Author: Santhosh Bagilagadde

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

ಘನಗಂಭೀರ ವಿಚಾರವನ್ನೂ ಕೂಡಾ ಪರಿಶುದ್ಧ ಭೋಳೇ ಶೈಲಿಯಲ್ಲಿ ದಾಟಿಸುವಲ್ಲಿ ನಿರ್ದೇಶಕ ಯೋಗರಾಜ್ ಭಟ್ಟರದ್ದು (yogaraj bhat) ಎತ್ತಿದ ಕೈ. ಇದುವರೆಗಿನ ಅವರ ಸಿನಿಮಾ ಗ್ರಾಫ್ ಅನ್ನೊಮ್ಮೆ ಗಮನಿಸಿದರೆ, ಒಲಿದು ಬಂದು ಒಂದಷ್ಟು ಗೆಲುವಿನ ಹಿಂದಿರುವ ರಸಹ್ಯವೂ ಅದೇ ಮೂಲದ್ದೆಂಬುದು ಸಾಬೀತಾಗುತ್ತದೆ. ಅದೇ ರೀತಿ ಭಟ್ಟರು ಸಾಕಷ್ಟು ಬಾರಿ ಮುಗ್ಗರಿಸಿದ್ದರ ಹಿಂದಿರುವ ಅಸಲೀ ಕಾರಣಗಳು ಸಹ ಅದೇ ಮೂಲದಲ್ಲಿಯೇ ಗಹಗಹಿಸಿ ನಗುವಂತೆಯೂ ಭಾಸವಾಗುತ್ತದೆ. ಇಂಥಾ ಯೋಗರಾಜ್ ಭಟ್ಟರು ಏಕಾಏಕಿ ವರಸೆ ಬದಲಿಸಿದಾ? ಸಿನಿಮಾ ವಿಚಾರದಲ್ಲಿ ಘನಗಂಭೀರ ಹೆಜ್ಜೆ ಇಡಲಾರಂಭಿಸಿದ್ದಾರಾ ಎಂಬಂಥಾ ಪ್ರಶ್ನೆಗಳು ಸ್ಪಷ್ಟವಾಗಿಯೇ ಮೂಡಿಕೊಂಡಿವೆ. ಅದಕ್ಕೆ ಕಾರಣವಾಗಿರೋದು (karataka damanaka) ಕರಟಕ ದಮನಕ ಚಿತ್ರದ ಫಸ್ಟ್ ಲುಕ್! ಇತ್ತೀಚಿನ ದಿನಗಳಲ್ಲಿ ಗರಡಿ ಚಿತ್ರದ ಚಿತ್ರೀಕರಣದಲಿ ಯೋಗರಾಜ್ ಭಟ್ ಬ್ಯುಸಿಯಾಗಿದ್ದರು. ಈ ಸಿನಿಮಾ ಮೂಲಕವೇ ಬಟ್ಟರು ಮಾಮೂಲಿ ದಾರಿಯನ್ನು ಬಿಟ್ಟು, ಭಿನ್ನ ಪಥದತ್ತ ಹೊರಳಿಕೊಂಡಿರುವ ಮುನ್ಸೂಚನೆ ಸಿಕ್ಕಿದಂತಾಗಿತ್ತು. ಗರಡಿಯ ಬಗ್ಗೆ ಒಂದಷ್ಟು ಸುದ್ದಿಗಳು ಆಗಾಗ ಜಾಹೀರಾಗುತ್ತಿತ್ತಾದರೂ ಭಟ್ಟರ ಮುಂದಿನ ನಡೆ ನಿಗೂಢವಾಗಿತ್ತು. ಇದೀಗ ಗರಡಿಯ…

