Subscribe to Updates
Get the latest creative news from FooBar about art, design and business.
Author: Santhosh Bagilagadde
Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.
ಈ ಸಿನಿಮಾ ನಟನ ನಟಿಯರ ಬಗ್ಗೆ ಅದ್ಯಹಾವ್ಯಾವ ದಿಕ್ಕುಗಳಲ್ಲಿ ಸುದ್ದಿಗಳು ಹುಟ್ಟಿಕೊಳ್ಳುತ್ತವೋ ಹೇಳಲು ಬರುವುದಿಲ್ಲ. ಈಗಂತೂ ಸಾಮಾಜಿಕ ಜಾಲತಾಣಗಳ ಜಮಾನ. ಇಲ್ಲಿ ಮಂದಿ ಕಂಟೆಂಟ್ ಕ್ರಿಯೇಟ್ ಮಾಡೋ ಭರದಲ್ಲಿ ಸುಳ್ಳು ಸುದ್ದಿಗಳನ್ನು ಕ್ರಿಯೇಟು ಮಾಡಿ ಹಬ್ಬಿಸಿ ಒಂದಷ್ಟು ಮೈಲೇಜು ಗಿಟ್ಟಿಸಿಕೊಳ್ಳೋದಿದೆ. ಸಾಮಾನ್ಯವಾಗಿ, ಒಂದೇ ಸಿನಿಮಾದಲ್ಲಿ ನಟಿಸಿದ ನಟ ನಟಿಯರ ಬಗ್ಗೆ ಅಫೇರಿನ ಬಗ್ಗೆ ಗುಲ್ಲೇಳುತ್ತೆ. ಅದನ್ನೂ ಮೀರಿ ಸಿನಿಮಾ ಭಾಗವಾಗಿ ಸೃಷ್ಟಿಯಾದ ದೃಶ್ಯಗಳ ಸುತ್ತಲೂ ಚರ್ಚೆಗಳು ಹುಟ್ಟಿಕೊಳ್ಳೋದಿದೆ. ಬಾಹುಬಲಿ ಭಾಗ ಒಂದರಲ್ಲಿ ಪ್ರಭಾಸ್ ಮತ್ತು ತಮನ್ನಾ ಭಾಟಿಯಾ ಜೊತೆಯಾಗಿ ನಟಿಸಿದ್ದ ದೃಶ್ಯವೊಂದು ಕೂಡಾ ಅಂಥಾದ್ದೇ ವಿವಾದದ ಕೇಂದ್ರ ಬಿಂದುವಾಗಿತ್ತು. ತಮನ್ನಾ ಭಾಟಿಯಾ ಬಾಹುಬಲಿ ಚಿತ್ರದಲ್ಲಿ ಆವಂತಿಕಾ ಎಂವಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅಪ್ರತಿಮ ಸೌಂದರ್ಯದ ಗಣಿಯಾಗಿದ್ದರೂ, ಸೌಂದರ್ಯ ಮತ್ತು ಶೃಂಗಾರದ ಬಗ್ಗೆ ಯಾವ ಗಮನವೂ ಇಲ್ಲದ ಪಾತ್ರವದು. ಆಕೆಯ ಮೇಲೆ ಮೋಹಗೊಳ್ಳುವ ಬಾಹುಬಲಿಯನ್ನು ವ್ಯಘ್ರ ಶೈಲಿಯಲ್ಲಿ ಹಿಮ್ಮೆಟ್ಟಿಸುತ್ತಾ ಸಾಗೋದು ಆವಂತಿಕಾ ಪಾತ್ರದ ಪ್ರಧಾನ ಆಕರ್ಷಣೆಯಾಗಿತ್ತು. ಅಂಥಾ ಆವಂತಿಕಾಳನ್ನು ಮೋಹಿಸಿ, ಆಕೆಗೆ ಸೌಂದರ್ಯ ಪ್ರಜ್ಞೆ…
