ ಅಚ್ಚರಿಯ ವಿಚಾರವಲ್ಲ. ಕಳೆದ ತಲೆಮಾರಿನ ಒಂದಷ್ಟು ನಟ ನಟಿಯರು ಹೀಗೆ ರಾಜಕಾರಣಿಗಳಾಗಿ, ಜನಾನುರಾಗಿಯಾಗಿ ನಡೆದುಕೊಂಡ ಉದಾಹರಣೆಗಳಿದ್ದಾವೆ. ಆದರೆ, ಇತ್ತೀಚಿನ ದಿನಗಳಲ್ಲಿ ಹಾಗೆ ರಾಜಕೀಯದತ್ತ ಯಾವ ನಟ ನಟಿಯರು ಮುಖ ಮಾಡಿದರೂ ಅಂಥವರಿಂದ ಮಹತ್ವದ ನಿರೀಕ್ಷೆ ಇಟದ್ಟುಕೊಳ್ಳುವಂಥಾ ವಾತಾವರಣ ಖಂಡಿತವಾಗಿಯೂ ಇಲ್ಲ. ಈ ನೆಲದ ಸಮಸ್ಯೆಗಳು, ಬಡತನಗಳ ಬಗ್ಗೆ ಅರಿವಿರದ, ಜನಸಾಮಾನ್ಯರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದ ಈ ಹೈಫೈ ಮಂದಿಯಿಂದ ಅದೆಂಥಾ ನಿರೀಕ್ಷೆಯಿಟ್ಟುಕೊಳ್ಳಲು ಸಾಧ್ಯ? ಸದ್ಯದ ಮಟ್ಟಿಗೆ ಇಂಥಾದ್ದೊಂದು ಪ್ರವರವನ್ನು ಮತ್ತೆ ಇಲ್ಲಿ ಹರವಲು ಕಾರಣವಾಗಿರುವಾಕೆ ಬಿಜೆಪಿ ಸಂಸದೆ, ಬಾಲಿವುಡ್ ನಟಿ ಕಂಗನಾ ರಾಣೌತ್! ಸಾಮಾನ್ಯವಾಗಿ ಆಳೋ ಸರ್ಕಾರಗಳು ಯಾವ ಪಕ್ಷದ್ದೇ ಇದ್ದರೂ, ಅವುಗಳ ತಪ್ಪುಗಳನ್ನು ಎತ್ತಿ ತೋರಿಸುತ್ತಾ, ವಿಮರ್ಶೆಗೊಡ್ಡೋದು ಪ್ರಜಾಪ್ರಭುತ್ವದ ಪ್ರಧಾನ ಅಂಶ. ಆ ನಿಟ್ಟಿನಲ್ಲಿ ನೋಡ ಹೋದರೆ ಭಾರತೀಯ ಚಿತ್ರರಂಗದ ಬಹುತೇಕ ಸೆಲೆಬ್ರಿಟಿಗಳು ಆಳೋ ಮಂದಿಗೆ ಬಕೀಟು ಹಿಡಿಯುತ್ತಾ, ಸಂದರ್ಭಾನುಸಾರ ಬೂಟು ನೆಕ್ಕುತ್ತಾ ಬದುಕುವವರೆಂಬುದು ಕಹಿ ವಾಸ್ತವ. ಇಂಥಾದ್ದರ ನಡುವೆ…
ಯಾವುದೇ ಘಟನೆಯೊಂದು ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿದಾಗ ಸೀದಾ ಫಿಲಂ ಛೇಂಬರಿಗೆ ಹೋಗಿ ಒಂದು ಟೈಟಲ್ ರಿಜಿಸ್ಟ್ರೇಷನ್ ಮಾಡಿಸೋದು ಸಿನಿಮಾ ಮಂದಿಯ ರೂಢಿ. ಅದನ್ನು ಖಯಾಲಿ ಎಂದರೂ ಅತಿಶಯವೇನಲ್ಲ. ಒಂದು ಸಾಮಾಜಿಕ ಪಲ್ಲಟದ ಬಗ್ಗೆ ಸಿನಿಮಾ ಮಾಡಲು ಬೇಕಾದ ತಯಾರಿ, ಆ ವಿಚಾರದ ಬಗ್ಗೆ ಆಳವಾದ ತಿಳುವಳಿಕೆಯ ಲವಲೇಶ ಇಲ್ಲದವರೂ ಕೂಡಾನ ಟೈಟಲ್ ನೋಂದಣಿಯಲ್ಲಿ ಮಾತ್ರ ಮುಂದಿರುತ್ತಾರೆ. ಕನ್ನಡ ಚಿತ್ರರಂಗದಲ್ಲಿ ತಾರಕಕ್ಕೇರಿರುವ ಇಂಥಾ ಖಯಾಲಿ ಖುದ್ದು ಸಿನಿಮಾ ಪ್ರೇಮಿಗಳಿಗೇ ಕಾಮಿಡಿಯ ಸರಕಿನಂತೆ ಕಾಣಿಸಲು ಶುರುವಾಗಿ ವರ್ಷಗಳೇ ಕಳೆದು ಹೋಗಿವೆ. ಹಾಗಿರುವಾಗ, ದಶಕಗಳಿಂದ ಹಬೆಯಾಡುತ್ತಿರುವ ಧರ್ಮಸ್ಥಳ ವಿಚಾರಕ್ಕೆ ಸಂಬಂಧಿಸಿದಂತೆ ಕನ್ನಡ ಚಿತ್ರರಂಗದ ಮಂದಿ ಟೈಟಲ್ ನೋಂದಣಿ ಮಾಡಿಸಿದರೆ ಮತ್ಯಾವ ಭಾವ ಮೂಡಲೂ ಸಾಧ್ಯವಿಲ್ಲ! ಸೌಜನ್ಯ ಎಂಬ ಹುಡುಗಿಯನ್ನು ಅಮಾನುಷವಾಗಿ ಅತ್ಯಾಚಾರ ಮಾಡಿ ಕೊಂದ ಘಟನೆಯ ನಂತರ ಧರ್ಮಸ್ಥಳ ಮತ್ತೊಂದು ಸುತ್ತಿಗೆ ವಿವಾದದ ಕೇಂದ್ರಕ್ಕೆ ಬಂದು ನಿಂತಿತ್ತು. ಈಗಂತೂ ಆ ಪರಿಸರದಲ್ಲಿ ಅಸ್ಥಿಪಂಜರ ಹುಡುಕುವ ಕಾರ್ಯ ಚಾಲ್ತಿಯಲ್ಲಿದೆ. ಈ ಮೂಲಕ ಆ ಊರಿನ ಸುತ್ತ…
ಕನ್ನಡದ ಬುರ್ನಾಸು ಬಿಗ್‌ಬಾಸ್ ಶೋನಿಂದ ಹುಟ್ಟಿಕೊಂಡ ಮಳ್ಳು ಸೆಲೆಬ್ರಿಟಿಗಳ ಸಾಲಿನಲ್ಲಿ ಅಗ್ರಗಣ್ಯ ಆಸಾಮಿ ಪ್ರಥಮ್. ತನ್ನ ಹೆಸರಿಗೆ ತಾನೇ ಒಳ್ಳೆ ಹುಡುಗನೆಂಬ ಬಿರುದು ಹೆಟ್ಟಿಕೊಂಡಿರುವ ಈತ ಇದುವರೆಗೂ ಮಾಡಿಕೊಂಡ ಎಡವಟ್ಟುಗಳಿಗೇನೂ ಕೊರತೆಯಿಲ್ಲ. ಸಾರ್ವಜನಿಕವಾಗಿ ಹೇಗೆ ನಡೆದುಕೊಳ್ಳಬೇಕೆಂಬ ಕನಿಷ್ಠ ಖಬರೂ ಇಲ್ಲದ ಪ್ರಥಮ್ ಇದೀಗ ಮತ್ತೊಂದು ಮಹಾ ವಿವಾದದ ಕೇಂದ್ರಬಿಂದುವಾಗಿದ್ದಾನೆ. ದರ್ಶನ್ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ತಗುಲಿಕೊಂಡಾಗಿನಿಂದಲೂ ಈತ ದಾಸನ ಅಭಿಮಾನಿ ಪಡೆಯ ಕೆಂಗಣ್ಣಿಗೆ ಗುರಿಯಾಗಿದ್ದ. ದರ್ಶನ್ ಮಾಡಿದ್ದೆಲ್ಲವೂ ಸರಿ ಎಂಬ ಅತಿರೇಕದ ಕೆಲ ಅಭಿಮಾನಿಗಳು ಆ ಕಾಲದಿಂದಲೂ ಪ್ರಥಮನ ವಿರುದ್ಧ ಕೆಂಡ ಕಾರುತ್ತಾ ಬಂದಿದ್ದರು. ಇತ್ತೀಚಿನ ದಿನಗಳಲ್ಲಿ ಪ್ರಥಮನೆಡೆಗಿನ ದರ್ಶನ್ ಅಭಿಮಾನಿಗಳ ಅಸಮಾಧಾನ ಬೂದಿ ಮುಚ್ಚಿದ ಕೆಂಡದಂತಿತ್ತು. ಇದೀಗ ಅವಿವೇಕಿ ಪ್ರಥಮ್ ಅದರ ಮೇಲೆ ಅಂಡು ಊರಿ ಕುಂಯ್ಯೋ ಅನ್ನಲಾರಂಭಿಸಿದ್ದಾನೆ! ಅಷ್ಟಕ್ಕೂ ಈ ಪ್ರಥಮ್ ಅದೆಂಥಾ ಗಂಭೀರ ವಿಚಾರದ ಬಗ್‌ಗೆ ಮಾತಾಡಿದರೂ ಅದನ್ನು ಯಾರೂ ಗಣನೆಗೆ ತೆಗೆದುಕೊಳ್ಳಲಾರದಂಥಾ ವಾತಾವರಣವಿದೆ. ಕನಿಷ್ಟ ಓರ್ವ ಮನುಷ್ಯ ಕಾಪಿಟ್ಟುಕೊಳ್ಳಬೇಕಾದ ವ್ಯಕ್ತಿಗತ ಘನತೆ ಗೌರವಗಳನ್ನು ಈತ ಅದ್ಯಾವತ್ತೋ…
ಇದುವರೆಗೂ ಸಾಕಷ್ಟು ಹಣವಂತರ ಮಕ್ಕಳು ಸಿನಿಮಾ ನಟರಾಗಿ ಮೆರೆಯಲು ನೋಡಿದ್ದಾರೆ. ಎಲ್ಲವನ್ನೂ ಕಾಸಿನ ಬಲದಿಂದಲೇ ಖರೀದಿಸಬಲ್ಲ ತಿಮಿರು ಹೊಂದಿರುವವರು ತಮ್ಮ ಕುಡಿಗಳನ್ನು ಸ್ಟಾರ್‌ಗಳನ್ನಾಗಿಸುವ ಕನಸು ಕಾಣೋದು ಹೊಸತೇನಲ್ಲ. ಸಹನೀಯ ಅಂಶವೆಂದರೆ, ಇಂಥವರ ಸಂತಾನ ಕನ್ನಡ ಚಿತ್ರರಂಗದಲ್ಲಿ ನೆಲೆ ಕಂಡುಕೊಂಡಿದ್ದಿಲ್ಲ. ಇದು ಗೊತ್ತಿದ್ದರೂ ಕೂಡಾ ಬಳ್ಳಾರಿಯ ಗಣಿಗಳ್ಳ (gaalijanardhanreddy) ಜನಾರ್ಧನ ರೆಡ್ಡಿ ತನ್ನ ಮಗ ಕಿರೀಟಿಯನ್ನು (kireeti) ನಾಯಕ ನಟನನ್ನಾಗಿ ನೆಲೆಗಾಣಿಸುವ ಕಸರತ್ತು ನಡೆಸಿದ್ದ. ಗಣಿಧೂಳಿನ ಬ್ಲಾಕ್ ಮನಿಯನ್ನು ತಂದು ಸುರಿದರೂ ಕೂಡಾ ರೆಡ್ಡಿಮಗನ (junior movie) ಜ್ಯೂನಿಯರ್ ಚಿತ್ರಕ್ಕೆ ಅಡಿಗಡಿಗೆ ಕಂಟಕ ಎದುರಾಗಿತ್ತು. ಕಡೆಗೂ ಇದೀಗ ಆ ಚಿತ್ರ ಬಿಡುಗಡೆಗೊಂಡಿದೆ. ಗಣಿ ಧೂಳಿಂದೆದ್ದು (mining mafia) ಬಂದ ಕೀಟವೀಗ ಸಿನಿಮಾ ಮಂದಿರದ ಹೆಬ್ಬಾಗಿಲಲ್ಲೇ ಲಗಾಟಿ ಹೊಡೆದಿದೆ. ಹೇಳಿಕೇಳಿ (janardhan reddy) ಜನಾರ್ಧನ ರೆಡ್ಡಿ ನೆಲ ಬಗೆಯುತ್ತಾ ಏಕಾಏಕಿ ಕೋಟಿ ಕೋಟಿ ಗುಂಜಿಕೊಂಡವನು. ಇಂಥವನಿಗೆ ಓರ್ವ ನಟ ಸಿನಿಮಾ ರಂಗದಲ್ಲಿ ಸರ್ಕಸ್ಸು ನಡೆಸುತ್ತಾ, ಸ್ಟಾರ್ ನಟನಾಗಿ ನೆಲೆ ಕಾಣೋದು ಅದೆಷ್ಟು ಸುದೀರ್ಘವಾದ, ತ್ರಾಸದಾಯಕ…
ಹಾಡುಗಳು ಮತ್ತು (trailer) ಟ್ರೈಲರ್ ಮೂಲಕ ಭಾರೀ ಸದ್ದು ಮಾಡೋ ಸಿನಿಮಾಗಳ ಬಗ್ಗೆ ಸಹಜವಾಗಿಯೇ ನಿರೀಕ್ಷೆ ಮೂಡಿಕೊಳ್ಳುತ್ತೆ. ಆದರೆ, ಇತ್ತೀಚಿನ ದಿನಗಳಲ್ಲಿ ಇಂಥಾ ನಿರೀಕ್ಷೆಗಳ ಬೆನ್ನಲ್ಲಿಯೇ ಗುಮಾನಿಯೊಂದು ಸರಿದಾಡಲಾರಂಭಿಸಿದೆ. ಯಾಕೆಂದರೆ, ನೀಟಾಗಿ ಟ್ರೈಲರ್ ರೂಪಿಸೋ ಮಂದಿ, ಆ ಆವೇಗವನ್ನು ಸಿನಿಮಾದುದ್ದಕ್ಕೂ ಸಂಭಾಳಿಸಲಾಗದೆ ಸೋತಿದ್ದಾರೆ. ಇಂಥಾ ಹೊತ್ತಿನಲ್ಲಿ ಬಿಡುಗಡೆಗೊಂಡಿದ್ದ (yuva rajkumar) ಯುವ ರಾಜ್ ಕುಮಾರ್ ಅಭಿನಯದ ಎಕ್ಕ ಚಿತ್ರ ಅಂಥಾ ಗುಮಾನಿಗಳಾಚೆಗೂ ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿಸಿತ್ತು. ಹೇಳಿಕೇಳಿ ಕನ್ನಡ ಚಿತ್ರರಂಗ ಒಂದು ಭರಪೂರ ಹಿಟ್ ಸಿನಿಮಾವಿಲ್ಲದೆ ಬಸವಳಿದಿತ್ತು. ಇಂಥಾ ಸಂದರ್ಭದಲ್ಲಿ ಎಕ್ಕ (ekka movie) ದೊಡ್ಡ ಮಟ್ಟದಲ್ಲಿಯೇ ಧೂಳೆಬ್ಬಿಸುತ್ತೆ ಎಂಬಂಥಾ ನಿರೀಕ್ಷೆಯಿತ್ತು. ಇದೀಗ ಭಾರಾಈ ನಿರೀಕ್ಷೆಯ ಇಕ್ಕಳಕ್ಕೆ ಸಿಕ್ಕು ಸಪ್ಪೆ ಸಪ್ಪೆ ಅನ್ನಿಸೋ ಸ್ಥಿತಿಯಲ್ಲಿ ಎಕ್ಕ ಪ್ರೇಕ್ಷಕರನ್ನು ಎದುರುಗೊಂಡಿದೆ! ಈ ಹಿಂದೆ (yuva rajkumar) ಯುವ ರಾಜ್ ಕುಮಾರ್ ಪೊರಕೆ ಹಿಡಿದು ನಿಂತ ಪೋಸ್ ಒಂದು ಪ್ರೇಕ್ಷಕರನ್ನು ಎದುರುಗೊಂಡಿತ್ತು. ಅದು ಥೇಟು (powerstar puneethrajkumar) ಪವರ್ ಸ್ಟಾರ್ ಪುನೀತರ್ ರಾಜ್ ಕುಮಾರ್…