Read More

ಕಿರುತೆರೆಯಿಂದ ಹಿರಿತೆರೆಗೆ ಆಗಮಿಸಿರುವವರು, ಆಗಮಿಸುತ್ತಿರುವವರ ದಂಡು ದೊಡದಿದೆ. ಹಾಗೆ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡುವ ಪ್ರತೀ ನಟ ನಟಿಯರ ಆದ್ಯತೆಗಳೂ ಬೇರೆ ತೆರನಾಗಿರುತ್ತವೆ. ಕೆಲ ಮಂದಿ ಏಕಾಏಕಿ ಮಿಂಚುವ ಇರಾದೆ ಹೊಂದಿದ್ದರೆ, ಮತ್ತೆ ಕೆಲವರಲ್ಲಿ ವಿಶೇಷ ಪಾತ್ರಗಳ ಮೂಲಕ ಪೇಕ್ಷಕರ ಮನಸಿಗಿಳಿಯುವ ತಪನೆಯಿರುತ್ತದೆ. ಅಂಥಾ ವಿರಳ ಮತ್ತು ಅಪರೂಪದ ಕಲಾವಿದರ ಸಾಲಿನಲ್ಲಿ ರಜನಿ (rajani) ಕೂಡಾ ಸೇರಿಕೊಳ್ಳುತ್ತಾರೆ. ರಜನಿ ಕಿರುತೆರೆ ಪ್ರೇಕ್ಷಕರ ಪಾಲಿಗೆ ಚಿರಪರಿಚಿತ ನಟಿ. ಕಿರುತೆರೆಯಲ್ಲಿ ಒಂದಷ್ಟು ಯಶ ಕಂಡಿದ್ದ ಅಮೃತವರ್ಶಿಣಿ (amruthavarshini) ಧಾರಾವಾಹಿಯ ಮೂಲಕ ಪ್ರೇಕ್ಷಕರಿಗೆ ಹತ್ತಿರಾಗಿದ್ದವರು ರಜನಿ. ಆ ಬಳಿಕ ಕಿರುತೆರೆ ಜಗತ್ತಿನಲ್ಲಿಯೇ ಹಲವು ಆಯಾಮಗಳಲ್ಲಿ ಸಕ್ರಿಯರಾಗಿದ್ದ ಅವರೀಗ `ಅಂಬುಜ’ ಚಿತ್ರದ ನಾಯಕಿಯಾಗಿ, ವಿಶಷ್ಟ ಪಾತ್ರವೊಂದರ ಮೂಲಕ ಹಿರಿತೆರೆಯ ಪ್ರೇಕ್ಷಕರನ್ನು ಮುಖಾಮುಖಿಯಾಗುವ ಸನ್ನಾಹದಲ್ಲಿದ್ದಾರೆ. ಸಾಮಾನ್ಯವಾಗಿ, ನಟಿಯರನೇಕರು ಏಕಾಏಕಿ ಪಕ್ಕಾ ಕಮರ್ಶಿಯಲ್ ಪ್ರಕಾರದ ಸಿನಿಮಾದಲ್ಲಿ ಅವಕಾಶ ಸಿಕ್ಕು ಮಿಂಚಿಬಿಡುವ ಆಲೋಚನೆಯಲ್ಲಿರುತ್ತಾರೆ. ಅಂಥವರ ನಡುವೆ, ನಾಯಕಿ ಪಾತ್ರ ಸಿಗದಿದ್ದರೂ ಪರವಾಗಿಲ್ಲ; ಸಣ್ಣ ಪಾತ್ರವಾದರೂ ಅದು ನೋಡುಗರ ಮನಸಲ್ಲುಳಿಯಬೇಕೆಂಬ ತುಡಿತ ಹೊಂದಿರುವವರು…