ಕೆಲ ಮಹಿಳಾ ಪ್ರಧಾನ ಚಿತ್ರಗಳಲ್ಲಿ ರಗಡ್ ಲುಕ್ಕಿನಲ್ಲಿ ಮಿಂಚಿದ ಬಳಿಕ ಅನುಷ್ಕಾ ಶೆಟ್ಟಿ ಒಂದಷ್ಟು ಸೌಂಡು ಮಾಡಿದ್ದದ್ದು ಬಾಹುಬಲಿ ಮೂಲಕ. ಆದರೆ, ಅಂಥಾ ದೊಡ್ಡ ಮಟ್ಟದಲ್ಲಿ ಯಶ ಕಂಡ ನಂತರವೂ ಒಂದು ಸುದೀರ್ಘವಾದ ಶುಷ್ಕ ವಾತಾವರಣ ಅನುಷ್ಕಾಳ ವೃತ್ತಿ ಬದುಕಿಗೆ ಕವುಚಿಕೊಂಡಿತ್ತು. ಈ ಅವಧಿಯ ತುಂಬೆಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಒಂದಷ್ಟು ಗೌಜು, ಗದ್ದಲ ಸೃಷ್ಟಿಸಿದ್ದು ಆಕೆಯ ಮದುವೆ ಮ್ಯಾಟರ್ ಮಾತ್ರ. ಅನುಷ್ಕಾ ಮದುವೆಯ ಸುತ್ತ ಒಂದಷ್ಟು ಮಂದಿ ನಾನಾ ದಿಕ್ಕಿನ ರೂಮರು ಹಬ್ಬಿಸಿದ್ದು ಬಿಟ್ಟರೆ, ಆಕೆಯ ಕಡೆಯಿಂದೇನೂ ಪ್ರತಿಕ್ರಿಯೆ ಬಂದಿರಲಿಲ್ಲ. ಆದರೀಗ ಒಂದು ಸುದೀರ್ಘ ಮೌನದ ನಂತರ ಅನುಷ್ಕಾ ಘಾಟಿಯಾಗಿ ಮರಳಿದ್ದಾರೆ! ಅನುಷ್ಕಾ ಶೆಟ್ಟಿ ಘಾಟಿ ಅಂತೊಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆಂಬ ಬಗ್ಗೆ ವರ್ಷಗಳ ಹಿಂದಿನಿಂದಲೇ ಗುಲ್ಲೆದ್ದಿತ್ತು. ಕ್ರಿಶ್ ಜಗರ್ಲಮುಡಿ ಆ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಈ ಹಿಂದೆ ಅದರ ಒಂದಷ್ಟು ಝಲಕ್ಕುಗಳು ಬಿಡುಗಡೆಗೊಂಡಿದ್ದವು. ಅದನ್ನು ನೋಡಿದ ಮಂದಿ ಇದೊಂದು ನಕ್ಸಲ್ ಹೋರಾಟದ ಕಥನವೆಂಬ ಬಗ್ಗೆ ಗುಲ್ಲೆಬ್ಬಿಸಿದ್ದರು. ಇದೀಗ ಬಹು ಕಾಲದ ನಂತರ…
ಸಿನಿಮಾ ನಾಯಕನಾಗೋದೆಂದರೆ ಇರಬೇಕಾದ ಅರ್ಹತೆಗಳೇನು? ಇಂಥಾದ್ದೊಂದು ಪ್ರಶ್ನೆ ಎದುರಿಟ್ಟರೆ ಥಟಕ್ಕನೆ ಸ್ಫುರದ್ರೂಪ, ಸಿಕ್ಸ್ ಪ್ಯಾಕು ಮುಂತಾದ ಸಿದ್ಧಸೂತ್ರಪ್ರಣೀತ ಉತ್ತರಗಳು ಎದುರಾಗೋದು ಸಹಜ. ಕೆಲ ಮಂದಿ ನಟರಾಗೋದಕ್ಕೆ ಅಂಥಾ ಅರ್ಹತೆಗಳಿದ್ದರೆ ಸಾಕೆಂಬ ಭ್ರಮೆಯಲ್ಲಿ ಸಿಕ್ಸ್ ಪ್ಯಾಕಿನ ಸಮೇತ ಉದುರಿಕೊಂಡ ದಂಡಿ ದಂಡಿ ಉದಾಹರಣೆಗಳಿದ್ದಾವೆ. ಇತ್ತೀಚಿನ ವರ್ಷಗಳಲ್ಲಿ ಅಂಥಾ ಸಿದ್ಧಸೂತ್ರದ ನಂಬಿಕೆಗಳನ್ನು ಛಿದ್ರಗೊಳಿಸಿದವರಲ್ಲಿ ಅಗ್ರಗಣ್ಯರಾಗಿ ಕಾಣಿಸುವವರು ರಾಜ್ ಬಿ ಶೆಟ್ಟಿ. ತನಗೊಪ್ಪುವ ಕಥೆಯನ್ನು ತಾನೇ ಸಿದ್ಧಪಡಿಸಿ, ನಿರ್ದೇಶಿಸಿ ಒಂದು ಮೊಟ್ಟೆಯ ಕಥೆಯೊಂದಿಗೆ ಪ್ರತ್ಯಕ್ಷರಾಗಿದ್ದ ರಾಜ್ ಶೆಟ್ಟಿ ಇದೀಗ ಕನ್ನಡ ಚಿತ್ರರಂಗದ ದಿಕ್ಕು ದೆಸೆಗಳನ್ನೇ ಬದಲಾಯಿಸುವಂತೆ ಬೆಳೆದು ನಿಂತದ್ದಿದೆಯಲ್ಲಾ? ಅದು ನಿಜಕ್ಕೂ ಸೋಜುಗ! ಓರ್ವ ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿಯೂ ಕೂಡಾ ರಾಜ್ ಶೆಟ್ಟಿಯದ್ದು ಭಿನ್ನ ಪಥ. ಇತ್ತೀಚೆಗಷ್ಟೆ ತೆರೆಗಂಡು ಸೂಪರ್ ಹಿಟ್ ಆಗಿರುವ ಸು ಫ್ರಂ ಸೋ ಚಿತ್ರ ಓರ್ವ ನಿರ್ಮಾಪಕನಾಗಿ ರಾಜ್ ಶೆಟ್ಟಿಯ ಕಸುವಿಗೊಂದು ಉದಾಹರಣೆಯಂತೆ ಕಾಣಿಸುತ್ತೆ. ಈ ನಡುವೆ ನಟನಾಗಿಕ ಬೇರೆ ನಿರ್ದೇಶಕರ ಸಿನಿಮಾಗಳಲ್ಲಿಯೂ ಕೂಡಾ ರಾಜ್ ಶೆಟ್ಟರಿಗೆ ಒಳ್ಳೆ ಅವಕಾಶಗಳೇ ಕೂಡಿ…
ಸತ್ಯಪ್ರಕಾಶ್ ನಿರ್ದೇಶನದ ಎಕ್ಸ್ ಆಂಡ್ ವೈ ಚಿತ್ರ ಇತ್ತೀಚೆಗಷ್ಟೇ ತೆರೆಗಂಡು ಪ್ರೇಕ್ಷಕರನ್ನು ಸೆಳೆದುಕೊಂಡಿತ್ತು. ಈ ಚಿತ್ರದಲ್ಲಿ ಚೆಂದದ ಪ್ರಧಾನ ಪಾತ್ರವೊಂದರಲ್ಲಿ ನಟಿಸುವ ಮೂಲಕ ಗಮನ ಸೆಳೆದಿರುವವರು ಅಥರ್ವ ಪ್ರಕಾಶ್. ಈ ಪಾತ್ರವನ್ನು ಪ್ರಕಾಶ್ ಸೃಷ್ಟಿಸಿದ್ದ ರೀತಿಯೇ ಪಳಗಿದ ನಟರಿಗೂ ಸವಾಲಿನಂತಿತ್ತು. ಆರಂಭಿಕವಾಗಿ ಅದರ ಬಗ್ಗೆ ಯಾವ ಸುಳಿವಬೂ ಇಲ್ಲದೆ, ಆ ಪಾತ್ರವನ್ನು ಆವಾಹಿಸಿಕೊಂಡು ನಟಿಸಿದ್ದ ಈ ಹುಡುಗನ ನಟನಾ ಚಾತುರ್ಯ ಕಂಡವರು ಭೇಶ್ ಅಂದಿದ್ದರು. ಹೀಗೆ ಕನ್ನಡ ಚಿತ್ರರಂಗ ಹಾಗೂ ತುಳುವಿನಲ್ಲಿಯೂ ನಟನೆಯ ಯಾನವನ್ನು ಸಂಭಾಳಿಸಿಕೊಂಡು ಸಾಗುತ್ತಿರುವ ಅಥರ್ವ ಪಾಲಿಗೀಗ ಒಂದರ ಹಿಂದೊಂದರಂತೆ ಚೆಂದದ ಅವಕಾಶಗಳು ಕೂಡಿಕೊಳ್ಳುತ್ತಿವೆ. ತುಳು ಹಾಗೂ ಕನ್ನಡ ಚಿತ್ರರಂಗದಲ್ಲಿ ಏಕಕಾಲದಲ್ಲಿಯೇ ನಾಯಕ ನಟನಾಗಿ ಮಿಂಚುತ್ತಿರುವ ಅರ್ಥರ್ವ ಸಿನಿಮಾ ಪ್ರೇಮಿಗಳ ಅಚ್ಚರಿಗೆ ಕಾರಣರಾಗಿದ್ದಾರೆ. ಇದೀಗ ಒಂದಷ್ಟು ಸಿನಿಮಾಗಳ ಭಾಗವಾಗಿರುವ ಅಥರ್ವ ಪ್ರಕಾಶ್ ಮಂಗಳೂರು ಸೀಮೆಯವರು. ಕಲೆಯ ವಾತಾವರಣದಲ್ಲಿಯೇ ಬೆಳೆದಿದ್ದ ಅವರ ಪಾಲಿಗೆ ಹದಿನಾರನೇ ವಯಸ್ಸಿನಲ್ಲಿಯೇ ಒಂದೊಳ್ಳೆ ಅವಕಾಶ ಕೂಡಿ ಬಂದಿತ್ತು. ತುಳುವಿನಲ್ಲಿ ಸೂಪರ್ ಹಿಟ್ ಆಗಿದ್ದ, ಐನೂರು ದಿನಗಳ…
