Subscribe to Updates
Get the latest creative news from FooBar about art, design and business.
Author: Santhosh Bagilagadde
Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.
ಒಂದಿಡೀ ಚಿತ್ರರಂಗ ಪುರುಷ ಕೇಂದ್ರಿತ ವ್ಯವಸ್ಥೆಯಲ್ಲಿ ಬಂಧಿಯಾಗಿರುವಾಗಲೇ, ಮಾಸ್ ಹೀರೋಯಿನ್ ಆಗಿ ಸೈ ಅನ್ನಿಸಿಕೊಂಡವರು ಕನಸಿನ ರಾಣಿ (malashri) ಮಾಲಾಶ್ರೀ. ಹೆಣ್ಣುಮಕ್ಕಳನ್ನು ಒಂದು ಸೀಮಿತ ಪರಿಧಿಗೆ ಕಟ್ಟಿನಿಲ್ಲಿಸಿದ್ದ ಕಾಲಘಟ್ಟದಲ್ಲಿ ನಾಯಕಿಯಾಗೋದೇ ಒಂದು ಸಾಹಸ. ಅಂಥಾದ್ದರಲ್ಲಿ (mass) ಮಾಸ್ ಲುಕ್ಕಿನಲ್ಲಿ ಮಿಂಚೋದಿದೆಯಲ್ಲಾ? ಅದೇನು ಸಾಮಾನ್ಯದ ಸಂಗತಿಯಲ್ಲ. ನಿಜ, ಮಾಲಾಶ್ರೀ (malashri) ಯಶಸ್ಸಿನ ಪ್ರಭೆಯಲ್ಲಿ ಆಗಾಗ ಎಡವಿದ್ದಾರೆ. ಸೋಲಿನ ಕಹಿ ಉಂಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿಯಂತೂ ತೀರಾ ಆಪ್ತ ಜೀವವಾಗಿದ್ದ ಪತಿ (raamu) ರಾಮುವನ್ನು ಕಳೆದುಕೊಂಡ ಕಡು ದುಖಃಕ್ಕೀಡಾಗಿದ್ದಾರೆ. ಅದರ ನಡುವಲ್ಲಿಯೇ ಅತ್ತ ಮಗಳು ನಾಯಕಿಯಾಗಿ ಎಂಟ್ರಿ ಕೊಡುತ್ತಿದ್ದಾಳೆ. ಸಂಸಾರದ ನೊಗ ಹೊತ್ತ ಮಾಲಾಶ್ರೀ ಇನ್ನೇನು ನಟನೆಯಿಂದ ದೂರ ಸರಿದರು ಎಂಬ ಹೊತ್ತಿನಲ್ಲಿಯೆ, ಮಾಸ್ ಲುಕ್ಕಿನೊಂದಿಗೆ ಮರಳಿದ್ದಾರೆ! ಬಹುಶಃ 2015ರಲ್ಲಿ ತೆರೆ ಕಂಡಿದ್ದ ಗಂಗಾ ಚಿತ್ರದ ನಂತರದಲ್ಲಿ ಮಾಲಾಶ್ರೀ (malashri) ಪೂರ್ಣ ಪ್ರಮಾಣದ ನಾಯಕಿಯಾಗಿ ಕಾಣಿಸಿಕೊಂಡಿಲ್ಲ. ಒಂದಷ್ಟು ಸಿನಿಮಾಗಳ ಅತಿಥ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರಷ್ಟೆ. ಆ ಬಳಿಕ ನಾಯಕಿಯಾಗಿ ಮಿಂಚುವ ಮನಸು ಮಾಡದ ಅವರೀಗ `ಮಾರಕಾಸ್ತ್ರ’ (maraksthra)…