Read More

ವರ್ಷಾಂತರದ ಹಿಂದೆ ಕಾಸ್ಟಿಂಗ್ ಕೌಚ್ (casting couch) ಅಂತೊಂದು ಅಭಿಯಾನ ಭಾರತೀಯ ಚಿತ್ರರಂಗದಲ್ಲಿ ಸಂಚಲನವನ್ನೇ ಮೂಡಿಸಿತ್ತು. ಸಿನಿಮಾದ ಮರೆಯಲ್ಲಿ ತೀಟೆ ತೀರಿಸಿಕೊಳ್ಳುವ ಸ್ವಭಾವದ ಕೆಲ ನಿರ್ದೇಶಕರು, ಕಾಮುಕ ನಿರ್ಮಾಪಕರ ಬಣ್ಣ ಈ ಅಭಿಯಾನದ ಮೂಲಕವೇ ಬಯಲಾಗಿ ಹೋಗಿತ್ತು. ಕೆಲ ನಟಿಯರು ಬಿಡುಬೀಸಾಗಿ ತಾವು ಅನುಭವಿಸಿದ ಸಂಕಷ್ಟಗಳ ಬಗ್ಗೆ ಮಾತಾಡಿದ್ದೇ, ಚಿತ್ರರಂಗವನ್ನು ಲಾಗಾಯ್ತಿನಿಂದಲೂ ಆಳುತ್ತಾ ಬಂದಿರುವ ಪುರುಷ ಪ್ರಧಾನ ವ್ಯವಸ್ಥೆಯ ಬುಡ ಅದುರಿತ್ತು. ಅದು ಹಾಗೆಯೇ ಮುಂದುವರೆದಿದ್ದರೆ ಬಹುಶಃ ಇನ್ನೂ ಅನೇಕ ಅತಿರಥಮಹಾರಥರೇ ಲಂಗೋಟಿಗೂ ಗತಿಯಿಲ್ಲದಂತೆ ಬೀದಿಯಲಿ ನಿಲ್ಲಬೇಕಾಗುತ್ತಿತ್ತೇನೋ. ಆದರೆ, ಒಳಗೊಳಗೇ ಕಾಣದ ಶಕ್ತಿಗಳು ಆ ಅಭಿಯಾನದ ಕತ್ತು ಹಿಸುಕಿದರೂ, ಆಗೊಮ್ಮೆ ಈಗೊಮ್ಮೆ ಕೆಲ ಗಟ್ಟಿಗಿತ್ತಿಯರು ಆ ಬಗ್ಗೆ ಮಾತಾಡುತ್ತಿದ್ದಾರೆ. ಇದೀಗ ಬಾಲಿವುಡ್ ನಟಿ, ಗಾಯಕಿ ಸುಚಿತ್ರಾ ಕೃಷ್ಣಮೂರ್ತಿಯ (suchitara krishnamurthi) ಸರದಿ ಬಂದಿದೆ! ಇತ್ತೀಚೆಗಷ್ಟೇ ಸುಚಿತ್ರಾ ಕೃಷ್ಣಮೂರ್ತಿಯ ಖಾಸಗೀ ಬದುಕಿನಲ್ಲಿ ಬಿರುಗಾಳಿ ಎದ್ದಿತ್ತು. ಸಿನಿಮಾ ರಂಗದಲ್ಲಿ ಮಾಮೂಲೆಂಬಂತೆ ಆಕೆ ಗಂಡನಿಂದ ವಿಚ್ಚೇದನ ಪಡೆದುಕೊಂಡಿದ್ದರು. ಈ ಮೂಲಕ ಸುದೀರ್ಘವಾದ ಸಾಹಚರ್ಯವೊಂದು ಕೊನೆಗೊಂಡಿರುವ ಸಂಕಟದಲ್ಲಿದ್ದಾರೆ…

Read More

ಶ್ರೀನಿ ಹನುಂತರಾಜು ನಿರ್ದೇಶನದ ಅಂಬುಜ ಚಿತ್ರ ಇದೇ ಜುಲೈ 21ರಂದು ರಾಜ್ಯಾದ್ಯಂತ ತೆರೆಗಾಣುತ್ತಿದೆ. ಒಂದು ಯಶಸ್ವೀ ಚಿತ್ರ ಸಾಗಬಹುದಾದ ಸಮ್ಮೋಹಕ ಹಾದಿಯಿದೆಯಲ್ಲಾ? ಈ ಸಿನಿಮಾ ಅದರಲ್ಲಿಯೇ ಪರಿಣಾಮಕಾರಿಯಾಗಿ ಹಾದು ಬಂದಿದೆ. ಬೇರ್ಯಾವುದೋ ಮಾಯೆಯ ಬೆಂಬಿದ್ದು ಸಿನಿಮಾ ನಿರ್ಮಾತೃಗಳೆಲ್ಲ ರೇಸಿನಲ್ಲಿರುವಾಗ, ಮಹಿಳಾ ಪ್ರಧಾನ ಸಿನಿಮಾಗಳ ಸಂಖ್ಯೆ ಗಣನೀಯವಾಗಿ ಇಳಿದು ಹೋಗಿದೆ. ಆ ನಿರ್ವಾತ ಸ್ಥಿತಿಯನ್ನು ನೀಗುವಂತೆ ಇದೀಗ ಅಂಬುಜ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಾ ಸಿನಿಮಾ ಮಂದಿರಗಳತ್ತ ಮೆರವಣಿಗೆ ಹೊರಟಿದೆ. ಶುಭಾ ಪೂಂಜಾ ಒಂದಷ್ಟು ಸಮಯದ ನಂತರ ಈ ಸಿನಿಮಾದಲ್ಲಿ ಮನಸಿಗಿಳಿಯುವ ಪಾತ್ರ ಮಾಡಿರುವ ಲಕ್ಷಣಗಳಿವೆ. ಸೀರಿಯಲ್ಲುಗಳಲ್ಲಿ ಹೆಸರಾಗಿದ್ದ ರಜನಿನ ಕೂಡಾ ಅಂಥಾದ್ದೇ ಪಾತ್ರಕ್ಕೆ ಜೀವ ತುಂಬಿದ್ದಾರೆ. ವಿಶೇಷವೆಂದರೆ, ಕಾಮಿಡಿ ಕಿಲಾಡಿಗಳು ಶೋನಿಂದ ಬೆಳಕಿಗೆ ಬಂದು, ಕೆಜಿಎಫ್ ಪಾತ್ರದ ಮೂಲಕ ಪ್ರಸಿದ್ಧಿ ಪಡೆದಿರುವ ಪ್ರತಿಭಾನ್ವಿತ ನಟ ಗೋವಿಂದೇಗೌಡ ಕೂಡಾ ಈ ಚಿತ್ರದಲ್ಲಿ ಚೆಂದದ್ದೊಂದು ಪಾತ್ರವಾಗಿದ್ದಾರೆ. ಸಿನಿಮಾ, ರಂಗಭೂಮಿ ವಲಯದಲ್ಲಿ ಪ್ರೀತಿಯಿಂದ ಜಿಜಿ ಅಂತ ಜನಜನಿತವಾಗಿರುವವರು ಗೋವಿಂದೇಗೌಡ. ಹಳ್ಳಿಗಾಡೊಂದರಲ್ಲಿ ಹುಟ್ಟಿ, ತಬ್ಬಲಿತನವನ್ನು ಬೆನ್ನಿಗಂಟಿಸಿಕೊಂಡು ಬೆಳೆದ…

