Author: Santhosh Bagilagadde

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

ಕೆಜಿಎಫ್ ಸರಣಿಯ ಮೂಲಕ ಪ್ಯಾನಿಂಡಿಯಾ ಮಟ್ಟದಲ್ಲಿ ಬಹು ಬೇಡಿಕೆ ಪಡೆದುಕೊಂಡಿರುವವರು ನಿರ್ದೇಶಕ (prashanth neel)  ಪ್ರಶಾಂತ್ ನೀಲ್. ಕೆಜಿಎಫ್2 ಬಂದ ಮೇಲಂತೂ ಬೇರೆ ಬೇರೆ ಭಾಷೆಗಳ ಮುಖ್ಯ ನಿರ್ಮಾಪಕರುಗಳೇ ನೀಲ್‍ಗಾಗಿ (neel) ಕಾದು ಕೂತಿದ್ದಾರೆ. ಸದ್ಯದ ಮಟ್ಟಿಗೆ ನೀಲ್ ಹೊಸ ಪ್ರಾಜೆಕ್ಟುಗಳತ್ತ ಗಮನ ಹರಿಸದೆ, ಒಪ್ಪಿಕೊಂಡ ಸಿನಿಮಾಗಳನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುವತ್ತಲೇ ಪ್ರಧಾನವಾಗಿ ಚಿತ್ತ ನೆಟ್ಟಿದ್ದಾರೆ. ಪ್ರಭಾಸ್ (prabhas) ನಟಿಸಿದ್ದ ಆದಿಪುರುಷ ಚಿತ್ರ ಹೇಳ ಹೆಸರಿಲ್ಲದಂತೆ ಮಾಯವಾಗುತ್ತಲೇ, ನೀಲ್ ನಿರ್ದೇಶನದ ಸಲಾರ್‍ಗೆ (salar) ಹೊಸಾ ವೇಗ ಬಂದಿದೆ. ಒಂದಷ್ಟು ಕಾರಣಗಳಿಂದಾಗಿ ಸಲಾರ್ ಕುಂಠಿತಗೊಂಡಿದ್ದನ್ನು ಕಂಡು ಬೇಸರಾಗಿದ್ದ ಪ್ರಶಾಂತ್, ಇದೀಗ ಆದಷ್ಟು ಬೇಗನೆ ಚಿತ್ರೀಕರಣ ಮುಗಿಸಿಕೊಳ್ಳುವ ಧಾವಂತದಲ್ಲಿದ್ದಾರೆ. ಇದೇ ಹೊತ್ತಿನಲ್ಲಿ ನೀಲ್ ಮತ್ತು ಜ್ಯೂನಿಯರ್ ಎನ್‍ಟಿಆರ್ (junior ntr) ಸಿನಿಮಾದ ಕಥೆ ಏನಾಯ್ತೆಂಬ ಪ್ರಶ್ನೆ ಸಿನಿಮಾ ಪ್ರೇಮಿಗಳನ್ನು ಕಾಡಲಾರಂಭಿಸಿದೆ. ಕೆಜಿಎಫ್2 ತೆರೆ ಕಂಡ ನಂತರದಲ್ಲಿ ಪ್ರಶಾಂತ್ ನೀಲ್‍ಗೆ ಗಾಳ ಹಾಕಿ ಕುಂತವರ ಸಂಖ್ಯೆ ನಾನಾ ಭಾಷೆಗಳಲ್ಲಿ ಹೆಚ್ಚಿಕೊಂಡಿತ್ತು. ಈ ಬಗ್ಗೆ ನಾನಾ ಅಂತೆಕಂತೆಗಳೂ…

