Subscribe to Updates
Get the latest creative news from FooBar about art, design and business.
Author: Santhosh Bagilagadde
Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.
ಈ ಹಿಂದೆ ದೇಶದ ರೈತರು ಪ್ರತಿಭಟನಾ ನಿರತರಾಗಿದ್ದಾಗ ಮೋದಿ (narendra modi) ಸರ್ಕಾರ ಅದನ್ನು ಹತ್ತಿಕ್ಕಲು ನಾನಾ ಸರ್ಕಸ್ಸುಗಳನ್ನು ನಡೆಸಿತ್ತು. ಆ ಹೋರಾಟದೊಂದಿಗೆ ಖಲಿಸ್ತಾನಿ ಉಗ್ರರು (khalistan terrorist) ಸೇರಿಕೊಂಡಿದ್ದಾರೆ ಅಂತೆಲ್ಲ ಸುದ್ದಿ ಹಬ್ಬಿಸುವ ಮೂಲಕ ಅನ್ನದಾತರ ಒಡಲ ಆಕ್ರೋಶವನ್ನು ಹತ್ತಿಕ್ಕುವ ಪ್ರಯತ್ನಗಳು ನಡೆದಿದ್ದವು. ಆದರೆ, ಅಂಥಾ ಪ್ರತಿಭಟನೆ ನಡೆದ ಸಂದರ್ಭದಲ್ಲಿಯೂ ಅನ್ನ ತಿಂದು ಬದುಕೋ ಸಿನಿಮಾ ಮಂದಿ ಅನ್ನದಾತರ ಪರವಾಗಿ ನಿಲ್ಲುವ ಔದಾರ್ಯ ತೋರಿದ್ದು ವಿರಳ. ಇದೀಗ ಮೆಡಲ್ಲು ತಂದು ಕೊಟ್ಟ ದೇಶದ ಹೆಮ್ಮೆಯ ಮಹಿಳಾ ಕುಸ್ತಿ ಪಟುಗಳು ಭಾರತೀಯ ಕುಸ್ತಿ ಫೆಡರೇಷನ್ (wrestling federation of india) ಅಧ್ಯಕ್ಷ ಬ್ರಿಜ್ ಭೂಷಣ್ (brij bhushan sharan singh) ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹೊತ್ತಿನಲ್ಲಿಯೂ ಕೆಲವ ಕೆಲ ಮಂದಿಯನ್ನು ಹೊರತಾಗಿಸಿ, ಸಿನಿಮಾ ಮಂದಿ ಬಾಯಿಗೆ ಬೀಗ ಜಡಿದುಕೊಂಡು ಕೂತಿದ್ದಾರೆ! ಇಂಥಾ ಹೊತ್ತಿನಲ್ಲಿ ಕನ್ನಡ ಚಿತ್ರರಂಗದ ಯುವ ನಿರ್ದೇಶಕ ಸಿಂಪಲ್ ಸುನಿ (simple suni) ನೊಂದ ಮಹಿಳಾ ಕುಸ್ತಿ ಪಟುಗಳ…
ಕನ್ನಡ ಚಿತ್ರರಂಗದ ಭಿನ್ನ ಅಭಿರುಚಿಯ ನಿರ್ದೇಶಕರ ಸಾಲಿನಲ್ಲಿ ಮುಂಚೂಣಿಯಲ್ಲಿರುವವರು9rishbh shetty) ರಿಷಭ್ ಶೆಟ್ಟಿ. ಕಾಂತಾರ (kanthara) ಚಿತ್ರದ ನಂತರವಂತೂ ರಿಷಭ್‍ರ ಪ್ರಭೆ ದೇಶಾದ್ಯಂತ ಹಬ್ಬಿಕೊಂಡಿದೆ. ಈ ಸಮ್ಮೋಹಕ ಗೆಲುವಿನ ನಂತರದಲ್ಲಿ ರಿಷಭ್ ಏನು ಮಾಡುತ್ತಿದ್ದಾರೆ? ಅವರ ಕಾರ್ಯವೈಖರಿ ಹೇಗಿದೆ ಎಂಬಿತ್ಯಾದಿ ಪ್ರಶ್ನೆಗಳು ಪ್ರೇಕ್ಷಕ ವಲಯದಲ್ಲಿದೆ. ಸದ್ಯದವರೆಗೆ ಅದಕ್ಕುತ್ತರವಾಗಿ ಎದುರಾಗುತ್ತಿದ್ದದ್ದು (kanthara2) ಕಾಂತಾರ 2ಗಾಗಿನ ತಯಾರಿಯ ವಿಚಾರ. ಅದರಲ್ಲಿ ನಿಜವೂ ಇದೆ. ರಿಷಭ್ ಇದೀಗ ಆ ಕೆಲಸದಲ್ಲಿ ಬ್ಯುಸಿಯಾಗಿದ್ದರೂ ಕೂಡಾ, ಅದೇ ಹೊತ್ತಿನಲ್ಲಿ ನಿರ್ಮಾಪಕರಾಗಿಯೂ ಬಹಳಾ ಬ್ಯುಸಿಯಾಗಿಬಿಟ್ಟಿದ್ದಾರೆ. ಅವರ ಸಂಸ್ಥೆಯ ಕಡೆಯಿಂದ ನಿರ್ಮಾಣಗೊಂಡಿರುವ ಒಂದಷ್ಟು ಸಿನಿಮಾಗಳೀಗ ಚಿತ್ರೀಕರಣ ಮುಗಿಸಿಕೊಂಡಿವೆ! ಇತ್ತೀಚೆಗಷ್ಟೇ ರಿಷಭ್ ನಿರ್ಮಾಣದ `ಲಾಫಿಂಗ್ ಬುದ್ಧ’ ಎಂಬ ಚಿತ್ರ ಶುಭಾರಂಭಗೊಂಡಿತ್ತು. ಪಕ್ಕಾ ಕಂಟೆಂಟ್ ಓರಿಯಂಟೆಡ್ ಆಗಿರೋ ಈ ಸಿನಿಮಾದ್ಲಿ ಪ್ರಮೋದ್ ಶೆಟ್ಟಿ ಮುಂತಾದವರು ನಟಿಸಿದ್ದಾರೆಂಬ ಸುದ್ದಿಯೂ ಹೊರಬಿದ್ದಿತ್ತು. ಆ ಸಿನಿಮಾ ಬಗೆರಗಿನ ಕುತೂಹಲವಿನ್ನೂ ಚಾಲ್ತಿಯಲ್ಲಿರುವಾಗಲೇ `ವಾಘಚಿಪಾಣಿ’ ಅಂತೊಂದು ಸಿನಿಮಾ ಸುದ್ದಿ ಕೇಂದ್ರದಲ್ಲಿದೆ. ಶೀರ್ಷಿಕೆಯಲ್ಲಿಯೇ ಗಾಢ ಕೌತುಕವನ್ನು ಬಚ್ಚಿಟ್ಟುಕೊಂಡಂತಿರುವ ಈ ಸಿನಿಮಾವೀಗ ಚಿತ್ರೀಕರಣ ಮುಗಿಸಿಕೊಂಡಿದೆ.…
ಅದೇನು ದುರಂತವೋ ಗೊತ್ತಿಲ್ಲ; ಕೆಲ ನಟರು ಎಲ್ಲ ರೀತಿಯಿಂದಲೂ ಅರ್ಹರಾಗಿದ್ದರೂ ಕೂಡಾ ಒಂದು ಬ್ರೇಕ್‍ಗಾಗಿ ವರ್ಷಗಟ್ಟಲೆ ಸೈಕಲ್ಲು ಹೊಡೆದು ಸರ್ಕಸ್ಸು ನಡೆಸಬೇಕಾಗುತ್ತೆ. ಕನ್ನಡ ಚಿತ್ರರಂಗದ ಮಟ್ಟಿಗೆ ಹೇಳೋದಾದರೆ, ಈ ಮಾತಿಗೆ ಉದಾಹರಣೆಯಾಗಿ ನಿಲ್ಲಬಲ್ಲ ನಟರದ್ದೊಂದು ದಂಡೇ ಇದೆ. ಆ ಯಾದಿಗೆ ಇತ್ತೀಚಿನ ಸೇರ್ಪಡೆಯಂತಿದ್ದ ಹುಡುಗ ರಾಕೇಶ್ ಅಡಿಗ. (rakesh adiga) ಚುರುಕು ಸ್ವಭಾವದ, ಪ್ರತಿಭಾವಂತನೂ ಆಗಿರುವ ರಾಕೇಶ್ ಈವರೆಗೂ ಒಂದಷ್ಟು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದಾನಾದರೂ ಹೇಳಿಕೊಳ್ಳುವಂಥಾ ಗೆಲುವು ಕೈ ಹಿಡಿಯಲಿಲ್ಲ. ಇಂಥಾ ವಾತಾವರಣದಲ್ಲಿಯೇ ರಾಕೇಶ್ ಏಕಾಏಕಿ ಕಾಕ್ರೋಚ್ (cacroch) ಅವತಾರವೆತ್ತಿದ್ದಾನೆ! ಈ ಬಾರಿಯ ಬಿಗ್‍ಬಾಸ್‍ನ ಓಟಿಟಿ ಅವತರಣಿಕೆಯಲ್ಲಿ ಸ್ಪರ್ಧಿಯಾಗಿದ್ದಾತ (rakesh adiga) ರಾಕೇಶ್ ಅಡಿಗ. ಸೋನು ಗೌಡಳ (sonu gowda) ಹಿಂದೆ ಸುತ್ತಿ ರಂಕಲು ಮಾಡಿಕೊಂಡರೂ ಒಂದಷ್ಟು ಚೆಂದಗೆ ಆಡಿದ್ದ ಈತ ಸೀಜನ್9ಗೂ ಪಾದಾರ್ಪಣೆ ಮಾಡಿದ್ದ. ಅಲ್ಲಿಯೂ ಸ್ತ್ರೀ ಸೌಖ್ಯದ ಹಂಬಲದಲ್ಲಿ ಅಡ್ಡಾಡುತ್ತಾ, ಪ್ರೇಕ್ಷಕರಿಂದ ಒಂದಷ್ಟು ಉಗಿಸಿಕೊಂಡಿದ್ದ ರಾಕೇಶ್ ಅಡಿಗ, ಆಟದ ವಿಚಾರಕ್ಕೆ ಬಂದಾಗ ಮೆಚ್ಚುಗೆ ಗಳಿಸಿಕೊಳ್ಳುತ್ತಿದ್ದ. ಆ ದೆಸೆಯಿಂದಲೇ ಫೈನಲ್…
ಕನ್ನಡವೂ ಸೇರಿದಂತೆ ನಾನಾ ಭಾಷೆಗಳಲ್ಲಿ ಬಾಲ ನಟಿಯರಾಗಿ ನಟಿಸಿದ್ದವರನೇಕರು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಮತ್ತೆ ಕೆಲವರು ಪತ್ತೆಯೇ ಇಲ್ಲದಂತೆ ಎಲ್ಲೆಲ್ಲೋ ಕಳೆದು ಹೋಗಿದ್ದಾರೆ. ಹಾಗೆ ಬಾಲ ನಟಿಯಾಗಿ ಎಂಟ್ರಿ ಕೊಟ್ಟು, ಚಾಲ್ತಿಯಲ್ಲಿರುವವರ ಪೈಕಿ ತಮಿಳಿನಲ್ಲಿ ಒಂದಷ್ಟು ಪ್ರಸಿದ್ಧಿ ಪಡೆದುಕೊಂಡಿರುವ ಅನಿಕಾ ಸುರೇಂದ್ರನ್ (anikha surendran) ಕೂಡಾ ಸೇರಿಕೊಳ್ಳುತ್ತಾಳೆ. ಬಹುಶಃ ಅನಿಕಾ ಸುರೇಂದ್ರನ್ ಅಂದರೆ ಬೇರೆ ಭಾಷೆಯ ಮಂದಿಗೆ ಗುರುತು ಹತ್ತುವುದು ತುಸು ಕಷ್ಟವೇನೋ… ಆದರೆ, ಅಜಿತ್ (ajit) ನಟನೆಯ ವಿಶ್ವಾಸಂ (vishwasam) ಚಿತ್ರದಲ್ಲಿ ಅವರ ಮಗಳಾಗಿ ನಟಿಸಿದ್ದ ಪುಟ್ಟ ಹುಡುಗಿ ಅಂದರೆ ಎಲ್ಲರಿಗೂ ಗುರುತು ಹತ್ತೀತು! ಈ ಹುಡುಗಿಯ ಬಗ್ಗೆ ಈಗ ಪ್ರಸ್ತಾಪಿಸುತ್ತಿರೋದಕ್ಕೂ ಕಾರಣವಿದೆ. ಅನಿಕಾ ಸುರೇಂದ್ರನ್ (anikha surendran) ಈಗ ದೊಡ್ಡವಳಾಗಿದ್ದಾಳೆ. ಸಿನಿಮಾ ನಾಯಕಿಯಾಗುವ ಮಟ್ಟಕ್ಕೆ ಬೆಳೆದು ನಿಂತಿದ್ದಾಳೆ. ಓ ಮೈ ಡಾಲಿರ್ಂಗ್ ಎಂಬ ಪ್ರೇಮ ಕಥೆಯಾಧಾರಿತ ತೆಲುಗು ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾಳೆ. ಈ ಮೊದಲ ಚಿತ್ರದಲ್ಲಿಯೇ ಮೈ ಚಳಿ ಬಿಟ್ಟು ಕಿಸ್ಸಿಂಗ್ ಸೀನುಗಳಲ್ಲ್ಲಿ ಕಾಣಿಸಿಕೊಳ್ಳುವ ಮೂಲಕ ದೊಡ್ಡ…