Read More

ಕಾಲ ಎಲ್ಲವನ್ನೂ ಬದಲಾಯಿಸುತ್ತೆ ಅನ್ನೋದು ಹಳೆಯದಾದರೂ ಸಾರ್ವಕಾಲಿಕ ಸತ್ಯ. ಸೋಲು ಗೆಲುವುಗಳ ಸರಪಳಿ ಸುತ್ತಿಕೊಂಡಿರೋದೂ ಕೂಡಾ ಆ ಸತ್ಯದ ಕೊಂಡಿಗೆಂಬುದೂ ಅಷ್ಟೇ ಸತ್ಯ. ಇದರಿಂದ ಸಿನಿಮಾ ರಂಗ ಹೊರತಾಗಲು ಸಾಧ್ಯವೇ? ಇಲ್ಲಿ ಗೆದ್ದು ಮೆರೆದವರು ಸೋತು ಮಂಕಾಗಿದ್ದಾರೆ. ಸೋಲಿನ ಕಹಿಯುಂಡು ಮುದುರಿ ಕೂತವರು ಮಹಾ ಗೆಲುವಿನ ವಾರಸೂದಾರರಾಗಿದ್ದಾರೆ. ಸದ್ಯಕ್ಕೆ ಅಂಥಾದ್ದೊಂದು ಕಾಲದ ಮಹಿಮೆ ಕೊಡಗಿನ ಹುಡುಗಿ (rashmika mandanna) ರಶ್ಮಿಕಾ ಮಂದಣ್ಣಳ ನೆತ್ತಿ ಮೇಲೆ ಗಿರಕಿ ಹೊಡೆಯುತ್ತಿರುವಂತಿದೆ. ಈಗೊಂದಷ್ಟು ವರ್ಷಗಳ ಹಿಂದೆ ತೆಲುಗಿಗೆ ಲಗ್ಗೆಯಿಟ್ಟು ಸಿಕ್ಕ ಅವಕಾಶಗಳನ್ನೆಲ್ಲ ಬಾಚಿಕೊಂಡಿದ್ದಾಕೆ ರಶ್ಮಿಕ. ಇನ್ನು ತನ್ನನ್ಯಾರೂ ಹಿಡಿಯೋರಿಲ್ಲ ಎಂಬಂತೆ ಮರೆದಿದ್ದ ರಶ್ಮಿಕಾಗೀಗ ಕನ್ನಡದ ಹುಡುಗಿಯೊಬ್ಬಳು ತೀವ್ರ ಪ್ರತಿಸ್ಪರ್ಧೆ ಒಡ್ಡುತ್ತಿದ್ದಾಳೆ. ಆಕೆ ಕಿಸ್ ಹುಡುಗಿ (sreeleela) ಶ್ರೀಲೀಲಾ! ಕಿಸ್ ಅಂತೊಂದು ಸನಿಮಾದಲ್ಲಿ ನಾಯಕಿಯಾಗಿ ನಟಿಸಿ, ಮೊದಲ ಹೆಜ್ಜೆಯಲ್ಲಯೇ ಗೆಲುವು ಪಡೆದಿದ್ದಾಕೆ ಶ್ರೀಲೀಲಾ. ಆ ನಂತರದಲ್ಲಿ ರಾಘವೇಂದ್ರ ರಾವ್ ನಿರ್ದೇಶನದ ಸಿನಿಮಾ ಮೂಲಕ ತೆಲುಗಿಗೂ ಎಂಟ್ರಿ ಕೊಟ್ಟಿದ್ದಳು. ಯಾವ ತಾರಾತಿಗಡಿಯೂ ಇಲ್ಲದೆ ತನ್ನ ಪಾಡಿಗೆ ತಾನಿರುವ, ಅಮ್ಮನ…

Read More

ಇದೀಗ ಭಾರತೀಯ ಚಿತ್ರರಂಗದಲ್ಲಿ ಶಾರುಖ್ ಖಾನ್ (sharukh khan) ಅಭಿನಯದ `ಜವಾನ್’ (javaan) ಚಿತ್ರದ್ದೇ ಮಾತು. ದಕ್ಷಿಣ ಭಾರತೀಯ ಚಿತ್ರಗಳು ಪ್ಯಾನಿಂಡಿಯಾ ಮಟ್ಟ ಮುಟ್ಟುತ್ತಿರುವಾಗ, ಬಾಲಿವುಡ್ಡನ್ನು (bollywood) ಸಾಲು ಸಾಲು ಸೋಲುಗಳು ಬಾಧಿಸಿತ್ತು. ಈ ಬಗ್ಗೆ ವ್ಯಾಪಕ ಟೀಕೆಗಳೂ ಕೂಡಾ ಕೇಳಿ ಬಂದಿದ್ದವು. ಈಗಿರುವ ಕ್ರೇಜ್ ನೋಡಿದರೆ ಬಾಲಿವುಡ್ ಎಂಬೋ ಬಾಲಿವುಡ್ ಜವಾನನ ಮೂಲಕ ಮೇಲೆದ್ದು ನಿಲ್ಲುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ. ಜವಾನ್ (javaan) ಚಿತ್ರದ ಪ್ರಿವ್ಯೂ ವೀಡಿಯೋಗೆ ಸಿಕ್ಕಿರುವ ಅಭುತಪೂರ್ವ ಯಶಸ್ಸಿದೆಯಲ್ಲಾ? ಅದು ಎಲ್ಲವನ್ನೂ ನಿಚ್ಚಳವಾಗಿಸಿದಂತಿದೆ! ಶಾರೂಖ್ ಅಭಿಮಾನಿಗಳಂತೂ ಹೋಗಿ ಬಂದು ಮತ್ತೆ ಮತ್ತೆ ಆ ವೀಡಿಯೋ ನೋಡುವ ಮೂಲಕ, ಅದರ ವೀಕ್ಷಣೆಯ ಸಂಖ್ಯೆ ಎಪ್ಪತ್ತು ಮಿಲಿಯನ್ನಿನ ಗಡಿ ದಾಟುವ ಸನ್ನಾಹದಲ್ಲಿದೆ. ಇತ್ತೀಚಿನ ಮಟ್ಟಿಗೆ ಇದೊಂದು ದಾಖಲೆಯೇ. ವಿಚಾರ ಹೀಗಿರುವಾಗಲೇ ಒಂದಷ್ಟು ಮಂದಿ ಈ ಪ್ರಿವ್ಯೂ ವೀಡಿಯೋದಲ್ಲಿ ಸುಂದರಿಯೊಬ್ಬಳನ್ನು ಎಡೆಬಿಡದೆ ಹುಡುಕುತ್ತಿದ್ದಾರೆ. ಆದರೂ ಆಕೆ ಕಾಣದೆ ನಿರಾಸೆಗೊಂಡಿದ್ದಾರೆ. ಆ ಸುಂದರಿಯನ್ನೇನಾದರೂ ಸಿನಿಮಾದಿಂದ ಕೈ ಬಿಡಲಾಗಿದೆಯಾ ಅಂತಲೂ ಒಂದಷ್ಟು ಮಂದಿ ದಿಗಿಲುಗೊಂಡಿದ್ದಾರೆ.…

