Subscribe to Updates
Get the latest creative news from FooBar about art, design and business.
Author: Santhosh Bagilagadde
Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.
ಸಿಕ್ಕ ಪಬ್ಲಿಸಿಟಿ, ಯಶಸ್ಸುಗಳನ್ನು ಮೆರೆದಾಟದ ಅಸ್ತ್ರವಾಗಿಸಿಕೊಂಡ ಅನೇಕರು ನಾನಾ ಚಿತ್ರರಂಗದಲ್ಲಿ ಯಥೇಚ್ಛವಾಗಿಯೇ ಕಾಣ ಸಿಗುತ್ತಾರೆ. ಅಂಥವರೆಲ್ಲ ಹೇಳ ಹೆಸರಿಲ್ಲದಂತೆ ನೇಪಥ್ಯಕ್ಕೆ ಸರಿದಿದ್ದಾರೆ. ಆದರೆ, ಹಿಡಿತ ತಪ್ಪಿದ ಬದುಕು, ತನ್ನನ್ನೇ ಅಪಾದಮಸ್ತಕ ನುಂಗಿದಂತಿದ್ದ ನಾನಾ ಚಟಗಳು ಮತ್ತು ಅವುಗಳ ಫಲವಾಗಿಯೇ ಸಿಕ್ಕ ಜೈಲು ವಾಸ… ಇಂಥಾ ನಾನಾ ಪೆಟ್ಟುಗಳನ್ನು ಬದಲಾವಣೆಯ ಮೆಟ್ಟಿಲಾಗಿಸಿಕೊಂಡು, ಓರ್ವ ನಟನಾಗಿ ಮರುಹುಟ್ಟು ಪಡೆದುಕೊಂಡಿರುವಾತ ಸಂಜಯ್ ದತ್. ಸದ್ಯಕ್ಕೆ ವಿಲನ್ ಅವತಾರವೆತ್ತಿರೋ ಸಂಜು ಬಾಬಾಗೆ ಕನ್ನಡವೂ ಸೇರಿದಂತೆ ನಾನಾ ಭಾಷೆಗಳಲ್ಲಿ ಬೇಡಿಕೆ ತೀವ್ರಗೊಂಡಿದೆ. ಅದಾಗಲೇ ಸಂಜುಬಾಬಾ ಯಾವ ಭಾಷೆಗಳಲ್ಲಿ ನಟಿಸಿದ್ದರೋ ಗೊತ್ತಿಲ್ಲ; ಆದರೆ ಕನ್ನಡದ ಕೆಜಿಎಫ್‍ನಲ್ಲಿ ಅಧೀರನ ಪಾತ್ರ ನಿರ್ವಹಿಸಿದರು ನೋಡಿ? ಆತನ ಖದರ್ ಮತ್ತಷ್ಟು ಫಳಗುಟ್ಟಲಾರಂಭಿಸಿದೆ. ವಿಶೇಷವೆಂದರೆ ಸಂಜಯ್ ದತ್‍ಗೆ ದಕ್ಷಿಣ ಭಾರತೀಯ ಚಿತ್ರರಂಗದಿಂದಲೇ ಹೆಚ್ಚೆಚ್ಚು ಆಫರ್‍ಗಳು ಬರುತ್ತಿವೆ. ಅವೆಲ್ಲವೂ ಕೂಡಾ ವಿಲನ್‍ಗಿರಿಯ ಪಾತ್ರಗಳೇ. Read This: https://www.cinishodha.com/ashish-vidyarthi-marriage-2023-05-28/ ಈ ಸೆಕೆಂಡ್ ಹಾಫ್‍ನಲ್ಲಿ ನಾಯಕನಾಗಿ ನಟಿಸಿ, ತಕ್ಕ ಪಾತ್ರ ಸಿಗದೆ ನಗೆಪಾಟಲಿಗೀಡಾಗೋದಕ್ಕಿಂತ, ವಿಲನ್ ಪಾತ್ರಗಳನ್ನು ಮಾಡಿ ಮನಸಲ್ಲುಳಿಯೋದೇ ವಾಸಿ…