Read More

ಮುಂಗಾರು ಮಳೆಯಿಂದಾಗಿ (mungaru male) ಭರಪೂರ ಯಶಕ್ಕೆ ಮೈಯೊಡ್ಡಿ ಮುದಗೊಂಡಿದ್ದವರು (golden star ganesh) ಗೋಲ್ಡನ್ ಸ್ಟಾರ್ ಗಣೇಶ್. ಒಂದು ಕಾಲದಲ್ಲಿ ತೀರಾ ಸಾಮಾನ್ಯ ಹುಡುಗನಾಗಿ, ಸಣ್ಣಪುಟ್ಟ ಅವಕಾಶಗಳಿಗೂ ಪರದಾಡುತ್ತಿದ್ದ ಗಣೇಶ್ (ganesh) ಬದುಕಲ್ಲಿ ಗೋಲ್ಡನ್ ಟೈಂ ಶುರುವಾಗಿ ಬಹಳಷ್ಟು ವರ್ಷಗಳೇ ಕಳೆದಿವೆ. ಆದರೆ, ಮುಂಗಾರು ಮಳೆಯನ್ನು ಸರಿಗಟ್ಟುವಂಥಾ ಮತ್ತೊಂದು ಗೆಲುವು ಮಾತ್ರ ಗಣೇಶ್ ಪಾಲಿಗೆ ಮರೀಚಿಕೆಯಾಗುಳಿದಿದೆ. ಈ ನಡುವೆ ಒಂದಷು ಸೋಲು, ತೊಡರು ತಿಡರುಗಳನ್ನು ದಾಟಿಕೊಂಡು, ಸಾವರಿಸಿಕೊಂಡು ನಿಂತಿರುವ ಗಣೇಶ್ ಇದೀಗ ಮತ್ತೊಂದು ಚಿತ್ರದತ್ತ ಚಿತ್ತ ಹರಿಸಿದ್ದಾರೆ. ಅದಕ್ಕೀಗ ಹೊಸಾ ಆವೇಗದ ಚಾಲನೆ ಸಿಕ್ಕಿದೆ. ಗೋಲ್ಡನ್ ಸ್ಟಾರ್ ಪಾಲಿನ ನಲವತ್ತೊಂದನೇ ಈ ಚಿತ್ರಕ್ಕೆ `ಕೃಷ್ಣಂ ಪ್ರಣಯ ಸಖಿ’ ಎಂಬ ಶೀರ್ಷಿಕೆಯೂ ನಿಗಧಿಯಾಗಿದೆ. ಪ್ರೀತಿ, ಪ್ರೇಮ, ಭೋಳೇ ಸ್ವಭಾವದ ಪಾತ್ರಗಳ ಸುತ್ತಲೇ ಗಿರಕಿ ಹೊಡೆಯುತ್ತಿದ್ದ ಗಣೇಶ್, ಇತ್ತಿತ್ತಲಾಗಿ ಒಂದಷ್ಟು ಭಿನ್ನ ಬಗೆಯ ಪ್ರಯೋಗಗಳಿಗೂ ಒಡ್ಡಿಕೊಂಡಿದ್ದರು. ಆದರೀಗ ಅವರು ಮತ್ತೆ ಪ್ರಣಯದ ಗುಂಗಿಗೆ ಬಿದ್ದಂತಿದ್ದಾರೆ. ಗಣೇಶ್ ಸಿನಿಮಾಗಳು ಹೆಚ್ಚಾಗಿ ಪ್ರೀತಿ ಪ್ರೇಮ ಮತ್ತು…

