Subscribe to Updates
Get the latest creative news from FooBar about art, design and business.
Author: Santhosh Bagilagadde
Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.
ಬಾಲಿವುಡ್ ಮತ್ತು ಹಾಲಿವುಡ್ಡಿನ ಒಂದಷ್ಟು ಸಿನಿಮಾಗಳಲ್ಲಿ ನಟಿಸಿರುವಾಕೆ ನಿಧಿ ಅಗರ್ವಾಲ್. ಈಗೊಂದು ದಶಕದಿಂದ ಸಿನಿಮಾ ರಂಗದಲ್ಲಿ ಸಕ್ರಿಯಳಾಗಿರುವ ನಿಧಿ ಉತ್ತರ ಭಾರತದ ಹುಡುಗಿಯಾದರೂ ಹುಟ್ಟಿ ಬೆಳೆದಿದ್ದು ಹೈದರಾಬಾದಿನಲ್ಲಿಯೇ. ಈ ಕಾರಣದಿಂದಲೇ ಹೆಚ್ಚಾಗಿ ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಈಕೆಗೆ ಹೇಳಿಕೊಳ್ಳುವಂಥಾ ಗೆಲುವು ಸಿಕ್ಕಿರಲಿಲ್ಲ. ಸೋಶಿಯಲ್ ಮೀಡಿಯಾ ಮೂಲಕ ಒಂದಷ್ಟು ಚಾಲ್ತಿಯಲ್ಲಿದ್ದ ಈಕೆ ಪವನ್ ಕಲ್ಯಾಣ್ ಅಭಿನಯದ ಹರಿಹರ ವೀರಮಲ್ಲು ಚಿತ್ರದಲ್ಲಿ ನಟಿಸಿದ್ದಳು. ಇದೀಗ ಖಾಸಗೀ ಸಮಾರಂಭವೊಂದಕ್ಕೆ ಸರ್ಕಾರಿ ವಾಹನದಲ್ಲಿ ಎಂಟ್ರಿ ಕೊಡುವ ಮೂಲಕ ನಿಧಿ ನಾನಾ ದಿಕ್ಕುಗಳಿಂದ ಟೀಕೆಗಳನ್ನು ಎದುರಿಸುವಂತಾಗಿದೆ. ಸರ್ಕಾರಿ ವಾಹನಗಳನ್ನು ಸರ್ಕಾರಿ ಅಧಿಕಾರಿಗಳೇ ಖಾಸಗಿ ಅನುಕೂಲಕ್ಕೆ ಬಳಸುವಂತಿಲ್ಲ. ಹಾಗಿರುವಾಗ ಅದ್ಯಾವುದೋ ಖಾಸಗಿ ಕಾರ್ಯಕ್ರಮಕ್ಕೆ ನಟಿಯೊಬ್ಬಳು ಸರ್ಕಾರಿ ವಾಹನದಲ್ಲಿ ಎಂಟ್ರಿ ಕೊಟ್ಟರೆ ಅದು ವಿವಾದವಾಗದಿರಲು ಸಾಧ್ಯವೇ? ಇತ್ತೀಚೆಗೆ ಮಳಿಗೆಯೊಂದರ ಉದ್ಘಾಟನಾ ಸಮಾರಂಭದಲ್ಲಿ ನಿಧಿ ಅತಿಥಿಯಾಗಿ ಪಾಲ್ಗೊಂಡಿದ್ದಳು. ಹೇಳಿಕೇಳಿ ಇದು ಪಾಪರಾಜಿಗಳ ಜಮಾನ. ನಟಿಯರು ಸುಳಿದಾಡೋದನ್ನೇ ಕಾದು ಕೂರುವ ಇಂಥವರ ಪಾಲಿಗೆ ಅಂಥವರು ನಿಂತಿದ್ದು, ತಿರುಗಿದ್ದು, ಹಾಯ್ ಅಂದಿದ್ದು, ಕೆಲವೊಮ್ಮೆ ಥುಪುಕ್ಕನೆ ಉಗಿದದ್ದೂ…