ಕೆಲ ಮಂದಿ ಸಿನಿಮಾ ಧ್ಯಾನವನ್ನು ಆತ್ಮದಂತೆ ಹಚ್ಚಿಕೊಂಡು ತಾವಂದುಕೊಂಡ ಬಗೆಯಲ್ಲಿ ಅದನ್ನು ನನಸು ಮಾಡಿಕೊಂಡ ಉದಾಹರಣೆಗಳಿದ್ದಾವೆ. ಇನ್ನೂ ಕೆಲವರನ್ನು ಸಿನಿಮಾವೆಂಬ ಮಾಯೆಯೇ ತಾನೇತಾನಾಗಿ ತೆಕ್ಕೆಗಪ್ಪಿಕೊಳ್ಳುತ್ತೆ. ಹಾಗೊಂದು ಅಪ್ಪುಗೆ ಸಿಕ್ಕಾದ ನಂತರ ಬಲು ಆಸ್ಥೆಯಿಂದ ಮುಂದಡಿ ಇಟ್ಟವರನೇಕರು ನಿರ್ದೇಶಕರಾಗಿ, ನಟರಾಗಿ, ನಾನಾ ವಿಭಾಗಗಳಲ್ಲಿ ಮಿಂಚಿದ ವಿಪುಲ ಉದಾಹರಣೆಗಳಿವೆ. ಆ ಸಾಲಿಗೆ ಸೇರ್ಪಡೆಗೊಳ್ಳುವ ಎಲ್ಲ ಗುಣ ಲಕ್ಷಣಗಳನ್ನು ಹೊಂದಿರುವವರು ಮಲೆಮಹದೇಶ್ವರ ಸ್ವಾಮಿಯ ಬಿಳಿಗಿರಿರಂಗನ ಬೆಟ್ಟಗಳ ತಪ್ಪಲಿನ ಪ್ರತಿಭೆ ರಘು. ಇದೀಗ ಥರ ಥರದ ಪಾತ್ರಗಳನ್ನು ಮಾಡುತ್ತಾ ಚಿತ್ರರಂಗ ಮತ್ತು ಸಿನಿಮಾ ಒಪ್ರೇಮಿಗಳಿಗೆ ರಾಕ್ ರಘು ಅಂತಲೇ ಪರಿಚಿತರಾಗಿರುವ ಇವರು, ದುನಿಯಾ ವಿಜಯ್ ಅಭಿನಯದ ಸಲಗ, ಭೀಮದಂಥಾ ಸಿನಿಮಾಗಳ ಮೂಲಕ ಸೈ ಅನ್ನಿಸಿಕೊಂಡಿದ್ದಾರೆ. ಒಂದಷ್ಟು ಯಶಸ್ವೀ ಧಾರಾವಾಹಿಗಳಲ್ಲಿ ನಟಿಸುವ ಮೂಲಕವೂ ಮನೆ ಮಾತಾಗಿದ್ದಾರೆ. ಬಿಳಿಗಿರಿರಂಗನ ಬೆಟ್ಟದ ತಪ್ಪಲಿನ ಪ್ರಾಕೃತಿಕ ದೈವೀಕ ವಾತಾವರಣದಲ್ಲಿ ಬೆಳೆದವರು ರಾಕ್ ರಘು. ಆರಂಭದಿಂದಲೂ ಸಿನಿಮಾ ಬಗೆಗೊಂದು ಸಹಜವಾದ ಆಕರ್ಷಣೆಯಿಟ್ಟುಕೊಂಡಿದ್ದ ರಘು ಪಾಲಿಗೆ ನಟನಾಗಬೇಕೆಂಬ ಆಸೆಯೇನೂ ಇರಲಿಲ್ಲ. ಬೆಟ್ಟದ ಇಕ್ಕೆಲದಲ್ಲಿ ತಲೆಮಾರುಗಳ ಹಿಂದಿನಿಂದಲೂ…
ಸಿನಿಮಾ ರಂಗ ಒಂದು ಅಲೆಯ ಭ್ರಾಮಕ ಸೆಳೆವಿಗೆ ಸಿಕ್ಕು ಸಾಗುತ್ತಿರುವಾಗಲೇ, ಅದರ ಇಕ್ಕೆಲದಲ್ಲಿ ಒಂದಷ್ಟು ಭಿನ್ನ ಬಗೆಯ ಪ್ರಯತ್ನಗಳು ಸದಾ ಚಾಲ್ತಿಯಲ್ಲಿರುತ್ತವೆ. ಪ್ಯಾನಿಂಡಿಯಾ ಸಿನಿಮಾಗಳು ಬಂದು, ಕೋಟಿ ಕೋಟಿ ಬ್ಯುಸಿನೆಸ್ಸು ಮಾಡೋದರಿಂದಲೇ ಸಿನಿಮಾ ರಂಗದ ಉಳಿವು ಸಾಧ್ಯ ಅನ್ನೋ ಭ್ರಮೆಯ ನಡುವೆ, ಸಿನಿಮಾ ರಂಗದ ಉಳಿವಿರೋದು ಹೊಸಾ ಪ್ರಯತ್ನಗಳಲ್ಲಿ ಎಂಬ ವಾಸ್ತವ ಎದುರಾಗುತ್ತೆ. ಆ ದಿಕ್ಕಿನ ಪ್ರಯತ್ನಗಳ ಸಾಲಿನಲ್ಲಿ ಸೇರ್ಪಡೆಗೊಳ್ಳುವ ಚಿತ್ರ ಸೀಸ್ ಕಡ್ಡಿ. ರತನ್ ಗಂಗಾಧರ್ ನಿರ್ದೇಶನ ಮಾಡಿರುವ ಈ ಮಕ್ಕಳ ಸಿನಿಮಾ ಆರಂಭದಲ್ಲಿಯೇ ಒಂದಷ್ಟು ಸಿನಿಮೋತ್ಸವಗಳಲ್ಲಿ ಪ್ರದರ್ಶನಗೊಂಡು ಸೈ ಅನ್ನಿಸಿಕೊಂಡಿತ್ತು. ಸಿನಿಮಾ ಮಂದಿರಗಳಲ್ಲಿಯೂ ಯಶಸ್ವೀ ಪ್ರದರ್ಶನ ಕಂಡಿದ್ದ ಸೀಸ್ ಕಡ್ಡಿಯೀಗ ಓಟಿಟಿಗೆ ಆಗಮಿಸಿದೆ. ನಮ್ಮ ಸುತ್ತಲ ವಿಚಾರಗಳನೇ ಭಿನ್ನ ನೋಟದಲ್ಲಿ ನೋಡಬಲ್ಲ ದೃಷ್ಟಿಕೋನಕ್ಕಷ್ಟೇ ಹೊಸಾ ವಿಚಾರಗಳು ದಕ್ಕುತ್ತವೆ. ನಿರ್ದೇಶಕ ರತನ್ ಗಂಗಾಧರ್ ಅಂಥಾದ್ದೊಂದು ಬೆರಗಿನ ಭಾವದಿಂದ ನಮ್ಮೆಲ್ಲರಿಗೂ ಚಿರಪರಿಚಿತವಾದ ಪೆನ್ಸಿಲ್ ಅನ್ನು ದಿಟ್ಟಿಸಿದ್ದರ ಫಲವಾಗಿಯೇ ಸೀಸ್ ಕಡ್ಡಿ ಚಿತ್ರ ಜೀವ ಪಡೆದಿದೆ. ಪೆನ್ಸಿಲ್ಲಿನ ಗುಣಗಳನ್ನೇ ಐದು ಪಾತ್ರವಾಗಿಸಿ, ಬದುಕಿಗೆ…
ವರ್ಷದ ಹಿಂದೆ ಕೆಂಡ ಅಂತೊಂದು ಸಿನಿಮಾ ತೆರೆಗಂಡು ಪ್ರೇಕ್ಷಕರ ಕಡೆಯಿಂದ ಮೆಚ್ಚುಗೆ ಗಳಿಸಿಕೊಂಡಿತ್ತು. ಹಾಗೆ ನೋಡಿದರೆ, ಆರಂಭದಿಂದಲೇ ಕೆಂಡದ ಬಗೆಗೊಂದು ಕುತೂಹಲ ಕೀಲಿಸಿಕೊಂಡಿತ್ತು. ಅದಕ್ಕೆ ಕಾರಣವಾಗಿದ್ದದ್ದು ನಿರ್ದೇಶಕಿಯಾಗಿ ಗಮನ ಸೆಳೆದಿದ್ದ ರೂಪಾ ರಾವ್ ಈ ಸಿನಿಮಾದ ನಿರ್ಮಾಣದ ಹೊಣೆ ಹೊತ್ತುಕೊಂಡಿದ್ದ ಸುದ್ದಿ. ಇನ್ನುಳಿದಂತೆ ಸಹದೇವ್ ಕೆಲವಡಿ ಹಂಚಿಕೊಂಡಿದ್ದ ಒಂದಷ್ಟು ಸುಳಿವುಗಳು ಮೂಲಕವೂ ಕೆಂಡ ಕೌತುಕದ ಕೇಂದ್ರ ಬಿಂದುವಾಗಿತ್ತು. ಇಂಥಾ ಸಕಾರಾತ್ಮಕ ವಾತಾವರಣದಲ್ಲಿ ಬಿಡುಗಡೆಗೊಂಡಿದ್ದ ಕೆಂಡವೀಗ ಓಟಿಟಿಗೆ ಲಗ್ಗೆಯಿಟ್ಟಿದೆ! ಹೊಸಾ ಧಾಟಿಯ ಸಿನಿಮಾಗಳನ್ನು ಮೆಚ್ಚಿ ಕೊಂಡಾಡುವ, ನೋಡಿ ಗೆಲ್ಲಿಸುವ ಪ್ರೇಕ್ಷಕ ವರ್ಗ ಕನ್ನಡದಲ್ಲಿದೆ. ಅಂಥಾ ಸಿನಿಮಾ ಪ್ರೇಮಿಗಳನ್ನೆಲ್ಲ ಖುಷಿಗೊಳಿಸಿದ್ದ ಚಿತ್ರ ಕೆಂಡ. ಸಾಮಾನ್ಯವಾಗಿ ಭೂಗತ ಜಗತ್ತಿನ ಕಥೆಯೆಂದರೆ, ಪಕ್ಕಾ ಕಮರ್ಶಿಯಲ್ ಶೈಲಿಯ ಚಿತ್ರಣವೊಂದು ಕಣ್ಮುಂದೆ ಸುಳಿದಾಡುತ್ತೆ. ಆದರೆ, ಅದನ್ನು ಮತ್ತೊಂದು ಆಯಾಮದಲ್ಲೂ ದೃಶ್ಯೀಕರಿಸಬಹುದೆಂಬುದನ್ನು ನಿರೂಪಿಸಿದ್ದ ಸಿನಿಮಾವಾಗಿ ಕೆಂಡ ಗಮನ ಸೆಳೆದುಕೊಂಡಿತ್ತು. ನಿರ್ದೇಶಕ ಸಹದೇವ್ ಕೆಲವಡಿ ಮೊದಲ ಹೆಜ್ಜೆಯಲ್ಲಿಯೇ ಪ್ರೇಕ್ಷಕರ ಮೆಚ್ಚುಗೆ ಗಳಿಸಿಕೊಂಡಿದ್ದರು. ಜೊತೆಗೆ ನಿರ್ದೇಶನಕ್ಕಾಗಿ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡಿದ್ದರು. ಇಂಥಾ ಕೆಂಡವೀಗ ಅಮೇಜಾನ್ ಪ್ರೈಮ್‌ಗೆ…
ಎಪ್ಪತ್ತೊಂದನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಪಟ್ಟಿ ಪ್ರಕಟಗೊಂಡಿದೆ. ಕನ್ನಡದ ಕಂದೀಲು ಚಿತ್ರವೂ ಅತ್ಯತ್ತಮ ಚಿತ್ರವಾಗಿ ಪ್ರಶಸ್ತಿಗೆ ಪಾತ್ರವಾಗಿದೆ. ಇದು ಸಮಸ್ತ ಕರುನಾಡ ಮಂದಿಯೂ ಹೆಮ್ಮೆ ಪಡುವ ವಿಚಾರ. ಇದೇ ಹೊತ್ತಿನಲ್ಲಿ ಸದರಿ ಪ್ರಶಸ್ತಿಯ ಸುತ್ತಾ ಒಂದಷ್ಟು ಅಪಸ್ವರಗಳು ದೇಶವ್ಯಾಪಿ ಹಬ್ಬಿಕೊಂಡಿವೆ. ಅದಕ್ಕೆ ಕಾರಣವಾಗಿರೋದು ಬಾಲಿವುಡ್ ಬಾದ್‌ಷಾ ಅಂತಲೇ ಖ್ಯಾತಿವೆತ್ತಿರುವ ಶಾರೂಖ್ ಖಾನ ಗೆ ಲಭಿಸಿರುವ ಅತ್ಯುತ್ತಮ ನಟ ಪ್ರಶಸ್ತಿ. ಈಗಾಗಲೇ ಲೆಕ್ಕವಿಡಲಾಗಷ್ಟು ವೆರೈಟಿಯ ಪ್ರಶಸ್ತಿಗಳಿಗೆ ಭಾಜನನಾಗಿರುವಾತ ಶಾರೂಖ್. ಹಾಗಾದರೆ, ಶಾರೂಖ್ ಅತ್ಯುತ್ತಮ ನಟನೆಂಬೋ ರಾಷ್ಟ್ರ ಪ್ರಶಸ್ತಿ ಪಡೆಯಲು ಅರ್ಹನಲ್ಲವೇ? ಆತನಿಗೆ ಸಿಕ್ಕ ಪ್ರಶಸ್ತಿಯ ಸುತ್ತ ಯಾಕಿಂಥಾ ಕೊಂಕು ನುಡಿಗಳು ಹಬ್ಬಿಕೊಂಡಿವೆ? ಇಂಥಾ ಪ್ರಶ್ನೆಗಳಿಗೆ ನಿಖರ ಉತ್ತರವೂ ಸಿಕ್ಕಿದೆ! ಈಗ ರಾಷ್ಟ್ರ ಪ್ರಶಸ್ತಿಯನ್ನು ಶಾರೂಖ್ ಖಾನ ಪಡೆದ ಬಗ್ಗೆ ಹೆಚ್ಚಿನವರಿಗೆ ತಕರಾರಿಲ್ಲ. ಆದರೆ, ಅದು ಲಭಿಸಿದ ಸಿನಿಮಾದ ಬಗ್ಗೆ ಅಸಮಾಧಾನ ಹಬವೆಯಾಡುತ್ತಿದೆ. ಅಂದಹಾಗೆ ಶಾರೂಖ್ ಖಾನ್‌ಗೆ ಕಳೆದ ವರ್ಷ ಬಿಡುಗಡೆಗೊಂಡಿದ್ದ ತೋಪು ಚಿತ್ರ ಜವಾನ್‌ನಲ್ಲಿಯ ಅಭಿನಯಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿದೆ. ತಮಿಳುನಾಡಿನ…