Read More

ಇಂದು ಗೋಲ್ಡನ್ ಸ್ಟಾರ್ ಗಣೇಶ್ (golden star ganesh) ಹುಟ್ಟುಹಬ್ಬ. ಈ ಸಂಭ್ರಮದ ಆಸುಪಾಸಿನಲ್ಲಿಯೇ ಗಣೇಶ್ ಅಭಿಮಾನಿಗಳು ಥ್ರಿಲ್ ಆಗುವಂಥಾ ಒಂದಷ್ಟು ಸಂಗತಿಗಳು ಜಾಹೀರಾಗುತ್ತಿವೆ. ಇತ್ತೀಚಿನವರೆಗೂ ಗಣೇಶ್‍ರ ಮುಂದಿನ ಸಿನಿಮಾ ಯಾವುದು? ಅದರ ರೂಪುರೇಷೆಗಳೇನು ಎಂಬ ಪ್ರಶ್ನೆಗಳು ಅಭಿಮಾನಿ ಬಳಗದ ಮನಸಿಗಂಟಿಕೊಂಡಿತ್ತು. ಹುಟ್ಟುಹಬ್ಬದ ಹೊಸ್ತಿಲಲ್ಲಿ ನಲವತ್ತೊಂದನೇ ಚಿತ್ರದ ಬಗ್ಗೆ ಒಂದಷ್ಟು ಮಾಹಿತಿಗಳು ಜಾಹೀರಾಗಿದ್ದವು. ಬಹುಶಃ ಅದರ ಬೆನ್ನಲ್ಲಿಯೇ ನಲವತ್ತೆರಡನೇ ಚಿತ್ರದ ಬಗ್ಗೆ ಒಂದು ಬಿಗ್ ಅನೌನ್ಸ್ ಮೆಂಟ್ ಕಾದಿದೆ ಎಂಬ ವಿಚಾರವನ್ನು ಯಾರೆಂದರೆ ಯಾರೂ ಊಹಿಸಿರಲಿಕ್ಕಿಲ್ಲ. ಕಡೆಗೂ ಗೋಲ್ಡನ್ ಸ್ಟಾರ್ (golden star) ಬರ್ತ್‍ಡೇ ಗಿಫ್ಟ್ ಎಂಬಂತೆ ವಿಖ್ಯಾತ್ ಚಿತ್ರ ಪ್ರೊಡಕ್ಷನ್ಸ್ ಕಡೆಯಿಂದ ಪ್ಯಾನಿಂಡಿಯಾ ಇಂಡಿಯಾ ಚಿತ್ರ ಘೋಷಣೆಯಾಗಿದೆ. ಅದರ ಫಸ್ಟ್ ಲುಕ್ ಪೋಸ್ಟರ್ ಕಂಡು ಅಭಿಮಾನಿಗಳೆಲ್ಲ ಖುಷಿಗೊಂಡಿದ್ದಾರೆ! ಇದು ಹೇಳಿಕೇಳಿ ಕನ್ನಡ ಚಿತ್ರರಂಗದ ಮಟ್ಟಿಗೆ ಪ್ಯಾನಿಂಡಿಯಾ ಸಿನಿಮಾಗಳ ಕಾಲಮಾನ. ಪ್ರತೀ ನಟರ ಅಭಿಮಾನಿ ಬಳಗವೂ ತಮ್ಮಿಷ್ಟದ ನಟ ಪ್ಯಾನಿಂಡಿಯಾ ಮಟ್ಟದಲ್ಲಿ ಮಿಂಚಬೇಕೆಂಬ ಇರಾದೆ ಹೊಂದಿರುತ್ತಾರೆ. ಗಣೇಶ್ ಅಭಿಮಾನಿಗಳಲ್ಲಿಯೂ ಅಂಥಾದ್ದೊಂದು ಆಸೆ…

Read More

ಸಿನಿಮಾ ಮಾತ್ರವಲ್ಲ; ಯಾವುದೇ ಕ್ಷೇತ್ರಗಳಲ್ಲಿಯಾದರೂ ಸೋಲು ಗೆಲುವೆಂಬುದು ಮಾಮೂಲು. ಆದರೆ, ವಿಪರೀತವಾದ ಪ್ರಚಾರದ ಪಟ್ಟುಗಳಿರೋದರಿಂದಾಗಿ ಸಿನಿಮಾ ರಂಗದಲ್ಲಿ (filme industry) ಸೋಲೂ ಕೂಡಾ ಗೆಲುವನ್ನು ಸರಿಗಟ್ಟುವಂತೆ ಸುದ್ದಿಗೆ ಗ್ರಾಸವಾಗುತ್ತೆ. ಹುಚ್ಚಾಪಟ್ಟೆ ಪೋಸುಕೊಟ್ಟು, ಸವಕಲು ಸಿನಿಮಾ ಮಾಡಿದಾಗ ಸೋಲಿನ ತೀವ್ರತೆ ಮತ್ತಷ್ಟು ಅಧಿಕವಾಗಿರುತ್ತದೆ. ಸದ್ಯಕ್ಕೆ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ (puri jagannath) ಅಂಥಾದ್ದೊಂದುಸೋಲಿನ ಕಮರಿಗೆ ಬಿದದು ಒದ್ದಾಡುತ್ತಿದ್ದಾರೆ. ವಿಜಯ್ ದೇವರಕೊಂಡ (vijay devarakonda) ನಟಿಸಿದ್ದ ಲೈಗರ್ (liger) ಚಿತ್ರ ವರ್ಷದ ಹಿಂದೆ ತೆರೆ ಕಂಡಿತ್ತಲ್ಲಾ? ದೊಡ್ಡ ಮಟ್ಟದಲ್ಲಿ ಹೈಪು ಸೃಸ್ಟಿಸಿದ್ದ ಲೈಗರ್ ಅತ್ಯಂತ ಹೀನಾಯವಾಗಿ ನೆಲ ಕಚ್ಚಿತ್ತು. ಯಾವಾಗ ಅಥಾದ್ದೊಂದು ಸೋಲು ಸುತ್ತಿಕೊಂಡಿತೋ, ಆಗ ಪುರಿ ಜಗನ್ನಾಥ್ (puri jagannath) ತನ್ನ ಬ್ಯುಸಿನೆಸ್ ಪಾರ್ಟ್‍ನರ್ ಚಾರ್ಮಿಯ (charmi kaur) ಸಮೇತ ಗಾಯಬ್ ಆಗಿಬಿಟ್ಟಿದ್ದರು! ಲೈಗರ್ ಗಲ್ಲಾಪೆಟ್ಟಿಗೆಯಲ್ಲಿ ಗೋತಾ ಹೊಡೆದಂದಿನಿಂದಲೂ ಪುರಿ ಜಗನ್ನಾಥ್ ತೆರೆಮರೆಗೆ ಸರಿದಿದ್ದಾರೆ. ಮತ್ತೊಂದೆಡೆಯಲ್ಲಿ, ನಟನೆಯಿಂದ ದೂರವುಳಿದು ನಿರ್ಮಾಪಕಿಯಾಗಿರುವ, ಪುರಿಯ ಬ್ಯುಸಿನೆಸ್ ಪಾರ್ಟ್‍ನರ್ ಕೂಡಾ ಆ ಬಳಿಕ ಮರೆಯಾಗಿ ಬಿಟ್ಟದ್ದಳು.…

Read More

ಕಲೆಯನ್ನೇ ನಂಬಿ ಬದುಕೋ ಜೀವಗಳನ್ನು ಸುತ್ತಿಕೊಳ್ಳುವ ಸಂಕಷ್ಟಗಳು ನೂರಾರು. ಅಂಥಾ ಸಾವಿರ ಸವಾಲುಗಳಿಗೆ ಎದೆಗೊಟ್ಟು, ಏಳುಬೀಳುಗಳನ್ನು ಅವುಡುಗಚ್ಚಿ ಸಹಿಸಿಕೊಂಡು, ಎಡವಿದಾಗೆಲ್ಲ ಸಾವರಿಸಿಕೊಂಡು ಕಲೆಯನ್ನೇ ಉಸಿರೆಂದುಕೊಂಡವರು ಮಾತ್ರವೇ ಕಲಾವಿದರಾಗಿ ನೆಲೆ ಕಂಡುಕೊಳ್ಳುತ್ತಾರೆ. ಕನ್ನಡದ ಮಟ್ಟಿಗೆ ಹೇಳುವುದಾದರೆ, ಹೀಗೆ ಮೇಲೆದ್ದು ಬಂದು ಅಭಿಜಾತ ಕಲಾವಿದರಾಗಿ ನೆಲೆ ಕಂಡುಕೊಂಡ ಕೆಲವರಿದ್ದಾರೆ. ಆ ಯಾದಿಯಲ್ಲಿ ಮುಂಚೂಣಿಯಲ್ಲಿರುವವರು (vaijanath biradar) ವೈಜನಾಥ ಬಿರಾದಾರ್. ನಟನಾಗಿ ನಾನಾ ಪಾತ್ರಗಳ ಮೂಲಕ ಪಳಗುತ್ತಾ ಬಂದರುವ ಅವರೀಗ `90 ಬಿಡಿ ಮನೀಗ್ ನಡಿ’ ಅಂತೊಂದು ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ಅದು ಈ ವಾರ ರಾಜ್ಯಾದ್ಯಂತ ತೆರೆಗಾಣುತ್ತಿದೆ. ಇದು ವೈಜನಾಥ್ ಬಿರಾದಾರ್ (vaijanath biradar} ಪಾಲಿಗೆ ಐನೂರನೇ ಚಿತ್ರ. ಬಹುಶಃ ಇದು ಯಾವ ನಟ ನಟಿಯರ ಪಾಲಿಗಾದರೂ ಅತ್ಯಂತ ಸಂತೋಷದ ಘಟ್ಟ. ವಿಶೇಷವೆಂದರೆ, ಇಂಥಾದ್ದೊಂದು ಸಂಭ್ರಮದ ಬಿಂದುವಿನಲ್ಲಿ, ಮತ್ತೊಂದಷ್ಟು ಸಂತಸಗಳೂ ಬಿರಾದಾರ್ ಅವರ ವಿಚಾರದಲ್ಲಿ ಜಮೆಯಾಗುತ್ತಿವೆ. ಯಾಕೆಂದರೆ, ಈ ಐನೂರರ ಗಡಿಯಂಥಾ ಚಿತ್ರದ ಮೂಲಕವೇ ಬಿರಾದಾರ್ ಪೂರ್ಣ ಪ್ರಮಾಣದ ನಾಯಕರಾಗಿದ್ದಾರೆ. ಅದು ಬಿಡುಗಡೆಗೊಳ್ಳುತ್ತಿರುವ ಈ…

Read More

ಹೊಸಾ ಹಾದಿಯತ್ತ ಹೊರಳಿಕೊಂಡಿರುವ ಕನ್ನಡ ಚಿತ್ರರಂಗದ ಪಾಲಿಗೀಗ ಒಂದಷ್ಟು ಭಿನ್ನ ಪ್ರಯತ್ನಗಳು, ಗೆಲುವುಗಳು ಜಮೆಯಾಗುತ್ತಿವೆ. ಈ ಆಶಾದಾಯಕ ವಾತಾವರಣದ ಮುಂದುವರೆದ ಭಾಗವೆಂಬಂತೆ ಮತ್ತೂ ಒಂದಷ್ಟು ಸಿನಿಮಾಗಳು ಸದ್ದೇ ಇಲ್ಲದಂತೆ ಚಿತ್ರೀಕರಣ ಮುಗಿಸಿಕೊಂಡು, ಬಿಡುಗಡೆಗೆ ತಯಾರಾಗಿ ನಿಂತಿವೆ. ಸದ್ಯದ ಮಟ್ಟಿಗೆ ಆ ಸಾಲಿನಲ್ಲಿ ಪ್ರಧಾನವಾಗಿ ಗುರುತಿಸಿಕೊಳ್ಳಬಲ್ಲ ಎಲ್ಲ ಅರ್ಹತೆಗಳನ್ನು ಅಡಕವಾಗಿಸಿಕೊಂಡಿರುವ ಚಿತ್ರ (sathyam) `ಸತ್ಯಂ’. ಈಗಾಗಲೇ ಒಂದಷ್ಟು ಮಾಸ್ ಸಿನಿಮಾಗಳಲ್ಲಿ ನಟಿಸಿರುವ ಸಂತೋಷ್ ಬಾಲರಾಜ್ (santhosh balaraj) ನಾಯಕನಾಗಿ ನಟಿಸಿರುವ ಈ ಚಿತ್ರ ಪ್ರೇಕ್ಷಕರ ಮುಂದೆ ಬರುವ ಸನ್ನಾಹದಲ್ಲಿದೆ. ಪ್ರಚಾರದ ಪಟ್ಟುಗಳಾಚೆ ಗಮನ ಸೆಳೆದಿರುವ `ಸತ್ಯಂ’ನ(sthyam) ಸಾರಥಿ (ashok kadaba) ಅಶೋಕ್ ಕಡಬ. ಈಗಾಗಲೇ ಭಿನ್ನ ಪಥದ ಸಿನಿಮಾಗಳನ್ನು ನಿರ್ದೇಶನ ಮಾಡುವ ಮೂಲಕ ಗೆದ್ದಿರುವ ಅಶೋಕ್ ಪಾಲಿಗಿದು ಕಲಾತ್ಮಕ ಹಾದಿಯಲ್ಲಿ ಅಚ್ಚರಿಯಂತೆ ಸೃಷ್ಟಿಯಾದ ಕಮರ್ಶಿಯಲ್ ಪಾಕಾರದ ಮೈಲಿಗಲ್ಲೊಂದನ್ನು ನೆಟ್ಟ ವಿಭಿನ್ನ ಅನುಭೂತಿ! ಈಗಾಗಲೇ ಗಣಪ, ಕರಿಯ2 ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ನಟಿಸಿ, ಮಾಸ್ ಲುಕ್ಕಿನಲ್ಲಿ ಪ್ರೇಕ್ಷಕರನ್ನು ಸೆಖಳೆದುಕೊಂಡವರು ಸಂತೋಷ್ ಬಾಲರಾಜ್. ಹಿರಿಯ ನಿರ್ಮಾಪಕ…