ಈ ಮೌನ ಅನ್ನೋ ಮಾಯೆ ಇದೆಯಲ್ಲಾ? ಅದನ್ನು ಸರಿಯಾದ ಸಂದರ್ಭದಲ್ಲಿ, ಸ್ಥಳದಲ್ಲಿ ಪ್ರದರ್ಶಿಸಿಸೋದೂ ಒಂದು ಕಲೆ. ಯಾರದ್ದೇ ವ್ಯಕ್ತಿತ್ವಕ್ಕೆ ಈ ಮಾತು ಮತ್ತು ಮೌನದ ನಡುವಿನ ಸಮತೋಲನ ಮತ್ತೊಂದು ಮಟ್ಟದ ತೂಕ ತಂದುಕೊಡುತ್ತದೆ. ಆದರೆ, ಮಾತಲ್ಲಿಯೇ ಮನೆಕಟ್ಟಿ ಬಿಡುವ ಸಿನಿಮಾ ಮಂದಿಗೆ ಈ ಮಾತು ಮತ್ತು ಮೌನದ ಜುಗಲ್ಬಂಧಿಯ ಸವಿ ಸಿಕ್ಕಿದ್ದೇ ವಿರಳ. ಅದರಲ್ಲೂ ಈಗಂತೂ ಸೋಶಿಯಲ್ ಮೀಡಿಯಾದಲ್ಲಿ ಕಾಲಿಟ್ಟಲ್ಲೆಲ್ಲ ಒಂದೊಂದು ವೇದಿಕೆ ಸೃಷ್ಟಿಯಾಗುತ್ತವೆ. ಕೆಲ ಸಿನಿಮಾ ನಿರ್ಮಾತೃಗಳು ಒದರಿದ್ದನ್ನೇ ಒದರಿ ಬೇಸರಾದಾಗ ಮತ್ತೇನೇನೋ ಬಡಬಡಿಸಿ ತಮ್ಮ ಕಾಲಿಗೆ ತಾವೇ ಚಪ್ಪಡಿ ಎಳೆದುಕೊಳ್ಳೋದಿದೆ. ಸದ್ಯಕ್ಕೆ ರಾಕಿಂಗ್ ಸ್ಟಾರ್ ಯಶ್ ಅಮ್ಮನ ಸ್ಥಿತಿಯೂ ಥೇಟು ಅದೇ ರೀತಿಯಾಗಿ ಬಿಟ್ಟಿದೆ! ರಾಕಿಂಗ್ ಸ್ಟಾರ್ ಯಶ್ ಅಮ್ಮನ ಮಾತುಗಳ ಧಾಟಿಯ ಬಗ್ಗೆಯೇ ಈಗ ಎಲ್ಲೆಡೆ ವ್ಯಾಪಕವಾಗಿ ಚರ್ಚೆಗಳಾಗುತ್ತಿವೆ. ಆರಂಭದಲ್ಲಿ ಗಟ್ಟಿಗಿತ್ತಿ ನಿರ್ಮಾಪಕಿಯಂತೆ ಎಂಟ್ರಿ ಕೊಟ್ಟಿದ್ದ ಪುಷ್ಪಾ ಅರುಣ್ ಕುಮಾರ್ ಅವರ ಮಾತಿನ ಧಾಟಿ ಕಂಡವರು ಮೆಚ್ಚಿಕೊಂಡಿದ್ದದ್ದು ಸತ್ಯ. ಪುರುಷ ಪಾರುಪಥ್ಯವಿರುವ ಚಿತ್ರರಂಗಕ್ಕೆ ಮಹಿಳೆಯರು ಎಂಟ್ರಿ ಕೊಟ್ಟಾಗ…
ಇಂಟರ್ನೆಟ್ ಯುಗ ಆರಂಭವಾದೇಟಿಗೆ ತೆರೆಮರೆಯಲ್ಲಿದ್ದ ಪ್ರಖಾಂಡ ಪ್ರತಿಭೆಗಳೆಲ್ಲ ಬೆಳಕಿಗೆ ಬರುತ್ತಿವೆ. ಹುಚ್ಚುಚ್ಚಾಗಿ ಒದರುವ ಕಲೆ ಹೊಂದಿರುವವರೂ ಕೂಡಾ ಸೆಲೆಬ್ರಟಿಗಳಂತೆ ಪೋಸು ಕೊಡುತ್ತಿದ್ದಾರೆ. ಇಂಥವರೆಲ್ಲರದ್ದೂ ಖಾಲಿ ಡಬ್ಬಿಗೆ ಕಲ್ಲು ಹಾಕಿ ಗಲಗಲಿಸಿದಂಥಾ ಸ್ಥಿತಿಯೇ. ಇಂಥಾ ಹುಚ್ಚು ಸಂತಾನದ ಆರಂಭಿಕ ಕುಡಿಯಂತಿರುವಾತ ಕೀರ್ತಿ ಶಂಕರಘಟ್ಟ ಅಲಿಯಾಸ್ ಕಿರಿಕ್ ಕೀರ್ತಿ. ಆರಂಭದಲ್ಲಿ ಈತ ಕನ್ನಡ ಪರವಾಗೆಂಬಂತೆ ಮಾತಾಡಲಾರಂಭಿಸಿದಾಗ ಒಂದು ಹಂತದಲ್ಲದು ಹಿತವೆನ್ನಿಸಿದ್ದು ಹೌದು. ಆದರೆ, ಆ ನಂತರದಲ್ಲಿ ಈತ ಪ್ರದರ್ಶಿಸುತ್ತಾ ಬಂದ ಪಟ್ಟುಗಳು