Read More

ಒಂದಷ್ಟು ಹಿಟ್ ಸಿನಿಮಾಗಳು ಬಂದು ಚಿತ್ರರಂಗ ಕಳೆಗಟ್ಟಿಕೊಂಡಾಗಲೂ, ಸೋಲುಗಳೆದುರಾಗಿ ಕಳೆಗುಂದಿದಾಗಲೂ ಸಿನಿಮಾ ಪ್ರೇಮಿಗಳಲ್ಲಿ ಒಂದಷ್ಟು ಬಯಕೆಗಳು ಬೆಚ್ಚಗಿರುತ್ತವೆ. ಅಂಥಾ ಬಯಕೆಗಳ ಸಾಲಿನಲ್ಲಿ (multi starrer movie) ಮಲ್ಟಿ ಸ್ಟಾರರ್ ಸಿನಿಮಾಗಳ ತಪನೆಯೂ ಕೂಡಾ ಒಂದಾಗಿ ಗುರುತಿಸಿಕೊಳ್ಳುತ್ತದೆ. ತಮ್ಮಿಷ್ಟದ ನಟರೆಲ್ಲರನ್ನೂ ಒಂದೇ ಫ್ರೇಮಿನಲ್ಲಿ, ಒಂದಿಡೀ ಸಿನಿಮಾದಲ್ಲಿ ನೋಡುವಂತಾದರೆ ಅದಕ್ಕಿಂತಲೂ ಖುಷಿ ಬೇರೇನಿದೆ? ಆದರೆ, ಕನ್ನಡದ ಮಟ್ಟಿಗೆ ಅಂಥಾ ಖುಷಿ ಸಿಕ್ಕಿದ್ದು ತುಂಬಾನೇ ವಿರಳ. ಗಮನೀಯ ಅಂಶವೆಂದರೆ, ಹಾಗೆ ಸಿಕ್ಕ ಸಣ್ಣ ಖುಷಿಗಳಲ್ಲಿ (shivarajkumar)  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಪಾತ್ರ ಇದ್ದೇ ಇದೆ. ಇದೀಗ ಹುಟ್ಟುಹಬ್ಬದ ಘಳಿಗೆಯಲ್ಲಿ ಶಿವಣ್ಣನ ಕಡೆಯಿಂದ (shivanna) ಸಮಸ್ತ ಪ್ರೇಕ್ಷಕರೂ ಸಂಭ್ರಮಿಸುವಂಥಾ ಸುದ್ದಿ ಜಾಹೀರಾಗಿದೆ! ಆ ಸುದ್ದಿಯನ್ನಾಧರಿಸಿ ಹೇಳುವುದಾದರೆ, ಕನ್ನಡ ಸಿನಿಮಾ ಪ್ರೇಮಿಗಳಿಗೆ ಡಬಲ್ ಧಮಾಕಾವೇ ಎದುರಾಗಲಿದೆ. ಯಾಕೆಂದರೆ, ಶಿವಣ್ಣ ಒಂದರ ಹಿಂದೊಂದರಂತೆ ಎರಡೆರಡು ಮಲ್ಟಿ ಸ್ಟಾರರ್ ಚಿತ್ರಗಳಲ್ಲಿ ನಟಿಸಲಿದ್ದಾರೆ. ಅದರಲ್ಲೊಂದು ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗಿನದ್ದು. ಈ ಚಿತ್ರವನ್ನು ಕೆ ಎಸ್ ರವಿಕುಮಾರ್ ನಿರ್ದೇಶನ ಮಾಡಲಿದ್ದಾರೆ. ಎಂ.ಬಿ…