ಕನ್ನಡದ ಕೀರ್ತಿ ಪತಾಕೆ ಪ್ಯಾನಿಂಡಿಯಾ ಮಟ್ಟದಲ್ಲಿ ರಾರಾಜಿಸುವಂತೆ ಮಾಡಿರುವ ನಿರ್ಮಾಣ ಸಂಸ್ಥೆ (hombale films) ಹೊಂಬಾಳೆ ಫಿಲಂಸ್. ಪಕ್ಕಾ ಕಮರ್ಶಿಯಲ್ ಸಿನಿಮಾಗಳನ್ನು ನಿರ್ಮಾಣ ಮಾಡೋದರ ಜೊತೆ ಜೊತೆಗೇ ಹೊಸಾ ಬಗೆಯ ಸಾಹಸಗಳಿಗೆ, ಪ್ರಯೋಗಗಳಿಗೂ ಹೊಂಬಾಳೆಯ ಕಡೆಯಿಂದ ಉತ್ತೇಜನ ಸಿಗುತ್ತಾ ಬಂದಿದೆ. ಅದರ ಭಾಗವಾಗಿಯೇ ಕ್ಲೀಮ್ ಪ್ರೊಡಕ್ಷನ್ (kleem production) ನಿರ್ಮಾಣ ಮಾಡಿರುವ, ಹೊಂಬಾಳೆ ಫಿಲಂಸ್ ಪ್ರಸ್ತುತಪಡಿಸಿರುವ `ಮಹಾವತಾರ್ ನರಸಿಂಹ’ (mahavatar narasimha movie) ಸಿನಿಮಾ ಬಿಡುಗಡೆಯ ಹೊಸ್ತಿಲಿನಲ್ಲಿದೆ. ಇದೀಗ ಈ ಆನಿಮೇಟೆಡ್ ಸಿನಿಮಾದ (animated movie) ಟ್ರೈಲರ್ ವಾರದ ಹಿಂದೆ ಬಿಡುಗಡೆಗೊಂಡು ಪ್ಯಾನಿಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇದೇ ಪ್ರಭೆಯಲ್ಲಿ ಮಹಾವತಾರ್ ನರಸಿಂಹ ಚಿತ್ರ ಜುಲೈ 25ರಂದು ದೇಶಾದ್ಯಂತ ತೆರೆಗಾಣುತ್ತಿದೆ. ನಮ್ಮದು ಪುರಾಣ ಕಥೆಗಳೊಂದಿಗೆ ಬದುಕನ್ನು ಹೊಸೆದುಕೊಂಡಂತಿರುವ ಜೀವನಕ್ರಮ. ಅಂಥಾ ಪುರಾಣ ಕಥೆಗಳಲ್ಲಿಯೇ ದೈವೀಕ ಅನುಭೂತಿ ಪಡೆದುಕೊಳ್ಳುವ ಮನಃಸ್ಥಿತಿ ನಮ್ಮ ನಡುವೆ ಚಾಲ್ತಿಯಲ್ಲಿದೆ. ಲೆಕ್ಕವಿಡಲಾಗದಷ್ಟು ಸಂಕೀರ್ಣವಾಗಿರುವ ಇಂಥಾ ಕಥನಗಳಲ್ಲಿ (bhaktha prahlada) ಭಕ್ತ ಪ್ರಹ್ಲಾದನ ಕಥೆ ಜನಜನಿತ. ಪ್ರಹ್ಲಾದನ ನಂಬಿಕೆಯ ವಿರುದ್ಧ…
ಯುವ ರಾಜ್ ಕುಮಾರ್ (yuva rajnkumar) ನಟಿಸಿರುವ ಎಕ್ಕ (Ekka movie) ಚಿತ್ರದ ಸುತ್ತಾ ಸಿನಿಮಾ ಪ್ರೇಮಿಗಳ ವಲಯದಲ್ಲಿ ಚರ್ಚೆ ಶುರುವಾಗಿದೆ. ಆರಂಭಿಕವಾಗಿಯೇ ಒಂದಷ್ಟು ಹಿನ್ನಡೆ ಅನುಭವಿಸಿದ್ದ (yuva) ಯುವನ ಬಗ್ಗೆ ಒಂದಷ್ಟು ಭರವಸೆಯ ಮಾತುಗಳೂ ಕೂಡಾ ಕೇಳಿ ಬರುತ್ತಿವೆ. ಮೊದಲ ಚಿತ್ರದಲ್ಲಿಯೂ ಕೂಡಾ ಯುವನ ನಟನೆ ಮತ್ತು ಪರಿಶ್ರಮಗಳು ಪ್ರೇಕ್ಷಕರ ಮನಗೆದ್ದಿದ್ದವು. ಈ ಮೂಲಕ ಡೊದ್ಮನೆಯ ಕುಡಿಯೆಂಬ ಪ್ರಭೆಯಾಚೆಗೂ ಪ್ರತಿಭೆಯಿಂದಲೇ ಈ ಹುಡುಗ ನೆಲೆ ಕಂಡುಕೊಳ್ಳಬಹುದಾದ ಸೂಚನೆಗಳೂ ಸಿಕ್ಕಿದ್ದವು. ಈ ಕಾರಣದಿಂದಲೇ ಎಕ್ಕದ ಬಗ್ಗೆ ಒಂದಷ್ಟು ನಿರೀಕ್ಷೆ ಸಹಜವಾಗಿಯೇ ಮೂಡಿಕೊಂಡಿತ್ತು. ಇದೇ ಹೊತ್ತಿನಲ್ಲೀಗ (ekka movie trailer) ಎಕ್ಕ ಚಿತ್ರದ ಟ್ರೈಲರ್ ಬಿಡುಗಡೆಗೊಂಡಿದೆ. ಅದರ ಬಗ್ಗೆ ವ್ಯಾಪಕ ಮೆಚ್ಚುಗೆ ಮೂಡಿಕೊಂಡಿರೋದು ಗಮನಾರ್ಹ ಸಂಗತಿ. ರೋಹಿತ್ ಪದಕಿ (director rohit padaki) ಎಕ್ಕ ಚಿತ್ರದ ಸಾರಥ್ಯ ವಹಿಸಿಕೊಂಡಾಗಲೇ ಒಂದಷ್ಟು ಕುತೂಹಲ ಮೂಡಿಕೊಂಡಿತ್ತು. ಒಂದು ಧಾಟಿಯ ಸಿನಿಮಾದಿಂದ ಪ್ರವರ್ಧಮಾನಕ್ಕೆ ಬಂದಿದ್ದ ರೋಹಿತ್, ಎಕ್ಕದ ಮೂಲಕ ಎಂಥಾ ಕಥೆಯನ್ನು ಕೈಗೆತ್ತಿಕೊಂಡಿರಬಹುದು? ಅದನ್ನು ಮಾಸ್ ಶೈಲಿಯಲ್ಲಿ…
ಕನ್ನಡ ಚಿತ್ರರಂಗಕ್ಕೆ ಹೊಸಬರ ಆಗಮನ ಪ್ರಕ್ರಿಯೆ ಅನೂಚಾನವಾಗಿ ಮುಂದುವರೆದಿದೆ. ಹೀಗೆ ಆಗಮಿಸೋ ಹೊಸಬರ ತಂಡಗಳು ಕಾಲಿಟ್ಟಲ್ಲೆಲ್ಲ ಗೆಲುವು ದಕ್ಕುತ್ತದೆಂದೇನೂ ಇಲ್ಲ. ಆದರೆ, ಹೊಸಬರ ಆಗಮನವಾದಾಗ ಹೊಸತೇನೋ ಛಳುಕು ಮೂಡಿಕೊಂಡೀತೆಂಬ ನಿರೀಕ್ಷೆಯೊಂದು ಕನ್ನಡದ ಪ್ರೇಕ್ಷಕರಲ್ಲಿರೋದು ಸುಳ್ಳಲ್ಲ. ಇಂಥಾದ್ದೊಂದು ವಾತಾವರಣದಲ್ಲೀಗ ಮತ್ತೊಂದು ಹೊಸಬರ ತಂಡ ಹಚ್ಚೆ (hacche kannada movie) ಎಂಬ ಸಿನಿಮಾವನ್ನು ರೂಪಿಸಿದೆ. ಒಂದು ಹಾಡಿನ ಬಿಡುಗಡೆಯ ನೆಪದಲ್ಲಿ ಮಾಧ್ಯಮದವರನ್ನು ಮುಖಾಮುಖಿಯಾಗಿದೆ. ಈ ದಿಸೆಯಲ್ಲಿ ಒಟ್ಟಾರೆ ಸಿನಿಮಾ ಬಗೆಗಿನ ಒಂದಷ್ಟು ಸೂಕ್ಷ್ಮ ಸಂಗತಿಗಳನ್ನು ಪ್ರೇಕ್ಷಕರಿಗೆ ತಲುಪಿಸಿದೆ. ಹಚ್ಚೆ ಎಂಬುದು ತೀರಾ ಪರಿಚಿತ ಪದ. ಅದರೊಂದಿಗೆ ಪ್ರೇಮದ ನವಿರು ಭಾವಗಳೂ ಕೂಡಾ ಮಿಳಿತವಾಗಿವೆ. ಹಾಗಂತ ಇದನ್ನೊಂದು ಪ್ರೇಮ ಕಥಾನಕ ಅಂತ ಷರಾ ಬರೆಯುವಂತಿಲ್ಲ. ಯಾಕೆಂದರೆ, ಇದು ಯಾವ ಜಾನರಿಗೂ ಒಳಪಡದ ವಿಶಿಷ್ಟ ಗುಣ ಹೊಂದಿರುವ ಚಿತ್ರ ಅಂತ ತಂಡವೇ ಹೇಳಿಕೊಂಡಿದೆ. ಹಾಗಾದರೆ, ಇಲ್ಲಿರೋದು ಯಾವ ಬಗೆಯ ಕಥೆ? ಅಂತೊಂದು ಕುತೂಹಲ ಸಹಜ. ಅದಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ (director…
ಕನ್ನಡ ಚಿತ್ರರಂಗದಲ್ಲೀಗ ಹಂತ ಹಂತವಾಗಿ ಹೊಸಾ ಅಲೆ ಮೂಡಿಕೊಳ್ಳುತ್ತಿದೆ. ಕೆಲ ಮಂದಿ ಇನ್ನೂ (kgf movie) ಕೆಜಿಎಫ್‌ನ ಮಸಿ ಮಸಿ ಛಾಯೆಯಲ್ಲಿ ಉರುಳಾಡುತ್ತಿರುವಾಗಲೇ, ಒಂದಷ್ಟು ಭಿನ್ನ ಧಾಟಿಯ ಪ್ರಯೋಗಗಳೂ ನಡೆಯುತ್ತಿವೆ. ಮಾಸ್ ಭ್ರಮೆಯ ಏಕತಾನತೆಯನ್ನು ದಾಟಿಕೊಳ್ಳವ ಇರಾದೆ ಹೊಂದಿರುವವರಿಗೆ ವರದಂತೆ ಕಾಣಿಸುತ್ತಿರುವ ಒಂದಷ್ಟು ಸಿನಿಮಾಗಳು ಬಿಡುಗಡೆಗೆ ಅಣಿಯಾಗಿ ನಿಂತಿವೆ. ಆ ಸಾಲಿನಲ್ಲಿ ಪ್ರಮುಖವಾಗಿ ಗುರುಜತಿಸಿಕೊಂಡುಇರುವ ಸಿನಿಮಾ (swapna mantapa movie) `ಸ್ವಪ್ನ ಮಂಟಪ’. ಬರಗೂರು ರಾಮಚಂದ್ರಪ್ಪ (baraguru ramachandrappa) ತಮ್ಮದೇ ಕಾದಂಬರಿ ಆಧಾರಿತವಾಗಿ, ತಾವೇ ಚಿತ್ರಕಥೆ ಬರೆದು ನಿರ್ದೇಶನವನ್ನೂ ಮಾಡಿರೋದು ವಿಶೇಷ. ಹೊಸಾ ಬಗೆಯ ಪಾತ್ರಗಳಿಗೆ ಒಡ್ಡಿಕೊಳ್ಳುತ್ತಾ ಬಂದಿರುವ (actor vijay raghavendra) ವಿಜಯ್ ರಾಘವೇಂದ್ರ ನಾಯಕನಾಗಿ ನಟಿಸಿದ್ದರೆ, ಕನ್ನಡತಿ ಖ್ಯಾತಿಯ (ranjani raghavan) ರಂಜಿನಿ ರಾಘವನ್ ನಾಯಕಿಯಾಗಿ ಜೊತೆಯಾಗಿದ್ದಾರೆ. ಇದು ಹೊಸಾ ಅಲೆ, ಹೊಸಾ ಆಲೋಚನೆಗಳಿಗೆ ಚಿತ್ರರಂಗ ಒಡ್ಡಿಕೊಂಡಿಕರುವ ಕಾಲಮಾನ. ಈ ಹೊತ್ತಿನಲ್ಲಿ ಹಳೇ ಘಮವೊಂದು ಹೊಸತನದೊಂದಿಗೆ ಮಿಳಿತವಾದಂತೆ ಭಾಸವಾಗುತ್ತಿರೋದಕ್ಕೆ ಪ್ರಧಾನ ಕಾರಣವಾಗಿ ನಿಲ್ಲುವವರು ಬರಗೂರು ರಾಮಚಂದ್ರಪ್ಪ. ಈವತ್ತಿಗೆ ಸ್ವಪ್ನ…

ನಮ್ಮ ಬಗ್ಗೆ
ಈ ನಾಡಿನಲ್ಲಿ ಹೆಸರಾಗಿರುವ ಹಾಯ್ ಬೆಂಗಳೂರ್, ಅಗ್ನಿ, ಲಂಕೇಶ್ ಪತ್ರಿಕೆ, ಹಿಮಾಗ್ನಿ ಮಂತಾದ ಅನೇಕ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿ, ತಮ್ಮದೇ ಆದ ಛಾಪು ಮೂಡಿಸಿರುವವರು ಪತ್ರಕರ್ತ ಸಂತೋಷ್ ಬಾಗಿಲಗದ್ದೆ. ರಾಜಕೀಯ, ಅಪರಾಧ, ಸಿನಿಮಾ ಸೇರಿದಂತೆ ತನಿಖಾ ಪತ್ರಿಕೋದ್ಯಮದಲ್ಲಿ ದಶಕಗಳಿಗೂ ಹೆಚ್ಚು ಕಾಲ ಪಳಗಿಕೊಂಡು, ಅನೇಕ ಭ್ರಷ್ಟರನ್ನು ಬಯಲಾಗಿಸಿರುವ ಬಾಗಿಲಗದ್ದೆ ಆರಂಭಿಸಿರುವ ವಿಭಿನ್ನ ಡಿಜಿಟಲ್ ಹೆಜ್ಜೆ ಶೋಧ ಮತ್ತು ಸಿನಿ ಶೋಧ. ಇದು ಹೊಸಾ ಆಯಾಮದ ಪತ್ರಿಕೋದ್ಯಮ. ಸತ್ಯದ ಭೂಮಿಕೆಯ ನೇರ-ನಿಷ್ಠುರ ವರದಿಗಳ ಸಂಕಲ್ಪದೊಂದಿಗೆ, ಭಿನ್ನ ಶೈಲಿಯ ಬರವಣಿಗೆಯ ಮೂಲಕ ಹೊಸತೊಂದು ಜಗತ್ತು ನಿಮ್ಮೆದುರು ನಿರಂತವಾಗಿ ತೆರೆದುಕೊಳ್ಳಲಿದೆ; ಅಚ್ಚರಿಗೀಡುಮಾಡಲಿದೆ!