ರಂಗಭೂಮಿ ಹಿನ್ನೆಲೆಯ ಪ್ರತಿಭಾನ್ವಿತ ನಟಿ ಅಕ್ಷತಾ ಪಾಂಡವಪುರ (akshatha pandavapura) ಈಗೊಂದಷ್ಟು ಕಾಲದಿಂದ ಭಾರೀ ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣವಾಗಿರೋದು ಅವರು ಮುಖ್ಯಭೂಮಿಕೆಯಲ್ಲಿ ನಟಿಸಿರುವ `ಪಿಂಕಿ ಎಲ್ಲಿ’ (pinki elli) ಚಿತ್ರ. ಈಗಾಗಲೇ ಈ ಸಿನಿಮಾ ವಿಶ್ವ ಮಟ್ಟದಲ್ಲಿ ಗಮನ ಸೆಳೆದಿದೆ. ಅಂತಾರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ಪಾಲ್ಗೊಂಡು ಪ್ರಶಸ್ತಿಗಳನ್ನೂ ಪಡೆದುಕೊಂಡಿದೆ. ಅದರಲ್ಲಿಯೂ ವಿಶೇಷವಾಗಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ರಂಗಭೂಮಿ ಕಲಾವಿದೆ ಅಕ್ಷತಾ ಪಾಂಡವಪುರ (akshatha pandavapura) ನಟನೆಗೆ ಎಲ್ಲೆಡೆಯಿಂದಲೂ ಮೆಚ್ಚುಗೆಗಳು ಮೂಡಿಕೊಳ್ಳುತ್ತಿವೆ. ಈ ಪಾತ್ರದಿಂದಲೇ ಅಕ್ಷತಾರ ಕಲಾಬದುಕು ಮತ್ತಷ್ಟು ಕಳೆಗಟ್ಟಿಕೊಂಡಿದೆ. ಎಂಥಾ ಪಾತ್ರಕ್ಕಾದರ ಸೈ ಎಂಬಂಥಾ ಪ್ರತಿಭೆಯೊಂದಿಗೆ, ಸವಾಲಿನ ಪಾತ್ರಗಳನ್ನೇ ಬಯಸುತ್ತಾ ಬಂದಿರುವ ಅಕ್ಷತಾರನ್ನೀಗ ಪಿಂಕಿಯ ಧ್ಯಾನ ಸಂಪೂರ್ಣವಾಗಿ ಆವರಿಸಿಕೊಂಡಿದೆ. ಸಾಮಾನ್ಯವಾಗಿ ರಂಗಭೂಮಿಯಲ್ಲಿ ತರಬೇತಿ ಪಡೆದುಕೊಂಡು, ಪಳಗಿಕೊಂಡವರೆಲ್ಲರ ಪ್ರಧಾನ ಉದ್ದೇಶ ಸಿನಿಮಾ ಆಗಿರುತ್ತೆ. ಅದರಲ್ಲಿಯೂ ಕಮರ್ಶಿಯಲ್ ಸಿನಿಮಾಗಳಲ್ಲಿ ಮಿರಮಿರನೆ ಮಿಂಚಬೇಕೆಂಬ ಬಯಕೆ ಬಹುತೇಕರನ್ನು ಆವರಿಸಿಕೊಂಡಿರುತ್ತದೆ. ಅಂಥಾದ್ದರಲ್ಲಿ ಪ್ರೇಕ್ಷಕರೆಲ್ಲ ಹೋದಲ್ಲಿ ಬಂದಲ್ಲಿ `ನೀವ್ಯಾಕೆ ಕಮರ್ಶಿಯಲ್ ಸಿನಿಮಾಗಳಲ್ಲಿ ನಟಿಸೋದಿಲ್ಲ?’ ಎಂಬಂಥಾ ಪ್ರಶ್ನೆ ಎಸೆದರೂ ಸವಾಲಿನ ಪಾತ್ರಗಳ ಧ್ಯಾನದಲ್ಲಿ…