ಚೆಂದಗಿರುವ ಸಿನಿಮಾ ನಟಿಯರ (actress) ಬಗ್ಗೆ ಪಡ್ಡೆ ಹೈಕಳಲ್ಲಿ ಆಕರ್ಷಣೆಯ ಛಳುಕು ಮೂಡಿಕೊಳ್ಳೋದು ವಿಶೇಷವೇನಲ್ಲ. ಕೆಲ ಮಂದಿಯಂತೂ ಗುಪ್ತವಾಗಿ ಅಂಥಾ ನಟಿಯರೊಂದಿಗೆ (love) ಲವ್ವಿನಲ್ಲಿ ಬಿದ್ದು, ಆ ಮಧುರವಾದ ಯಾತನೆಗಳನ್ನು ಒಳಗೊಳಗೇ ಸಂಭ್ರಮಿಸುತ್ತಾರೆ. ಹೀಗೆ ಸೆಲೆಬ್ರಿಟಿಗಳೊಂದಿಗೆ ಲವ್ವಲ್ಲಿ ಬೀಳೋದೊಂದು ಸಿಂಡ್ರೋಮ್ (syndrome) ಅನ್ನುತ್ತೆ ಮನಃಶಾಸ್ತ್ರ. ಆದರೆ, ಯಾವ ನಟಿಯೇ ಆದರೂ ಆರಂಭ ಕಾಲದ ಇಂಥಾ ಆಕರ್ಷಣೆಗಳನ್ನು ಬಹು ಕಾಲದವರೆಗೂ ಕಾಪಿಟ್ಟುಕೊಳ್ಳುವುದು, ಹೊಸಾ ಜನರೇಷನ್ನನ್ನೂ ಕೂಡಾ ಮರುಳು ಮಾಡೋದು ಕಷ್ಟದ ಕೆಲಸ. ಕೆಲವೇ ಕೆಲ ನಟಿಯರು ಮಾತ್ರವೇ ಭಾರತೀಯ ಚಿತ್ರರಂಗದಲ್ಲಿ ಆ ನಿಟ್ಟಿನಲ್ಲಿ ಯಶ ಕಂಡಿದ್ದಾರೆ. ಆ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುವಾಕೆ (milky beauty) ಮಿಲ್ಕಿ ಬ್ಯೂಟಿ ತಮನ್ನಾ! ಹೀಗೆ ತಲೆಮಾರುಗಳಾಚೆಗೂ ತನ್ನ ಟ್ಯಾಲೆಂಟು, ಸ್ನಿಗ್ಧ ಸೌಂದರ್ಯದ ಮೂಲಕ ಕೋಟ್ಯಂತರ ಹೃದಯಗಳನ್ನು ಆವರಿಸಿಕೊಂಡಿದ್ದವಳು ತಮನ್ನಾ. ಹೀಗೆ ಹುಚ್ಚೆದ್ದು ಆಕೆಯ ಮೇಲೆ ಮೋಹಗೊಂಡಿದ್ದವರೆಲ್ಲರ ಹೃದಯ ಛಿದ್ರಗೊಳ್ಳುವಂಥಾ ಸುದ್ದಿಯೊಂದು ತಿಂಗಳಿಂದೀಚೆಗೆ ಹರಿದಾಡುತ್ತಿದೆ. ಬಾಲಿವುಡ್ಡಿನ ಖ್ಯಾತ ನಟ ವಿಜಯ್ ವರ್ಮಾ ಜೊತೆ ತಮನ್ನಾ ಭಾಟಿಯಾ ಲವ್ ಅಫೇರ್…
ಆಕೆ ನಿಂತರೂ, ಕುಂತರೂ, ಫ್ಲೋನಲ್ಲೊಂದು ಸನ್ನೆ ಮಾಡಿದರೂ ಅದು ವಿವಾದವಾಗಿ (controversy) ಬಿಡುತ್ತದೆ. ಅದರ ಭೂಮಿಕೆಯಲ್ಲಿ ಸಾಮಾಜಿಕ ಜಾಲತಾಣಗಳ ತುಂಬಾ, ಥರ ಥರದ ಕಂಟೆಂಟುಗಳು ಹೊಳೆಯಾಗಿ ಹರಿಯುತ್ತವೆ. ತನ್ನ ವಿರುದ್ಧ ನಡೆಯುತ್ತಿರೋ ಇಂಥಾ ಪ್ರಹಾರಗಳನ್ನು ಕಂಡು ಖೇದಗೊಂಡಿರೋ (rashmika mandanna) ರಶ್ಮಿಕಾ, ಇದೀಗ ತನ್ನ ಕೆರಿಯರ್‍ನತ್ತ ಗಂಭೀರವಾಗಿ ದೃಷ್ಟಿನೆಟ್ಟು ಮುಂದುವರೆಯುತ್ತಿದ್ದಾಳೆ. ಇದೀಗ ರಶ್ಮಿಕಾ (rashmika mandanna) ಬಗೆಗಿನ ಅಚ್ಚರಿದಾಯಕ ವಿಚಾರವೊಂದು ಜಾಹೀರಾಗಿದೆ! ರಶ್ಮಿಕಾ ಮಂದಣ್ಣ (rashmika mandanna) ಇದೀಗ ದಕ್ಷಿಣ ಭಾರತೀಯ ಚಿತ್ರರಂಗದ ಬಹುಬೇಡಿಕೆಯ ನಟಿ. ಆಕೆಯ ವಿರುದ್ಧ ಅದೆಂಥಾದ್ದೇ ಅಪಪ್ರಚಾರಗಳು ನಡೆದರೂ ಬೇಡಿಕೆ ಮಾತ್ರ ತುಸುವೂ ಕುಂದಿಲ್ಲ. ಒಂದರ ಹಿಂದೊಂದರಂತೆ ಸ್ಟಾರ್ ನಟರ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾಳೆ. ಹೀಗೆ ಯಶದ ಉತ್ತುಂಗದಲ್ಲಿರುವಾಗಲೇ ರಶ್ಮಿಕಾ ಐಟಂ ಸಾಂಗಿನಲ್ಲಿ ಕುಣಿಯಲು ಒಪ್ಪಿಗೆ ಸೂಚಿಸಿದ್ದಾಳೆ. ಸಾಮಾನ್ಯವಾಗಿ ಬೇಡಿಕೆ ತಗ್ಗಿದ ತರುವಾಯ ನಟಿಯರು ಐಟಂ ಸಾಂಗುಗಳತ್ತ ವಾಲಿಕೊಳ್ಳೋದಿದೆ. ಆದರೆ ರಶ್ಮಿಕಾ ಬಹುಬೇಡಿಕೆಯ ನಟಿಯಾಗಿರುವಾಗಲೇ ಅಂಥಾ ಹಾಡಿನಲ್ಲಿ ಕುಣಿಯಲು ಮುಂದಾಗೋ ಮೂಲಕ ಅಚ್ಚರಿ ಮೂಡಿಸಿದ್ದಾಳೆ. ಅಂದಹಾಗೆ, ರಶ್ಮಿಕಾ…
ಬಹುಭಾಷಾ ನಟ ಆಶಿಶ್ ವಿದ್ಯಾರ್ಥಿ (ashish vidyarthi) ಅರವತ್ತನೇ ವಯಸ್ಸಿನಲ್ಲಿ ಎರಡನೇ ಮದುವೆಯಾಗಿರೋ (marriage) ವಿಚಾರವೀಗ ಚರ್ಚೆಯ ಕೇಂದ್ರಬಿಂದು. ಸಾಮಾನ್ಯವಾಗಿ, ಹೀಗೆ ಸಂಧ್ಯಾ ಕಾಲದ ಅಂಚಿನಲ್ಲಿರುವವರ ಅಫೇರುಗಳು, ಮದುವೆ ಮತ್ತಿತ್ಯಾದಿ ಅಂಶಗಳೆಲ್ಲವನ್ನು ಈ ಸಮಾಜ ಮಡಿವಂತಿಕೆಯ ಭೂಮಿಕೆಯಲ್ಲಿ ಒರೆಗೆ ಹಚ್ಚುತ್ತೆ. ಕಾಮದ ಸುತ್ತಲೇ ಟೀಕೆಗಳು ಕೇಳಿ ಬರುತ್ತವೆ. ಸಿನಿಮಾಗಳಲ್ಲಿ ವಿಲನ್‍ಗಿರಿ ಮಾಡಿ ಪ್ರಸಿದ್ಧಿ ಪಡೆದರೂ, ನಿಜಜೀವನದಲ್ಲಿ ಎಂದಿಗೂ ಹೆಸರು ಕೆಡಿಸಿಕೊಳ್ಳದ ಬಹುಭಾಷಾನಟ ಆಶಿಶ್ ವಿದ್ಯಾರ್ಥಿಯೀಗ (ashish vidyarthi) ಅದೇ ತೆರನಾದ ವಿಮರ್ಶೆಗಳಿಗೆ, ಕಟು ಟೀಕೆಗಳಿಗೆ ಗುರಿಯಾಗಿ ಬಿಟ್ಟಿದ್ದಾರೆ. ಅಷ್ಟಕ್ಕೂ ಆಶಿಶ್ ವಿದ್ಯಾರ್ಥಿ ಪರಭಾಷಾ ನಟನಾಗಿದ್ದರೂ ಕೂಡಾ ಕನ್ನಡದ ಪ್ರೇಕ್ಷಕರ ಪಾಲಗಾತ ಅಪರಿಚಿತರೇನಲ್ಲ. ಬಹುಶಃ ಭಾರತೀಯ ಚಿತ್ರರಂಗದ ಬುತೇಕ ಭಾಷೆಗಳಲ್ಲಿ ವಿಜೃಭಿಸಿದ ಕೆಲವೇ ಕೆಲ ನಟರ ಸಾಲಿನಲ್ಲಿ ಆಶಿಶ್ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಕನ್ನಡದಲ್ಲಂತೂ ಅನೇಕ ಸಿನಿಮಾಗಳ ವಿಲನ್ ರೋಲ್‍ಗಳಲಿ ಅವರು ಅಕ್ಷರಶಃ ಅಬ್ಬರಿಸಿದ್ದಾರೆ. ಒಂದು ಕಾಲದಲ್ಲಿ ಅದ್ಯಾವ ಕನ್ನಡ ಸಿನಿಮಾ ಬಂದರೂ ಇವರದ್ದೊಂದು ಪಾತ್ರ ಇದ್ದೇ ಇರುತ್ತಿತ್ತು. ಅದನ್ನು ಕಂಡ ಕನ್ನಡದ ಅದೆಷ್ಟೋ…
ಕಾಮಿಡಿ (comedy) ಕಲಾವಿದನಾಗಿ ನಟನೆಯೆಂಬುದು ಏಕತಾನತೆಯತ್ತ ಹೊರಳಿಕೊಳ್ಳುತ್ತಲೇ, ಏಕಾಏಕಿ ಹೀರೋಗಿರಿಯ ಚುಂಗು ಹಿಡಿದು ಹೊರಟಾತ (chikkanna) ಚಿಕ್ಕಣ್ಣ. ಒಂದು ಕಾಲದಲ್ಲಿ ಸಣ್ಣಪುಟ್ಟ ಅವಕಾಶಗಳಿಗೂಹಲುಬಾಡುತ್ತಿದ್ದ ಈತ ಇದೀಗ ಹೀರೋ ಆಗಿಯೂ ಅದೃಷ್ಟ ಪರೀಕೆಗಿಳಿದಿದ್ದಾನೆ. ಹೀರೋ ಆದ ಮೇಲೆ ಬೇರೆ ಹೀರೋಗಳ ಸಿನಿಮಾದಲ್ಲಿ ನಟಿಸೋದಿಲ್ಲ ಎಂಬಂಥಾ ತಿಮಿರಿನಾಚೆಗೆ ಸದ್ಯ ಚಿಕ್ಕಣ್ಣ (chikkanna) ಓಡುವ ಕುದುರೆಯಾಗಿ ಚಾಲ್ತಿಯಲ್ಲಿದ್ದಾನೆ. ಹೀಗೆ ಕಮೇಡಿಯನ್ ಆಗಿ ಬೇಡಿಕೆ ಉಳಿಸಿಕೊಂಡು, ಹೀರೋ ಆಗಿ ಬ್ಯುಸಿಯಾಗಿರುವಾಗಲೇ ಚಿಕ್ಕಣ್ಣ ಸಿಂಗರ್ ಆಗಿಯೂ ಗಮನ ಸೆಳೆಯುತ್ತಿದ್ದಾನೆ! ಬೆಂಗಳೂರು ಬಾಯ್ಸ್ ಅಂತೊಂದು ಚಿತ್ರ ಈಗೊಂದಷ್ಟು ದಿನಗಳಿಂದ ಆಗಾಗ ಸದ್ದು ಮಾಡುತ್ತಿದೆ. ಆ ಸಿನಿಮಾದಲ್ಲೊಂದು ಖಡಕ್ಕು ಲುಕ್ಕಿನಲ್ಲಿ ಕಾಣಿಸಿಕೊಂಡಿರುವ ಚಿಕ್ಕಣ್ಣ ಇದೀಗ ಅದೇ ಚಿತ್ರಕ್ಕಾಗಿ ಹಾಡೊಂದನ್ನು ಹಾಡಿದ್ದಾನೆ. ಧರ್ಮವಿಶ್ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ಈ ಹಾಡಿಗೆ, ಅರಸು ಅಂತಾರೆ ಸಾಹಿತ್ಯ ಬರೆದಿದ್ದಾರೆ. Read This: rashmika mandanna: ಕೊಡಗಿನ ಹುಡುಗಿಯ ಕಥೆ ಹೀಗೇಕಾಯ್ತು? ವಿಶಿಷ್ಟ ಶೈಲಿಯಲ್ಲಿ, ಪದೇ ಪದೆ ಕೇಳುವಂಥಾ ಗಟ್ಟಿತನವುಳ್ಳ ಹಾಡು ಬರೆಯೋದರಲ್ಲಿ ಅರಸು ನಿಸ್ಸೀಮರು.…
ಅದೇನು ದುರಂತವೋ ಗೊತ್ತಿಲ್ಲ; ಕನ್ನಡ ಚಿತ್ರರಂಗದಲ್ಲಿ ಪ್ರಖರವಾಗಿ ಮಿಂಚಬಹುದಿದ್ದ ಅನೇಕರು ಏಕಾಏಕಿ ಮೂಲೆ ಸೇರಿ ಬಿಡುತ್ತಾರೆ. ಸಲೀಸಾಗಿ ನಟ ನಟಿಯರಾಗಿ ನೆಲೆ ಕಂಡುಕೊಳ್ಳೋ ಛಾತಿ ಇದ್ದವರೂ ಕೂಡಾ ನಾನಾ ಕಿಸುರುಗಳಿಂದ, ವೃತ್ತಿ ಬದುಕಿನ ಹಾದಿಯನ್ನು ಕೆಸರು ಮಾಡಿಕೊಳ್ಳುತ್ತಾರೆ. ಅಂಥವರ ಸಾಲಿನಲ್ಲಿಅನೇಕರಿದ್ದಾರಾದರೂ, ಸದ್ಯದ ಮಟ್ಟಿಗೆ ಪ್ರಸ್ತುತ ಅನ್ನಿಸೋದು ದೂದ್‍ಪೇಡ ದಿಗಂತನ ಹೆಸರು. ತೀರ್ಥಹಳ್ಳಿಯ ಹುಡುಗದಿಗಂತನಿಗೆ ನಾಯಕನಾಗಿ ನೆಲೆಗೊಳ್ಳುವ ಎಲ್ಲ ಅವಕಾಶಗಳಿದ್ದವು. ದುರಂತವೆಂದರೆ, ನಟನೆಗಿಂತಲೂ ನಿದ್ದೆಯನ್ನೇ ಹೆಚ್ಚಾಗಿ ನೆಚ್ಚಿಕೊಂಡಿದ್ದ ದಿಗಂತ ಬಹುಬೇಗನೆ ಸವಕಲಾಗಿ ಬಿಟ್ಟಿದ್ದ. ಆಗಾಗ ಕತ್ತು ಮುರಿದುಕೊಂಡು, ಕಣ್ಣಿಗೆ ಏಟು ಮಾಡಿಕೊಳ್ಳುವಂಥಾ ಯಡವಟ್ಟುಗಳ ಮೂಲಕ ಚಾಲ್ತಿಯಲ್ಲಿದ್ದ ದಿಗಂತನೀಗ ಎಡಗೈ ಪುರಾಣದ ಮೂಲಕ ಮತ್ತೆ ಹಾಜರಾಗಿದ್ದಾನೆ! ಮಿಸ್ ಕ್ಯಾಲಿಫೋರ್ನಿಯಾ ಚಿತ್ರದ ಮೂಲಕ 2006ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ದಿಗಂತ್, ಆ ಘಳಿಗೆಯಲ್ಲಿಯೇ ಅಪಾರ ಪ್ರಮಾಣದಲ್ಲಿ ಭರವಸೆ ಮೂಡಿಸಿದ್ದ. ನಟನಾಗಲು ಬೇಕಾದ ಎಲ್ಲ ಅರ್ಹತೆಗಳೂ ಇದ್ದಂತಿದ್ದ ಈತ ದೊಡ್ಡ ಮಟ್ಟದಲ್ಲಿ ಬೆಳೆದು ನಿಲ್ಲುತ್ತಾನೆಂಬಂಥಾ ನಂಬಿಕೆಯೂ ಮೊಳೆತುಕೊಂಡಿದ್ದದ್ದು ಸುಳ್ಳಲ್ಲ. ಆದರೆ, ಬರ ಬರುತ್ತಾ ಚುರುಕುತನವನ್ನು ಧಾಡಸೀ ಮನೋಭಾವದ…