Read More

ಸಿನಿಮಾ ರಂಗದಲ್ಲಿ ನಾಯಕಿಯಾಗಿ ಮಿಂಚಬೇಕೆಂಬ ಬಯಕೆ ಬಹುತೇಕ ಸಾಮಾನ್ಯ ಹುಡುಗಿಯರೊಳಗೂ ಇದ್ದೇ ಇರುತ್ತದೆ. ಆದರೆ, ಹಾಗೆ ಸಿನಿಮಾರಂಗಕ್ಕೆ ಅಡಿಯಿರಿಸಿ, ಕಾಲೂರಿ ನಿಲ್ಲಬೇಕೆಂದರೆ ಸಾಕಷ್ಟು ಸವಾಲುಗಳಿಗೆ ಎದೆಯೊಡ್ಡಬೇಕಾಗುತ್ತದೆ. ಅಲ್ಲೆದುರಾಗುವ ಮಾನಸಿಕ ಕಿರಿಕಿರಿಗಳ್ನು ಮೀರಿ ಮುಂದುವರೆಯುವ ಇಚ್ಛಾಶಕ್ತಿಯೂ ಇರಬೇಕಾಗುತ್ತದೆ. ಯಾಕೆಂದರೆ, ಮೋಹಕವಾಗಿ ಕಾಣಿಸೋ ಝಗಮಗದಾಚೆಗೊಂದು ವಿಚಿತ್ರ, ವಿಕ್ಷಿಪ್ತ ಲೋಕವಿದೆ. ಬಹುಶಃ ನಟಿಯರಾಗಿ ಹೆಸರು ಮಾಡೋ ಬಯಕೆ ಇರುವ ಹೆಣ್ಣುಮಕ್ಕಳೆಲ್ಲ ಒಂದಲ್ಲ ಒಂದು ಸಲ ಆ ವಿಕೃತ ಲೋಕವನ್ನು ಎದುರಿಸಿ ನಿಲ್ಲಬೇಕಾಗುತ್ತೆ. ಇಂಥಾ ದುಷ್ಟ ವ್ಯವಸ್ಥೆಯ ಬಗ್ಗೆ ಈಗಾಗಲೇ ಅನೇಕ ನಟಿಯರು ಹೇಳಿಕೊಂಡಿದ್ದಾರೆ. ಇದೀಗ ಸಣ್ಣ ಬಜೆಟ್ಟಿನಲ್ಲಿ ತಯಾರಾಗಿ, ದೊಡ್ಡ ಮಟ್ಟದಲ್ಲಿ ಗೆಲುವು ದಾಖಲಿಸಿರುವ (bagalam) `ಬಗಲಂ’ ಚಿತ್ರದ ನಾಯಕಿ ಕಾವ್ಯ ಕಲ್ಯಾಣ್ ರಾಮ್ (kavya kalyan ram) ಸರದಿ ಬಂದಿದೆಯಷ್ಟೆ! ಈ ಹಿಂದೆ ಒಂದಷ್ಟು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದರೂ ಬಗಲಂ ಎಂಬ ಸಿನಿಮಾ ಮೂಲಕ ದೊಡ್ಡ ಮಟ್ಟದಲ್ಲಿಯ ಹೆಸರು ಮಾಡಿರುವಾಕೆ ಕಾವ್ಯ ಕಲ್ಯಾಣ್ ರಾಮ್. ಆ ಸಿನಿಮಾ ಸೂಪರ್ ಹಿಟ್ ಆಗುತ್ತಲೇ ಆಕೆಯ ಅಭಿನಯಕ್ಕೂ…

Read More

ಮಾಡೋ ಕ್ಯಾಮೆ ಬಿಟ್ಟು ಮತ್ತೇನೋ ಮಾಡಲು ಹೋದರೆ ಮತ್ಯಾವುದೂ ಬಗನೆಗೂಟ ಜಡಿದುಕೊಳ್ಳುವುದು ಖಾಯಂ. ಆದರೆ, ಕೆಲ ಆಸಾಮಿಗಳಿಗೆ ಹಾಗೆ ಜಡಿಸಿಕೊಳ್ಳೋದರಲ್ಲೇ ಏನೋ ಆನಂದ. ಅಂಥಾ ವಿಶೇಷ ವ್ಯಕ್ತಿಗಳ ಸಾಲಿನಲ್ಲಿ ತಮಿಳು ಚಿತ್ರರಂಗದ ಖ್ಯಾತ (stunt master)  ಸ್ಟಂಟ್ ಮಾಸ್ಟರ್ ಕಂ ಬಲಪಂಥೀಯ ವಿಚಾರಧಾರೆಯ ಮೇಧಾವಿ ಹಾಗೂ ನಟ ಕನಲ್ ಕಣ್ಣನ್ (kanal kannan) ಮುಖ್ಯವಾಗ ಸೇರಿಕೊಳ್ಳುತ್ತಾನೆ. ಆಗಾಗ ತನ್ನ ಪಂಥದ ಪರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟು ಮಾಡುವ ಈತ ರೋಸ್ಟಿಗೀಡಾಗುತ್ತಾನೆ. ಇಂಥಾ ಕನಲ್ ಕಣ್ಣನ್ ಇದೀಗ ಫಟಿಂಗ ಪಾದ್ರಿಯೊಬ್ಬನ ನಂಗಾನಾಚ್ ವೀಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಜೈಲು ಪಾಲಾಗಿದ್ದಾನೆ! ಬೇರೆ ಧರ್ಮಗಳ ಮೇಲೆ ಅಸಹನೆ ಹೊಂದಿರುವ ಈತ, ಅದೇ ಭರದಲ್ಲಿ ಪಾದ್ರಿಯ ನಂಗಾನಾಚ್ ವೀಡಿಯೋವನ್ನು ಅಪ್‍ಲೋಡ್ ಮಾಡಿದ್ದಿರಲೂ ಬಹುದು. ಆದರೆ, ಅದರಲ್ಲಿ ತಪ್ಪೇನೂ ಕಾಣಿಸುವುದಿಲ್ಲ. ಹಾಗಂತ ಆ ವಲಯದ ಮತೀಯ ಮನಸುಗಳು ಸುಮ್ಮನಿರಬೇಕಲ್ಲಾ? ಪಾದ್ರಿಯ ಮಾನ ಹರಾಜಾದ ಉರಿ ಡಿಎಂಕೆ ಮುಖಂಡನೊಬ್ಬನ ಮೂಲಕ ಕಿಇಯಾಗಿ ಹೊತ್ತಿಕೊಂಡಿದೆ. ಆತ ಈ…