ಕೃಷ್ಣೇಗೌಡ ನಿರ್ಮಾಣ ಮಾಡಿ, ನಿರ್ದೇಶಿಸಿರುವ `ನಾನು ಕುಸುಮ’ ಚಿತ್ರ ಇದೇ ಜೂನ್ 30ರಂದು ತೆರೆಗಾಣುತ್ತಿದೆ. ಒಂದು ಅಲೆಯ ಸಿನಿಮಾಗಳು ಸದ್ದು ಮಾಡುತ್ತಿರುವಾಗ, ಬೇರೊಂದು ಬಗೆ ರುಚಿ ಹತ್ತಿಸುವ ಸಿನಿಮಾಗಳು ರೂಪುಗೊಳ್ಳೋದೇ ಒಂದು ರೋಮಾಂಚಕ ಅನುಭೂತಿ. ಹಾಗಂತ, ಆ ಪ್ರಕ್ರಿಎ ಅಷ್ಟು ಸಲೀಸಿನದ್ದಲ್ಲ. ಅದಕ್ಕೆ ಪ್ರವಾಕೆ ವಿರುದ್ಧವಾಗಿ ಈಜುವ ಗಟ್ಟಿತನ ಬೇಕಾಗುತ್ತದೆ. ಸೋಲು ಗೆಲುವುಗಳನ್ನು ಒಂದೇ ತಕ್ಕಡಿಯಲ್ಲಿಟ್ಟು ದಿಟ್ಟಿಸಿ ಸಾವರಿಸಿಕೊಳ್ಳುವ ವ್ಯವಧಾನವೂ ಬೇಕಾಗುತ್ತದೆ. ಅದೆಲ್ಲವನು ಮೈಗೂಡಿಸಿಕೊಳ್ಳಬೇಕಾಗುತ್ತದೆ. ಅವೆಲ್ಲವೂ ಒಟ್ಟೊಟ್ಟಿಗೆ ಏಕೀಭವಿಸಿದ ಕಾರಣದಿಂದಲೇ `ನಾನು ಕುಸುಮ’ ಎಂಬ ಭಿನ್ನ ಕಥಾನಕವೊಂದು ದೃಷ್ಯರೂಪ ಧರಿಸಿ ಪ್ರೇಕ್ಷಕರನ್ನು ಮುಖಾಮುಖಿಯಾಗುವ ಸನ್ನಾಹದಲ್ಲಿದೆ! ಈ ಚಿತ್ರ ಈಗಾಗಲೇ ಒಂದಷ್ಟು ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ ಪ್ರರ್ದನಗೊಂಡು ಭರಪೂರ ಮೆಚ್ಚುಗೆಯನ್ನೂ ದಕ್ಕಿಸಿಕೊಂಡಿದೆ. ಹೀಗೆ ಪ್ರಶಸಿ ಪಡೆದ ಸಿನಿಮಾಗಳು ಬಹುತೇಕ ಅದರ ಪ್ರಭೆಯಲ್ಲಿಯೇ ಕಳೆದು ಹೋಗುತ್ತವೆ. ಅಂಥವುಗಳು ಪ್ರೇಕ್ಷಕರನ್ನು ತಲುಪಿಕೊಳ್ಳೋದು ವಿರಳ. ಆದರ ಕೃಷ್ಣೇಗೌಡರು ಈ ವಿಶಿಷ್ಟ ಸಿನಿಮಾವನ್ನು ಪ್ರೇಕ್ಷಕರಿಗೆ ಮುಟ್ಟಿಸುವ ಮನಸು ಮಾಡಿದ್ದಾರೆ. ಅಷ್ಟರ ಮಟ್ಟಿಗೆ ಅವರ ಸಾಹಸವನ್ನು ಮೆಚ್ಚಲೇ ಬೇಕು.…
ಈಗಂತೂ ಪ್ರಾದೇಶಿಕ ಭಾಷೆಗಳ ಸಿನಿಮಾಗಳೇ ಬಾಲಿವುಡ್ (bollywood) ಮಂದಿಯ ಎದೆ ಅದುರುವಂತೆ ಸದ್ದು ಮಾಡುತ್ತಿವೆ. ಒಂದು ಕಾಲಕ್ಕೆ ಬೇರೆ ಭಾಷೆಗಳ ಸಿನಿಮಾಗಳನ್ನು ಹೀಗಳೆದು ಮೆರೆಯುತ್ತಿದ್ದವರೇ, ಇಂದು ಅಂಥಾ ಭಾಷೆಗಳ ಸಿನಿಮಾಗಳ ಮುಂದೆ ಮಂಡಿಯೂರಬೇಕಾಗಿ ಬಂದಿದೆ. ಕನ್ನಡದ (kannada films) ಸಿನಿಮಾಗಳು ಬಾಲಿವುಡ್ (bollywood) ಅನ್ನೂ ಮೀರಿ ಮಿಂಚುತ್ತಿರುವ ಈ ಹೊತ್ತಿನಲ್ಲಿ, ಬಾಲಿವುಡ್‍ಗೆ ಅಕ್ಷರಶಃ ಮಂಕು ಕವಿದಂತಾಗಿ ಬಿಟ್ಟಿದೆ. ಬಹು ಕೋಟಿ ಮೊತ್ತದಲ್ಲಿ ತಯಾರಾಗಿ, ಭಯಂಕರ ಹೈಪಿನೊಂದಿಗೆ ಬಿಡುಗಡೆಗೊಂಡಿರುವ ಆದಿಪುರುಷ್ (adipurush) ಚಿತ್ರದ ಹೀನಾಯ ಸೋಲಿನ ಮೂಲಕ ಆ ಮಂಕು ವಾತಾವರಣ ಅನೂಚಾನವಾಗಿ ಮುಂದುವರೆದಿದೆ! ಒಂದು ವೇಳೆ ಅದ್ಭುತವಾಗಿ ರೂಪುಗೊಂಡಿದ್ದಿದ್ದರೆ, ಮಹಾ ಗೆಲುವನ್ನು ತನ್ನದಾಗಿಸಿಕೊಳ್ಳಬಹುದಾದ ಎಲ್ಲ ಅವಕಾಶಗಳೂ ಆದಿಪುರುಷ್ (adipurush) ಚಿತ್ರಕ್ಕಿತ್ತು. ಕೊಂಚ ಎಚ್ಚರ ವಹಿಸಿದ್ದರೂ ಇಂಥಾದ್ದೊಂದು ಸರಣಿ ಸೋಲಿನ ಕಹಿಯನ್ನು ಮೀರಿಕೊಳ್ಳುವ ದಾರಿ ಪ್ರಭಾಸ್ (prabhas) ಮುಂದಿತ್ತು. ಆದರೆ, ಒಂದಷ್ಟು ಮೈ ಮರೆವು ಮತ್ತು ಹುಚ್ಚುತನಗಳೆಲ್ಲವೂ ಸೇರಿಕೊಂಡು ಆದಿಪುರುಷನಿಗೆ ಪಕ್ಕಾ ಕಾಮಿಡಿ ಸ್ಪರ್ಶ ಸಿಕ್ಕಂತಾಗಿದೆ. ಟ್ರೋಲ್ ಮಾಡಲು ಯಾವ ಸರಕು ಸಿಗುತ್ತದೆಂದು…
ಕನ್ನಡ ಚಿತ್ರರಂಗದ ಮಟ್ಟಿಗಿದು ಹೊಸತನ, ಪ್ರಯೋಗಾತ್ಮಕ ಗುಣಗಳು ಮೇಳೈಸಿರುವ ಸಮೃದ್ಧ ಕಾಲಮಾನ. ಅದರ ಭಾಗವಾಗಿಯೇ ಸೋಲು ಗೆಲುವುಗಳಾಚೆಗೆ ಒಂದಷ್ಟು ಪ್ರಯತ್ನಗಳು ಜರುಗುತ್ತಿವೆ. ಕನ್ನಡದ ಪ್ರೇಕ್ಷಕರಿಗೆ ಹೊಸಾ ಅನುಭೂತಿ ಕೊಡಮಾಡವ ಸಿನಿಮಾಗಳು ಒಂದರ ಹಿಂದೊಂದರಂತೆ ರೂಪುಗೊಳ್ಳುತ್ತಿವೆ. ಆ ಸಾಲಿಗೆ ಸಾರಾಸಗಟಾಗಿ ಸೇರ್ಪಡೆಗೊಳ್ಳುವ ಲಕ್ಷಣಗಳನ್ನು ಹೊಂದಿರುವ ಚಿತ್ರ (nasab) `ನಸಾಬ್’. ಶಿಜ (shija) ನಿರ್ದೇಶನ ಮಾಡಿರುವ ಈ ಚಿತ್ರದ ಬಹುತೇಕ ಚಿತ್ರೀಕರಣವೀಗ ಮುಗಿದಿದೆ. ಹಾಗೆ ಸದ್ದೇ ಇಲ್ಲದೆ ಎಲ್ಲವನ್ನೂ ಸಮಾಪ್ತಿಗೊಳಿಸಿಕೊಂಡಿರುವ ಈ ಸಿನಿಮಾದ ಶಿರ್ಷಿಕೆ ಅನಾವರಣ ಕಾರ್ಯಕ್ರಮ ಧಾರ್ಮಿಕ ಗುರುಗಳು, ನಾನಾ ಕ್ಷೇತ್ರಗಳ ಗಣ್ಯರ ಸಮ್ಮುಖದಲ್ಲಿ ಅರ್ಥವತ್ತಾಗಿ ನೆರವೇರಿದೆ. ನಸಾಬ್ (nasab) ಅಂತೊಂದು ಪದ ಕಿವಿ ಸೋಕುತ್ತಲೇ ಮಾಸ್ ಫೀಲೊಂದು ಗರಿಗೆದರಿಕೊಳ್ಳುತ್ತೆ. ಹಾಗಾದರೆ, ಇದು ಯಾವ ಬಗೆಯ ಚಿತ್ರ? ಅದರ ಕಥೆಯ ಅಸಲೀ ಆಂತರ್ಯ ಎಂಥಾದ್ದು? ಹೀಗೆ ಹತ್ತಾರು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಅದಕ್ಕೆ ಚಿತ್ರತಂಡ ಉತ್ತರ ಕೊಡುವ ಪ್ರಯತ್ನವನ್ನೂ ಮಾಡಿದೆ. ಅದರನ್ವಯ ಹೇಳೋದಾದರೆ, ನಸಾಬ್ ಎಬುದು ಉತ್ತರ ಕರ್ನಾಟಕದ ಮೂಲೆಯೊಂದರ ಲಂಬಾಣಿ ತಾಂಡವೊಂದನ್ನು ಕೇಂದ್ರವಾಗಿರಿಸಿಕೊಂಡಿರುವ…