ಕಿರುತೆರೆಯಲ್ಲಿ ಒಂದಷ್ಟು ಪ್ರಸಿದ್ಧಿ ಪಡೆಯುತ್ತಲೇ ಏಕಾಏಕಿ ಹಿರಿತೆರೆಗೆ ಲಗ್ಗೆಯಿಡೋದು ಅನೇಕ ನಟ ನಟಿಯರ ಮಹಾ ಕನಸು. ಆದರೆ, ಆ ಯೋಗ ಮಾತ್ರ ಅಷ್ಟು ಸಲೀಸಾಗಿ ಎಲ್ಲರಿಗೂ ದಕ್ಕುವಂಥಾದ್ದಲ್ಲ. ಆದರೆ, ಹಿರಿತೆರೆಯಲ್ಲಿ (film industry) ಮಿಂಚುವ ಸೆಳೆತವಿರುತ್ತದಲ್ಲಾ? ಅದು ನಾನಾ ಆಟ ಆಡಿಸುತ್ತೆ. ಕೆಲವರನ್ನು ಹತ್ತಿದ ಏಣಿಯನ್ನೇ ಒದ್ದು ಕೆಡವಿ ಬಿಡುವಂತೆಯೂ ಪ್ರೇರೇಪಿಸುತ್ತೆ. ಹಾಗೆ ತಿಮಿರು ತೋರಿಸಿ ಸೀರಿಯಲ್ಲುಗಳಿಂದ ಅರ್ಧಕ್ಕೇ ಎದ್ದು ಬಂದವರನೇಕರು ಹೇಳ ಹೆಸರಿಲ್ಲದಂತೆ ಮಾಯವಾಗಿದ್ದಾರೆ. ಇನ್ನೂ ಕೆಲ ಮಂದಿ ಗಾಂಧಿನಗರದ ಸಂದಿಗೊಂದಿಗಳಲ್ಲಿ ಅಂತರ್‍ಪಿಶಾಚಿಗಳಂತೆ ಅಂಡಲೆಯುತ್ತಿದ್ದಾರೆ. ಈ ಹುಡುಗಿ (ramola) ರಮೋಲಾ ಕನ್ನಡತಿ (kannadathi) ಎಂಬ ಹಿಟ್ ಸೀರಿಯಲ್ಲಿನಿಂದ ಇದ್ದಕ್ಕಿಂದಂತೆ ಮಾಯವಾಗಿ, ಸಿನಿಮಾದಲ್ಲಿ ಪ್ರತ್ಯಕ್ಷಳಾದಾಗ ಬಹುತೇಕರು ಈಕೆಯೂ ಸೋತವರ ಸಾಲಿಗೆ ಸೇರುತ್ತಾಳೆಂದೇ ಅಂದುಕೊಂಡಿದ್ದರು. ಆದರೆ, ಆಕೆಯೀಗ ಅಕ್ಷರಶಃ ಅವಕಾಶಗಳ ಒಡ್ಡೋಲಗದಲ್ಲಿ ಮಿಂಚಲಾರಂಭಿಸಿದ್ದಾಳೆ! ವರ್ಷದ ಹಿಂದೆ ಕನ್ನಡತಿ ಅಂತೊಂದು ಧಾರಾವಾಹಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿತ್ತು. ಪ್ರತಿಭಾನ್ವಿತ ನಟಿ ರಂಜನಿ ರಾಘವನ್ ಆ ಸೀರಿಯಲ್ಲಿನ ನಾಯಕಿಯಾಗಿ ನಟಿಸಿದ್ದಳು. ಆಕೆಗೆ ಸದಾ ಕಾಟ ಕೊಡುವ…