Read More

ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ (shivaraj kumar) ಮತ್ತೊಂದು ವಸಂತವನ್ನು ಎದುರುಗೊಂಡಿದ್ದಾರೆ; ಮತ್ತವೇ ಕೆನೆಯುವ ಚಿರಯೌವನವನ್ನು ಆವಾಹಿಸಿಕೊಂಡು. ಎನರ್ಜಿ ಎಂಬುದಕ್ಕೆ ಬ್ರ್ಯಾಂಡ್ ಅಂಬಾಸಡರ್ ಎಂಬಂತಿರೋ (shivanna) ಶಿವಣ್ಣನಿಗಾದ ವಯಸ್ಸು ಮತ್ತು ಅವರ ಅಪರಿಮಿತ ಉತ್ಸಾಹವನ್ನು ತಾಳೆ ಮಾಡಿದರೆ, ಅವೆರಡೂ ವಿದ್ಧ ದಿಕ್ಕಿನ ಧ್ರುವಗಳಂತೆಯೇ ಭಾಸವಾಗುತ್ತವೆ. ಈ ಕ್ಷಣಕ್ಕೆ ಅತೀ ಹೆಚ್ಚು ಸಿನಿಮಾಗಳನ್ನು ಒಪ್ಪಿಕೊಂಡು, ಎಡೆಬಿಡದೆ ಚಿತ್ರೀಕರಣದಲ್ಲಿ ತೊಡಗಿರೋ ನಟರ ಸಾಲಿನಲ್ಲಿ ಮುಂಚೂಣಿಯಲ್ಲಿರುವವರು ಶಿವಣ್ಣ. ಬಹುಶಃ ಇನ್ನೊಂದಷ್ಟು ವರ್ಷಗಳ ಕಾಲ ಅವರನ್ನು ಸರಿಗಟ್ಟಲು ಯಾರಿಂದಲೂ ಸಾಧ್ಯವಾಗಲಿಕ್ಕಿಲ್ಲ. ಹೀಗೆ ಸದಾ ಕಾಲವೂ ಪುಟಿಯುವ ಉತ್ಸಾಹವನ್ನು ಧರಿಸಿಕೊಂಡಂತೆ ಬದುಕುವ ಶಿವಣ್ಣನ ಹುಟ್ಟುಹಬ್ಬದಂದೇ (birthday) ಅಭಿಮಾನಿ ಬಳಗ ರೋಮಾಂಚನಗೊಳ್ಳುವಂಥಾ ಸುಳಿವೊಂದು ಸಿಕ್ಕಿದೆ! 2018ರಲ್ಲಿ ಟಗರು ಚಿತ್ರ ತೆರೆ ಕಂಡಿತ್ತಲ್ಲಾ? ದುನಿಯಾ ಸೂರಿ ಅದರ ಮೂಲಕ ಪ್ರೇಕ್ಷಕರೆಲ್ಲರಿಗೀ ಹೊಸಾ ಅನುಭೂತಿಯೊಂದನ್ನು ದಾಟಿಸಿದ್ದರು. ಪಕಾ ಮಾಸ್ ಅಂಶಗಳನ್ನು ಹೊಂದಿದ್ದ ಆ ಚಿತ್ರದಲ್ಲಿ ಶಿವರಾಜ್ ಕುಮಾರ್ ಟಗರು ಶಿವನಾಗಿ ಅಕ್ಷರಶಃ ವಿಜೃಂಭಿಸಿದ್ದರು. ಅದು ಸೂರಿ ಸಿನಿಮಾ ದುನಿಯಾದಲ್ಲಿ ಜರುಗಿದ್ದ ನಿಜವಾದ ಮ್ಯಾಜಿಕ್ಕು. ಯಾಕೆಂದರೆ,…

Read More