Read More

ಕಾಂತಾರ (kanthara) ಚಿತ್ರಕ್ಕೆ ದಕ್ಕಿದ ಮಹಾ ಯಶಸ್ಸಿನ ಪ್ರಭೆಯಿನ್ನೂ ಮಿಣುಕು ಹಾಕುತ್ತಿದೆ. ಇದೇ ಹೊತ್ತಿನಲ್ಲಿ ಆ ಯಶದ ರೂವಾರಿಯಾದ ರಿಷಭ್ ಶೆಟ್ಟಿ (rishabh shetty) ಕಾಂತಾರ ಸೀಕ್ವೆಲ್‍ಗಾಗಿ ತಯಾರಿ ನಡೆಸುತ್ತಿದ್ದಾರೆ. ಶೆಟ್ಟರೀಗ ಕುಂಗ್‍ಫೂ, ಕಳರಿಯಪಯಟ್‍ನಂಥ ಸಮರ ಕಲೆಗಳನ್ನು ಕಲಿಯುವಲ್ಲಿ ಮಗ್ನರಾಗಿದಾರೆಂಬಂಥಾ ಸುದ್ದಿಗಳೂ ಹಬ್ಬಿಕೊಳ್ಳುತ್ತಿವೆ. ಪಕ್ಕಾ ವ್ಯವಹಾರಸ್ಥರಾದ ಶೆಟ್ಟರು ಇದೆಲ್ಲದರ ಗ್ಯಾಪಿನಲ್ಲಿ ಸಿನಿಮಾ ಮಾರ್ಕೆಟಿಂಗ್ ಕಂಪೆನಿಯೊಂದನ್ನು ಹುಟ್ಟು ಹಾಕಿ, ಅದರ ದೇಖಾರೇಖಿಯನ್ನು ಮಡದಿ ಪ್ರಗತಿಯ (pragathi shetty) ನಿಗಾವಣೆಗೆ ಬಿಟ್ಟು ನಿರಾಳವಾಗಿದ್ದಾರೆ. ರಿಷಭ್ ಅಂದ ಮೇಲೆ ಅವರು ಹೀಗೆ ಸಿನಿಮಾ ಸಂಬಂಧಿತವಾಗಿ ಸುದ್ದಿಯಲ್ಲಿರೋದು ವಿಶೇಷವೇನಲ್ಲ. ಆದರೆ, ಈಗ `ಸಿನಿ ಶೋಧ’ ಕಲೆಹಾಕಿರುವ ಮಾಹಿತಿ ಸಿನಿಮಾತೀತವಾದದ್ದು. ಅದರನ್ವಯ ಹೇಳೋದಾದರೆ, ಕಾಂತಾರ (kanthara shiva) ಶಿವನನ್ನು ರಾಜಕಾರಣಿಯಾಗಿಸುವ ಕಸರತ್ತೊಂದು ಚಾಲ್ತಿಯಲ್ಲಿದೆ. ಅದು ಈ ಕ್ಷಣದಲ್ಲಿ ಮತ್ತಷ್ಟು ವೇಗ ಪಡೆದುಕೊಂಡಿದೆ. ಹಾಗೆ ನೋಡಿದರೆ, ಸಿನಿಮಾ ನಟರು ರಾಜಕರಣಿಗಳಾಗೋದು ಹೊಸತನಲ್ಲ. ಆದರೆ, ಪಕ್ಕದ (tamilnadu) ತಮಿಳುನಾಡು ಮುಂತಾದ ರಾಜ್ಯಗಳಲ್ಲಿರುವಂಥಾ ಕ್ರೇಜ್ ಇಲ್ಲಿಲ್ಲವಷ್ಟೇ. ರೆಬೆಲ್ ಸ್ಟಾರ್ ಅಂಬರೀಶ್, ಜಗ್ಗೇಶನಂಥಾ ನಟರು…