ಒಂದು ಪ್ರಸಿದ್ಧ ಅಲೆಯೆದ್ದಾಗ ಎಲ್ಲರೂ ಅದರ ಹಿಂದೆ ಹೋಗಿ, ಬಹುತೇಕರು ಅದನ್ನೇ ಕನಸಾಗಿಸಿಕೊಳ್ಳುವುದು ಚಿತ್ರರಂಗದಲ್ಲಿ ಮಾಮೂಲು. ಇದೀಗ ಅದರ ಭಾಗವಾಗಿಯೇ ಪ್ಯಾನಿಂಡಿಯಾ (pan india movies) ಸಿನಿಮಾಗಳ ಭರಾಟೆ ಜೋರಾಗಿದೆ. ಆ ಬಗೆಯ ಸಿನಿಮಾಗಳು ಮಾತ್ರವೇ ಕನ್ನಡ ಚಿತ್ರರಂಗದ ಘನತೆಯನ್ನು ಆಕಾಶದೆತ್ತರಕ್ಕೆ ಕೊಂಡೊಯ್ಯಬಲ್ಲವು, ಅಂಥಾ ಸಿನಿಮಾ ಮಾಡಿ ಜೈಸಿಕೊಂಡರೆ ಮಾತ್ರವೇ ಉಳಿಗಾಲ ಎಂಬಂಥಾ ಭಾವನೆಯೂ ಬಹುತೇಕರಲ್ಲಿದೆ. ಆದರೆ, ದೊಡ್ಡದೋ ಚಿಕ್ಕದೋ; ಪ್ರಯೋಗಾತ್ಮಕ ಗುಣಗಳು ಮಾತ್ರವೇ ಚಿತ್ರರಂಗದ ಜೀವಂತಿಕೆಯನ್ನು ಕಾಪಿಟ್ಟುಕೊಳ್ಳಬಲ್ಲುದೆಂಬುದು ಸಾರ್ವಕಾಲಿಕ ಸತ್ಯ. ಅಂಥಾದ್ದೊಂದು ಜೀವಂತಿಕೆಯನ್ನು ಮತ್ತಷ್ಟು ನಳನಳಿಸುವಂತೆ ಮಾಡುವಲ್ಲಿ ಇತ್ತೀಚಿನನ ದಿನಮಾನದಲ್ಲಿ ಪ್ರಧಾನವಾಗಿ ಪಾತ್ರವಹಿಸಿರುವ ಚಿತ್ರ (pinki elli) `ಪಿಂಕಿ ಎಲ್ಲಿ?’. ಪೃಥ್ವಿ ಕೋಣನೂರು (pruthvi konanur) ನಿರ್ದೇಶನ ಮಾಡಿ, ಅಕ್ಷತಾ ಪಾಂಡವಪುರ (akshatha pandavapura) ಮುಖ್ಯ ಪಾತ್ರದಲ್ಲಿ ನಟಿಸಿರುವ ಚಿತ್ರ `ಪಿಂಕಿ ಎಲ್ಲಿ’. ಈಗಾಗಲೇ ಈ ಚಿತ್ರದ ಅಸಲೀ ಕಸುವೇನೆಂಬುದು ವಿಶ್ವ ಮಟ್ಟದಲ್ಲಿ ಜಾಹೀರಾಗಿದೆ. ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಳ್ಳುವ ಮೂಲಕ ಪ್ರಶಸ್ತ್ತಿಗಳನ್ನೂ ತನ್ನದಾಗಿಸಿಕೊಂಡಿದೆ. ಇದೆಲ್ಲವೂ ಸಾಧ್ಯವಾಗಿದ್ದರ ಹಿಂದೆ ಹಲವ…
ಕೆಲವೊಮ್ಮೆ ಕನ್ನಡ ಚಿತ್ರರಂಗದಲ್ಲಿ ( kannada film industry) ಒಂದೇ ಒಂದು ಹೆಜ್ಜೆಗೆ ಭರಪೂರ ಗೆಲುವು ಮುತ್ತಿಕೊಳ್ಳುವ ಪವಾಡಗಳು ಸಂಭವಿಸುತ್ತವೆ. ಕೆಲ ಮಂದಿ ಎಲ್ಲ ಅರ್ಹತೆಗಳಿದ್ದರೂ ಅವಕಾಶ ಸಿಗದೆ, ಸರಿಯಾದೊಂದು ಗೆಲುವು ಕೈ ಹಿಡಿಯದೆ ಪಡಿಪಾಟಲು ಪಡುತ್ತಾರೆ. ಅವರ ಆಸುಪಾಸಿನಲ್ಲಿಯೇ ಅಡ್ಡಾಡುವ ಮತ್ತೆ ಕೆಲವರು ಲೀಲಾಜಾಲವಾಗೆಂಬಂತೆ ಆಗಮಿಸಿ, ಅಚ್ಚರಿ ಪಡುವಂಥಾ ಗೆಲುವು ದಾಖಲಿಸಿಬಿಡುತ್ತಾರೆ. ಇಂಥ ಅದೃಷ್ಟವಂತ ನಟ ನಟಿಯರ ಸಾಲಿಗೆತ್ತೀಚಿನ ಸೇರ್ಪಡೆ ಕಿಸ್ ಹುಡುಗಿ ಶ್ರೀಲೀಲಾ. (sreeleela) ಅದಾಗ ತಾನೇ ಡಾಕ್ಟರಿಕೆಯ ಕಲಿಕೆಯಲ್ಲಿದ್ದ ಶ್ರೀಲೀಲಾ ಕಿಸ್ ಅಂತೊಂದು ಸಿನಿಮ ಮೂಲಕ ಆಗಮಿಸಿ, ಅವಕಾಶ ಗಿಟ್ಟಿಸಿಕೊಂಡ ರೀತಿ ಕಂಡು ಎಲ್ಲರೂ ಕಂಗಾಲಾಗಿದ್ದರು. ಇನ್ನೇನು ಕನ್ನಡದಲ್ಲಿ ಈಕೆ ಮುಖ್ಯ ನಾಯಕಿಯಾಗಿ ನೆಲೆ ಕಂಡುಕೊಳ್ಳೋದು ಗ್ಯಾರೆಂಟಿ ಅಂತಲೇ ಅನೇಕರು ಅಂದುಕೊಂಡಿದ್ದರು. ವಿರಾಟ್‍ಗೆ (virat) ಜೋಡಿಯಾಗಿ ಕಾಣಿಸಿಕೊಂಡಿದ್ದ ಈ ಹುಡುಗಿ ಮಾಡಿದ್ದ ಮೋಡಿ ಸಾಮಾನ್ಯದ್ದೇನಲ್ಲ. ಆದರೆ ಲತ್ತೆ ಆಸಾಮಿ (dhanveer) ಧನ್ವೀರನೊಂದಿಗೆ ಬೈ ಟು ಲವ್ ಎಂಬ ಸಿನಿಮಾದಲ್ಲಿ ನಟಿಸಿದಳು ನೋಡಿ? ಆಕೆಯ ಸುತ್ತಾ ನಾನಾ ಪಲ್ಲಟಗಳು…
ಈಗಾಗಲೇ ಗಡಿಗಳ ಮಿತಿ ಮೀರಿಕೊಂಡು ವಿಶ್ವಾದ್ಯಂತ ಸದ್ದು ಮಾಡಿರುವ ಚಿತ್ರ `ಪಿಂಕಿ ಎಲ್ಲಿ’. (pinki elli) ಒಂದು ಕಡೆಯಿಂದ ಪ್ಯಾನಿಂಡಿಯಾ ಸಿನಿಮಾಗಳ ಅಬ್ಬರ, ಸಿದ್ಧಸೂತ್ರಗಳ ಆಚೀಚೆ ಹೊರಳಲೊಲ್ಲದ ಕಮರ್ಶಿಯಲ್ ಕಂಟೆಂಟುಗಳ ಗೊಬ್ಬರಗಳ ಭರಾಟೆಯಲ್ಲಿ ಆಗಾಗ ಪಿಂಕಿ ಎಲ್ಲಿಯಂಥಾ ಸಿನಿಮಾಗಳ ತಂಗಾಳಿಯಂತೆ ಸುಳಿಯುತ್ತವೆ. ಸೀಮಿತ ಮಿತಿಗಳಾಚೆಗೂ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತವೆ. ಅದು ಯಾವುದೇ ಸಿನಿಮಾ ರಂಗಗಳ ಚಲನೆಗೊಂದು ಹೊಸಾ ಓಘ ಕೊಡುವ ಪ್ರಕ್ರಿಯೆ. (kannadafilmindusry) ಕನ್ನಡ ಚಿತ್ರರಂಗದ ಮಟ್ಟಿಗೆ ಹೇಳುವುದಾದರೆ, ಅಂಥಾ ಹೊಸಾ ಹರಿವಿಗೆ ಕಾರಣವಾದ ಒಂದಷ್ಟು ಕ್ರಿಯಾಶೀಲ ಮನಸುಗಳಿವೆ. ಆ ಸಾಲಿನಲ್ಲಿ ಪಿಂಕಿ ಎಲ್ಲಿ (pinki elli) ಚಿತ್ರದ ನಿರ್ದೇಶಕ ಪೃಥ್ವಿ ಕೋಣನೂರು (prithvi konanur) ನಿಸ್ಸಂದೇಹವಾಗಿಯೂ ಸ್ಥಾನ ಗಿಟ್ಟಿಸಿಕೊಳ್ಳುತ್ತಾರೆ… ಬಹುಶಃ ಪಿಂಕಿ ಎಲ್ಲಿ (pinki elli) ಎಂಬೊಂದು ಚಿತ್ರ ಈ ಪರಿಯಾಗಿ ಸುದ್ದಿ ಮಾಡುತ್ತದೆ, ಕನ್ನಡ ಚಿತ್ರರಂಗದ ಘನತೆಯನ್ನು ವದೇಶಗಳಲ್ಲಿಯೂ ಫಳಗುಡುವಂತೆ ಮಾಡುತ್ತದೆಂದು ಯಾರೆಂದರೆ ಯಾರೂ ಅಂದುಕೊಂಡಿರಲಿಕ್ಕಿಲ್ಲ. ಆದರೆ, ಅತ್ಯಂತ ಆಸ್ಥೆಯಿಂದ ಮಾಡಿದ ಕೆಲಸ ನಿರೀಕ್ಷೆ ಮೀರಿ ಫಲ…