ಒಂದೆರಡಲ್ಲ. ಥರ ಥರದ ಅವತಾರವೆತ್ತಿ, ಪತ್ರಕರ್ತನೆಂಬ ಲೇಬಲ್ಲು ಅಂ ಟಿಸಿಕೊಳ್ಳುವಲ್ಲಿಯೂ ವಿಫಲನಾದ ಕಿರಿಕ್ ಕೀರ್ತಿಯೀಗ ಧರ್ಮ ರಕ್ಷಕರನ ಅವತಾರವೆತ್ತಿಬಿಟ್ಟಿದ್ದಾನೆ! ಇಂಥಾದ್ದೊಂದು ಅವತಾರ ಶುರುವಿಡುತ್ತಲೇ ಕಿರಿಕ್ ಕೀರ್ತಿಗೆ ಬಾಯಿ ಬೇಧಿ ಶುರುವಾಗಿದೆ. ಸದ್ಯದ ಮಟ್ಟಿಗೆ ಧರ್ಮಸ್ಥಳ ಪರಿಸರದಲ್ಲಿ ನಡೆದಿರೋ ಅಸಹಜ ಸಾವುಗಳ ಹಿನ್ನೆಲೆಯಲ್ಲಿ ಎಸ್ಐಟಿ ತನಿಖೆ ಆರಂಭವಾಗಿದೆ. ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ನಿಗಿನಿಗಿಸುತ್ತಾ ಬಂದಿದ್ದ ಆಕ್ರೋಶವೀಗ ಅಕ್ಷರಶಃ ಧಗಧಗಿಸಲಾರಂಭಿಸಿದೆ. ಎಲ್ಲ ಬೆಳವಣಿಗೆಗಳನ್ನು ಕಂಡ ಸರ್ಕಾರ ಈ ಪ್ರಕರಣದ ಸತ್ಯಾಸತ್ಯತೆ…
ಸ್ಟಾರ್ ನಟರ ಮಕ್ಕಳು ಮರಿಗಳೆಲ್ಲ ನಟರಾಗಿ ಮಿಂಚಲು ಶತಪ್ರಯತ್ನ ನಡೆಸೋದು ಹೊಸತೇನಲ್ಲ. ಇಂಥಾ ನೆಪೋಟಿಸಂ ವಿರುದ್ಧ ಬಾಲಿವುಡ್ ಮಟ್ಟದಲ್ಲಿಯೂ ಆಗಾಗ ಧ್ವನಿಗಳು ಮೊಳಗುತ್ತಿರುತ್ತವೆ. ಕನ್ನಡ ಚಿತ್ರರಂಗದಲ್ಲೂ ಕೂಡಾ ಸಿನಿಮಾ ರಂಗದ ಪ್ರಸಿದ್ಧರ ಕುಡಿಗಳ ಆಗಮನ ಮಾಮೂಲು. ಆದರೆ, ಅಂಥವರಲ್ಲಿ ಯಶಸ್ವಿಯಾದವರ ಸಂಖ್ಯೆ ತೀರಾ ಕಡಿಮೆ ಇದೆ. ಈ ಮೂಲಕವೇ ಪ್ರತಿಭೆಯ ಹೊರತಾಗಿ ಬೇರ್ಯಾವುದಕ್ಕೂ ಸೊಪ್ಪು ಹಾಕೋದಿಲ್ಲ ಎಂಬಂಥಾ ಕನ್ನಡದ ಪ್ರೇಕ್ಷಕರ ಪ್ರೌಢ ಮನಃಸ್ಥಿತಿಯೂ ಜಾಹೀರಾಗಿದೆ. ಅಷ್ಟಾದರೂ ಕೂಡಾ ಪ್ರಸಿದ್ಧರ ಕುಟುಂಬದ ಕುಡಿಗಳ ಆಗಮನ ಮಾತ್ರ ಅನೂಚಾನವಾಗಿಕ ಮುಂದುವರೆದಿದೆ. ಅದರ ಭಾಗವಾಗಿಯೇ ಕನಸುಗಾರ ರವಿಚಂದ್ರನ್ ಸುಪುತ್ರರಿಬ್ಬರೂ ಕೂಡಾ ಅಖಾಡಕ್ಕಿಳಿದಿದ್ದಾರಾದರೂ ಈವರೆಗೂ ಪುಷ್ಕಳವಾದೊಂದು ಗೆಲುವು ದಕ್ಕದೆ ಪರಿತಪಿಸುತ್ತಿದ್ದಾರೆ. ಅತ್ತ ಮನೋರಂಜನ್ ಹಾಗೂ ವಿಕ್ರಮ್ ಇಬ್ಬರೂ ಒಂದರ ಹಿಂದೊಂದರಂತೆ ಪ್ರಯತ್ನ ಪಟ್ಟರೂ ಕೂಡಾ ಗೆಲವು ಮರೀಚಿಕೆಯಾಗಿದೆ. ಹೀಗಿರುವಾಗಲೇ ರವಿಪುತ್ರ ಮನೋರಂಜನ್ ಮತ್ತೊಂದು ಚಿತ್ರದತ್ತ ವಾಲಿಕೊಂಡಿದ್ದಾರೆ. ಆ ಸಿನಿಮಾಗೀಗ ಮುಹೂರ್ತ ಕೂಡಾ ನಡೆದಿದೆ. ವೈ ಎಸ್ ಪ್ರೊಡಕ್ಷನ್ ಮೂಲಕ ಶ್ರೀನ ಇವಾಸ್ ನಿರ್ಮಾಣ ಮಾಡಲಿರುವ ಈ ಚಿತ್ರವನ್ನು…