ಕನ್ನಡ ಚಿತ್ರರಂಗದಲ್ಲಿ ವಿಶಿಷ್ಟ ನಿರ್ದೇಶಕರಾಗಿ ಗುರುತಿಸಿಕೊಂಡಿರುವವರು ದುನಿಯಾ ಸೂರಿ. ರಾ ಸನ್ನಿವೇಶಗಳ ಮೂಲಕವೇ ನೋಡುಗರ ಮನಸನ್ನು ಆದ್ರ್ರಗೊಳಿಸಬಲ್ಲ ಛಾತಿಯಿಂದಲೇ ಸೂರಿ ಇದುವರೆಗೂ ಗೆಲುವು ದಾಖಲಿಸುತ್ತಾ ಬಂದಿದ್ದಾರೆ. ಇದೀಗ ಅವರು ಅಂಬರೀಶ್ ಪುತ್ರ ಅಭಿಷೇಕ್ ನಾಯಕನಾಗಿರೋ ಬ್ಯಾ ಮ್ಯಾನರ್ಸ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಸಾಮಾನ್ಯವಾಗಿ ಒಂದು ಸಿನಿಮಾ ಆರಂಭಿಸಿದರೆ, ಅದನ್ನೊಂದು ಧ್ಯಾನದಂತೆ ಪರಿಭಾವಿಸುವವರು ಸೂರಿ. ಅದರ ನಡುವಲ್ಲಿಯೇ ಮತ್ತೊಂದು ಚಿತ್ರದತ್ತ ಅವರು ಹೊರಳಿಕೊಳ್ಳೋದಿಲ್ಲ. ಆದರೆ, ಸಣ್ಣದೊಂದು ಗ್ಯಾಪು ಸಿಕ್ಕರೂ ಹೊಸಾ ದೃಷಯ ಕಾವ್ಯವೊಂದಕ್ಕೆ ಅಣಿಗೊಂಡು ಬಿಡೋದು ಸೂರಿ ಸ್ಪೆಷಾಲಿಟಿ. ಇದೀಗ ಅವರು ಅದಕ್ಕೆ ತಕ್ಕುದಾಗಿಯೇ ಹೊಸಾ ಚಿತ್ರಕ್ಕೆ ತಯಾರಾಗಿದ್ದಾರೆ! ಸೂರಿ ಬ್ಯಾಡ್ ಮ್ಯಾನರ್ಸ್ ನಂತರದಲ್ಲಿ ನಿರ್ದೇಶನ ಮಾಡಲಿರೋ ಈ ಚಿತ್ರವನ್ನು ಜಯಣ್ಣ ನಿರ್ಮಾಣ ಮಾಡೋದು ಪಕ್ಕಾ ಆದಂತಿದೆ. ಬ್ಯಾಡ್ ಮ್ಯಾನರ್ಸ್ ಬ್ಯುಸಿಯ ನಡುವೆಯೇ ಸೂರಿ ಜಯಣ್ಣನೊಂದಿಗೆ ಮಾತುಕತೆ ನಡೆಸಿದ್ದಾರೆ. ಅದಕ್ಕೀಗ ಅಧಿಕೃತವಾಗಿಯೇ ಚಾಲನೆಯೂ ಸಿಕ್ಕಂತಾಗಿದೆ. ಅಂದಹಾಗೆ, ಈ ಹೊಸಾ ಸಿನಿಮಾದಲ್ಲಿ ವಿರಾಟ್ ನಾಯಕನಾಗಿ ನಟಿಸಲಿದ್ದಾನಂತೆ. ಮೊದಲ ಚಿತ್ರದಲ್ಲಿಯೇ ಭರವಸೆ ಮೂಡಿಸಿದ್ದ ಹುಡುಗ ವಿರಾಟ್. ಅಪ್ಪಟ…
ಕೆಜಿಎಫ್ ಸರಣಿ ಗೆಲುವಿನ ನಂತರದಲ್ಲಿ ರಾಕಿಂಗ್ ಸ್ಟಾರ್ ಯಶ್ ಇಂಟರ್‍ನ್ಯಾಷನಲ್ ಸ್ಟಾರ್ ಆಗಿ ಬಿಟ್ಟಿದ್ದಾರೆ. ಸದ್ಯಕ್ಕೀಗ ಅವರ ಮುಂದಿನ ನಡೆಯೇನೆಂಬುದರ ಸುತ್ತಾ ಸಿನಿಮಾ ಪ್ರೇಮಿಗಳ ಚರ್ಚೆಗಳು ಚಾಲ್ತಿಯಲ್ಲಿವೆ. ಒಂದು ಕಡೆಯಿಂದ ಯಶ್ ಕೆಜಿಎಫ್ ಮೂರನೇ ಭಾಗಕ್ಕೆ ತಯಾರಿ ನಡೆಸುತ್ತಿದ್ದಾರೆಂಬ ಸುದ್ದಿ ಕೇಳಿ ಬರುತ್ತಲೇ, ಮತ್ತೊಂದು