ಕನ್ನಡದ ರಿಯಾಲಿಟಿ ಶೋಗಳ ಬಗ್ಗೆ ಈಗ ದಶದಿಕ್ಕುಗಳಿಂದಲೂ ಅಪಸ್ವರಗಳು ಕೇಳಿ ಬರುತ್ತಿವೆ. ಅಲ್ಲೆಲ್ಲೋ ಕಾಡಿನ ಗರ್ಭದಲ್ಲಿದ್ದ ಹುಡುಗರನ್ನು ಹುಡುಕಿ ತಂದು, ಒಂದಷ್ಟು ಮೆರೆದಾಡಿಸಿ, ಎಲ್ಲ ಮುಗಿದ ಮೇಲೆ ಅನಾಥರನ್ನಾಗಿಸುವ ಖಯಾಲಿಯೊಂದು ದಶಕದ ಹಿಂದೆ ಶುರುವಾಗಿತ್ತು. ಅದರ ಘೋರ ಪರಿಣಾಮವೆಂಬಂತೆ ಬುಡಕಟ್ಟು ಹಾಡಿಯ ಹುಡುಗ ರಾಜೇಶ ಜೀವ ಚೆಲ್ಲಿದ್ದ. ಇದೀಗ ಕಾಮಿಡಿ ಕಿಲಾಡಿಗಳು ಶೋ ಮೂಲಕ ಹೆಸರಾಗಿದ್ದ ರಂಗಭೂಮಿ ಪ್ರತಿಭೆ ಚಂದ್ರಶೇಖರ್ ಸಿದ್ಧಿಯ ಬಲಿಯಾಗಿದೆ. ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂಬ ಮಾಹಿತಿ ಜಾಹೀರಾಗಿದೆ. ಹಾಗೆ ಆತ ಆತ್ಮಹತ್ಯೆ ಮಾಡಿಕೊಂಡಿದ್ದರ ಹಿಂದೆ ಕೌಟುಂಬಿಕ ಕಾರಣಗಳೂ ಇರಬಹುದೆಂಬ ದಿಕ್ಕಿನಲ್ಲೀಗ ಚರ್ಚೆಗಳು ಶುರುವಾಗಿವೆ. ಆದರೆ, ಅದರ ಹಿಂದಿರೋ ನೆರಳು ಬಣ್ಣದ ಜಗತ್ತಿನ ಭ್ರಾಮಕ ಸುಳಿಗೆ ಸಿಕ್ಕಿ ನರಳಿದ ನಿಸ್ಸಹಾಯಕ ಮನಃಸ್ಥಿತಿ ಎಂಬುದು ಕಟು ವಾಸ್ತವ! ಚಂದ್ರಶೇಖರ ಸಿದ್ಧಿ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕು ವಜ್ರಳ್ಳಿಯ ಚಿಮನಹಳ್ಳಿ ಎಂಬ ಪುಟ್ಟ ಊರಿನವನು. ಸಿದ್ಧಿ ಜನಾಂಗ ಆ ಭಾಗದಲ್ಲಿ ಕಾಡಿನೊಂದಿಗೆ ಬದುಕು ಹೊಸೆದುಕೊಂಡು ಬಂದಿದೆ. ಈಗ ಒಂದಷ್ಟು ರೂಪಾಂತರಗಳಾಗಿದ್ದರೂ ಕೂಡಾ ಆರ್ಥಿಕ…
ಕ್ಷೇತ್ರ ಯಾವುದೇ ಆಗಿರಲಿ; ಅಡಿಗಡಿಗೆ ಆಘಾತವಾದಾಗಲೂ ಸಾವರಿಸಿಕೊಂಡು ಮುಂದುವರೆಯದಿದ್ದರೆ ಗೆಲುವು ದಕ್ಕುವುದಿಲ್ಲ. ಹಾಗೊಂದು ವೇಳೆ ವಾಮ ಮಾರ್ಗದಲ್ಲಿ ನುಸುಳಿ ದಕ್ಕಿಸಿಕೊಂಡರೂ ಅದರ ಆಯಸ್ಸು ಅಲ್ಪಕಾಲಿಕವಷ್ಟೆ. ಅಷ್ಟಕ್ಕೂ ಗೆಲುವೆಂಬುದು ಲೆಕ್ಕಕ್ಕಿಟ್ಟುಕೊಳ್ಳೋದು ಏಟು ಬಿದ್ದ ಮೇಲೂ ಎದ್ದು ನಿಂತು ಅವುಡುಗಚ್ಚಿ ಮುನ್ನಡೆಯೋರನ್ನಷ್ಟೆ. ಹುಡುಕಲು