ಇತ್ತೀಚಿನ ವರ್ಷಗಳಲ್ಲಿ ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಬಹುತೇಕ ರಿಯಾಲಿಟಿ ಶೋಗಳು ಕುಟುಂಬ ಸಮೇತರಾಗಿ ನೋಡುವ ಗುಣವನ್ನೇ ಕಳೆದುಕೊಂಡಿವೆ. ಡಬಲ್ ಮೀನಿಂಗ್ ಡೈಲಾಗುಗಳು, ಆಂಕರುಗಳೆನ್ನಿಸಿಕೊಂಡವರ ಅತಿರೇಕದ ವರ್ತನೆ ಮತ್ತು ಏನನ್ನೂ ಬಿಡದಂತೆ ಟಿಆರ್ಪಿಗಾಗಿ ಬಾಯಿ ಬಿಡುವ ಹೀನ ಮನಃಸ್ಥಿತಿ… ಇಂಥಾ ದಾರಿದ್ರ್ಯವೇ ಸದ್ಯದ ಮಟ್ಟಿಗೆ ಕನ್ನಡದ ಕಿರುತೆರೆ ಜಗತ್ತಿನಲ್ಲಿ ತಾಂಡವವಾಡುತ್ತಿದೆ. ಅದರಲ್ಲಿಯೂ ಒಂದು ಕಾಲಕ್ಕೆ ಹೊಸಾ ಥರದ ಕಾರ್ಯಕ್ರಮಗಳ ಮೂಲಕ ವಿಶ್ವಾಸ ಗಿಟ್ಟಿಸಿಕೊಂಡಿದ್ದ ಜೀ ಕನ್ನಡ ವಾಹಿನಿಯೀಗ ಅಭಿಮಾನಿ ಪ್ರೇಕ್ಷಕ ವರ್ಗವನ್ನೇ ಮುಜುಗರಕ್ಕೀಡು ಮಾಡಿದೆ. ಈ ಹಿಂದೆ ಭರ್ಜರಿ ಬ್ಯಾಚುಲರ್ಸ್ ಅಂತೊಂದು ಪಕ್ಕಾ ಬರಗೆಟ್ಟ ಶೋವೊಂದು ಇದೇ ವಾಹಿನಿಯಲ್ಲಿಮ ಪ್ರಸಾರವಾಗಿತ್ತು. ಮಾನವಂತರು ನೋಡಲು ಹಿಂದೇಟು ಹಾಕುವಂತಿದ್ದ ಆ ಶೋ ಕಡೆಗೂ ಮುಗಿದಿದೆ. ಅದರ ಬ ಎನ್ನಲ್ಲಿಯೇ ನಾವು ನಮ್ಮವಬರು ಎಂಬ ಹೊಸಾ ಶೋ ಶುರುವಾಗಿದೆ. ಇದರಲ್ಲಿ ಅಮೂಲ್ಯ, ತಾರಾ ಮತ್ತು ಶರಣ್ ಥರದವರು ಜಡ್ಜುಗಳಾಗಿದ್ದರಿಂದ ಕೊಂಚ ನಿರೀಕ್ಷೆ ಇತ್ತು. ಆದರೆ, ಈ ಶೋ ಆರಂಭದಲ್ಲಿಯೇ ಪಕ್ಕಾ ಟಿಆರ್ಪಿ ಹಿಂಡಿಕೊಳ್ಳುವ ಪಥದಲ್ಲಿ ಹೆಜ್ಜೆಯಿಟ್ಟಿದೆ. ತೀರ್ಪುಗಾರಳಾಗಿ…
ಸಮಂತಾ ಇದೀಗ ಒಂದು ಸುದೀರ್ಘವಾದ ಅಜ್ಞಾತವಾಸ ಮುಗಿಸಿ ಮತ್ತೆ ನ ಟನೆಯಲ್ಲಿ ಬುಸಿಯಾಗಿದ್ದಾಳೆ. ಖಾಸಗೀ ಬದುಕಿನ ದಾರುಣ ಪಲ್ಲಟಗಳಿಂದ ಕಂಗಾಲೆದ್ದಿದ್ದ ಈಕೆಯನ್ನು ಮಯೋಸೈಟಿಸ್ ಎಂಬ ವಿಚಿತ್ರ ಕಾಯಿಲೆ ಹೈರಾಣು ಮಾಡಿ ಹಾಕಿತ್ತು. ಅತ್ತ ಸಂಸಾರ ಛಿದ್ರವಾದ ಬೇಗುದಿ, ಇತ್ತ ದೇಹ ಸೇರಿಕೊಂಡ ವಿಚಿತ್ರ ಕಾಯಿಲೆಯಿಂದ ಕಂಗೆಟ್ಟಿದ್ದ ಸಮಂತಾ ಇದೀಗ ಒಂದಷ್ಟು ವೆಬ್ ಸೀರೀಸ್ಗಳಲ್ಲಿ ತೊಡಗಿಸಿಕೊಂಡಿದ್ದಾಳೆ. ಹಾಗಂತ ಸಿನಿಮಾಗಳಲ್ಲಿ ಆಕೆಗೆ ಅವಕಾಶಕ್ಕೆ ಕೊರತೆ ಇದೆ ಅಂದುಕೊಳ್ಳುವಂತಿಲ್ಲ. ಒಂದು ಮೂಲದ ಪ್ರಕಾರ ಸದ್ಯಕ್ಕೆ ಅಂಥಾ ಆಫರುಗಳನ್ನು ಒಪ್ಪಿಕೊಳ್ಳುವ ಮನಃಸ್ಥಿತಿಯಲ್ಲಿ ಸಮಂತಾ ಇಲ್ಲ. ಇದರ ಭಾಗವಾಗಿಯೇ ಬಹುನಿರೀಕ್ಷಿತ ಪೆದ್ದಿ ಚಿತ್ರದ ಭಾಗವಾಗುವ ಅವಕಾಶವನ್ನೂ ಆಕೆ ನಿರಾಕಸಿದ್ದಾಳಂತೆ! ಪೆಡ್ಡಿ ರಾಮ್ಚರಣ್ ನಾಯಕನಾಗಿ ನಟಿಸುತ್ತಿರುವ ಬಹು ನಿರೀಕ್ಷಿತ ಚಿತ್ರ. ಬುಚ್ಚಿ ಬಾಬು ನಿರ್ದೇಶನದ ಈ ಸಿನಿಮಾದಲ್ಲಿ ಜಾನ್ವಿ ಕಪೂರ್ ರಾಮ್ ಚರಣ್ಗೆ ನಾಯಕಿಯಾಗಿ ಸಾಥ್ ಕೊಟ್ಟಿದ್ದಾಳೆ. ಇಲ್ಲಿ ಜಾನ್ವಿ ಕೂಡಾ ವಿಶಿಷ್ಟವಾದೊಂದು ಪಾತ್ರದ ಮೂಲಕ ಪ್ರೇಕ್ಷಕರನ್ನು ಅಚ್ಚರಿಗೀಡು ಮಾಡಲು ಅಣಿಗೊಂಡಿದ್ದಾಳೆ. ಈ ಚಿತ್ರದ ವಿಶೇಷ ಹಾಡೊಂದರಲ್ಲಿ ಸಮಂತಾ ನಟಿಸಲಿದ್ದಾಳೆಂಬ…
ಸಿನಿಮಾ ನಟ ನಟಿಯರನ್ನು ಅಭಿಮಾನಿಗಳು ದೇವರ ಸ್ಥಾನದಲ್ಲಿಟ್ಟು ಆರಾಧಿಸುತ್ತಾರೆ. ತಮ್ಮ ಕಷ್ಟಕೋಟಲೆಗಳನ್ನೆಲ್ಲ ಬದಿಗಿಟ್ಟು ಪದೇ ಪದೆ ಸಿನಿಮಾ ನೋಡಿ ಗೆಲ್ಲಿಸುತ್ತಾರೆ. ಯಾವುದೇ ಸ್ಟಾರ್ ನಟರ ಸಿನಿಮಾಗಳು ಕೋಟಿ ಕೋಟಿ ಬಾಚಿಕೊಂಡಿತೆಂದು ಸುದ್ದಿಯಾಗುತ್ತದಲ್ಲಾ? ಅದೆಲ್ಲವೂ ಇಂಥಾ ನಿಸ್ವಾರ್ಥ ಅಭಿಮಾನದ ಒಟ್ಟು ಮೊತ್ತವಷ್ಟೆ. ಹೀಗೆ ಜೀವಕ್ಕಿಂತಲೂ ಹೆಚ್ಚಾಗಿ ತಮ್ಮನ್ನು ಪ್ರೀತಿಸುವ ಪ್ರೇಕ್ಷಕರ ಬಗ್ಗೆ ನಟ ನಟಿಯರಿಗೆ ಎಂಥಾ ಕಾಳಜಿ ಇದೆ? ಈ ಪ್ರಶ್ನೆಯನ್ನಿಟ್ಟುಕೊಂಡುಜ ಹುಡುಕಾಟಕ್ಕಿಳಿದರೆ ಬಹತೇಕರದ್ದು ಡೌಲು ಪುರಾಣವೇ. ತಾನೊಂದು ಹೆಜ್ಜೆ ಮುಂದಿಟ್ಟರೆ ತನ್ನನ್ನು ಅನುಸರಿಸುವ ಅಭಿಮಾನಿಗಳ ಮೇಲೆ ಎಂಥಾ ಪರಿಣಾಮವಾಗುತ್ತದೆಂದು ಆಲೋಚಿಸುವ ಕಾಳಜಿ ಬಹುತೇಕ ನಟ ನಟಿಯರಿಗಿಲ್ಲ. ಈ ವಾಸ್ತವ ಮತ್ತೆ ಮತ್ತೆ ಸಾಬೀತಾಗಿದೆ. ಅದು ಮತ್ತೊಮ್ಮೆ ಜಾಹೀರಾಗಿರೋದು ಬೆಟ್ಟಿಂಗ್ ಆಪ್ ಪ್ರಮೋಷಚನ್ನುಗಳ ಮೂಲಕ. ಈ ಹಿಂದೆ ಶಾರೂಖ್ ಖಾನ್, ಅಜಯ್ ದೇವಗನ್ ಥರದ ನಟರು ಗುಟ್ಕಾ ಜಾಹೀರಾತಿನಲ್ಲಿ ಕಾಣಿಸಿಕೊಂಡಾಗ ಪ್ರಜ್ಞಾವಂತರು ಹೀನಾಮಾನ ಝಾಡಿಸಿದ್ದರು. ಆದರೆ, ಕೋಟಿ ರೊಕ್ಕದ ಅಮಲಿಗೆ ಬಿದ್ದ ಈ ಅವಿವೇಕಿ ನಟರು ಮತ್ತೆ ಮತ್ತೆ ಅಂಥಾ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಾ…
ಕೆಜಿಎಫ್ ಸರಣಿಯ ಮೂಲಕ ಕನ್ನಡ ಚಿತ್ರರಂಗದ ಘನತೆಯನ್ನು ಪ್ಯಾನಿಂಡಿಯಾ ಮಟ್ಟಕ್ಕೇರಿಸಿದ ಕೀರ್ತಿ ಹೊಂಬಾಳೆ ಫಿಲಂಸ್ಗೆ ಸಲ್ಲುತ್ತದೆ. ಹೀಗೆ ಕನ್ನಡ ಸಿನಿಮಾಗಳು ಪ್ಯಾನಿಂಡಿಯಾ ಲೆವೆಲ್ಲಿನಲ್ಲಿ ಮಿಂಚುವಂತೆ ಮಾಡಿರೋ ಹೊಂಬಾಳೆ ಕೂಡಾ ಇದೀಗ ತನ್ನ ವಹಿವಾಟನ್ನು ಆ ಮಟ್ಟಕ್ಕೆ ವಿಸ್ತರಿಸಿಕೊಂಡಿದೆ. ಕೆಜಿಎಫ್ ಸರಣಿಯ ನಂತಗರವೂ ಹೊಂಬಾಳೆಯ ಗೆಲುವಿನ ಯಾನ ಯಥಾ ಪ್ರಕಾರವಾಗಿ ಸಾಗಿದೆ. ಇದೀಗ ಪ್ಯಾನಿಂಡಿಯಾ ಸ್ಟಾರ್ಗಳಾದ ಹೃತಿಕ್ ರೋಶನ್ ಮತ್ತು ಪ್ರಭಾಸ್ ಜೊತೆಗೊಂದು ಸಿನಿಮಾ ಮಾಡಲು ಹೊಂಬಾಳೆ ಫಿಲಂಸ್ ಸರ್ವ ತಯಾರಿಯನ್ನೂ ಮಾಡಿಕೊಂಡಿದೆ. ಹೃತಿಕ್ ರೋಶನ್ ಜೊತೆಗೆ ಹೊಂಬಾಳೆ ನಿರ್ಮಾಣದ ಸಿನಿಮಾಕ್ಕೆ ಈಗಾಗಲೇ ಎಲ್ಲ ಬಗೆಯ ತಯಾರಿಯೂ ಆರಂಭವಾಗಿದೆ. ಅದು ಇನ್ನೇ ಚಿತ್ರೀಕರಣ ಆರಂಭಿಸಿ ಶೀಘ್ರದಲ್ಲಿಯೇ ಬಿಡುಗಡೆಗೆ ವೇದುಇಕೆ ಸಿದ್ಧಗೊಂಡಿದೆ. ಹೊಂಬಾಳೆ ನಿರ್ಮಾಣದ ಸಿನಿಮಾಗಳು ಒಂದೆರಡು ವರ್ಷ ಚಿತ್ರೀಕರಣಾವಧಿ ಬೇಡುತ್ತವೆ. ಆದರೆ, ಈ ಚಿತ್ರದ ಮೂಲಕ ಆ ಪರಿಪಾಠದಾಚೆಗೆ ಹೊರಳಿಕೊಳ್ಳಲು ಕಿರಗಂದೂರು ತೀರ್ಮಾನಿಸಿದಂತಿದೆ. ಸದ್ಯಕ್ಕೆ ಹೊಂಬಾಳೆ ಫಿಲಂಸ್ ಜೊತೆಗಿನ ಹೃತಿಕ್ ಸಹಯೋಗ ಆರಂಭಿಕವಾಗಿಯೇ ದೊಡ್ಡ ಮಟ್ಟದಲ್ಲಿ ಕುತೂಹಲ ಮೂಡಿಸಿದೆ. ಅಂತೂ ಈ ಚಿತ್ರದ…