Read More

ಕೃಷ್ಣೇಗೌಡ ನಿರ್ದೇಶಿಸಿ, ನಿರ್ಮಾಣ ಮಾಡಿರುವ `ನಾನು ಕುಸುಮ’ (naanu kusuma) ಚಿತ್ರ ಜೂನ್ 30ರಂದು ಬಿಡುಗಡೆಗೊಳ್ಳಲಿದೆ. ಒಂದು ಭಿನ್ನ ಕಥಾನಕ ಬೇರೆಯದ್ದೇ ಧಾಟಿಯಲ್ಲಿ ದೃಷ್ಯರೂಪಕ್ಕಿಳಿದಾಗ ಅದರ ಬಗೆಗೊಂದು ಕುತೂಹಲ ಮೂಡಿಕೊಳ್ಳುವುದು ಸಹಜ. ಈವತ್ತಿಗೆ `ನಾನು ಕುಸುಮ’ (naanu kusuma) ಚಿತ್ರ ಈ ಮಟ್ಟದಲ್ಲಿ ನಿರಕ್ಷೆಮೂಡಿಸಿದೆಯೆಂದರೆ, ಅದಕೆ ಪ್ರಧಾನ ಕಾರಣ ಅದರ ಒಡಲಲ್ಲಿರುವ ವಿಶಿಷ್ಟ ಕಥೆ ಮತ್ತು ಅದು ರೂಪುಗೊಂಡಿರುವ ರೀತಿ. ಈಗಾಗಲೇ ಈ ಚಿತ್ರ ಒಂದಷ್ಟು ಪ್ರತಿಷ್ಟಿತ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿದೆ. ಒಂದಷ್ಟು ಮೌಲಿಕವಾದ ಪ್ರಶಸ್ತಿಗಳನ್ನೂ ತನ್ನದಾಗಿಸಿಕೊಂಡಿದೆ. ನರ್ಸ್ ಒಬ್ಬಳ ಸುತ್ತ ಚಲಿಸುವ ಈ ಕಥಾನಕದಲ್ಲಿ ಪ್ರಧಾನ ಪಾತ್ರಕ್ಕೆ ಜೀವ ತುಂಬಿರುವವರು (greeshma shridhar)  ಗ್ರೀಷ್ಮ ಶ್ರೀಧರ್. ಗ್ರೀಷ್ಮ ಶ್ರೀಧರ್ (greeshma shridhar) ಎಂಬ ಹೆಸರು ಕನ್ನಡ ಚಿತ್ರಪ್ರೇಮಿಗಳಿಗೆ ಅಪರಿಚಿತವೇನಲ್ಲ. ನಟಿಸಿರುವುದು ಕೆಲವೇಸಿನಿಮಾಗಳಲ್ಲಾದರೂ ಅವರ ಪಾತ್ರಗಳು ನೋಡುಗರ ಮನಸಿಗಿಳಿದಿವೆ. ಕೆಲವೊಮ್ಮೆ ಕಮರ್ಶಿಯಲ್ ಸಿನಿಮಾಗಳಲ್ಲಿ ನಟಿಸಿ, ಪ್ರಸಿದ್ಧಿ ಸಿಕ್ಕ ಮೇಲೂ ಕೆಲ ನಟಿಯರನ್ನು ಕಂಟೆಂಟೆಂಟ್ ಓರಿಯಂಟೆಡ್ ಪಾತ್ರಗಳ ಸೆಳೆತ ಆವರಿಸಿಕೊಳ್ಳುತ್ತದೆ. ಆದರೆ, ದಕ್ಕುವುದು ಕೆಲವೇ…

Read More

ಹತ್ತಾರು ಸಿನಿಮಾಗಳಲ್ಲಿ ನಟಿಸಿ, ಕನ್ನಡದ ಪ್ರೇಕ್ಷಕರ ಮನಸೆಳೆದಿದ್ದ ಹುಡುಗಿ (daisy bopanna) ಡೈಸಿ ಬೋಪಣ್ಣ. ಅಷ್ಟಕ್ಕಕೂ ಕೊಡಗಿನಿಂದ ಬಂದು ಕನ್ನಡದಲ್ಲಿ ನೆಲೆ ಕಂಡುಕೊಂಡ ನಟಿಯರಿಗೇನೂ ಬರವಿಲ್ಲ. ಅಲ್ಲಿಂದ ಬಂದವರು ಕನ್ನಡ ಮಾತ್ರವಲ್ಲದೇ, ಬೇರೆ ಭಾಷೆಗಳಲ್ಲಿಯೂ ನಾಯಕಿಯರಾಗಿ ಮೆರೆದು ಉದಾಹರಣೆಗಳಿದ್ದಾವೆ. ಅದೇ ರೀತಿ ಇನ್ನೇನು ಈಕೆ ನಾಯಕಿಯಾಗಿ ನೆಲೆ ಕಂಡುಕೊಳ್ಳುತ್ತಾಳೆಂಬ ಭರವಸೆ ಮೂಡಿಸಿದ್ದವರೂ, ಏಕಾಏಕಿ ಗಾಯಬ್ ಆಗಿ ಬಿಡುವಂಥಾ ಸಂದರ್ಭಗಳೂ ಸೃಷ್ಟಿಯಾಗುತ್ತವೆ. ಅದಕ್ಕೊಂದು ಉದಾಹರಣೆಯಂತಿರುವಾಕೆ (daisy bopanna) ಡೈಸಿ ಬೋಪಣ್ಣ! ಕಡಿಮೆಯೇನಲ್ಲ; ಸರಿಸುಮಾರು ಒಂದು ದಶಕಗಳಿಂದ ಡೈಸಿ ಸಂಪೂರ್ಣವಾಗಿ ಚಿತ್ರರಂಗದಿಂದ ದೂರ ಉಳಿದು ಬಿಟ್ಟಿದ್ದಳು. ಇಲ್ಲಿ ಚಾಲ್ತಿಯಲ್ಲಿರುವವರಿಗೆ ಮಾತ್ರವೇ ಬೆಲೆ. ಕಣ್ಣಿಂದ ಮರೆಯಾದವರು ಮನಸಿಂದಲೂ ಮರೆಯಾಗೋದಕ್ಕೆ ಹೆಚ್ಚೇನು ಸಮಯ ಹಿಡಿಯುವುದಿಲ್ಲ. ಆದರೆ, ಮನಸಲ್ಲುಳಿಯುವಂಥಾ ಪಾತ್ರ ಮಾಡಿದ ಕೆಲ ನಟ ನಟಿಯರ ವಿಚಾದಲ್ಲಿ ಮಾತ್ರವೇ ಅದು ಸುಳ್ಳಾಗೋದಿದೆ. ಡೈಸಿ ಕೂಡಾ ಗಾಳಿಪಟ ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ಆದ್ರ್ರವಾದ ಪಾತ್ರಗಳಲ್ಲಿ ನಟಿಸಿದ್ದಳು. ಆ ಮೂಲಕ ಒಂದಷ್ಟು ಅಭಿಮನಿ ಬಳಗವನ್ನೂ ಹೊಂದಿದ್ದಳು. ಇಂಥಾ ಡೈಸಿ ಅಷ್ಟೊಂದು ಸುದೀರ್ಘ…