ಅಬ್ಬರಿಸಿ ಅಲೆಯೆಬ್ಬಿಸೋ ಸಿನಿಮಾಗಳ ಜೊತೆ ಜೊತೆಯಲ್ಲಿಯೇ, ತಣ್ಣಗೆ ತೆರೆ ಕಂಡು ಕಾಡುತ್ತಾ ಮನಸಿಗಳಿಯುವ ಸಿನಿಮಾಗಳ ಹಂಗಾಮವೊಂದು ಕನ್ನಡ ಚಿತ್ರರಂಗದಲ್ಲಿ (kannada filme industry) ಚಾಲ್ತಿಗೆ ಬಂದಿದೆ. ಅದ ಭಾಗವಾಗಿಯೇ ಇತ್ತೀಚೆಗೆ `ಪಿಂಕಿ ಎಲ್ಲಿ’ (pinki elli) ಚಿತ್ರ ತೆರೆಗಂಡಿತ್ತು. ಇದೀಗ ಆ ಸಿನಿಮಾ ನಿರ್ಮಾಣ ಮಾಡಿದ್ದ ಕೃಷ್ಣೇಗೌಡ (krishnegowda) ಸ್ವತಃ ನಿರ್ಮಾಣ ಮಾಡಿ, ಬಹುಮುಖ್ಯ ಪಾತ್ರವೊಂದರಲ್ಲಿ ನಟಿಸಿರುವ `ನಾನು ಕುಸುಮ’ ಚಿತ್ರ ಬಿಡುಗಡೆಯ ಹೊಸ್ತಿಲಿನಲ್ಲಿದೆ. ಕನ್ನಡದ ಖ್ಯಾತ ಕಥೆಗಾರರಾದ ಬೆಸಗರಹಳ್ಳಿ ರಾಮಣ್ಣನವರ (besagarahalli ramanna) ಸಣ್ಣ ಕಥೆಯನ್ನಾಧರಿಸಿ ತಯಾರುಗೊಂಡಿರುವ ನಾನು ಕುಸುಮ (naanu kusuma) ಇದೇ ಜೂನ್ 30ರಂದು ನಿಮ್ಮ ಮುಂದೆ ಬರಲಿದೆ. ವಿಶಿಷ್ಟ ಕಥೆಗಳ ಸೃಷಿಯ ಮೂಲಕವೇ ಕನ್ನಡ ಸಾಹಿತ್ಯ ಲೋಕದಲ್ಲಿ ಹೆಸರಾಗಿರುವವರು ಬೆಸಗರಹಳ್ಳಿ ರಾಮಣ್ಣ. ಅವರ ಕಥೆಗಳ ಮೇಲೆ ತಲೆಮಾರುಗಳಾಚೆಗೂ ಬೆರಗೊಂದು ಹಾಗೆಯೇ ಉಳಿದುಕೊಂಡಿದೆ ಎಂಬುದೇ ಅವರ ಸಾಹಿತ್ಯಕ್ಕಿರುವ ಶಕ್ತಿಗೊದು ನಿದರ್ಶನ. ಅವರದ್ದೊದು ಕಥೆಯನ್ನು ಓದಿ ಕಾಡಿಸಿಕೊಂಡಿದ್ದ ಕೃಷ್ಣೇಗೌಡರು, ಅದಕ್ಕೆ ಸಿನಿಮಾ ಚೌಕಟ್ಟು ಹಾಕೋ ದೃಢ ನಿರ್ಧಾರಕ್ಕೆ ಬಂದ…
ಸಿಕ್ಕ ಪಾತ್ರಗಳನ್ನು ಒಳಗಿಳಿಸಿಕೊಂಡು ನಟಿಸುತ್ತಾ, ತಾನೋರ್ವ ವಿಶಿಷ್ಟ ನಟ ಎಂಬುದನ್ನು ಋಜುವಾತು ಪಡಿಸಿಕೊಂಡಿರುವವರು (gultu aveen) ಗುಳ್ಟು ನವೀನ್. ಇತ್ತೀಚೆಗೆ ತೆರೆ ಕಂಡಿದ್ದ ಒಂದಷ್ಟು ಸಿನಿಮಾಗಳಲ್ಲಿ ವಿಲನ್ ಆಗಿಯೂ ಸೈ ಅನ್ನಿಸಿಕೊಂಡಿದ್ದ ನವೀನ್, (naveen) ಇದೀಗ ಮತ್ತೆ ನೈಜ ಕಥಾನಕವೊಂದರ ನಾಯಕನಾಗಿ ನಟಿಸಿದ್ದಾರೆ. ಮಾತಲ್ಲಿ ಸದ್ದು ಮಾಡದೆ, ನಟನೆಯ ಮೂಲಕವೇ ಎಲ್ಲರನ್ನೂ ಸೆಳೆಯುತ್ತಿರುವ ಈತ, ಕ್ಷೇತ್ರಪತಿ ಎಂಬ ಸಿನಿಮಾ ಮೂಲಕ ಮತ್ತೊಂದು ಮಜಲಿನ ಗೆಲುವು ದಕ್ಕಿಸಿಕೊಳುವ ಲಕ್ಷಣಗಳು ಢಾಳಾಗಿ ಕಾಣಿಸಲಾರಂಭಿಸಿವೆ. ನವೀನ್ ನಾಯಕನಾಗಿ ನಟಿಸಿರೋ (kshetrapathi) ಕ್ಷೇತ್ರಪತಿ, ಆರಂಭದಿಂದಲೂ ಸದ್ದು ಮಾಡುತ್ತಾ ಬಂದಿತ್ತು. ಇದೀಗ ಆ ಚಿತ್ರದ ಟೀಸರ್ ಬಿಡುಗಡೆಗೊಂಡಿದೆ. ಅದನ್ನು ಕಂಡವರೊಳಗೆ ಪ್ರವಹಿಸುತ್ತಿರುವ ರೋಮಾಂಚನ, ಆ ದಿಕ್ಕಿನಿಂದ ತೂರಿ ಬರುತ್ತಿರುವ ಪ್ರತಿಕ್ರಿಯೆಗಳೇ ಕ್ಷೇತ್ರಪತಿ ದೊಡ್ಡ ಗೆಲುವೊಂದರ ಅಧಿಪತಿಯಾಗೋ ಭರವಸೆಯನ್ನು ಗಟ್ಟಿಗೊಳಿಸುವಂತಿದೆ. ನಿಜವಾದ ನಟನನ್ನು ಭಿನ್ನ ಕಥಾನಕಗಳೇ ಹುಡುಕಿ ಬರೋದರಲ್ಲೇನೂ ಅಚ್ಚರಿಯಿಲ್ಲ. ಅದು ನವೀನ್ (naveen) ವಿಚಾರದಲ್ಲಿಯೂ ಅಕ್ಷರಶಃ ನಿಜವಾಗಿದೆ. ಇತ್ತೀಚೆಗೆ ತೆರೆ ಕಂಡಿದ್ದ ಹೊಯ್ಸಳ ಚಿತ್ರದಲ್ಲಿ ಬಲಿ ಎಂಬ ಪಾತ್ರದಲ್ಲಿ…
ಮನಸು ವಿಹ್ವಲಗೊಂಡಾಗ, ನಂಬಿಕೆಗಳ ಪಕ್ಕೆಗೆ ಮೋಸದ ಈಟಿ ಚುಟ್ಟಿದಾಗ, ಒಂದು ನೀರವ ಮೌನ ಎದೆತಬ್ಬಿದಾಗೆಲ್ಲ ಬಹುತೇಕರ ಮನಸು `ಯಾವ ಮೋಹನ ಮುರಳಿ ಕರೆಯಿತೋ ದೂರ ತೀರಕೆ ನಿನ್ನನು’ ಎಂಬ ಕವಿತೆಯ ಸಾಲುಗಳ ತೆಕ್ಕೆಗೆ ಬೀಳುತ್ತೆ. ಅದು ಕವಿ ಗೋಪಾಲ ಕೃಷ್ಣ ಅಡಿಗರು (gopala krishna adiga) ಸೃಷ್ಟಿಸಿದ್ದ ಸಾರ್ವಕಾಲಿಕ ಅದ್ಭುತ ರಚನೆ. ಇದೀಗ ಎಲ್ಲರನ್ನೂ ಕಾಡುವ ಆ ಕವಿತೆ ಸಾಲುಗಳೇ ಸಿನಿಮಾವಾಗಿದೆ. ಯಾವ ಸದ್ದೂ ಇಲ್ಲದೆ ಚಿತ್ರೀಕರಣ ಉಗಿಸಿಕೊಂಡಿರುವ ವಿಶ್ವಾಸ್ ಕೃಷ್ಣ (vishvas kishna) ನಿರ್ದೇಶನದ `ಯಾವ ಮೋಹನ ಮುರಳಿ ಕರೆಯಿತು’ (yava mohana murali kareyitho) ಚಿತ್ರದ ಟೀಸರ್ ಈಗ ಬಿಡುಗಡೆಗೊಂಡಿದೆ. ನಾನಾ ದಿಕ್ಕಿನತ್ತ ಆಲೋಚನೆಗಳನ್ನು