ಕಡೆಯಿಂದ ಇನ್ನು ಆ ಸರಣಿ ಸಾಕು ಎಂಬಂಥಾ ಮಾತುಗಳೂ ಕೇಳಿ ಬರುತ್ತಿವೆ. ಆದರೂ ಕೂಡಾ ರಾಕಿ ಭಾಯ್‍ಗೆ ಡಾರ್ಕ್ ಶೇಡಿನ ನಶೆ ಇಳಿದಂತೆ ಕಾಣಿಸುತ್ತಿಲ್ಲ. ಹಾಗಂತ, ಯಶ್‍ಗೆ ಬೇರೆ ಅವಕಾಶಗಳ ಕೊರತೆ ಇದೆ ಅಂತಲೂ ಅಲ್ಲ. ಹೊಸಾ ಸಿನಿಮಾದ ವಿಚಾರದಲ್ಲಿ ಅದೆಂಥಾದ್ದೇ ಜಗ್ಗಾಟ ನಡೆದರೂ ಯಶ್ ಮೇಲೆರುವ ಕ್ರೇಜ್ ಮಾತ್ರ ಒಂದಿನಿತೂ ಕಡಿಮೆಯಾಗಿಲ್ಲ! ಒಂದು ಕಾಲದಲ್ಲಿ ಪರಭಾಷೆಗಳಲ್ಲಿ ಪ್ರಸಿದ್ಧಿ ಪಡೆದ ನಟಿಯರನ್ನು ಕನ್ನಡಕ್ಕೆ ಕರೆತರುವ ಸರ್ಕಸ್ಸುಗಳಾಗುತ್ತಿದ್ದವು. ಆದರೆ, ಅಂಥಾ ನಟಯರನ್ನು ಕರೆತರೋದು ಹೆಚ್ಚಿನ ಸಂದರ್ಭದಲ್ಲಿ ಕನಸಿನ ಮಾತಾಗುತ್ತಿತ್ತು. ಆದರೀಗ ಅದೇ ಪರಭಾಷಾ ಚಿತ್ರರಂಗದ ನಂಬರ್ ಒನ್ ನಟಿಯರೆಲ್ಲ ಯಶ್‍ಗೆ ನಾಯಕಿಯಾಗಿ ಕನ್ನಡಕ್ಕೆ ಪಾದಾರ್ಪಣೆ ಮಾಡಲು ಪೈಪೋಟಿಗೆ…

ನಮ್ಮ ಬಗ್ಗೆ
ಈ ನಾಡಿನಲ್ಲಿ ಹೆಸರಾಗಿರುವ ಹಾಯ್ ಬೆಂಗಳೂರ್, ಅಗ್ನಿ, ಲಂಕೇಶ್ ಪತ್ರಿಕೆ, ಹಿಮಾಗ್ನಿ ಮಂತಾದ ಅನೇಕ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿ, ತಮ್ಮದೇ ಆದ ಛಾಪು ಮೂಡಿಸಿರುವವರು ಪತ್ರಕರ್ತ ಸಂತೋಷ್ ಬಾಗಿಲಗದ್ದೆ. ರಾಜಕೀಯ, ಅಪರಾಧ, ಸಿನಿಮಾ ಸೇರಿದಂತೆ ತನಿಖಾ ಪತ್ರಿಕೋದ್ಯಮದಲ್ಲಿ ದಶಕಗಳಿಗೂ ಹೆಚ್ಚು ಕಾಲ ಪಳಗಿಕೊಂಡು, ಅನೇಕ ಭ್ರಷ್ಟರನ್ನು ಬಯಲಾಗಿಸಿರುವ ಬಾಗಿಲಗದ್ದೆ ಆರಂಭಿಸಿರುವ ವಿಭಿನ್ನ ಡಿಜಿಟಲ್ ಹೆಜ್ಜೆ ಶೋಧ ಮತ್ತು ಸಿನಿ ಶೋಧ. ಇದು ಹೊಸಾ ಆಯಾಮದ ಪತ್ರಿಕೋದ್ಯಮ. ಸತ್ಯದ ಭೂಮಿಕೆಯ ನೇರ-ನಿಷ್ಠುರ ವರದಿಗಳ ಸಂಕಲ್ಪದೊಂದಿಗೆ, ಭಿನ್ನ ಶೈಲಿಯ ಬರವಣಿಗೆಯ ಮೂಲಕ ಹೊಸತೊಂದು ಜಗತ್ತು ನಿಮ್ಮೆದುರು ನಿರಂತವಾಗಿ ತೆರೆದುಕೊಳ್ಳಲಿದೆ; ಅಚ್ಚರಿಗೀಡುಮಾಡಲಿದೆ!