Read More

ಯಾವುದೇ ಸಮಸ್ಯೆಗಳ ಕಾವಳ ಸರಿದು ಹೊಸಾ ದಿಕ್ಕು ಗೋಚರಿಸುತ್ತದೆಂಬುದು ಪ್ರತೀ ಜೀವಗಳ ನಂಬುಗೆ. ಆದರೆ, ಕೆಲವರ ಜೀವನದಲ್ಲಿ ಮಾತ್ರವೇ ಅದು ಬಹುಬೇಗನೆ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಹೇಳೋದಾದರೆ, ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿರುವ ಸಮಂತಾ (samantha) ಪಾಲಿಗೆ ಅಂಥಾದ್ದೊಂದು ಅದೃಷ್ಟ ಕೈ ಹಿಡಿದಿದೆ. ಅತ್ತ ತೀರಾ ಪ್ರೀತಿಯಿಂದ ನೆಚ್ಚಿಕೊಂಡಿದ್ದ ಮದುವೆ ಮುರಿಬಿದ್ದ ಸಂಕಟ, ಇತ್ತ ಒಂಟಿಯಾಗಿ ನಿಂತ ಘಳಿಗೆಯಲ್ಲಿ ಅಮರಿಕೊಂಡ ವಿಚಿತ್ರ ಕಾಯಿಲೆ… ಬಹುಶಃ ಎಂಥಾ ಗಟ್ಟಿಗರನ್ನೇ ಆದರೂ ಇಂಥಾ ಸಂದರ್ಭ ಹೈರಾಣು ಮಾಡಿ ಹಾಕುತ್ತೆ. ಓರ್ವ ಹೆಣ್ಣು ಮಗಳಾಗಿ ಎಲ್ಲವನ್ನೂ ಏಕಾಂಗಿಯಾಗೇ ಎದುರಿಸಿದ್ದ ಸಮಂತಾ (samantha) ಈಗ ಮತ್ತೆ ಎದ್ದು ನಿಂತಿದ್ದಾಳೆ. ಇದು ಆಕೆಯ ಪಾಲಿಗೆ ಅಕ್ಷರಶಃ ಪುನರ್ಜನ್ಮ. ವೃತ್ತಿ ಬದುಕಿನ ಪಾಲಿಗೆ ಅದ್ಭುತ ಸೆಕೆಂಡ್ ಇನ್ನಿಂಗ್ಸ್. ಇದೀಗ ಸಾಲು ಸಾಲು ಅವಕಾಶ ಪಡೆದುಕೊಂಡು, ಕೋಟಿ ಕೋಟಿ ಸಂಭಾವನೆ ಗಳಿಸುತ್ತಿರೋ ಸಮಂತಾಗೀಗ ಎದುರಾಳಿಯೊಬ್ಬಳು ಹುಟ್ಟಿಕೊಂಡಿದ್ದಾಳೆ. ಆಕೆ ಬಹುಭಾಷಾ ನಟಿ (trisha krishnan) ತ್ರಿಷಾ! ಸಮಂತಾ (samantha) ಅನುಭವಿಸಿದ್ದ…

Read More