ಕೊಂಡೊಯ್ಯುವ, ಭಾವ ಪರವಶಗೊಳಿಸುವ ಕಂಟೆಂಟಿನ ಸುಳಿವಿನೊಂದಿಗೆ ಈ ಟೀಸರ್ ಎಲ್ಲರನ್ನೂ ಹಿಡಿದಿಟ್ಟುಕೊಂಡಿದೆ. ಶರಣಪ್ಪ ಗೌರಮ್ಮ (sharanappa gowramma) ನಿರ್ಮಾಣ ಮಾಡಿರುವ ಈ ಚಿತ್ರದ ಟೀಸರ್ ಒಂದೇ ಸಲಕ್ಕೆ ಎಲ್ಲ ಅಭಿರುಚಿಯ ಪ್ರೇಕ್ಷಕರನ್ನೂ ಸೆಳೆಯುವಂತಿರೋದಂತೂ ನಿಜ. ಇದೀಗ ಕನ್ನಡ ಚಿತ್ರರಂಗದಲ್ಲಿ ಹೊಸಾ ಬಗೆಯ ಕಥೆಗಳು…
ಯಾವ ಕಮರ್ಶಿಯಲ್ ಸಿನಿಮಾಗಳಿಗೂ ಕಡಿಮೆಯಿಲ್ಲದಂತೆ ನಿರೀಕ್ಷೆಯ ತರಂಗಗಳನ್ನೆಬ್ಬಿಸಿದ್ದ ಚಿತ್ರ (pinki elli) `ಪಿಂಕಿ ಎಲ್ಲಿ’. ಪೃಥ್ವಿ ಕೋಣನೂರು (prithvi konanur) ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರ ಈಗಾಗಲೇ ವಿಶ್ವಾದ್ಯಂತ ಹೆಸರು ಮಾಡಿದೆ. ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನೂ ಪಡೆದುಕೊಂಡಿದೆ. ಸಾಮಾನ್ಯವಾಗಿ ಇಂಥಾ ಸಿನಿಮಾಗಳು ಪ್ರೇಕ್ಷಕರ ಪಾಲಿಗೆ ಮರೀಚಿಕೆಯಾಗುಳಿಯುತ್ತವೆ. ಆದರೆ, ಪಿಂಕಿ ಎಲ್ಲಿ ಚಿತ್ರವೀಗ ಸಿನಿಮಾ ಮಂದಿರಗಳಲ್ಲಿಯೂ ಬಿಡುಗಡೆಗೊಂಡಿದೆ. ಹಾಗೆ ಪ್ರೀತಿಯಿಂದ ಬಂದ ನೋಡಿದ್ದ ಪ್ರತಿಯೊಬ್ಬರ ನರನಾಡಿಗಳಿಗಿಳಿದು ಪಿಂಕಿ (pinki) ಕಾಡಿದ್ದಾಳೆ. ಅಬ್ಬರವಿಲ್ಲದೆಯೇ ಆದ್ರ್ರಗೊಳಿಸುವ ಈ ಸಿನಿಮಾದ ಗುಣವನ್ನು ಪ್ರೇಕ್ಷಕರೆಲ್ಲ ಮೆಚ್ಚಿಕೊಂಡಿದ್ದಾರೆ. ಇಲ್ಲಿ ಹಿನ್ನೆಲೆ ಸಂಗೀತದ ಆರ್ಭಟವಿಲ್ಲ, ಪಾತ್ರಗಳೂ ಕೂಡಾ ಸಹಜತೆಯ ಗೆರೆ ದಾಟಿ ವರ್ತಿಸುವುದಿಲ್ಲ, ಯಾವ ನಾಟಕೀಯತೆಗೂ ಇಲ್ಲಿ ಆಸ್ಪದವಿಲ್ಲ… ಹೀಗಿದ್ದರೂ ಒಂದು ಭರ್ಜರಿ ಸಸ್ಪೆನ್ಸ್ ಥ್ರಿಲ್ಲರ್ ಸೀನಿಮಾವನ್ನು ನಿವಾಳಿಸಿ ಎಸೆಯುವಂಥಾ ಅನುಭೂತಿಯೊಂದನ್ನು ಈ ಚಿತ್ರ ಮುಫತ್ತಾಗಿ ಕೊಟ್ಟು ಬಿಡುತ್ತದೆ. ಇಲ್ಲಿ ಪಾತ್ರವಾಗಿರೋ ಪ್ರತೀ ಜೀವಗಳ ಏರಿಳಿತಗಳೂ ಎದೆಗೆ ನಾಟುತ್ತವೆ. ಅಲ್ಲಿನ ವಿಷಾದ, ಕಣ್ಣಂಚು ದಾಟದ ದುಃಖ, ಭಾವಗಳೆಲ್ಲವೂ ಅನಾಯಾಸವಾಗಿ ನೋಡುಗರನ್ನು ದಾಟಿಕೊಳ್ಳುತ್ತದೆ.…