ನಿಂತರೆ ಸಿನಿಮಾ ರಂಗದಲ್ಲಿ ಹಾಗೆ ಏಳುಬೀಳಿನ ಹಾದಿಯಲ್ಲಿ ಮುಂದುವರೆದು ಕನಸು ನನಸಾಗಿಸಿಕೊಂಡ, ಗೆಲುವು ಕಂಡ ಸಾಕಷ್ಟು ಮಂದಿ ಕಾಣ ಸಿಗುತ್ತಾರೆ. ಇದೇ ಸೆಪ್ಟೆಂಬರ್ ೫ರಂದು ಬಿಡುಗಡೆಗೊಳ್ಳಲಿರುವ ಓಂ ಶಿವಂ ಚಿತ್ರದ ನಿರ್ದೇಶಕ ಅಲ್ವಿನ್ ಕೂಡಾ ಅದೇ ಸಾಲಿನಲ್ಲಿ ಸೇರಬಹುದಾದ ಗುಣಲಕ್ಷಣಗಳನ್ನು ಹೊಂದಿದ್ದಾರೆ. ಹಲವಾರು ನಿರಾಸೆಗಳನ್ನು ನುಂಗಿಕೊಂಡೇ ಅಲ್ವಿನ್ ಒಂದು ಚೌಕಟ್ಟಿನಲ್ಲಿ ಚೆಂದದ ಚಿತ್ರವೊಂದನ್ನು ನಿರ್ದೇಶನ ಮಾಡಿರುವ ತೃಪ್ತ ಭಾವವನ್ನು ತನ್ನದಾಗಿಸಿಕೊಂಡಿದ್ದಾರೆ. ಹಾಡೊಂದರ ಮೂಲಕ ಸದ್ದು ಮಾಡಿದ್ದ ಓಂ ಶಿವಂ ಚಿತ್ರ ಯಾವ ಗದ್ದಲವೂ ಇಲ್ಲದೆ ಚಿತ್ರೀಕರಣ ಮುಗಿಸಿಕೊಂಡಿತ್ತು. ಅದೇ ಹಾದಿಯಲ್ಲಿ ಎಲ್ಲ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡಿರುವ ಚಿತ್ರತಂಡ ಹಂತ ಹಂತವಾಗಿ ಪ್ರೇಕ್ಷಕರ ಮುಂದೆ ಒಂದಷ್ಟು ಬೆರಗಿನ ಅಂಶಗಳನ್ನು ಹರವಲು ಅಣಿಗೊಂಡಿದೆ.…

ನಮ್ಮ ಬಗ್ಗೆ
ಈ ನಾಡಿನಲ್ಲಿ ಹೆಸರಾಗಿರುವ ಹಾಯ್ ಬೆಂಗಳೂರ್, ಅಗ್ನಿ, ಲಂಕೇಶ್ ಪತ್ರಿಕೆ, ಹಿಮಾಗ್ನಿ ಮಂತಾದ ಅನೇಕ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿ, ತಮ್ಮದೇ ಆದ ಛಾಪು ಮೂಡಿಸಿರುವವರು ಪತ್ರಕರ್ತ ಸಂತೋಷ್ ಬಾಗಿಲಗದ್ದೆ. ರಾಜಕೀಯ, ಅಪರಾಧ, ಸಿನಿಮಾ ಸೇರಿದಂತೆ ತನಿಖಾ ಪತ್ರಿಕೋದ್ಯಮದಲ್ಲಿ ದಶಕಗಳಿಗೂ ಹೆಚ್ಚು ಕಾಲ ಪಳಗಿಕೊಂಡು, ಅನೇಕ ಭ್ರಷ್ಟರನ್ನು ಬಯಲಾಗಿಸಿರುವ ಬಾಗಿಲಗದ್ದೆ ಆರಂಭಿಸಿರುವ ವಿಭಿನ್ನ ಡಿಜಿಟಲ್ ಹೆಜ್ಜೆ ಶೋಧ ಮತ್ತು ಸಿನಿ ಶೋಧ. ಇದು ಹೊಸಾ ಆಯಾಮದ ಪತ್ರಿಕೋದ್ಯಮ. ಸತ್ಯದ ಭೂಮಿಕೆಯ ನೇರ-ನಿಷ್ಠುರ ವರದಿಗಳ ಸಂಕಲ್ಪದೊಂದಿಗೆ, ಭಿನ್ನ ಶೈಲಿಯ ಬರವಣಿಗೆಯ ಮೂಲಕ ಹೊಸತೊಂದು ಜಗತ್ತು ನಿಮ್ಮೆದುರು ನಿರಂತವಾಗಿ ತೆರೆದುಕೊಳ್ಳಲಿದೆ; ಅಚ್ಚರಿಗೀಡುಮಾಡಲಿದೆ!