ಕಲಾತ್ಮಕ ಚೌಕಟ್ಟಿನ ಚಿತ್ರಗಳೆಲ್ಲ ಸೀಮಿತ ಚೌಕಟ್ಟಿನಲ್ಲಿಯೇ ಬಂಧಿಯಾಗಿ, ಪ್ರೇಕ್ಷಕರ ಕೈಗೆಟುಕದೆ ಮರೆಯಾಗುತ್ತವೆ ಅಂತೊಂದು ಆಪಾದನೆಯಿತ್ತು. ಅದು ಪ್ರಯೋಗಾತ್ಮಕ ಗುಣಗಳ ಸಿನಿಮಾಗಳನ್ನು ಕನವರಿಸುವ ಈ ನೆಲದ ಸದಭಿರುಚಿಯ ಪ್ರೇಕ್ಷಕರ ಮನದಾಳದ ಕೊರಗೂ ಹೌದು. ಗಿರೀಶ್ ಕಾಸರವಳ್ಳಿಯಂಥಾ (girish kasaravalli) ಅಸಾಧಾರಣ ನಿರ್ದೇಶಕರುಗಳೇ ಎಲ್ಲ ಪ್ರೇಕ್ಷಕರಿಗೂ ತಮ್ಮ ಸಿನಿಮಾಗಳನ್ನು ತಲುಪಿಸುವಲ್ಲಿ ಕೈ ಚಲ್ಲಿದ್ದಾರೆಂಬ ಮಾತೂ ಇದೆ. ಆದರೀಗ ಆ ಕೊರಗು, ಆಪಾದನೆಗಳನ್ನೆಲ್ಲ ಸುಳ್ಳಾಗಿಸುವಂತೆ ಪೃಥ್ವಿ ಕೋಣನೂರು (prithvi konanuru) ನಿರ್ದೇಶನದ `ಪಿಂಕಿ ಎಲ್ಲಿ?’ (pinki elli?) ಚಿತ್ರ ರಾಜ್ಯಾದ್ಯಂತ ಬಿಡುಗಡೆಗೊಳ್ಳಲು ಅಣಿಯಾಗಿದೆ. ಇದೇ ವಾರ ಅಂದರೆ, ಜೂನ್ 2ರಂದು ಈ ಚಿತ್ರ ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ. ಅಷ್ಟಕ್ಕೂ `ಪಿಂಕಿ ಎಲ್ಲಿ’ ಚಿತ್ರ ಸದ್ದು ಮಾಡಲು ಶುರುವಿಟ್ಟು ಒಂದಷ್ಟು ಕಾಲವೇ ಕಳೆದಿದೆ. ಬದುಕಿಗೆ ಹತ್ತಿರಾದ, ಆದ್ರ್ರಗೊಳಿಸುವ ಕಥಾ ಹಂದರದ ಸಿನಿಮಾ ಅದ್ಯಾವುದೇ ಮಾದರಿಯದ್ದಾಗಿದ್ದರೂ ತಾನೇತಾನಾಗಿ ಜನಮನ ಸೆಳೆಯುತ್ತೆ. ಈ ಮಾತಿಗೆ ತಾಜಾ ಉದಾಹರಣೆಯಂತಿರುವ ಚಿತ್ರ `ಪಿಂಕಿ ಎಲ್ಲಿ’. ಇದು ಈಗಾಗಲೇ ಹಲವಾರು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿದೆ. ಹಲವಾರು…
ಕಿರುತೆರೆಯಿಂದ ಹಿರಿತೆರೆಗೆ (film industry) ಬಂದು ಮಿಂಚಿದ ನಾಯಕ, ನಾಯಕಿಯರದ್ದೊಂದು ದಂಡು ಕನ್ನಡ ಚಿತ್ರರಂಗದಲ್ಲಿದೆ. ಹಾಗೆ ನೋಡಿದರೆ, ಸಿನಿಮಾ ರಂಗಕ್ಕೆ ಹೆಜ್ಜೆಯಿಡುವವರೆಲ್ಲ ಕಿರುತೆರೆಯನ್ನು ಮೊದಲ ಮೆಟ್ಟಿಲೆಂದೇ ಪರಿಭಾವಿಸುತ್ತಾರೆ. ಹಾಗೆ ಧಾರಾವಾಹಿಗಳಲ್ಲಿ ನಟಿಸಿ ಒಂದಷ್ಟು ಹೆಸರು ಮಾಡುತ್ತಲೇ ಸಿನಿಮಾ ರಂಗಕ್ಕೆ ಅಡಿಯಿರಿಸೋದು ಮಾಮೂಲು. ಆದರೆ, ಸಿನಿಮಾ ರಂಗದಲ್ಲಿ ಅದೃಷ್ಟವೆಂಬುದು ಎಲ್ಲರಿಗೂ ಒಲಿದು ಬರೋದಿಲ್ಲ. ಕೆಲವೇ ಕೆಲ ಮಂದಿಯನ್ನು ಮಾತ್ರವೇ ಸಿನಿಮಾರಂಗ ಬರಸೆಳೆದು ಅಪ್ಪಿಕೊಳ್ಳುತ್ತೆ. ಅಂಥಾದ್ದೊಂದು ಬೆಚ್ಚಗಿನ ಅಪ್ಪುಗೆ ಪಡೆಯೋ ಎಲ್ಲ ಲಕ್ಷಣಗಳನ್ನೂ ಹೊಂದಿರುವಾಕೆ (supritha sathyanarayan) ಸುಪ್ರಿತಾ ಸತ್ಯನಾರಾಯಣ್. ಬಹುಶಃ ಈ ಹೆಸರು ಹೇಳಿದರೆ ಬಹುತೇಕರಿಗೀಕೆಯ ಗುರುತು ಹತ್ತೋದು ಕಷ್ಟ. (seetha vallabha) ಸೀತಾವಲ್ಲಭ ಧಾರಾವಾಹಿಯ ನಾಯಕಿ ಎಂದರೆ ಸಾದಾ ಸೀದಾ ಸ್ವರೂಪದ, ಸ್ನಿಗ್ಧ ಸೌಂದರ್ಯದ ಸುಪ್ರಿತಾ ತಮ್ಮ ಮನೆ ಮಗಳೆಂಬಂಥಾ ಭಾವ ಮೂಡಿಕೊಳ್ಳಬಹುದೇನೋ! ಸೀತಾ ವಲ್ಲಭ ಧಾರಾವಾಹಿ ಒಂದಷ್ಟು ಕಂತುಗಳಲ್ಲಿ ಪ್ರಸಾರವಾಗಿತ್ತು. ಅದರ ನಾಯಕಿಯಾಗಿ, ಅನಾಥ ಭಾವ ಹೊದ್ದುಕೊಂಡ ಹುಡುಗಿಯಾಗಿ ನಟಿಸೋ ಮೂಲಕ ಸುಪ್ರಿತಾ ಕಿರುತೆರೆ ಪ್ರೇಕ್ಷಕರ ಮನ ಗೆದ್ದಿದ್ದಳು. ಈ…

ನಮ್ಮ ಬಗ್ಗೆ
ಈ ನಾಡಿನಲ್ಲಿ ಹೆಸರಾಗಿರುವ ಹಾಯ್ ಬೆಂಗಳೂರ್, ಅಗ್ನಿ, ಲಂಕೇಶ್ ಪತ್ರಿಕೆ, ಹಿಮಾಗ್ನಿ ಮಂತಾದ ಅನೇಕ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿ, ತಮ್ಮದೇ ಆದ ಛಾಪು ಮೂಡಿಸಿರುವವರು ಪತ್ರಕರ್ತ ಸಂತೋಷ್ ಬಾಗಿಲಗದ್ದೆ. ರಾಜಕೀಯ, ಅಪರಾಧ, ಸಿನಿಮಾ ಸೇರಿದಂತೆ ತನಿಖಾ ಪತ್ರಿಕೋದ್ಯಮದಲ್ಲಿ ದಶಕಗಳಿಗೂ ಹೆಚ್ಚು ಕಾಲ ಪಳಗಿಕೊಂಡು, ಅನೇಕ ಭ್ರಷ್ಟರನ್ನು ಬಯಲಾಗಿಸಿರುವ ಬಾಗಿಲಗದ್ದೆ ಆರಂಭಿಸಿರುವ ವಿಭಿನ್ನ ಡಿಜಿಟಲ್ ಹೆಜ್ಜೆ ಶೋಧ ಮತ್ತು ಸಿನಿ ಶೋಧ. ಇದು ಹೊಸಾ ಆಯಾಮದ ಪತ್ರಿಕೋದ್ಯಮ. ಸತ್ಯದ ಭೂಮಿಕೆಯ ನೇರ-ನಿಷ್ಠುರ ವರದಿಗಳ ಸಂಕಲ್ಪದೊಂದಿಗೆ, ಭಿನ್ನ ಶೈಲಿಯ ಬರವಣಿಗೆಯ ಮೂಲಕ ಹೊಸತೊಂದು ಜಗತ್ತು ನಿಮ್ಮೆದುರು ನಿರಂತವಾಗಿ ತೆರೆದುಕೊಳ್ಳಲಿದೆ; ಅಚ್ಚರಿಗೀಡುಮಾಡಲಿದೆ!