ಒಂದೆಡೆ ಛಿದ್ರಗೊಂಡಿದ್ದ ಖಾಸಗೀ ಬದುಕು, ಒಂಟಿಯಾಗಿ ನಿಂತಿದ್ದಾಗ ಬಂದು ತಬ್ಬಿಕೊಂಡ ಭಯಾನಕ ಖಾಯಿಲೆ… ಇದೆಲ್ಲದರಿಂದ ತಬ್ಬಿಗೊಂಡು, ರೌರವ ನರಕ ಅನುಭವಿಸಿದ್ದದ್ದಾಕೆ ನಟಿ (samantha) ಸಮಂತಾ. ಒಂದು ಕಾಲದಲ್ಲಿ ಈ ಸ್ನಿಗ್ಧ ಸೌಂದರ್ಯದ ಹುಡುಗಿಯನ್ನು ಕಂಡು ಪಡ್ಡೆಗಳೆಲ್ಲ ಹೆಚ್ಚೆದ್ದಿದ್ದರು. ಆ ನಂತರ ಒಂದಷು ಸಿನಿಮಾಗಳಲ್ಲಿ ನಟಿಸಿ, ಮದುವೆಯ ಬಂಧನಕ್ಕೀಡಾಗಿದ್ದ (samantha) ಸಮಂತಾ ಪಾಲಿಗೆ ಆ ಬಂಧವೇ ತಲೆ ನೋವಾಗಿ ಕಾಡಲಾರಂಭಿಸಿತ್ತು. ಆ ನೋವು ಮತ್ತು ಖಾಯಿಲೆಯ ಬಾಧೆಯಿಂದ ತತ್ತರಿಸಿದ್ದ ಸಮಂತಾಳ ವೃತ್ತಿ ಬದುಕೀಗ ಮತ್ತೊಂದು ಆಯಾಮದತ್ತ ಹೊರಳಿಕೊಂಡಿದೆ. ಹೊಸಾ ಸಿನಿಮಾವೊಂದರಲ್ಲಿ ವಿಜಯ್ ದೇವರಕೊಂಡನಿಗೆ (vijay devarakonda) ಜೋಡಿಯಾಗಿರೋ ಸಮಂತಾ ರೊಮ್ಯಾಂಟಿಕ್ ಮೂಡಿಗೆ ಜಾರಿದ್ದಾಳೆ. ಈ ಬಗ್ಗೆ ಖುದ್ದು ವಿಜಯ್ ದೇವರಕೊಂಡ (vijay devarakonda) ಫೋಟೋವೊಂದನ್ನು ಸಾಮಾಜಿಕ ಆಲತಾಣದಲ್ಲಿ ಹಂಚಿಕೊಂಡಿದ್ದಾನೆ. ಇದಷ್ಟೇ ಅಲ್ಲದೇ ಸಮಂತಾಳನ್ನು ಫೇವರಿಟ್ ಗರ್ಲ್ ಎಂದೂ ಬರೆದುಕೊಂಡಿದ್ದಾನೆ. ಯಾವಾಗ ರಸಿಕ ವಿಜಯ್ ದೇವರಕೊಂಡ ಹಾಗೆ ಬರೆದುಕೊಂಡನೋ, ಖಾಲಿ ಕುಂತ ಸಾಮಾಜಿಕ ಆಲತಾಣ ಪಂಡಿತರು, ವಿಶ್ಲೇಷಕರೆಲ್ಲ ತಮ್ಮದೇ ರೀತಿಯಲ್ಲಿ ಮಾತಾಡಲರಂಭಿಸಿದ್ದಾರೆ. ದೇವರಕೊಂಡ ಈ…
ಸಿನಿಮಾ ರಂಗದಲ್ಲಿ ಏನಾದರೊಂದು ಸಾಧಿಸಬೇಕೆಂಬ ಉತ್ಕಟ ಆಕಾಂಕ್ಷೆ ಯಾವ್ಯಾವುದೋ ಮೂಲೆಯಲ್ಲಿದ್ದವರನ್ನೂ (gandhinagar) ಗಾಂಧಿನಗರದತ್ತ ಸೆಳೆಯುತ್ತದೆ. ಹೇಗೋ ಮಾಡಿ ಸಿನಿಮಾ ತಂಡಗಳನ್ನು ಸೇರಿಕೊಂಡರೂ, ಇಲ್ಲಿ ಅಂದುಕೊಂಡಿದ್ದನ್ನು ಅವುಡುಗಚ್ಚಿ ಸಾಧಿಸೋದು ಅಷ್ಟು ಸಲೀಸಿನ ಸಂಗತಿಯಲ್ಲ. ಕೆಲ ಮಂದಿ ಒಂದಷ್ಟು ದೂರ ಕ್ರಮಿಸಿ ಹೊರ ನಡೆಯುತ್ತಾರೆ. ಮತ್ತೆ ಕೆಲವರು ಏನೇ ಬಂದರೂ ಕಾಲೂರಿ ನೆಲೆ ಕಂಡುಕೊಳ್ಳಲು ಪ್ರಯತ್ನಿಸುತ್ತಾರೆ. ಸಿಕ್ಕ ಕೆಲಸವನ್ನು ಆಸ್ಥೆಯಿಂದ ಮಾಡುತ್ತಾ, ದೊಡ್ಡ ಕನಸಿಗೆ ಅಣಿಗೊಳ್ಳಲಾರಂಭಿಸುತ್ತಾರೆ. ಅಂಥಾದ್ದೇ ಹಾದಿಯಲ್ಲಿ ಸಾಗಿ ಬಂದಿರುವ ಸಂಗಮೇಶ್ ಪಾಟೀಲ್ (sangamesh patil) ಇದೀಗ `ಜೀವಸಖಿ’ (jeevasakhi) ಎಂಬ ಕಿರುಚಿತ್ರವೊಂದರ ಮೂಲಕ ತಮ್ಮನ್ನು ತಾವೇ ಪರೀಕ್ಷೆಗೊಡ್ಡಿಕೊಂಡಿದ್ದಾರೆ! ಈಗಾಗಲೇ ಐದು ವರ್ಷಗಳ ಕಾಲ ಹಲವಾರು ನಿರ್ದೇಶಕರ ಗರಡಿಯಲ್ಲಿ ಪಳಗಿಕೊಂಡಿರುವವರು ಸಂಗಮೇಶ್ ಪಾಟೀಲ್. (sangamesh patil) ನಿರ್ದೇಶಕನಾಗಬೇಕೆಂಬ ಕನಸು ಹೊತ್ತು ಗದಗ ಜಿಲ್ಲೆಯ ನರಗುಂದದಿಂದ ಬೆಂಗಳೂರಿಗೆ ಬಂದಿದ್ದ ಸಂಗಮೇಶ್ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರ. ಆದರೆ ಆ ಹೊತ್ತಿಗಾಗಲೇ ಸಿನಿಮಾ ಕನಸನ್ನು ಆಳವಾಗಿ ಹಚ್ಚಿಕೊಂಡಿದ್ದ ಆತ, ತನ್ನಿಷ್ಟದ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದರು. ಹಾಗೆ ಒಂದಷ್ಟು…

ನಮ್ಮ ಬಗ್ಗೆ
ಈ ನಾಡಿನಲ್ಲಿ ಹೆಸರಾಗಿರುವ ಹಾಯ್ ಬೆಂಗಳೂರ್, ಅಗ್ನಿ, ಲಂಕೇಶ್ ಪತ್ರಿಕೆ, ಹಿಮಾಗ್ನಿ ಮಂತಾದ ಅನೇಕ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿ, ತಮ್ಮದೇ ಆದ ಛಾಪು ಮೂಡಿಸಿರುವವರು ಪತ್ರಕರ್ತ ಸಂತೋಷ್ ಬಾಗಿಲಗದ್ದೆ. ರಾಜಕೀಯ, ಅಪರಾಧ, ಸಿನಿಮಾ ಸೇರಿದಂತೆ ತನಿಖಾ ಪತ್ರಿಕೋದ್ಯಮದಲ್ಲಿ ದಶಕಗಳಿಗೂ ಹೆಚ್ಚು ಕಾಲ ಪಳಗಿಕೊಂಡು, ಅನೇಕ ಭ್ರಷ್ಟರನ್ನು ಬಯಲಾಗಿಸಿರುವ ಬಾಗಿಲಗದ್ದೆ ಆರಂಭಿಸಿರುವ ವಿಭಿನ್ನ ಡಿಜಿಟಲ್ ಹೆಜ್ಜೆ ಶೋಧ ಮತ್ತು ಸಿನಿ ಶೋಧ. ಇದು ಹೊಸಾ ಆಯಾಮದ ಪತ್ರಿಕೋದ್ಯಮ. ಸತ್ಯದ ಭೂಮಿಕೆಯ ನೇರ-ನಿಷ್ಠುರ ವರದಿಗಳ ಸಂಕಲ್ಪದೊಂದಿಗೆ, ಭಿನ್ನ ಶೈಲಿಯ ಬರವಣಿಗೆಯ ಮೂಲಕ ಹೊಸತೊಂದು ಜಗತ್ತು ನಿಮ್ಮೆದುರು ನಿರಂತವಾಗಿ ತೆರೆದುಕೊಳ್ಳಲಿದೆ; ಅಚ್ಚರಿಗೀಡುಮಾಡಲಿದೆ!