ಯಾವ ಸೂಪರ್ ಸ್ಟಾರ್ ಆದರೂ ಕೂಡಾ ಆಯಾ ಕಾಲಮಾನಕ್ಕೆ ತಕ್ಕುದಾಗಿ ತನ್ನನ್ನು ತಾನು ಒಗ್ಗಿಸಿಕೊಳ್ಳದಿದ್ದರೆ, ಅಗತ್ಯಕ್ಕೆ ತಕ್ಕುದಾದ ರೂಪಾಂತರ ಹೊಂದದೇ ಹೋದರೆ ನೇಪಥ್ಯಕ್ಕೆ ಸರಿದು ಬಿಡಬೇಕಾಗುತ್ತದೆ. ಹಾಗೊಂದು ಸೂಕ್ಷ್ಮತೆ ಗೊತ್ತಿಲ್ಲದ ಅನೇಕ ನಟರು ಅರ್ಧ ದಾರಿಯಿಂದಲೇ ಮರೆಯಾದ ಅದೆಷ್ಟೋ ಉದಾಹರಣೆಗಳಿದ್ದಾವೆ. ಆದರೆ, ಒಂದು ಘಟ್ಟದಲ್ಲಿ ತನ್ನ ಸಿನಿಮಾವನ್ನು ತಾನೇ ನಿರ್ದೇಶನ ಮಾಡಿ ಗೆದ್ದು ತೋರಿಸ ಹೊರಡೋದಿದೆಯಲಗಲಾ? ಅದು ನಿಜಕ್ಕೂ ಸಾಹಸ. ಅಂಥಾದ್ದನ್ನು ಮೈಮೇಲೆಳೆದುಕೊಂಡು ಹೀರೋಗಳ ಸಂಖ್ಯೆ ತೀರಾ ಕಡಿಮೆ ಇದೆ. ಆ ಸಾಲಿನಲ್ಲಿ ಸೇರ್ಪಡೆಗೊಂಡು, ಗೆಲುವು ದಕ್ಕಿಸಿಕೊಂಡಿರುವವರು ದುನಿಯಾ ವಿಜಯ್. ಅವರೀಗ ಬೇರೊಬ್ಬರ ನಿರ್ದೇಶನದಲ್ಲಿ ಲ್ಯಾಂಡ್ ಲಾರ್ಡ್ ಆಗಿ ಅಬ್ಬರಿಸಲು ಅಣಿಗೊಂಡಿದ್ದಾರೆ. ಇತ್ತೀಚೆಗಷ್ಟೇ ಲ್ಯಾಂಡ್ ಲಾರ್ಡ್ ಚಿತ್ರದ ಮೋಷನ್ ಪೋಸ್ಟರ್ ಒಂದು ಬಿಡುಗಡೆಗೊಂಡಿದೆ. ಆ ಮೂಲಕವೇ ದುನಿಯಾ ವಿಜಯ್ ಹೊಸಾ ಹೆಜ್ಜೆಯ ಸುತ್ತಾ ಅಭಿಮಾನದಾಚೆಗೂ ಸಕಾರಾತ್ಮಕ ವಾತಾವರಣ ಹಬ್ಬಿಕೊಂಡಿದೆ. ಅಷ್ಟಕ್ಕೂ ಲ್ಯಾಂಡ್ ಲಾರ್ಡ್ ಸಿನಿಮಾ ಘೋಶಣೆಯಾದ ಕ್ಷಣದಿಂದಲೇ ಆ ಬಗ್ಗೆ ಸಿನಿಮಾಸಕ್ತರಲ್ಲೊಂದು ಕುತೂಹಲ ಇದ್ದೇ ಇತ್ತು. ಯಾಕೆಂದರೆ, ಆಎರಂಭದಲ್ಲಿಯೇ ಒಂದೊಳ್ಳೆ ತಂಡ…
ಕರ್ನಾಟಕದ ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲೊಂದಾಗಿರುವ ಧರ್ಮಸ್ಥಳವೀಗ ದೇಶಾದ್ಯಂತ ಸದ್ದು ಮಾಡುತ್ತಿದೆ. ಅದಕ್ಕೆ ಕಾರಣವಾಗಿರೋದು ಆ ಗ್ರಾಮದಲ್ಲಿ ನಡೆದಿರುವ ಅನುಮಾನಾಸ್ಪದ ಸಾವುಗಳು. ದಶಕದ ಹಿಂದೆ ಸೌಜನ್ಯಾ ಅತ್ಯಾಚಾರ ಮತ್ತು ಹತ್ಯೆ ಕೇಸಿನ ನಂತರದಲ್ಲಿಯಂತೂ ಧರ್ಮಸ್ಥಳದ ಸುತ್ತ ನಾನಾ ವಿವಾದಗಳು ಹಬ್ಬಿಕೊಳ್ಳುತ್ತಲೇ ಇದ್ದಾವೆ. ಈಗಂತೂ ಎಸ್ಐಟಿ ಅಧಿಕಾರಿಗಳು ಅನಾಮಿಕ ದೂರುದಾರನನ್ನಿಟ್ಟುಕೊಂಡು ಅಸ್ಥಿಪಂಜರ ಹುಡುಕೋ ಕಾರ್ಯದಲ್ಲಿ ನಿರತರಾಗಿದ್ದಾರೆ. ಅದಾಗಲೇ ಈ ಎಲ್ಲ ವಿದ್ಯಮಾನಗಳಿಗೆ ಧರ್ಮೋನ್ಮಾದದ ರೂಪುರೇಷೆ ಕೊಡುವ ವ್ಯವಸ್ಥಿತ ಕಾರ್ಯವೂ ನಡೆಯುತ್ತಿದೆ. ಈ ನಡುವೆ ಕೊತಗುಡುತ್ತಿರುವ ಧರ್ಮಸ್ಥಳಕ್ಕೆ ತೆರಳಿ ಸೌಜನ್ಯಾ ತಾಯಿಯನ್ನು ಬಿಗ್ ಬಾಸ್ ಖ್ಯಾತಿಯ ರಜತ್ ಭೇಟಿಯಾಗಿದ್ದಾರೆ. ಇದರ ಸುತ್ತ ಮತ್ತಷ್ಟು ವಿವಾದಗಳು ಹಬ್ಬಿಕೊಂಡಿವೆ. ರಜತ್ ಬಿಗ್ ಬಾಸ್ ಶೋನ ಹಿಂಚುಮುಂಚಿನಿಂದಲೇ ಸೌಜನ್ಯಾ ಪರವಾಗಿ ಧ್ವನಿಯೆತ್ತಿದ್ದರು. ಮನುಷ್ಯತ್ವವಿರುವ ಯಾರೇ ಆದರೂ ಅರಳೋ ವಯಸ್ಸಿನಲ್ಲಿಯೇ ಕಾಮುಕ ದುರುಳರಿಂದ ಹೊಸಕಲ್ಪಟ್ಟ ಈ ಹೆಣ್ಣುಮಗಳ ಪರವಾಗಿ ಧ್ವನಿಯೆತ್ತಲೇ ಬೇಕಿದೆ. ಹಾಗೆ ಧ್ವಿನಿಯೆತ್ತೋ ಪ್ರತಿಯೊಬ್ಬರೂ ಕೂಡಾ ಈ ಅತ್ಯಾಚಾರ ಮಾಡಿದ ಕಾಮುಕರಿಗೆ ತಕ,ಕ ಶಿಕ್ಷೆಯಾಗಲೆಂದು ಬಯಸುತ್ತಿದ್ದಾರೆ. ಬಿಗ್ ಬಾಸ್ ಸ್ಪರ್ಧಿ…

ನಮ್ಮ ಬಗ್ಗೆ
ಈ ನಾಡಿನಲ್ಲಿ ಹೆಸರಾಗಿರುವ ಹಾಯ್ ಬೆಂಗಳೂರ್, ಅಗ್ನಿ, ಲಂಕೇಶ್ ಪತ್ರಿಕೆ, ಹಿಮಾಗ್ನಿ ಮಂತಾದ ಅನೇಕ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿ, ತಮ್ಮದೇ ಆದ ಛಾಪು ಮೂಡಿಸಿರುವವರು ಪತ್ರಕರ್ತ ಸಂತೋಷ್ ಬಾಗಿಲಗದ್ದೆ. ರಾಜಕೀಯ, ಅಪರಾಧ, ಸಿನಿಮಾ ಸೇರಿದಂತೆ ತನಿಖಾ ಪತ್ರಿಕೋದ್ಯಮದಲ್ಲಿ ದಶಕಗಳಿಗೂ ಹೆಚ್ಚು ಕಾಲ ಪಳಗಿಕೊಂಡು, ಅನೇಕ ಭ್ರಷ್ಟರನ್ನು ಬಯಲಾಗಿಸಿರುವ ಬಾಗಿಲಗದ್ದೆ ಆರಂಭಿಸಿರುವ ವಿಭಿನ್ನ ಡಿಜಿಟಲ್ ಹೆಜ್ಜೆ ಶೋಧ ಮತ್ತು ಸಿನಿ ಶೋಧ. ಇದು ಹೊಸಾ ಆಯಾಮದ ಪತ್ರಿಕೋದ್ಯಮ. ಸತ್ಯದ ಭೂಮಿಕೆಯ ನೇರ-ನಿಷ್ಠುರ ವರದಿಗಳ ಸಂಕಲ್ಪದೊಂದಿಗೆ, ಭಿನ್ನ ಶೈಲಿಯ ಬರವಣಿಗೆಯ ಮೂಲಕ ಹೊಸತೊಂದು ಜಗತ್ತು ನಿಮ್ಮೆದುರು ನಿರಂತವಾಗಿ ತೆರೆದುಕೊಳ್ಳಲಿದೆ; ಅಚ್ಚರಿಗೀಡುಮಾಡಲಿದೆ!